ಅನುಷ್ಕಾ ಶರ್ಮಾ ಕೊಟ್ಟ ಬಿಗ್ ಫ್ಲಾಪ್‌ನಿಂದ ಕಂಗಾಲಾಗಿ ನಟನೆಯನ್ನೇ ಬಿಟ್ಟ ವಿಲನ್ ಪಾತ್ರಧಾರಿ!

By Shriram Bhat  |  First Published Apr 12, 2024, 4:28 PM IST

ಅನುರಾಗ್ ಬಸು ಈ ಚಿತ್ರವನ್ನು ಮುಗಿಸಲು ಬರೋಬ್ಬರಿ ಒಂಬತ್ತು ವರ್ಷಗಳಷ್ಟು ದೀರ್ಘ ಕಾಲವನ್ನು ತೆಗೆದುಕೊಂಡಿದ್ದು, ಕರಣ್ ಜೋಹರ್ ಈ ಚಿತ್ರದ ಮೂಲಕ ನಟನೆಗೆ ಕಾಲಿಟ್ಟಿದ್ದರು. ಭಾರೀ ಅಹಂಕಾರದಿಂದ ಮೆರೆಯುವ ಪಾತ್ರದಲ್ಲಿ ಬಾಲಿವುಡ್‌ನ ಖ್ಯಾತ...


ಬಾಲಿವುಡ್ ನಟಿ ಹಾಗು ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಹಿಂದೊಮ್ಮೆ ಬಾಲಿವುಡ್‌ನ ಸ್ಟಾರ್ ನಟಿಯಾಗಿ ಮಿಂಚಿದ್ದು ಗೊತ್ತೇ ಇದೆ. ಶಾರುಖ್ ಖಾನ್ ನಟನೆಯ 'ರಬ್‌ ನೇ ಬನಾ ದಿಯಾ ಜೋಡಿ (Rab Ne Bana Di Jodi) ಸಿನಿಮಾ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ನಟಿ ಅನುಷ್ಕಾ ಶರ್ಮಾ ಅವರು, ಬಾಲಿವುಡ್‌ನಲ್ಲಿ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಕೆಲವು ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದರೆ ಕೆಲವು ಸಿನಿಮಾಗಳು ಹಿಟ್ ಎನಿಸಿವೆ. ಕೆಲವು ಸಿನಿಮಾಗಳು ಫ್ಲಾಪ್‌ ಆಗಿವೆ, ಅವುಗಳಲ್ಲಿ ಅಟ್ಟರ್ ಫ್ಲಾಪ್ ಎನಿಸಿಕೊಂಡಿದ್ದು ಒಂದೇ ಸಿನಿಮಾ. 

ನಟಿ ಅನುಷ್ಕಾ ಶರ್ಮಾ ಕೆರಿಯರ್‌ನಲ್ಲಿ ಅತ್ಯಂತ ಕಳಪೆ ಎಂಬ ಪಟ್ಟಗಿಟ್ಟಿಸಿಕೊಂಡು ಬರೋಬ್ಬರಿ 72 ಕೋಟಿ ರೂಪಾಯಿ ನಷ್ಟ ಅನುಭವಿಸಿದ ಸಿನಿಮಾ ಬಾಂಬೇ ವೆಲ್ವೆಟ್. ಈ ಸಿನಿಮಾವನ್ನು 115 ಕೋಟಿ ರೂಪಾಯಿ ಸುರಿದು ನಿರ್ಮಾಣ ಮಾಡಲಾಗಿತ್ತು. ಬಾಂಬೆ ವೆಲ್ವೆಟ್ (Bombay Velvet)ಚಿತ್ರವನ್ನು ಅನುರಾಗ್ ಕಶ್ಯಪ್ ಅವರು ನಿರ್ದೇಶನ ಮಾಡಿದ್ದು, ಸಹ ನಿರ್ಮಾಪಕರಾಗಿ ಕೂಡ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ರಣಬೀರ್ ಕಪೂರ್ ನಾಯಕರಾಗಿರುವ ಈ ಚಿತ್ರಕ್ಕೆ ನಾಯಕಿಯಾಗಿದ್ದು ಅನುಷ್ಕಾ ಶರ್ಮಾ. ಜತೆಗೆ, ಮುಖ್ಯ ಪಾತ್ರದಲ್ಲಿ ಕರಣ್ ಜೋಹರ್, ಕೆಕೆ ಮೆನನ್, ಮನಿಶ್ ಚೌಧರಿ, ವಿವಾನ್ ಶಾ ಹಾಗು ಸಿದ್ಧಾರ್ಥ್‌ ಬಸು ಸಹ ಕಾಣಿಸಿಕೊಂಡಿದ್ದಾರೆ. 

