ನಿಧಿ ಅಗರ್ವಾಲ್ ಬೆನ್ನಲ್ಲೇ ನಟಿ ಸಮಂತಾಗೆ ಮೇಲೆ ಮುಗಿ ಬಿದ್ದ ಫ್ಯಾನ್ಸ್, ಹುಚ್ಚಾಟದ ದೃಶ್ಯ ಸೆರೆ

Published : Dec 21, 2025, 08:08 PM IST
samantha ruth prabhu Mobbed By Crowd

ಸಾರಾಂಶ

ನಿಧಿ ಅಗರ್ವಾಲ್ ಬೆನ್ನಲ್ಲೇ ನಟಿ ಸಮಂತಾಗೆ ಮೇಲೆ ಮುಗಿ ಬಿದ್ದ ಫ್ಯಾನ್ಸ್, ಹುಚ್ಚಾಟದ ದೃಶ್ಯ ಸೆರೆ, ಈ ಘಟನೆ ಕೂಡ ಹೈದರಾಬಾದ್‌ನಲ್ಲಿ ನಡೆದಿದೆ. ಬೌನ್ಸರ್, ಪೊಲೀಸರು ಇದ್ದರೂ ಅಭಿಮಾನಿಗಳು ಅತೀರೇಖದ ವರ್ತನೆಯಿಂದ ನಟಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೈದರಾಬಾದ್ (ಡಿ.21) ಸಿನಿಮಾ ನಟ ನಟಿಯರ ಮೇಲಿನ ಅಭಿಮಾನ ಒಂದು ಹಂತದವರೆಗೆ ಉತ್ತಮ. ಆದರೆ ಅತಿರೇಖದ ಅಭಿಮಾನ ಇದೀಗ ಹಲವೆಡೆ ವ್ಯಕ್ತವಾಗುತ್ತಿದೆ. ಈ ಪೈಕಿ ಹೈದರಾಬಾದ್‌ನಲ್ಲಿ ಪದೇ ಪದೇ ಅಭಿಮಾನಿಗಳಿಂದ ಅತಿರೇಖದ ವರ್ತನೆಗಳು ವರದಿಯಾಗುತ್ತಿದೆ. ಇತ್ತೀಚೆಗೆ ನಟಿ ನಿಧಿ ಅಗರ್ವಾಲ್ ಮೇಲೆ ಅಭಿಮಾನಿಗಳು ತೋರಿದ ಅತೀರೇಖದ ವರ್ತನೆ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಘಟನೆ ಬೆನ್ನಲ್ಲೇ ಇದೀಗ ನಟಿ ಸಮಂತ್ ರುತ್ ಪ್ರಭು ಮೇಲೆ ಅಭಿಮಾನಿಗಳು ಮುಗಿ ಬಿದ್ದ ಘಟನೆ ನಡೆದಿದೆ. ಫ್ಯಾನ್ಸ್‌ನಿಂದ ನಟಿ ಸಮಂತಾ ಸುರಕ್ಷಿತವಾಗಿ ಹೊರತರಲು ಬೌನ್ಸರ್, ಭದ್ರತಾ ಪಡೆಗಳು ಹರಸಾಹಸ ಮಾಡಿದ್ದಾರೆ. ನಟಿಯ ಪರದಾಟದ ದೃಶ್ಯಗಳು ಸೆರೆಯಾಗಿದೆ.

ಅಭಿಮಾನಿಗಳ ನೂಕು ನುಗ್ಗಲಿನಲ್ಲಿ ನಟಿ ಸಮಂತಾಗೆ ಸಂಕಷ್ಟ

ನಟಿ ಸಮಂತಾ ರುತ್ ಪ್ರಭು ಹೈದರಾಬಾದ್‌ನಲ್ಲಿ ಕಾರ್ಯಕ್ರಮ ನಿಮಿತ್ತ ತೆರಳಿದ್ದಾರೆ. ಆದರೆ ಸೆಕ್ಯೂರಿಟಿ ಗಾರ್ಡ್‌ಗಳ ಜೊತೆ ಹೊರಬಂದ ನಟಿ ಸಮಂತ ಸುತ್ತ ಫ್ಯಾನ್ಸ್ ಮುಗಿಬಿದ್ದಿದ್ದಾರೆ. ಅಭಿಮಾನಿಗಳ ನೂಕು ನುಗ್ಗಲಿನಲ್ಲಿ ಸಮಂತ ಪರದಾಡಿದ್ದಾರೆ. ಸೆಕ್ಯೂರಿಟಿ ಗಾರ್ಡ್, ಪೊಲೀಸ್ ಎಷ್ಟೇ ಪ್ರಯತ್ನ ಮಾಡಿದರೂ ಅಭಿಮಾನಿಗಳ ನಿಯಂತ್ರಿಸಲು ಸಾಧ್ಯವಾಗಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ನಟಿ ಸಮಂತಾ ಕೈಕುಲುಕಲು, ಫೋಟೋ ಕ್ಲಿಕ್ಕಿಸಲು ನೂಕು ನುಕ್ಕಲು ಸೃಷ್ಟಿಸಿದ್ದಾರೆ. ಹೀಗಾಗಿ ಅಪಾಯ ಸೃಷ್ಟಿಯಾಗಿದೆ.

