ಅಲ್ಲಾ ​ ಹು ಅಕ್ಬರ್​ ಹೇಳಿಯೇ ಹಲಾಲ್​ ಮಾಡಿದ್ರಿ ತಾನೆ? ಇಲ್ಲಾಂದ್ರೆ... ಹೋಟೆಲ್​ನಲ್ಲಿ ನಟಿ ಸನಾ ಖಾನ್​ ವಿಡಿಯೋ ವೈರಲ್​

By Suchethana D  |  First Published Jan 8, 2025, 1:27 PM IST

ಹೋಟೆಲ್​ಗೆ ಹೋಗಿರುವ ನಟಿ ಸನಾ ಖಾನ್​, ಅಲ್ಲಿ ಶುದ್ಧ ಹಲಾಲ್​ ಆಹಾರದ ಬಗ್ಗೆ ಮಾತನಾಡುವ ವಿಡಿಯೋ ವೈರಲ್​ ಆಗಿದೆ. ಅದರಲ್ಲಿ ಏನಿದೆ?
 


ನಟಿ ಸನಾ ಖಾನ್​ ಎರಡನೆಯ ಮಗುವಿಗೆ ಜನ್ಮ ನೀಡಿದ್ದಾರೆ. ಇತ್ತೀಚೆಗಷ್ಟೇ ಅವರು 12 ಮಕ್ಕಳನ್ನು ಹೆರುವ ಆಸೆಯನ್ನು ವ್ಯಕ್ತಪಡಿಸಿದ್ದರು.  ನಟ ಗಣೇಶ್​ ಜೊತೆ ಕನ್ನಡದ ಕೂಲ್​ ಸಿನಿಮಾ ಸೇರಿದಂತೆ ಹಲವು ಬಾಲಿವುಡ್​​ ಸಿನಿಮಾಗಳಲ್ಲಿ ಮಿನಿ ಸ್ಕರ್ಟ್​, ಬಿಕಿನಿ ಎಲ್ಲದರಿಂದ ಫೇಮಸ್​ ಆಗಿದ್ದ ನಟಿ, ಚಿತ್ರರಂಗದಿಂದ ದೂರವಾಗಿ ನಾಲ್ಕು ವರ್ಷಗಳೇ ಕಳೆದಿವೆ. ಸದ್ಯ ಇಸ್ಲಾಂ ಅನ್ನು ಸಂಪೂರ್ಣವಾಗಿ ಅಪ್ಪಿಕೊಂಡಿರುವ ನಟಿ, ಈಗ ಇಬ್ಬರು ಮಕ್ಕಳು ಅಮ್ಮನಾಗಿ  ಸುಂದರ ಸಂಸಾರ ನಡೆಸುತ್ತಿದ್ದಾರೆ. ಗುಜರಾತ್‌ನ ಅಂಕಲೇಶ್ವರದ ಮುಫ್ತಿ ಅನಾಸ್ ಸೈಯದ್ (Mufti Anas Sayed)ಅವರ ಜೊತೆ ನಟಿಯ ವಿವಾಹವಾಗಿದೆ.  ವಿವಾಹದ ನಿರ್ಧಾರದ ಮಾಡುತ್ತಲೇ ಸಿನಿಮಾರಂಗ ತೊರೆಯುವ ಸಂದರ್ಭ ಬಂದಿತ್ತು. ಆಗ ನಟಿ ತುಂಬಾ ದುಃಖಿತರಾಗಿದ್ದರು. ಅಕ್ಷರಶಃ ಕಣ್ಣೀರಿಟ್ಟಿದ್ದರು. ಸಮಾಜ ಸೇವೆ ಮಾಡಲು ಮತ್ತು  ಸೃಷ್ಟಿಕರ್ತನ ಆದೇಶವನ್ನು ಅನುಸರಿಸುವ ಕಾರಣಕ್ಕೆ ಬಣ್ಣದ ಲೋಕ ತೆರೆಯಬೇಕಾಯಿತು ಎನ್ನುತ್ತಲೇ  ಹೆಸರು, ಖ್ಯಾತಿ, ಹಣ ಬಿಟ್ಟು ಹಿಜಾಬ್ ಧರಿಸಲು ಪ್ರಾರಂಭಿಸಿದ್ದೇಕೆ ಎಂದು ಬಹಿರಂಗ ಪಡಿಸಿದ್ದರು. 

