
ಕಾಲಿವುಡ್ ಅಂಗಳದಿಂದ ಮತ್ತೊಂದು ಖುಷಿ ಸಮಾಚಾರ ಹೊರಬಂದಿದೆ. ಈ ಹಿಂದೆ 'ಲವ್ ಸ್ಟೋರಿ ಚಿತ್ರದಲ್ಲಿ ಕ್ಯೂಟ್ ಜೋಡಿಯಾಗಿ ಕಾಣಿಸಿಕೊಂಡಿದ್ದ ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಜೋಡಿ ಇದೀಗ ಮತ್ತೊಂದು ಚಿತ್ರಕ್ಕೆ ಜತೆಯಾಗಿದ್ದಾರೆ. ಹೌದು ಅವರಿಬ್ಬರನ್ನು ತಮ್ಮ ಮಂಬರುವ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ ನಿರ್ಮಾಪಕ ಅಲ್ಲು ಅರವಿಂದ್. ಇವರು ಸ್ಟಾರ್ ನಟ ಅಲ್ಲೂ ಅರ್ಜನ್ ತಂದೆ ಎಂಬುದು ಬಹುತೇಕರಿಗೆ ಗೊತ್ತು. ಈ ಚಿತ್ರದ ನಿರ್ದೇಶಕರು ಚಂದು ಮೊಂಡೇಟಿ.
ಸಾಯಿ ಪಲ್ಲವಿ ಹಾಗೂ ನಾಗ ಚೈತನ್ಯ ಜೋಡಿಯ ಈ ಚಿತ್ರಕ್ಕೆ NC23 (ಎನ್‌ಸಿ 23) ಎಂದು ಹೆಸರಿಡಲಾಗಿದೆ. ಈ ಚಿತ್ರವು ರಿಯಲ್ ಸ್ಟೋರಿ ಒಳಗೊಂಡಿದ್ದು, ಮೀನುಗಾರರ ಕುಟುಂಬದ ಕಥೆ ಓಳಗೊಂಡಿದೆ ಎನ್ನಲಾಗಿದೆ. ಈ ಚಿತ್ರದ ಕಥಾವಸ್ತು ಸತ್ಯಕಥೆ ಆಧಾರಿತವಾದ್ದರಿಂದ ನಟ ನಾಗ ಚೈತನ್ಯ ಮೀನುಗಾರರ ಸಮುದಾಯವನ್ನು ಸಂಪರ್ಕಿಸಿದ್ದಾರಂತೆ. ಮೀನುಗಾರರ ಜೀವನದ ರೀತಿ, ಮಾತಿನ ಶೈಲಿ ಮತ್ತು ಹಾವ-ಭಾವಗಳನ್ನು ಗಮನಿಸಿ ಅವುಗಳನ್ನು ಅಭ್ಯಾಸ ಮಾಡಿದ್ದಾರಂತೆ ನಾಗ ಚೈತನ್ಯ.
ಮುಂಬರುವ ಈ ಚಿತ್ರದ ಸ್ಟೋರಿ ಮತ್ತು ಹೀರೋ ಬಗ್ಗೆ ಮಾಹಿತಿ ಹೊರಬಿದ್ದಿದ್ದರೂ ಚಿತ್ರದ ನಾಯಕಿ ಯಾರು ಎಂಬ ಬಗ್ಗೆ ಕೇವಲ ಊಹಾಪೋಹ ಮಾತ್ರ ಹರಿದಾಡುತ್ತಿತ್ತು. ಆದರೆ ಇದೀಗ NC23 ಚಿತ್ರದ ನಾಯಕಿ ಸಾಯಿ ಪಲ್ಲವಿ ಎಂಬ ಸಂಗತಿ ಜಗಜ್ಜಾಹೀರಾಗಿದೆ. ಈ ಮೂಲಕ ಮತ್ತೊಮ್ಮೆ 'ಲವ್ ಸ್ಟೋರಿ' ಜೋಡಿ ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡಲಿದ್ದಾರೆ. ನಾಯಕ ನಟ ನಾಗಚೈತನ್ಯ ಈವರೆಗೆ 22 ಚಿತ್ರಗಳನ್ನು ಮಾಡಿ ಮುಗಿಸಿದ್ದು ಮಂಬರುವ ಚಿತ್ರ ಅವರ 23 ಚಿತ್ರವಾಗಿದೆ. ಈ ಕಾರಣಕ್ಕೆ ಹೊಸ ಚಿತ್ರದ ಹೆಸರು 'NC23'ಎಂದು ಕರೆಯಲಾಗುತ್ತಿದೆ.
'3 ಈಡಿಯಟ್ಸ್'ನಲ್ಲಿ ಎಲ್ಲರನ್ನೂ ಬಿದ್ದು ಬಿದ್ದು ನಗಿಸಿದ ಅಖಿಲ್ ಮಿಶ್ರಾ ವಿಧಿವಶ
ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಜೋಡಿಯ ಈ ಹೊಸ ಚಿತ್ರವು ಸದ್ಯಕ್ಕೆ ಪ್ರೀ-ಪ್ರೊಡಕ್ಷನ್ ಹಂತದಲ್ಲಿದೆ. ಚಿತ್ರದ ಸ್ಕ್ರಿಪ್ಟ್ ಚೆನ್ನಾಗಿ ಬರಲೆಂದು ಇಡೀ ಟೀಮ್ ಈ ಬಗ್ಗೆ ಹೊಸ ರೀತಿಯ ಪ್ರಯತ್ನದಲ್ಲಿ ತೊಡಗಿದೆ. ಸತ್ಯ ಕಥೆ ಆಗಿರುವ ಕಾರಣಕ್ಕೆ ಸಾಕಷ್ಟು ಎಚ್ಚರಿಕೆ ತೆಗೆದುಕೊಂಡು ಅಧ್ಯಯನ ಮಾಡುತ್ತಿರುವ ಚಿತ್ರತಂಡ, ಶೀಘ್ರದಲ್ಲೇ ಶೂಟಿಂಗ್ ಶುರುಮಾಡಲು ಯೋಜನೆ ಹಾಕಿಕೊಂಡಿದೆ ಎನ್ನಲಾಗಿದೆ. ಒಟ್ಟಿನಲ್ಲಿ, ನಾಗ ಚೈತನ್ಯ ಅವರಿಗೆ ನಾಯಕಿ ಯಾರು ಎಂಬ ಕುತೂಹಲದ ಮಾತುಕತೆಗೆ ಇದೀಗ ಸಾಯಿ ಪಲ್ಲವಿ ಸೆಲೆಕ್ಷನ್ ಮೂಲಕ ಬ್ರೇಕ್ ಬಿದ್ದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.