ಮದ್ವೆಯಾಗದೇ ಪ್ರೆಗ್ನೆಂಟ್​ ಆದ್ರಾ ಸಾಯಿ ಪಲ್ಲವಿ? ವಿಡಿಯೋ ನೋಡಿ ಫ್ಯಾನ್ಸ್​ ಶಾಕ್​!

Published : Jul 16, 2023, 01:26 PM ISTUpdated : Jul 17, 2023, 03:29 PM IST
ಮದ್ವೆಯಾಗದೇ ಪ್ರೆಗ್ನೆಂಟ್​ ಆದ್ರಾ ಸಾಯಿ ಪಲ್ಲವಿ? ವಿಡಿಯೋ ನೋಡಿ ಫ್ಯಾನ್ಸ್​ ಶಾಕ್​!

ಸಾರಾಂಶ

ಸಹಜ ಸೌಂದರ್ಯವತಿ ಎಂದೇ ಖ್ಯಾತಿ ಪಡೆದಿರುವ ನಟಿ ಸಾಯಿ ಪಲ್ಲವಿ ಮದುವೆಯಾಗಲೇ ಗರ್ಭ ಧರಿಸಿದ್ದಾರಾ? ವೈರಲ್​ ವಿಡಿಯೋ ನೋಡಿ ಫ್ಯಾನ್ಸ್ ಶಾಕ್​ ಆಗಿದ್ದಾರೆ.   

ಬಹುಭಾಷಾ ನಟಿ ಸಾಯಿ ಪಲ್ಲವಿ ತಮ್ಮ ಸಿಂಪಲ್​ ಬ್ಯೂಟಿಯಿಂದಲೇ ಮನೆ ಮಾತಾಗಿರುವ ತಾರೆ. ಮುಗ್ಧ ಮೊಗದ, ಅಷ್ಟೇ ಮುಗ್ಧ ನಗುವಿನ ಚೆಲುವೆ ಸಾಯಿ ಪಲ್ಲವಿಯನ್ನು ಇಷ್ಟಪಡದವರು ಇಲ್ಲವೆಂದೇ ಹೇಳಬಹುದು. ಇತ್ತೀಚಿನ ದಿನಗಳಲ್ಲಿ ಸಾಯಿ ಪಲ್ಲವಿ ಕಡಿಮೆ ಸಿನಿಮಾಗಳನ್ನು  ಒಪ್ಪಿಕೊಳ್ಳುತ್ತಿದ್ದಾರೆ. ಪಾತ್ರಗಳ ಆಯ್ಕೆಯಲ್ಲಿ ತುಂಬ ಕಾಳಜಿ ವಹಿಸುತ್ತಿದ್ದಾರೆ. ಇದಕ್ಕೆ ಇವರು ಸ್ಪಷ್ಟ ಕಾರಣ ನೀಡಿಲ್ಲ. ಅದೊಮ್ಮೆ ಈಕೆ  ಸಿನಿಮಾ ರಂಗವನ್ನೇ ತೊರೆಯಲಿದ್ದಾರೆ ಎಂದೂ ಸುದ್ದಿಯಾಗಿಬಿಟ್ಟಿತು. ವೈದ್ಯೆಯಾಗುವ ಕನಸು ಹೊತ್ತಿದ್ದ ನಟಿ ಸಾಯಿ ಪಲ್ಲವಿ, ಸಿನಿಮಾ ರಂಗದಿಂದ ದೂರವಾಗಿ ವೈದ್ಯ ವೃತ್ತಿಯನ್ನು ಕೈಗೊಳ್ಳಲಿದ್ದಾರೆ ಎಂದೂ ಕೇಳಿಬಂದಿತ್ತು.ಇದೀಗ ಅವರು ಮತ್ತೊಂದು ಕಾರಣಕ್ಕೆ ಸಕತ್​ ಚರ್ಚೆಯಲ್ಲಿ ಇದ್ದಾರೆ. ಅದಕ್ಕೆ ಕಾರಣ, ಅವರ ವಿಡಿಯೋ ಒಂದು ವೈರಲ್​ ಆಗಿರುವುದು. ಇದರಲ್ಲಿ ಸಾಯಿ ಪಲ್ಲವಿ (Sai Pallavi) ತುಂಬು ಗರ್ಭಿಣಿಯಾಗಿರುವುದಾಗಿ ಕಂಡುಬರುತ್ತದೆ.

