ಜೀವ ಅಂದರೆ ದೇಹ ಏನನ್ನೋ ಕೇಳಬಹುದು, ಮನಸ್ಸು ಏನನ್ನೋ ನಿರೀಕ್ಷಿಸಬಹುದು, ಏನೋ ಆಸೆ ಪಡಬಹುದು. ಆದರೆ, ಜೀವಶಕ್ತಿ ಯಾವತ್ತೂ ನಮ್ಮ ಗುರಿಯ ಕಡೆಗೆ ಜರ್ನಿ ಮಾಡುತ್ತಲೇ ಇರುತ್ತದೆ. ನಮ್ಮ ಹಸ್ತಕ್ಷೇಪ ಇಲ್ಲದಿದ್ದರೆ..
ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಸಂದರ್ಶನವೊಂದರಲ್ಲಿ ಜೀವನದಲ್ಲಿ ಬರುವ ಕಷ್ಟನಷ್ಟಗಳ ಬಗ್ಗೆ ಮಾತನಾಡಿದ್ದಾರೆ. ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ನಟಿ ಸಮಂತಾ 'ನಮಗೆ ಜೀವನದಲ್ಲಿ ಕಷ್ಟಗಳು ಬಂದಿವೆ ಎಂದರೆ ಅದು ಹೊಸತೇನೋ ಕೊಡಲು ಎಂದುಕೊಳ್ಳಬೇಕು. ನಾವು ಹೋಗುತ್ತಿರುವ ದಾರಿ ಬ್ಲಾಕ್ ಆಗಿದೆ, ನಮಗೆ ಆ ದಿಕ್ಕಿನಲ್ಲಿ ಮುಂದಕ್ಕೆ ಹೋಗಲು ಅಸಾಧ್ಯ ಎಂದಾದರೆ, ಆಗ ಪಕ್ಕದಲ್ಲೇ ಇನ್ನೊಂದು ದಾರಿ ನಮಗಾಗಿ ತೆರೆದುಕೊಳ್ಳುತ್ತದೆ ಎನ್ನಬೇಕು.
ಒಮ್ಮೆ ಜೀವನದಲ್ಲಿ ನಮಗೆ ತುಂಬಾ ತುಂಬಾ ಕಷ್ಟಗಳು ಬಂದು ಜೀವನವೇ ಬರೀ ಕತ್ತಲೆ ಎನ್ನಿಸಿದರೆ ಆಗ ನಮಗೆ ತುಂಬಾ ಬೆಳಕು ಇರುವ ದಾರಿ ಸದ್ಯದಲ್ಲೇ ತೆರೆದುಕೊಳ್ಳುತ್ತದೆ. ಒಮ್ಮೆ ನಮ್ಮ ಆರೋಗ್ಯ ಹದಗೆಟ್ಟರೆ, ನಮ್ಮ ಆರ್ಥಿಕ ಪರಿಸ್ಥಿತಿ ತೀರಾ ಕೆಟ್ಟದಾಗಿದ್ದರೆ ನಮಗಾಗಿ ಏನೋ ಒಂದು ಬೇರೆಯದು ಕಾದಿದೆ ಎಂದರ್ಥ. ಅದು ಸಿಗಬೇಕಾದರೆ ಇದು ಆಗಲೇಬೇಕು. ನಮ್ಮ ಡೆಸ್ಟಿನಿ ಕಡೆ ಜೀವನ ನಮ್ಮನ್ನು ಕರೆದುಕೊಂಡು ಹೋಗುತ್ತದೆ.
ಡಾ ರಾಜ್ ಮೇಲೆ ನಡೆದಿತ್ತು ಆ್ಯಸಿಡ್ ದಾಳಿಗೆ ಯತ್ನ; ಕೇಸ್ ಹಾಕಿದ್ರು ವಿಲನ್ ರೋಲ್ ನಟ!