Latest Videos

undefined

ಗೌರಿ ಖಾನ್ ಜತೆ ಬೆಂಗಳೂರಿಗೆ ಬಂದಿದ್ದ ಶಾರುಖ್ ಖಾನ್ ಹಳೆಯ ಫೋಟೋ 'ಚಮತ್ಕಾರ' ಮಾಡ್ತಿದೆ ನೋಡ್ರೀ!

ಅನುರಾಗ್ ಬಸು ಈ ಚಿತ್ರವನ್ನು ಮುಗಿಸಲು ಬರೋಬ್ಬರಿ ಒಂಬತ್ತು (9 Years)ವರ್ಷಗಳಷ್ಟು ದೀರ್ಘ ಕಾಲವನ್ನು ತೆಗೆದುಕೊಂಡಿದ್ದು, ಕರಣ್ ಜೋಹರ್ ಈ ಚಿತ್ರದ ಮೂಲಕ ನಟನೆಗೆ ಕಾಲಿಟ್ಟಿದ್ದರು. ಭಾರೀ ಅಹಂಕಾರದಿಂದ ಮೆರೆಯುವ ಪಾತ್ರದಲ್ಲಿ ಬಾಲಿವುಡ್‌ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಕಾಣಿಸಿಕೊಂಡಿದ್ದರು. ಮುಂಬೈನ 1950, 60 ದಶಕದ ಕಾಲವನ್ನು ಈ ಚಿತ್ರದ ಕಥೆಯಲ್ಲಿ ತೋರಿಸಲಾಗಿದ್ದು, ಶ್ರೀಲಂಕಾದಲ್ಲಿ ಈ ಚಿತ್ರವನ್ನು ಶೂಟ್ ಮಾಡುವ ಮೂಲಕ ಮುಂಬೈ ಅನ್ನು ಅಲ್ಲಿ ಮರುಸೃಷ್ಟಿ ಮಾಡಲಾಗಿತ್ತು.

'ರಾಮಾಯಣ'ಕ್ಕೆ ರಾಕಿಭಾಯ್ ಯಶ್ ಪ್ರೊಡ್ಯೂಸರ್; ನಮಿತ್ ಮಲ್ಹೋತ್ರಾ ಜೊತೆ ಕೈ ಜೋಡಿಸಿದ ಯಶ್!

ಅನುಷ್ಕಾ ಶರ್ಮಾ ನಟನೆಯ ಈ ಬಾಂಬೆ ವೆಲ್ವೆಟ್ ಸಿನಿಮಾ, ಮೊದಲ ದಿನ ಕೇವಲ 10% ನಿಂದ 20%ರಷ್ಟುಮಾತ್ರ ಕಲೆಕ್ಷನ್ ಮಾಡಿತ್ತು. ಎರಡನೇ ದಿನವೇ ಹಲವಾರು ಥಿಯೇಟರ್‌ಗಳಿಂದ ಈ ಚಿತ್ರವನ್ನು ಎತ್ತಂಗಡಿ ಮಾಡಲಾಯ್ತು. ಮೂರನೆಯ ದಿನ ಥೀಯೇಟರ್‌ ಖಾಲಿ ಇರುವ ಮೂಲಕ ಸಿನಿಮಾ ಅಟ್ಟರ್ ಫ್ಲಾಪ್ ಎಂಬುದು ಗೊತ್ತಾಯಿತು. ತಕ್ಷಣವೇ ಎಲ್ಲಾ ಥಿಯೇಟರ್‌ಗಳಿಂದ ಬಾಂಬೆ ವೆಲ್ವೆಟ್ ಚಿತ್ರವನ್ನು ತೆಗೆದುಹಾಕಿ, ಚಿತ್ರ ಸೋತಿದೆ ಎಂಬುದನ್ನು ಅಧಿಕೃತವಾಗಿ ಒಪ್ಪಿಕೊಂಡಂತೆ ಆಯಿತು. 

