ನಟ ಶಾರುಖ್ ಖಾನ್ ಜೋಡಿಯಾಗಿ 'ಚಮತ್ಕಾರ್' ಚಿತ್ರದಲ್ಲಿ ನಟಿ ಊರ್ಮಿಳಾ ಮಾತೊಂಡ್ಕರ್ ನಟಿಸಿದ್ದಾರೆ. ಪ್ರಮುಖ ಪೋಷಕ ಪಾತ್ರದಲ್ಲಿ ನಟ ನಾಸಿರುದ್ದೀನ್ ಷಾ, ಶಮ್ಮಿ ಕಪೂರ್, ಅಶುತೋಶ್ ಗೌರೀಕರ್ ಹಾಗೂ ಟಿನ್ನು ಆನಂದ್ ಅವರು ಕಾಣಿಸಿಕೊಂಡಿದ್ದಾರೆ.
ಬಾಲಿವುಡ್ ಕಿಂಗ್ ಖಾನ್ ಶಾರುಖ್ ನಟನೆಯ 'ಚಮತ್ಕಾರ್ (Chamatkar)'ಸಿನಿಮಾ '1992' ರಲ್ಲಿ ತೆರೆಗೆ ಬಂದಿತ್ತು. ಈ ಚಿತ್ರದ ಅಪರೂಪದ ಫೋಟೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗತೊಡಗಿದೆ. ಚಮತ್ಕಾರ್ ಸಿನಿಮಾದ ನಾಯಕ ನಟ ಶಾರುಖ್ ಖಾನ್ (Shah Rukh Khan)ಅವರೊಂದಿಗೆ ಪತ್ನಿ ಗೌರಿ ಖಾನ್ ಸಹ ಜೊತೆಗಿರುವ ಈ ಫೋಟೋ, ಭಾರೀ ಕುತೂಹಲ ಕೆರಳಿಸುತ್ತಿದೆ. ಕಾರಣ, 32 ವರ್ಷದ ಹಳೆಯ ಈ ಫೋಟೋ, ಅಂದಿನ ಸಿನಿಮಾ ಪ್ರಮೋಶನ್ ಬಗ್ಗೆ, ಅಂದಿನ ಕಾಸ್ಟ್ಯೂಮ್ ಸ್ಟೈಲ್ ಹಾಗೂ ವ್ಯಕ್ತಿಗಳ ಬಗೆಗಿನ ಪ್ರತ್ಯಕ್ಷ ಸಾಕ್ಷಿಯಾಗಿ ನಿಂತಿದೆ.
ನಟ ಶಾರುಖ್ ಖಾನ್ ಜೋಡಿಯಾಗಿ 'ಚಮತ್ಕಾರ್' ಚಿತ್ರದಲ್ಲಿ ನಟಿ ಊರ್ಮಿಳಾ ಮಾತೊಂಡ್ಕರ್ (Urmila Matondkar) ನಟಿಸಿದ್ದಾರೆ. ಪ್ರಮುಖ ಪೋಷಕ ಪಾತ್ರದಲ್ಲಿ ನಟ ನಾಸಿರುದ್ದೀನ್ ಷಾ, ಶಮ್ಮಿ ಕಪೂರ್, ಅಶುತೋಶ್ ಗೌರೀಕರ್ ಹಾಗೂ ಟಿನ್ನು ಆನಂದ್ ಅವರು ಕಾಣಿಸಿಕೊಂಡಿದ್ದಾರೆ. ಈ ಚಿತ್ರವು 8 ಜುಲೈ 1992ರಲ್ಲಿ ತೆರೆಗೆ ಬಂದಿತ್ತು. ರಾಜೀವ್ ಮೆಹ್ರಾ ನಿರ್ದೇಶನದ ಈ ಚಿತ್ರವನ್ನು 'ಈಗಲ್ ಫಿಲಂಸ್' ಹಂಚಿಕೆ ಮಾಡಿತ್ತು. ಶೌಕತ್ ಬೈಗ್ ಈ ಚಿತ್ರದ ಕಥೆ ಬರೆದಿದ್ದರು. ಈ ಚಿತ್ರದ ಪ್ರಮೋಶನ್‌ಗೆ ನಟ ಶಾರುಖ್ ಖಾನ್, ನಟಿ ಊರ್ಮಿಳಾ ಮಾತೊಂಡ್ಕರ್ ಜತೆ ಗೌರಿ ಖಾನ್ ಸಹ ಬಂದಿದ್ದು ವಿಶೇಷ ಎನಿಸಿತ್ತು.