ಈಗ ಎರಡನೆಯ ಮಗು ಆದ ಬೆನ್ನಲ್ಲೇ ಅವರ ವಿಡಿಯೋ ಒಂದು ವೈರಲ್​ ಆಗುತ್ತಿದೆ. ಹೋಟೆಲ್​ ಒಂದರಲ್ಲಿ ಶುದ್ಧ ಹಲಾಲ್​ ಮಾಂಸಕ್ಕಾಗಿ ನಟಿ ಸಿಬ್ಬಂದಿಯ ಜೊತೆ ಚರ್ಚೆಗೆ ಇಳಿದಿದ್ದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಇದು ಹಲಾಲ್​  ಆಹಾರವೇ ಎಂದು ನಟಿ ಪ್ರಶ್ನಿಸಿದ್ದಾರೆ. ಅದಕ್ಕೆ ಸಿಬ್ಬಂದಿ ಹೌದು ಎಂದಿದ್ದಾರೆ. ಆಗ ನಟಿ ಸನಾ ಖಾನ್​, ಅಲ್ಹಾಹ್​ ಹೋ ಅಕ್ಬರ್​ ಎಂದು ಹೇಳುತ್ತಲೇ ಕಟ್​  ಮಾಡಿದ್ದೀರಿ ತಾನೆ ಎಂದು ಪ್ರಶ್ನಿಸಿದ್ದಾರೆ.ಕೆಲವರು ಹಾಗೆಯೇ ಕಟ್​ ಮಾಡುತ್ತಾರೆ. ಅದು ಹಲಾಲ್​ ಅಲ್ಲ. ಅದಕ್ಕಾಗಿಯೇ ನನಗೆ ಭಯವಾಗುತ್ತದೆ. ಇದೇ ಕಾರಣಕ್ಕೆ ವೆಜ್​ ತಿನ್ನುತ್ತೇನೆ ಎಂದು ನಟಿ ಹೇಳಿರುವುದು ಈ ವಿಡಿಯೋದಲ್ಲಿ ಕೇಳಬಹುದಾಗಿದೆ. 

Tap to resize

Latest Videos

ಚೂಡಿದಾರ ಹಾಕ್ಕೊಂಡು, ಎಣ್ಣೆ ಹಚ್ಕೊತ್ತಿದ್ದೆ... ಅದ್ಯಾವಾಗ ಬಿಕಿನಿ ಧರಿಸಿದ್ನೋ... ಕಣ್ಣೀರಾದ 'ಕೂಲ್'​ ನಟಿ ಸನಾ!

ಅಂದಹಾಗೆ, ಬಿಕಿನಿಯಿಂದ ಫೇಮಸ್​ ಆಗಿದ್ದ ನಟಿ, ಹಿಜಾಬ್​ ಧರಿಸುವ ನಿರ್ಧಾರ ಮಾಡಿದ್ದಾಗ ಭಾವುಕ ನುಡಿಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್​  ಮಾಡಿದ್ದರು. 'ನನ್ನ ಹಳೆಯ ಜೀವನದಲ್ಲಿ ಸಹಜವಾಗಿ ಎಲ್ಲವೂ ಇತ್ತು. ಹಣ, ಹೆಸರು, ಖ್ಯಾತಿ ಎಲ್ಲಾ ಇತ್ತು. ನಾನು ಏನು ಬೇಕಾದರೂ ಮತ್ತು ಎಲ್ಲವನ್ನೂ ಮಾಡಬಹುದಿತ್ತು. ಆದರೆ ಒಂದು ವಿಷಯ ಮಾತ್ರ ಕಳೆದು ಹೋಗಿತ್ತು ನನ್ನ ಹೃದಯದ ಶಾಂತಿ. ನಾನು ಎಲ್ಲವನ್ನೂ ಹೊಂದಿದ್ದೆ ಆದರೆ ಸಂತೋಷ ಇರಲಿಲ್ಲ,  ಅದು ತುಂಬಾ ಕಠಿಣವಾಗಿತ್ತು ಮತ್ತು ಖಿನ್ನತೆಯ ದಿನಗಳು ಇತ್ತು. ನಾನು ದೇವರ ಸಂದೇಶವನ್ನು ದಿನಗಳು ಇದ್ದವು' ಎಂದು ನಟನೆ ಬಿಟ್ಟು ಹಿಜಾಬ್​ ಧರಿಸುವ ಕುರಿತು ಹೇಳಿಕೊಂಡಿದ್ದರು. 