ಹೌದು. ನಟಿ ಗರ್ಭಿಣಿಯಾಗಿದ್ದರೆ ಅದೇನು ಹೊಸ ವಿಷಯವಲ್ಲ. ಆದರೆ ಅಸಲಿಗೆ ಸಾಯಿ ಪಲ್ಲವಿಯವರ ಮದುವೆಯೇ ಆಗಿಲ್ಲ. ಆದ್ದರಿಂದ ಈ ವಿಡಿಯೋ ನೋಡಿ ಫ್ಯಾನ್ಸ್​ ತಲೆ ಕೆಡಿಸಿಕೊಂಡಿದ್ದಾರೆ. ಈ ವಿಡಿಯೋಗೆ ಥಹರೇವಾರಿ ಕಮೆಂಟ್​ಗಳು ಬರುತ್ತಿದ್ದು, ತಲೆ-ಬುಡ ಅರ್ಥವಾಗ್ತಿಲ್ಲ, ಪ್ಲೀಸ್​ ಯಾರಾದ್ರೂ ಹೇಳಿ ಎಂದು ಗೋಗರೀತಿದ್ದಾರೆ ಫ್ಯಾನ್ಸ್​. ಈ ವಿಡಿಯೋದಲ್ಲಿ ನಟಿ ಸಾಯಿ ಪಲ್ಲವಿ ಸೀರೆಯುಟ್ಟು ಮಾಮೂಲಿನಂತೆ ಸಿಂಪಲ್​ ಬ್ಯೂಟಿಯಾಗಿ ಕಾಣಿಸುತ್ತಿದ್ದಾರೆ. ಅಪ್ಪಟ ಗೃಹಿಣಿಯಂತೆ ಕಾಣುವ ನಟಿ, ಅಡುಗೆ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿ ಇದೆ. ಆದರೆ ಇದರಲ್ಲಿ ನಟಿ ತುಂಬು ಗರ್ಭಿಣಿಯಂತೆ ಕಾಣಿಸುತ್ತಿರುವುದು ಈಗ ಅಭಿಮಾನಿಗಳು ತಲೆಬಿಸಿ ಮಾಡಿಕೊಳ್ಳುವಂತೆ ಮಾಡಿದೆ.

1990ರಲ್ಲಿ ಹುಟ್ಟಿರೋ ನಟಿ ಸಾಯಿ ಪಲ್ಲವಿಗೆ ಈಗ 33 ವರ್ಷದ ಅವಿವಾಹಿತೆ. ಕಳೆದ ವರ್ಷ ಸಾಯಿ ಪಲ್ಲವಿ ಮದುವೆ ತಯಾರಿಯನ್ನು ನಡೆಸಿದ್ದಾರೆ ಎನ್ನುವ ಗಾಳಿ ಸುದ್ದಿ ಸಕತ್​ ಸದ್ದು ಮಾಡಿತ್ತು.  ಮದುವೆ ಮಾಡಿಕೊಳ್ಳಲು ನಟಿ ಸಾಯಿ ಪಲ್ಲವಿ ಸಜ್ಜಾಗಿದ್ದು, ಸಿನಿಮಾಗಳಲ್ಲಿ ನಟಿಸುವುದು ಅನುಮಾನ ಎಂದೆಲ್ಲಾ ಹೇಳಲಾಗಿತ್ತು. ನಟಿ ಸಾಯಿ ಪಲ್ಲವಿಗೆ ಮನೆಯಲ್ಲಿ ಗಂಡು ಹುಡುಕುತ್ತಿದ್ದಾರಂತೆ. ಮದುವೆಯಾಗಲು ಸಾಯಿ ಪಲ್ಲವಿ ನಿರ್ಧರಿಸಿದ್ದಾರಂತೆ. ಹಾಗಂತ ಈ ಬ್ಯೂಟಿ ಯಾರನ್ನೋ ಲವ್ (Love) ಮಾಡಿಲ್ಲ. ಈಕೆಯದ್ದು ಪಕ್ಕಾ ಅರೇಂಜ್ ಮ್ಯಾರೇಜ್. ಹಾಗಾಗಿ ಮನೆಯವರೇ ಸಾಯಿ ಪಲ್ಲವಿಗೆ ತಕ್ಕ ವರನನ್ನು ಹುಡುಕುತ್ತಾ ಇದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಇದ್ಯಾವುದಕ್ಕೂ ತುಟಿಕ್​ ಪಿಟಿಕ್​ ಅಂದಿಲ್ಲ ಈ ಬ್ಯೂಟಿ. ಮದುವೆಯ ಬಗ್ಗೆ ಸಸ್ಪೆನ್ಸ್​ ಆಗಿಯೇ ಇಟ್ಟಿರುವ ನಟಿ, ಈ ಬಗ್ಗೆ ಕೇಳುವ ಪ್ರಶ್ನೆಗೆ ಮೌನದಿಂದಲೇ ಉತ್ತರ ನೀಡುತ್ತಾರೆ. ಆದ್ದರಿಂದ ನಟಿಯ ಮದುವೆಯ ಬಗ್ಗೆ ತಲೆ ಕೆಡಿಸಿಕೊಂಡಿರೋ ಫ್ಯಾನ್ಸ್​ಗೆ ಈ ಗರ್ಭಿಣಿ ವಿಡಿಯೋ ನೋಡಿ ಶಾಕ್​ ಆಗಿದೆ.

