ಟಾಲಿವುಡ್ ನಟಿ ಸಮಂತಾ ರಾಜಕೀಯಕ್ಕೆ ಎಂಟ್ರಿ ಫಿಕ್ಸ್​? ಪಕ್ಷದ ಮಾಹಿತಿಯೂ ವೈರಲ್​

By Suvarna News  |  First Published Sep 9, 2023, 3:19 PM IST

ಟಾಲಿವುಡ್​ ನಟಿ ಸಮಂತಾ ರುತ್​ ಪ್ರಭು ಅವರು ರಾಜಕೀಯಕ್ಕೆ ಎಂಟ್ರಿ ಕೊಡುವುದು ಬಹುತೇಕ ಫಿಕ್ಸ್​ ಆಗಿದೆ ಎನ್ನಲಾಗುತ್ತಿದೆ. ಅವರ ಬೆಂಬಲ ಯಾವ ಪಕ್ಷಕ್ಕೆ?
 


ಟಾಲಿವುಡ್ ನಟಿ ಸಮಂತಾ ರುತ್​ ಪ್ರಭು (Samantha) ಸದ್ಯ  ‘ಖುಷಿ’ ಸಿನಿಮಾದ ಖುಷಿಯಲ್ಲಿದ್ದಾರೆ.  36 ವರ್ಷದ ನಟಿಯ ಖುಷಿ ಚಿತ್ರ ಬಿಡುಗಡೆಯಾದ ವಾರದ ನಂತರವೂ ಭರ್ಜರಿ ಕಲೆಕ್ಷನ್​ ಮಾಡುತ್ತಿವೆ. ಅನಾರೋಗ್ಯದ ಹಿನ್ನಲೆ ಸಿನಿಮಾದಿಂದ ಬ್ರೇಕ್ ಪಡೆದುಕೊಂಡಿರುವ ಸಮಂತಾ ಈಗ ಪಾಲಿಟಿಕ್ಸ್‌ಗೆ ಎಂಟ್ರಿ ಕೊಡುವ ವಿಚಾರವಾಗಿ ಸಖತ್ ಸುದ್ದಿಯಲ್ಲಿದ್ದಾರೆ. ಕೆಲ ತಿಂಗಳಿನಿಂದ ಮಯೋಸಿಟಿಸ್​ ಎಂಬ ಸ್ನಾಯು ಸಂಬಂಧಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಸಮಂತಾ ಅಮೆರಿಕದಲ್ಲಿ ಚಿಕಿತ್ಸೆ ಪಡೆಯಲಿದ್ದು ಆರು ತಿಂಗಳಿನಿಂದ ಒಂದು ವರ್ಷದವರೆಗೆ ಚಿತ್ರರಂಗದಿಂದ ಬ್ರೇಕ್​ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿತ್ತು. 

ಅದಕ್ಕೆ ಪೂರಕ ಎಂಬಂತೆ ಖುಷಿ ಸಿನಿಮಾ ಹಾಗೂ ದಿ ಸಿಟಡೆಲ್​ ವೆಬ್​ಸರಣಿ ಚಿತ್ರೀಕರಣ ಪೂರ್ಣಗೊಳಿಸಿದ ಸಮಂತಾ, ಹೊಸ ಪ್ರಾಜೆಕ್ಟ್​ಗಳನ್ನು ಒಪ್ಪಿಕೊಂಡಿರಲಿಲ್ಲ. ಇದರ ನಡುವೆಯೇ ಹೊಸ ವಿಚಾರವೊಂದು ಮುನ್ನೆಲೆಗೆ ಬಂದಿದೆ. ಅದೇನೆಂದರೆ, ಸಮಂತಾ ರಾಜಕೀಯಕ್ಕೆ  ಎಂಟ್ರಿ ಕೊಡುವತ್ತಿದ್ದಾರೆ ಎನ್ನುವುದು. ಬಿ-ಟೌನ್​ನಲ್ಲಿ ಈ ಬಗ್ಗೆ ಸಕತ್​ ಸುದ್ದಿಯಾಗುತ್ತಿದೆ.  ಮಯೋಸಿಟಿಸ್ ಎಂಬ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ  ಜೊತೆಗೆ ರಾಜಕೀಯಕ್ಕೆ (Politics) ಎಂಟ್ರಿ ಕೊಡುವ ಬಗ್ಗೆ ಸಮಂತಾ ಯೋಚಿಸಿದ್ದಾರೆ ಎನ್ನಲಾಗುತ್ತಿದೆ. 

Tap to resize

Latest Videos

KHUSHI: ಸಮಂತಾ- ವಿಜಯ ದೇವರಕೊಂಡ ಬೆಡ್​ರೂಮ್​ ರೊಮ್ಯಾನ್ಸ್​ ನೋಡಿ ಹುಬ್ಬೇರಿಸಿದ ಫ್ಯಾನ್ಸ್​!
 