ತಾಳ್ಮೆಯಿಂದ ನಗುತ್ತಲೆ ಕಾರು ಹತ್ತಿದ ಸಮಂತಾ

ನಟಿ ಸಮಂತಾ ರುತ್ ಪ್ರಭುವನ್ನು ಕಾರು ಹತ್ತಿಸಲು ಸೆಕ್ಯೂರಿಟಿ ಗಾರ್ಡ್ ಸುಸ್ತಾಗಿದ್ದಾರೆ. ಅಭಿಮಾನಿಗಳ ನೂಕು ನುಗ್ಗಲಿನಲ್ಲಿ ನಟಿ ಸಮಂತ ತಾಳ್ಮೆ ಕಳೆದುಕೊಂಡಿಲ್ಲ. ಸುರಕ್ಷಿತವಾಗಿ ನಟಿ ಸಮಂತಾ ಕಾರು ಹತ್ತಿ ಸ್ಥಳದಿಂದ ತೆರಳಿದ್ದಾಳೆ. ಹೀಗಾಗಿ ನಟಿ ನಿಧಿ ಅಗರ್ವಾಲ್ ರೀತಿ ಪರಿಸ್ಥಿತಿಯನ್ನು ಸಮಂತಾ ಎದುರಿಸಲಿಲ್ಲ.

ಸೆಕ್ಯೂರಿಟಿ ಗಾರ್ಡ್, ಪೊಲೀಸ್ ಹಾಜರಿದ್ದರೂ ಅಭಿಮಾನಿಗಳ ಸಮೂಹ ನಿಯಂತ್ರಸಲು ಸಾಧ್ಯವಾಗಲಿಲ್ಲ. ಕೆಲವೇ ನಿಮಿಷದಲ್ಲಿ ಇಡೀ ಚಿತ್ರಣವೇ ಬದಲಾಗಿತ್ತು.ಎಲ್ಲೆಡೆ ನೂಕು ನುಗ್ಗಲಿನ ಪರಿಸ್ಥಿತಿ ನಿರ್ಮಾಣವಾಗಿತ್ತು. ನಿಮಿಷಗಳು ವಿಳಂಬವಾಗಿದ್ದರೂ ದುರಂತ ಸಂಭಿಸುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ನಟಿ ಸಮಂತಾ ಸುರಕ್ಷಿತವಾಗಿ ಸ್ಥಳದಿಂದ ತೆರಳಿದ್ದಾರೆ.

ನಿಧಿ ಅಗರ್ವಾಲ್ ಹಿಡಿದೆಳೆಡಾದಿ ಫ್ಯಾನ್ಸ್

ಸಿನಿಮಾ ಪ್ರಮೋಶನ್‌ಗಾಗಿ ಹೈದರಾಬಾದ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಟಿ ನಿಧಿ ಅಗರ್ವಾಲ್ ಮೇಲೆ ಫ್ಯಾನ್ಸ್ ಮುಗಿಬಿದ್ದಿದ್ದು ಮಾತ್ರವಲ್ಲ,ಬಟ್ಟೆಯನ್ನೂ ಹಿಡಿದು ಎಳೆದಾಡಿದ್ದಾರೆ. ಅಭಿಮಾನಿಗಳ ಅತಿರೇಖದ ವರ್ತನೆ ತೋರಿದ್ದರು. ಸಿಕ್ಕ ಸಿಕ್ಕ ಅಭಿಮಾನಿಗಳು ಹಿಡಿದು ಎಳೆದಾಡಿದ್ದರು. ನಿಧಿ ಅಗರ್ವಾಲ್ ಕಣ್ಣೀರಿಡುತ್ತಲೆ ಸ್ಥಳದಿಂದ ಕಾರು ಹತ್ತಿದ್ದರು. ಈ ಘಟನೆಗ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಹೈದರಾಬಾದ್ ಅಭಿಮಾನಿಗಳ ವಿರುದ್ದ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ನಟಿ ಸಮಂತಾ ಮೇಲೆ ಅಭಿಮಾನಿಗಳು ಮುಗಿ ಬಿದ್ದ ಘಟನೆ ನಡೆದಿದೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಯಶ್ To ಪ್ರಭಾಸ್‌: 2025ರಲ್ಲಿ ಒಂದೂ ಸಿನಿಮಾ ರಿಲೀಸ್ ಮಾಡದೆ ನಿರಾಸೆ ಮೂಡಿಸಿದ ಟಾಪ್ ಹೀರೋಗಳು!
2025ರಲ್ಲಿ 100 ಕೋಟಿಗೂ ಹೆಚ್ಚು ಗಳಿಸಿಯೂ ಅಟ್ಟರ್ ಫ್ಲಾಪ್ ಆದ ಟಾಪ್ 5 ಸಿನಿಮಾಗಳು!