ಡಿವೋರ್ಸ್ ಪಡೆದ ಮಹಿಳೆ ಬಗ್ಗೆ ಹೇಳಲೇಬಾರದ್ದನ್ನೂ ಹೇಳಿದ ಸಮಂತಾ!

ನಂಗೆ ಗೊತ್ತಿಲ್ಲ, ನಾನು ಪುರುಷರ ಬಗ್ಗೆ ಗೊತ್ತಿಲ್ಲ, ಯಾಕೆ ಅಂದ್ರೆ ನಾನು ಪುರುಷ ಅಲ್ಲ ಮಹಿಳೆ. ಹೀಗಾಗಿ ನಾನು ಮಹಿಳೆಯರ ಬಗ್ಗೆ ಮಾತ್ರ ಮಾತನಾಡುತ್ತೇನೆ. ಯಾವಾಗ ಒಂದು ಹೆಣ್ಣು ಡಿವೋರ್ಸ್ ಪಡೆದುಕೊಳ್ಳುತ್ತಾಳೋ ಆಗ ಬಹಳಷ್ಟು..

Actress Samantha Ruth Prabhu talks about Marriage and Divorce women

ಭಾರತದ ಜನಪ್ರಿಯ ನಟಿ ಸಮಂತಾ ತುಂಬಾ ನೋವಿನಿಂದ ಮಾತನಾಡಿದ್ದಾರೆ. ಸಮಂತಾ ಮದುವೆ, ಡಿವೋರ್ಸ್ ಬಗ್ಗೆ ಎಲ್ಲರಿಗೂ ಗೊತ್ತು.. ಆದರೆ, ಇಲ್ಲಿಯವರೆಗೆ ಎಂದೂ ಹೇಳದೇ ಇದ್ದ ಸಂಗತಿಯನ್ನು ನಟಿ ಸಮಂತಾ ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ವಿಚ್ಚೇದಿತರ ಬಗ್ಗೆ ಹೇಳಲೇಬಾರದ್ದನ್ನು ಕೂಡ ಸಮಂತಾ ಹೇಳಿದ್ದಾರೆ ಎನ್ನಬಹುದು. ಅಂದರೆ, ಮಹಿಳಾವಲಯದಲ್ಲಿ ಡಿವೋರ್ಸ್ ಪಡೆದವರ ಕಥೆಯೇನು ಎಂಬುದನ್ನು ಸಮಂತಾ ಬಿಚ್ಚಿಟ್ಟಿದ್ದಾರೆ. ಹಾಗಿದ್ದರೆ ಅದೇನು ಅಂತ ನೋಡಿ.. 

'ನಾನು ಹೇಳಲಾರೆ, ನಂಗೆ ಪುರುಷರ ಬಗ್ಗೆ ಗೊತ್ತಿಲ್ಲ, ಯಾಕೆ ಅಂದ್ರೆ ನಾನು ಪುರುಷ ಅಲ್ಲ ಮಹಿಳೆ. ಹೀಗಾಗಿ ನಾನು ಮಹಿಳೆಯರ ಬಗ್ಗೆ ಮಾತ್ರ ಮಾತನಾಡುತ್ತೇನೆ. ಯಾವಾಗ ಒಂದು ಹೆಣ್ಣು ಡಿವೋರ್ಸ್ ಪಡೆದುಕೊಳ್ಳುತ್ತಾಳೋ ಆಗ ಬಹಳಷ್ಟು ಅವಮಾನಗಳನ್ನು ಎದುರಿಸಬೇಕಾಗುತ್ತೆ. ಅದು ಎಲ್ಲಿಯವರೆಗೆ ಹೋಗುತ್ತೆ ಅಂದ್ರೆ 'ಸೆಕೆಂಡ್ ಹ್ಯಾಂಡ್, ಯೂಸ್ಡ್‌, ವೇಸ್ಟೆಡ್ ಲೈಫ್, ಅಷ್ಟೇ ಅಲ್ಲ, ನಿಮ್ಮನ್ನು ಒಂದು ಮೂಲೆಗೆ ತಳ್ಳಲಾಗುತ್ತೆ.. 

Latest Videos

ಮೈಯೋಸಿಟಿಸ್ ಮುಗಿಸಿ ಮತ್ತೊಂದು ಮಹಾ ಕಾಯಿಲೆಗೆ ತುತ್ತಾದ ಸಮಂತಾ; ಏನಿದು ಕರ್ಮ?