ಸದ್ಯದ ಮಾಹಿತಿಯ ಪ್ರಕಾರ, ಸಮಂತಾ ತೆಲಂಗಾಣದ ಜನರು ಮತ್ತು ರೈತರಿಗೆ ಬೆಂಬಲವಾಗಿದ್ದಾರೆ. ಇದರೊಂದಿಗೆ ವರದಿಗಳಲ್ಲಿ ಸಮಂತಾ, ಕೆ. ಚಂದ್ರಶೇಖರ್ ರಾವ್ ಅವರ ಭಾರತ್ ರಾಷ್ಟ್ರ ಸಮಿತಿ (BRS)   ಭಾಗವಾಗಬಹುದು ಎನ್ನಲಾಗುತ್ತಿದೆ. ತೆಲಂಗಾಣದ (Telangana) ಭಾರತ್ ರಾಷ್ಟ್ರ ಸಮಿತಿ ಪಕ್ಷದ ನಾಯಕರು ಸಮಂತಾರನ್ನ ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದೂ ವರದಿಯಾಗಿದೆ.   ತೆಲಂಗಾಣದ ಕೈಮಗ್ಗ ನೇಕಾರರು ನೇಯ್ದ ಬಟ್ಟೆಗಳ ರಾಯಭಾರಿಯಾಗಿರುವ ಸಮಂತಾ, ಆಗಾಗ ಕೃಷಿಕರ ಸಮಸ್ಯೆಗಳ ಕುರಿತೂ ಮಾತನಾಡಿದ್ದಾರೆ. ಜತೆಗೆ ಭಾರತ ರಾಷ್ಟ್ರ ಸಮಿತಿ (ಬಿಆರ್​ಎಸ್​) ನೇತೃತ್ವದ ತೆಲಂಗಾಣ ಸರ್ಕಾರದ ಹಲವು ಕಾರ್ಯಕ್ರಮಗಳಲ್ಲೂ ಸಮಂತಾ ಭಾಗಿಯಾಗಿದ್ದು, ಬ್ರೇಕ್​ ನಂತರ ಅದೇ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಸದ್ಯ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಸಮಂತಾ ಅಧಿಕೃತವಾಗಿ ಏನೂ ಹೇಳಿಲ್ಲ. ತಮ್ಮ ಪಕ್ಷದ ಪರವಾಗಿ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸಿ, ತಮ್ಮ ಪಕ್ಷದ ಬೆಂಬಲಕ್ಕೆ ನಿಲ್ಲಿ ಎಂದು ನಟಿಯನ್ನು ಬಿಆರ್​ಎಸ್​ ನಾಯಕರು  ಕೋರಿದ್ದಾರೆ ಎನ್ನಲಾಗಿದೆ. ಮುಂದಿನ ಎಲೆಕ್ಷನ್‍ಗೆ ಸಮಂತಾ ಕೂಡ ಬಿಆರ್‍ಎಸ್ ಪಕ್ಷದ ಪರವಾಗಿ ಪ್ರಚಾರದ ಅಖಾಡಕ್ಕೆ ಇಳಿಯುತ್ತಾರೆ ಎನ್ನಲಾಗುತ್ತಿದೆ. ತೆಲಂಗಾಣದಲ್ಲೂ ಸ್ಯಾಮ್‍ಗೆ ಫ್ಯಾನ್ ಬೇಸ್ ದೊಡ್ಡ ಮಟ್ಟದಲ್ಲಿರುವ ಕಾರಣ ರಾಜಕೀಯ ಪಾರ್ಟಿಗೆ ಪ್ಲಸ್ ಆಗುತ್ತೆ ಎಂಬುದು ಹಲವರ ಲೆಕ್ಕಚಾರ. 

ಪುಸ್ತಕವೊಂದರಿಂದ ರಟ್ಟಾಯ್ತು ಶೋಭಿತಾ ಧೂಲಿಪಾಲ-ನಾಗಚೈತನ್ಯ ಸಂಬಂಧದ ಗುಟ್ಟು!

ಸದ್ಯ ಬಾಲಿವುಡ್​ನಲ್ಲಿ ಸಮಂತಾ  ಮತ್ತು ವಿಜಯ್​ ದೇವರಕೊಂಡ ಅವರ ರೊಮ್ಯಾನ್ಸ್​ ವಿಷಯದ್ದೇ ಮಾತು. ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎನ್ನುವ ಗಾಳಿ ಸುದ್ದಿ ಕೆಲ ತಿಂಗಳಿನಿಂದ ಹರಿದಾಡುತ್ತಿರುವ ನಡುವೆಯೇ ಈ ರೊಮ್ಯಾನ್ಸ್​ ವಿಡಿಯೋ ವೈರಲ್​ ಆಗಿತ್ತು. ಅದಕ್ಕೂ ಮುನ್ನ  ಖುಷಿ ಸಿನಿಮಾದ ಟ್ರೈಲರ್​​ಗೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ,  ಖುಷಿ (Khushi) ಸಿನಿಮಾದ ನಟಿ ಸಮಂತಾ ರುತ್​ ಪ್ರಭು ತಮ್ಮ ಕ್ರಷ್​ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು ವಿಜಯ್​.  ಇಲ್ಲಿಯವರೆಗೆ ವಿಜಯ್​ ದೇವರಕೊಂಡ ಮತ್ತು ರಶ್ಮಿಕಾ ಡೇಟಿಂಗ್​ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಅವರ ಹೆಸರು ಸಮಂತಾ ಜೊತೆ ಥಳಕು ಹಾಕಿಕೊಂಡಿದೆ.


click me!