ಅಂದು ನಾನು ಅಮ್ಮನ ಮಾತನ್ನು ಕೇಳಿ ಅದನ್ನು ಕಾರ್ಯರೂಪಕ್ಕೆ ತರುವುದು ಕಷ್ಟ ಎಂದುಕೊಂಡೆ. ಆದರೆ, ಪದೇ ಪದೇ ಅಮ್ಮನ ಆ ಮಾತುಗಳ ಬಗ್ಗೆ ಯೋಚಿಸುತ್ತ, ನನಗೆ ಗೊತ್ತಿಲ್ಲದೇ ಅದನ್ನೇ ಅನುಸರಿಸತೊಡಗಿದೆ. ಬರಬರುತ್ತಾ ಅದೇ ಅಭ್ಯಾಸವಾಗಿ ಹೋಯ್ತು. ಮನೆಯಲ್ಲಿ ನಾನು ಒಬ್ಬಳೇ ಕೂತು ಸಾವಿರಾರು ಬಾರಿ ಅತ್ತಿದ್ದೇನೆ.
'ನನ್ನನ್ನು ಎಲ್ಲರೂ ಯಾವತ್ತೂ ಸ್ಮೈಲಿಂಗ್ ಕ್ವೀನ್ ಎಂದೇ ಕರೆಯುತ್ತಾರೆ. ನಾನು ಎಲ್ಲಾ ಸಮಯದಲ್ಲೂ ಹಾಗೇ ಇರುತ್ತೇನೆ' ಎಂದಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ಕರ್ನಾಟಕ ಕ್ರಶ್ ಎಂದು ಕರೆಸಿಕೊಂಡು ಬಳಿಕ ನ್ಯಾಷನಲ್ ಕ್ರಶ್ ಎಂದು ಬದಲಾಗಿರುವ ನಟಿ ರಶ್ಮಿಕಾ ಮಂದಣ್ಣ, ಹೊರಗೆ ಕ್ಯಾಮರಾ ಕಣ್ಣಿಗೆ ಬಿದ್ದಾಗ ಯಾವತ್ತೂ ಮುಗುಳ್ನಗುತ್ತಲೇ ಇರುತ್ತಾರೆ. ಆಕೆ ಯಾವತ್ತೂ ಹಾಗೇ ಇರಲು, ಅದನ್ನು ಮೆಂಟೇನ್ ಮಾಡಲು ಕಾರಣವೇನು? ಈ ಬಗ್ಗೆ ರಶ್ಮಿಕಾ ಒಂದು ಸಂದರ್ಶನದಲ್ಲಿ ಮಾತನಾಡಿದ್ದಾರೆ. ಇಂಟರೆಸ್ಟಿಂಗ್ ಆಗಿದೆ ನಟಿ ರಶ್ಮಿಕಾ ಮಾತು.
ನಟಿ ರಶ್ಮಿಕಾ ಮಂದಣ್ಣ 'ನನ್ನ ಮುಖದಲ್ಲಿ ಯಾವತ್ತೂ ಸ್ಮೈಲ್ ಮಾಯವಾಗುವುದಿಲ್ಲ. ಅದಕ್ಕೆ ಕಾರಣ ನನ್ನ ಅಮ್ಮ. ನಾನು ಅಮ್ಮನ ಮಾತನ್ನುಆಲಿಸಿ ಒಪ್ಪುವ ಮೊದಲು ಕೆಲವೊಂದು ಫೀಲಿಂಗ್‌ಗೆ ಒಳಗಾಗುತ್ತಿದ್ದೆ. ಒಮ್ಮ ನನ್ನಮ್ಮ ಹೇಳಿದರು- ನೀನು ಯಾವತ್ತೂ ಮುಗುಳ್ನಗುತ್ತಲೇ ಇರಬೇಕು. ನಿನಗೆ ಖುಷಿಯಾಗಲೀ, ದುಃಖವಾಗಲಿ ಅದನ್ನು ಹೊರಜಗತ್ತಿಗೆ ತೋರಿಸಿಕೊಳ್ಳಬಾರದು. ಎಲ್ಲರಂತೆ ಈಜಗತ್ತಿನಲ್ಲಿ ನೀನೂ ಕೂಡ ಸಂತೋಷ, ದುಃಖ, ಪ್ರೀತಿ, ದ್ವೇಷ, ಕೋಪ, ತಾಪ ಮತ್ತು ಕೀಳರಿಮೆ ಹೀಗೆ ಬಗೆಬಗೆಯ ಭಾವನೆಗಳು ಮತ್ತು ಅನುಭವಗಳನ್ನು ಹೊಂದುತ್ತೀಯ. ಆದರೆ, ಅವುಗಳನ್ನೆಲ್ಲವನ್ನೂ ಸ್ವೀಕರಿಸಿ, ಅನುಭವಿಸಿಯೂ ಮುಖದಲ್ಲಿ ಮುಗುಳ್ನಗು ಸೂಸುತ್ತಿರಬೇಕು' ಎಂದಿದ್ದಾರೆ.