ಟ್ಯಾಟೂ ಹಾಕಿಸಿಕೊಂಡ ಅಭಿಮಾನಿಗೆ ಸಂಗೀತಾ ಶೃಂಗೇರಿ ಹೇಳಿದ್ದೇನು, ಸೀಕ್ರೆಟ್ ರಿವೀಲ್ ಮಾಡಿದಾರೆ ನೋಡಿ!

ಅನುಷ್ಕಾ ಶರ್ಮಾ ನಟಿಸಿದ್ದ ಬಾಂಬೇ ವೆಲ್ವೆಟ್ ಸಿನಿಮಾ ಮಾತ್ರವಲ್ಲದೇ ಇನ್ನೂ ಕೆಲವು ಫ್ಲಾಪ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಝೀರೋ, ಜಬ್ ಹ್ಯಾರಿ ಮೆಟ್ ಸೇಜಲ್, ಫಿಲ್ಲೌರಿ, ಪಟಿಯಾಲಾ ಹೌಸ್, ಮಾತ್ರು ಕೀ ಬಿಜಲೀ ಕಾ ಮಂಡೋಲಾ ಅಂಡ್ ಪಾರಿ ಹೀಗೆ ಅವರ ಫ್ಲಾಪ್ ಲಿಸ್ಟ್ ಇದೆ. ಆದರೆ, ಅನುಷ್ಕಾ ಶರ್ಮಾ ಕೆರಿಯರ್‌ನಲ್ಲಿ ಬಾಂಬೆ ವೆಲ್ವೆಟ್ ಸಿನಿಮಾದಷ್ಟು ಫ್ಲಾಪ್ ಆಗಿರುವ ಮತ್ತೊಂದು ಸಿನಿಮಾ ಇಲ್ಲ ಎನ್ನಲಾಗಿದೆ. ಅಷ್ಟೇ ಅಲ್ಲ, ಈ ಸಿನಿಮಾ ಬಳಿಕ, ಇದರಲ್ಲಿ ನಟಿಸಿದ್ದ ಕರಣ್ ಜೋಹರ್ ಮತ್ತೆ ನಟನೆ ಕಡೆ ಮುಖ ಕೂಡ ಹಾಕಲಿಲ್ಲ. 

ಅಲ್ಲು ಅರ್ಜುನ್ ಡಾನ್ಸಿಂಗ್ ಸ್ಕಿಲ್ಸ್‌ ಕದಿಯುತ್ತೇನೆ; ರಶ್ಮಿಕಾ ಮಂದಣ್ಣ ಮಾತಿಗೆ ಆ್ಯಂಕರ್ ಕಕ್ಕಾಬಿಕ್ಕಿ!

ಸದ್ಯಕ್ಕೆ ನಟಿ ಅನುಷ್ಕಾ ಶರ್ಮಾಅವರು ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಕ್ರಿಕೆಟರ್ ವಿರಾಟ್ ಕೊಹ್ಲಿ ಅವರನ್ನು ಮದುವೆಯಾಗಿರುವ ನಟಿ ಅನುಷ್ಕಾ ಶರ್ಮಾ, ಪುಟ್ಟ ಮಗುವಿನ ತಾಯಿಯೂ ಆಗಿದ್ದಾರೆ. ಸದ್ಯ ಮಗ ಅಕಾಯ್ (Akaay)ಪಾಲನೆ-ಪೋಷಣೆಯಲ್ಲಿ ನಿರತರಾಗಿರುವ ಅನುಷ್ಕಾ, ಬೇರೆ ಯಾವುದೇ ಹೊಸ ಸಿನಿಮಾಗೆ ಸಹಿ ಮಾಡಿಲ್ಲ. ಅವರು ತಾಯಿಯಾಗುವ ಮೊದಲು ನಟಿಸಿದ್ದ, ಭಾರತದ ಬೌಲರ್ ಅಗಿದ್ದ ಜುಲನ್ ಗೋಸ್ವಾಮಿ ಲೈಫ್ ಸ್ಟೋರಿ ಆಧಾರಿತ 'ಚಕ್‌ದ ಎಕ್ಸ್‌ಪ್ರೆಸ್‌ ಇನ್‌ ದಿ ಪೈಪ್‌ಲೈನ್ (Chakda Xpress in the pipeline) ಸಿನಿಮಾ ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ಆದರೆ, ಬಿಡುಗಡೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. 

click me!