'ರಾಮಾಯಣ'ಕ್ಕೆ ರಾಕಿಭಾಯ್ ಯಶ್ ಪ್ರೊಡ್ಯೂಸರ್; ನಮಿತ್ ಮಲ್ಹೋತ್ರಾ ಜೊತೆ ಕೈ ಜೋಡಿಸಿದ ಯಶ್!
ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ 32 ವರ್ಷದ ಈ ಹಳೆಯ ಫೋಟೋವನ್ನು ತಮ್ಮ ತಂದೆಯೂ ಜತೆಗಿದ್ದರು ಎಂಬ ಮಾಹಿತಿಯೊಂದಿಗೆ ವಿವಿದ್ ಉತ್ತಪ್ಪ ಮುರುವಂದ (Vivid Uthappa Muruvanda) ಅವರು ತಮ್ಮ ಪ್ರೊಫೈಲ್ ಮೂಲಕ ಶೇರ್ ಮಾಡಿದ್ದಾರೆ. ಅದೀಗ ಸಾಕಷ್ಟು ವೈರಲ್ ಆಗುತ್ತಿದೆ ಶಾರುಖ್ ಖಾನ್ ಅಭಿಮಾನಿಗಳನ್ನು ಪುಳಕಗೊಳಿಸುತ್ತಿದೆ. ಅದರಲ್ಲೂ ಮುಖ್ಯವಾಗಿ 1992 ರಲ್ಲಿ ಬೆಂಗಳೂರಿಗೆ (Bengaluru) ಬಂದಿದ್ದ ಶಾರುಖ್ ಖಾನ್ ಫೋಟೋ ನೋಡಿ, ಬೆಂಗಳೂರಿಗರು, ಕನ್ನಡಿಗರು ಮೆಚ್ಚಿ ಕೊಂಡಾಡುತ್ತಿದ್ದಾರೆ.
ಟ್ಯಾಟೂ ಹಾಕಿಸಿಕೊಂಡ ಅಭಿಮಾನಿಗೆ ಸಂಗೀತಾ ಶೃಂಗೇರಿ ಹೇಳಿದ್ದೇನು, ಸೀಕ್ರೆಟ್ ರಿವೀಲ್ ಮಾಡಿದಾರೆ ನೋಡಿ!
ಅಂದಹಾಗೆ, ಬಾಲಿವುಡ್ ನಟ ಶಾರುಖ್ ಖಾನ್ ಅವರು ಕಿರುತೆರೆ ಸೀರಿಯಲ್‌ಗಳಲ್ಲಿ ನಟಿಸಿ ಬಾಲಿವುಡ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿರುವ ನಟ. ಬಹಳಷ್ಟು ಹಿಟ್ ಹಿಂದಿ ಸಿನಿಮಾಗಳನ್ನು ಕೊಟ್ಟಿರುವ ನಟ ಶಾರುಖ್ ಖಾನ್ ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಚಿತ್ರಗಳನ್ನು ನೀಡಿ ಬಾಲಿವುಡ್ 'ಕಿಂಗ್ ಖಾನ್' ಎಂಬ ಬಿರುದು ತಮಗೆ ಸ್ಯೂಟ್ ಅಗುತ್ತದೆ ಎಂಬುದನ್ನು ನಿರೂಪಿಸಿದ್ದಾರೆ.
ಅಲ್ಲು ಅರ್ಜುನ್ ಡಾನ್ಸಿಂಗ್ ಸ್ಕಿಲ್ಸ್ ಕದಿಯುತ್ತೇನೆ; ರಶ್ಮಿಕಾ ಮಂದಣ್ಣ ಮಾತಿಗೆ ಆ್ಯಂಕರ್ ಕಕ್ಕಾಬಿಕ್ಕಿ!
ಜವಾನ್, ಪಠಾಣ್ ಹಾಗೂ ಡಂಕಿ ಚಿತ್ರಗಳ ಮೂಲಕ ನಟ ಶಾರುಖ್ ಖಾನ್ ಅವರು ಬಾಲಿವುಡ್ ಸಿನಿಜಗತ್ತಿನಲ್ಲಿ ಮಿಂಚಿನ ಸಂಚಾರ ಮೂಡಿಸಿದ್ದಾರೆ. ಒಟ್ಟಿನಲ್ಲಿ, ಇದೀಗ ಅವರ ಹಳೆಯ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತ ಶಾರುಖ್ ಫ್ಯಾನ್ಸ್‌ಗಳನ್ನು ರೋಮಾಂಚನಗೊಳಿಸುತ್ತಿದೆ.