ಅಂದು ನಾನು ಅಮ್ಮನ ಮಾತನ್ನು ಕೇಳಿ ಅದನ್ನು ಕಾರ್ಯರೂಪಕ್ಕೆ ತರುವುದು ಕಷ್ಟ ಎಂದುಕೊಂಡೆ. ಆದರೆ, ಪದೇ ಪದೇ ಅಮ್ಮನ ಆ ಮಾತುಗಳ ಬಗ್ಗೆ ಯೋಚಿಸುತ್ತ, ನನಗೆ ಗೊತ್ತಿಲ್ಲದೇ ಅದನ್ನೇ ಅನುಸರಿಸತೊಡಗಿದೆ. ಬರಬರುತ್ತಾ ಅದೇ ಅಭ್ಯಾಸವಾಗಿ ಹೋಯ್ತು. ಮನೆಯಲ್ಲಿ ನಾನು ಒಬ್ಬಳೇ ಕೂತು ಸಾವಿರಾರು ಬಾರಿ ಅತ್ತಿದ್ದೇನೆ. ಆದರೆ, ಕ್ಯಾಮರಾ ಮುಂದೆ, ಹೊರಜಗತ್ತಿನಲ್ಲಿ ಓಡಾಡುವಾಗ ನಾನು ನಗುನಗುತ್ತಲೇ ಎಲ್ಲವನ್ನೂ ಸ್ವೀಕರಿಸುತ್ತೇನೆ. ಅದಕ್ಕೇ ನಾನು 'ಸ್ಮೈಲಿಂಗ್ ಕ್ವೀನ್' ಎಂದು ಕರೆಯುತ್ತಾರೆ. ಆದರೆ, ಈ ಸ್ಮೈಲಿಂಗ್ ಕ್ವೀನ್ ಸೃಷ್ಟಿಯಾಗಲು ನನ್ನಮ್ಮನೇ ಕಾರಣ' ಎಂದಿದ್ದಾರೆ ನಟಿ ರಶ್ಮಿಕಾ ಮಂದಣ್ಣ.
ಅಂದಹಾಗೆ, ನಟಿ ರಶ್ಮಿಕಾ ಮಂದಣ್ಣ ಸ್ಯಾಂಡಲ್‌ವುಡ್‌ನ 'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ತಮ್ಮ ಸಿನಿಮಾ ಜರ್ನಿ ಪ್ರಾರಂಭಿಸಿದರು. ಬಳಿಕ, ಕನ್ನಡದಲ್ಲಿ ಎರಡು-ಮೂರು ಚಿತ್ರಗಳನ್ನು ಮಾಡುತ್ತಿದ್ದಂತೆ ತೆಲುಗು ಸಿನಿಮಾಗಳಲ್ಲಿ ಕಾಣಿಸಿಕೊಳ್ಳತೊಡಗಿದರು. ನಟ ವಿಜಯ್ ದೇವರಕೊಂಡ ಜತೆ ರಶ್ಮಿಕಾ ನಟಿಸಿದ 'ಗೀತ ಗೋವಿಂದಂ' ಚಿತ್ರ ಸೂಪರ್ ಹಿಟ್ ಆಗುವ ಮೂಲಕ ಈ ನಟಿ ತೆಲುಗಿನಲ್ಲಿ ಸ್ಟಾರ್ ನಟಿಯಾಗಿ ಬದಲಾದರು. ಬಳಿಕ, ತಮಿಳು, ಬಾಲಿವುಡ್ ಚಿತ್ರರಂಗಗಳಲ್ಲೂ ರಶ್ಮಿಕಾ ಕೆಲಸ ಮಾಡಿ ಅಲ್ಲೂ ಸೈ ಎನಿಸಿಕೊಂಡರು. ಈಗ ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣ ನ್ಯಾಷನಲ್ ಸ್ಟಾರ್ ಆಗಿ ಬದಲಾಗಿದ್ದಾರೆ.
ಬಾಲಿವುಡ್‌ನಲ್ಲಿ ನಟ ರಣಬೀರ್ ಕಪೂರ್ ನಾಯಕತ್ವದ 'ಅನಿಮಲ್' ಚಿತ್ರದಲ್ಲಿ ನಟಿ ರಶ್ಮಿಕಾ ನಟಿಸುತ್ತಿದ್ದಾರೆ. ತಮಿಳಿನಲ್ಲಿ ಅಲ್ಲೂ ಅರವಿಂದ್ ಜತೆ 'ಪುಷ್ಪಾ 2'ದಲ್ಲಿ ನಟಿಸುತ್ತಿದ್ದಾರೆ. ಜತೆಗೆ, ರಶ್ಮಿಕಾ ಸಹಿ ಹಾಕಿರುವ ಕೆಲವು ಚಿತ್ರಗಳು ಶೂಟಂಗ್, ಹಾಗೂ ಶೂಟ್ ಶುರುವಾಗುವ ಹಂತದಲ್ಲಿವೆ. ಒಟ್ಟಿನಲ್ಲಿ ರಶ್ಮಿಕಾ ಸಖತ್ ಬ್ಯುಸಿಯಾಗಿದ್ದಾರೆ, ಸದ್ಯಕಂತೂ ಖಾಲಿ ಕೂತಿಲ್ಲ.