ಇನ್ನು ಸನಾ ಅವರ ಸಿನಿ ಪಯಣದ ಕುರಿತು ಹೇಳುವುದಾದರೆ, ಬಾಲಿವುಡ್ (Bollywood) ಸಿನಿಮಾಗಳ ಜೊತೆಗೆ ಸನಾ ಖಾನ್ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲೂ ನಟಿಸಿದ್ದಾರೆ. ವಿಶೇಷ ಎಂದರೆ ಕನ್ನಡದಲ್ಲಿಯೂ ಅಭಿನಯಿಸಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಕೂಲ್ (Cool) ಸಿನಿಮಾದಲ್ಲಿ ಸನಾ ನಟಿಸಿದ್ದಾರೆ. ಇಷ್ಟೆಲ್ಲಾ ಉತ್ತುಂಗದಲ್ಲಿ ಇರುವಾಗಲೇ ಸಿನಿಮಾ ಬಿಡುವ ನಿರ್ಧಾರ ಮಾಡಿದ್ದು, ಅವರ ಅಭಿಮಾನಿಗಳಿಗೆ ಶಾಕ್​ ಆಗಿತ್ತು. ಆದರೆ ದೃಢ ಸಂಕಲ್ಪದೊಂದಿಗೆ ನಟಿ ಬಣ್ಣದ ಬದುಕಿಗೆ ವಿದಾಯ ಹೇಳಿದ್ದರು. ಆಗ ಅವರು, ತಾವು ನಟನೆ ಬಿಡುವ ಬಗ್ಗೆ ಮಾತನಾಡಿದ್ದರು. ಅದರಲ್ಲಿ ಅವರು, 'ನನಗಿನ್ನು ನೆನಪಿದೆ 2019 ರಂಜಾನ್ ನಲ್ಲಿ  ನಾನು ನನ್ನ ಕನಸಿನಲ್ಲಿ ಸಮಾಧಿಯನ್ನು ನೋಡುತ್ತಿದ್ದೆ. ನಾನು ಸುಡುವ, ಉರಿಯುತ್ತಿರುವ ಸಮಾಧಿಯನ್ನು ನೋಡುತ್ತಿದ್ದೆ, ನಾನು ಸಮಾಧಿಯಲ್ಲಿ ನನ್ನನ್ನೇ ನೋಡುತ್ತಿದ್ದೆ. ನಾನು ಖಾಲಿ ಸಮಾಧಿಯನ್ನು ನೋಡಿದೆ, ನಾನು ಅಲ್ಲಿ ನನ್ನನ್ನು ನೋಡಿದೆ. ನಾನು ಬದಲಾಗದಿದ್ದರೆ, ನನ್ನ ಅಂತ್ಯ ಇದೇ ಆಗಲಿದೆ ಎಂಬುದಕ್ಕೆ ದೇವರು ನನಗೆ ನೀಡುತ್ತಿರುವ ಸಂಕೇತವಾಗಿದೆ ಎಂದು ನಾನು ಭಾವಿಸಿದೆ. ಅದು ನನಗೆ ಸ್ವಲ್ಪ ಆತಂಕವನ್ನುಂಟುಮಾಡಿತು' ಎಂದು ಹೇಳಿದ್ದರು.  

ಸನಾ ಖಾನ್​ಗೆ 12 ಮಕ್ಕಳನ್ನು ಹೆರುವ ಆಸೆಯಂತೆ: ಮನದ ಮಾತು ತೆರೆದಿಟ್ಟು ಕಾರಣವನ್ನೂ ನೀಡಿದ ನಟಿ!

click me!