ಜೀವ ಅಂದರೆ ದೇಹ ಏನನ್ನೋ ಕೇಳಬಹುದು, ಮನಸ್ಸು ಏನನ್ನೋ ನಿರೀಕ್ಷಿಸಬಹುದು, ಏನೋ ಆಸೆ ಪಡಬಹುದು. ಆದರೆ, ಜೀವಶಕ್ತಿ ಯಾವತ್ತೂ ನಮ್ಮ ಗುರಿಯ ಕಡೆಗೆ ಜರ್ನಿ ಮಾಡುತ್ತಲೇ ಇರುತ್ತದೆ. ನಮ್ಮ ಹಸ್ತಕ್ಷೇಪ ಇಲ್ಲದಿದ್ದರೆ, ನಮ್ಮ ಲೈಫ್ ಎನರ್ಜಿ ನಿಜವಾಗಿಯೂ ನಾವಿಲ್ಲಿಗೆ ತಲುಪಬೇಕೋ ಅಲ್ಲಿಗೆ ನಮ್ಮನ್ನು ಕರೆದುಕೊಂಡು ಹೋಗಿ ತಲುಪಿಸುತ್ತದೆ. ಹೀಗಾಗಿ, ನಮಗೆ ಬಂದ ಕಷ್ಟಗಳ ಬಗ್ಗೆ ಚಿಂತೆ ಬೇಡ, ಬರಲಿರುವ ಕಷ್ಟಗಳ ಬಗ್ಗೆ ಭಯ ಬೇಡ, ಎಲ್ಲವೂ ಯಾವುದೋ ಆಗೋಚರ ಶಕ್ತಿಯ ಆಶಯದಂತೆ ನಡೆಯುತ್ತದೆ' ಎಂದಿದ್ದಾರೆ ನಟಿ ಸಮಂತಾ.
ಸಾನ್ಯಾ ಅಯ್ಯರ್ ಜೊತೆ ಬಿಎಂಎಸ್ ಕಾಲೇಜಿನಲ್ಲಿ ಲುಕ್ ಕೊಟ್ಟಿದ್ದೇಕೆ ಸಮರ್ಜಿತ್ ಲಂಕೇಶ್!
ಅಂದಹಾಗೆ, ವಿಜಯ್ ದೇವರಕೊಂಡ (Vijay Deavarakonda)ಜತೆ ಖುಷಿ ಸಿನಿಮಾದಲ್ಲಿ ನಟಿಸಿದ ಬಳಿಕ ನಟಿ ಸಮಂತಾ, ಅನಾರೋಗ್ಯದ ಕಾರಣಕ್ಕೆ ಬೇರೆ ಯಾವುದೇ ಸಿನಿಮಾಕ್ಕೆ ಸಹಿ ಹಾಕಿಲ್ಲ. ಈಗ, ಆದಷ್ಟು ಬೇಗ ಅನಾರೋಗ್ಯದಿಂದ ಮುಕ್ತಿ ಹೊಂದಿ ಮತ್ತೆ ಸಿನಿಮಾ ನಟನೆಯನ್ನು ಮುಂದುವರಿಸುವ ಕನಸು ಕಾಣುತ್ತಿದ್ದಾರೆ ನಟಿ ಸಮಂತಾ. ನಟ ನಾಗ ಚೈತನ್ಯ (Naga Chaitanya)ಅವರನ್ನು ಮದುವೆಯಾಗಿದ್ದ ಸಮಂತಾ ಅವರಿಂದ ಡಿವೋರ್ಸ್ ಪಡೆದು ಸದ್ಯ ಒಂಟಿಯಾಗಿದ್ದಾರೆ. ಅವರ ಮುಂದಿನ ನಡೆಯ ಬಗ್ಗೆ ಅವರ ಫ್ಯಾನ್ಸ್‌ಗಳು ಕುತೂಹಲದಿಂದ ಕಾಯುತ್ತಿದ್ದಾರೆ.
ರೋಲ್‌ಗೆ ಬ್ರಾಂಡ್ ಮಾಡುವ ಟ್ರೆಂಡ್ ಇದೆ, ಅಂಥ ಅನುಭವ ನನಗೂ ಆಗಿದೆ; ಹಿತಾ ಚಂದ್ರಶೇಖರ್!