ಅಮರನಾಥ್ ಯಾತ್ರೆ ಮುಗಿಸಿದ ಸಾಯಿ ಪಲ್ಲವಿ; 60 ವರ್ಷದ ಪೋಷಕರನ್ನು ಕರೆದುಕೊಂಡು ಹೋದ ಅನುಭವ ಬಿಚ್ಚಿಟ್ಟ ನಟಿ

ಅಷ್ಟಕ್ಕೂ ಈ ವಿಡಿಯೋದ ಅಸಲಿಯತ್ತಿನ ಬಗ್ಗೆ ನಟಿ ಎಲ್ಲಿಯೂ ಹೇಳಿಕೊಂಡಿಲ್ಲ. ಆದಾಗ್ಯೂ ಇದಕ್ಕೆ ಅಭಿಮಾನಿಗಳು ತಮ್ಮದೇ ಆದ ರೀತಿಯ ಕಮೆಂಟ್​  ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಯಾರು ಎಂದು ಹಲವರು ಪ್ರಶ್ನಿಸಿದ್ದರೆ, ನಟರ ಜೀವನದಲ್ಲಿ ಎಲ್ಲವೂ ಸಾಧ್ಯ ಎಂದು ಕೆಲವರು ಹೇಳುತ್ತಿದ್ದಾರೆ. ಇನ್ನು ಕೆಲವರು ಇದು ಈಕೆ ನಟಿಸಿರುವ ಖ್ಯಾತ ಚಿತ್ರದ ಮಾರಿ-2 ದೃಶ್ಯ ಎಂದರೆ, ಇನ್ನು ಕೆಲವರು ಇದು  Paava Kadhaigal ಚಿತ್ರದ ದೃಶ್ಯ ಎನ್ನುತ್ತಿದ್ದಾರೆ. ಮತ್ತೆ ಹಲವರು ಇದು ಈಕೆಯ ಮುಂಬರುವ ಚಿತ್ರದ ದೃಶ್ಯ ಅಷ್ಟೇ. ವಿಡಿಯೋದಲ್ಲಿ ಹೊಟ್ಟೆಯನ್ನು ಸಹಜ ರೀತಿ ಎನ್ನುವಂತೆ ಗರ್ಭಿಣಿ ರೂಪದಲ್ಲಿ ಬಿಂಬಿಸಲಾಗಿದೆ. ಮೇಕಪ್​ನಿಂದ ಎಲ್ಲವೂ ಸಾಧ್ಯ. ಈಕೆ ಗರ್ಭಿಣಿಯಾಗಲು ಸಾಧ್ಯವೇ ಇಲ್ಲ, ಇದು ಚಿತ್ರದ ಶೂಟಿಂಗ್ ಅಷ್ಟೇ. ಬಹುಶಃ ಮುಂಬರುವ ಚಿತ್ರದ ದೃಶ್ಯ ಇರಬಹುದು ಎಂದಿದ್ದಾರೆ. ಒಟ್ಟಿನಲ್ಲಿ ಇದು ಫ್ಯಾನ್ಸ್​ ತಲೆಯನ್ನು ಬಿಸಿ ಮಾಡುತ್ತಿದೆ.

ನಯಾಗರ ಫಾಲ್ಸಲ್ಲಿ ನಿವೇದಿತಾ- ಚಂದನ್​ ಭರ್ಜರಿ ಡಾನ್ಸ್​: ಸಕ್ರೆ ಗೊಂಬೆ ಕರಗೋಗ್ತಿಯಾ ಎಂದ ಫ್ಯಾನ್ಸ್​ 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?