ಒಬ್ಬ ಮಹಿಳೆ ವಿಚ್ಛೇದನ ಪಡೆದುಕೊಂಡರೆ, ಮಹಿಳಾ ವಲಯದಲ್ಲಿ ಅವರನ್ನು ಅಪರಾಧಿ ಎಂಬಂತೆ ನೋಡಲಾಗುತ್ತದೆ. ಜೊತೆಗೆ, ಅವರು ಜೀವನದಲ್ಲಿ ಸೋತಿದ್ದಾರೆ ಎಂಬಂತೆ ಭಾವಿಸಲಾಗುತ್ತದೆ. ಅವರನ್ನು ಚಿತ್ರವಿಚಿತ್ರ ರೀತಿಯಲ್ಲಿ ಅವಮಾನಿಸಲಾಗುತ್ತದೆ. ಒಮ್ಮೆ ನೀವು ವಿಚ್ಛೇದಿತರು ಒಂದು ಗೊತ್ತಾದರೆ, ನಿಮ್ಮನ್ನು ಮಹಿಳಾಗುಂಪು ನೋಡುವ ರೀತಿಯೇ ಬದಲಾಗುತ್ತದೆ. 

ನೀವು ಒಮ್ಮೆ ಮದುವೆ ಆಗಿದ್ದೀರಿ, ಆದರೆ ಈಗ ಅದಿಲ್ಲ ಎಂದು ಹಾಸ್ಯ ಮಾಡಲಾಗುತ್ತದೆ. ನಮ್ಮ ಸಮಾಜದಲ್ಲಿ ಅಂತಹ, ಅಂದರೆ ಡಿವೋರ್ಸ್ ಆಗಿರುವ ಹುಡುಗಿಯರು, ಅವರ ಫ್ಯಾಮಿಲಿ ಎಲ್ಲರೂ ಸಾಕಷ್ಟು ಹಿಂಸೆ ಅನುಭವಿಸಬೇಕಾಗುತ್ತದೆ. ಕಾರಣ, ಸಮಾಜ ಡಿವೋರ್ಸ್ ಆದವರನ್ನು ನೋಡುವ ರೀತಿಯೇ ವಿಚಿತ್ರ. ಅದನ್ನು ಹೀಗೂ ಹೇಳಬಹುದು, ಡಿವೋರ್ಸ್ ಆದವರನ್ನು ಸಮಾಜ ವಿಚಿತ್ರ ಪ್ರಾಣಿಗಳು ಎಂಬಂತೆ ನೋಡುತ್ತದೆ. 

ಸುಹಾಸ್‌ನಿಂದ ವ್ಯಾಪಾರ ಕಲೆ ಕಲಿಯಲು ಕರೆ ಕೊಟ್ಟ ರಾಜ್‌ ಬಿ ಶೆಟ್ಟಿ, ಎಂಥ ಮಾರ್ರೆ!

ನಾನು ಸಮಾಜ ಎಂದಾಗ, ಅದು ಮಹಿಳಾ ಸಮಾಜ. ಏಕೆಂದರೆ, ನಾನು ಮಹಿಳೆ, ಪುರುಷ ಅಲ್ಲ, ಅದಕ್ಕೇ ನಾನು ಏನೇ ಮಾತನ್ನಾಡಿದರೂ ಮಹಿಳೆಯರ ಬಗ್ಗೆ ಅಷ್ಟೇ. ಏಕೆಂದರೆ, ಪುರುಷರ ಬಗ್ಗೆ ನನಗೆ ಏನೂ ಗೊತ್ತಿಲ್' ಎಂದಿದ್ದಾರೆ ಖ್ಯಾತ ನಟಿ ಸಮಂತಾ. ಹೌದು, ನಟಿ ಸಮಂತಾ ಜೀವನದಲ್ಲಿ ಮದುವೆ, ಡಿವೋರ್ಸ್ ಎರಡನ್ನೂ ನೋಡಿದ್ದಾರೆ. ಹೀಗಾಗಿ ಅವರಿಗೆ ಮಹಿಳಾ ಸಮಾಜ ಗ್ರಹಿಣಿಯರನ್ನು ಹಾಗೂ ವಿಚ್ಛೇದಿತ ಮಹಿಳೆಯರನ್ಜು ನೋಡುವ ಭಿನ್ನ ರೀತಿಯ ಅರಿವು ಇದೆ. 

click me!