ಇಂದು ನಾನೊಬ್ಬಳು ಮಹಿಳೆಯಾಗಿ, ಒಬ್ಬಳು ನಟಿಯಾಗಿ ಈ ಬಗ್ಗೆ ನನ್ನ ಫ್ಯಾಮಿಲಿ, ಫ್ರಂಡ್ಸ್ ಹಾಗೂ ನಿನ್ನ ಹಿತೈಷಿಗಳಿಗೆ ನನ್ನ ಪರವಾಗಿ, ನನ್ನ ರಕ್ಷಣೆಗೆ ನಿಂತಿರುವುದಕ್ಕೆ ಥ್ಯಾಂಕ್ಸ್ ಹೇಳುತ್ತೇನೆ. ಆದರೆ, ಈ ಘಟನೆ ನನ್ನ ಸ್ಕೂಲ್ ಅಥವಾ ಕಾಲೇಜಿನಲ್ಲಿ ನಡೆದಿದ್ದರೆ?
ನಟಿ ರಶ್ಮಿಕಾ ಮಂದಣ್ಣ ಡೀಫ್‌ಫೇಕ್ (Deepfake videos) ವಿಡಿಯೋ ವೈರಲ್ ಆಗಿರುವುದು ಗೊತ್ತೇ ಇದೆ. ಈ ಬಗ್ಗೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹಾಗೂ ಅಭಿಷೇಕ್ ಎನ್ನುವವರು ಮೌನ ಮುರಿದಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕಿದೆ ಎಂದು ಈ ಮೂವರೂ ವಿಐಪಿಗಳು ಒತ್ತಾಯಿಸಿ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ಗಳಲ್ಲಿ ಬರೆದುಕೊಂಡಿದ್ದಾರೆ. ಇದೀಗ ನಟಿ ರಶ್ಮಿಕಾ ಮಂದಣ್ಣ ಸ್ವತಃ ತಮ್ಮ ಟ್ವಿಟರ್ (X) ನಲ್ಲಿ ಬರೆದುಕೊಂಡಿದ್ದಾರೆ.
"ನನ್ನ ಫೇಕ್ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ಬಗ್ಗೆ ನನಗೆ ನಿಜವಾಗಿಯೂ ಹರ್ಟ್ ಆಗಿದೆ. ಮತ್ತು, ಈ ಬಗ್ಗೆ ನಾನು ಮಾತನಾಡಲೇಬೇಕಾಗಿದೆ. ಇಂದು ನಾನೊಬ್ಬಳೇ ಅಲ್ಲ, ಇಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಎಲ್ಲರೂ ಕೂಡ ಇಂದಿನ ತಂತ್ರಜ್ಞಾನ ಮಿಸ್ ಯೂಸ್ ಆಗುವ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಪರಿಸ್ಥಿತಿ ನಿಜವಾಗಿಯೂ ಬಂದಿದೆ. ನಮಗೆ ಯಾರಿಂದ, ಎಲ್ಲಿಂದ ತೊಂದರೆಗಳು ಸೃಷ್ಟಿಯಾಗಬಹುದು ಎಂಬುದನ್ನು ಈ ತಂತ್ರಜ್ಞಾನದ ಯುಗದಲ್ಲಿ ಹೇಳುವುದೇ ಕಷ್ಟಕರವಾಗಿದೆ.
ಇಂದು ನಾನೊಬ್ಬಳು ಮಹಿಳೆಯಾಗಿ, ಒಬ್ಬಳು ನಟಿಯಾಗಿ ಈ ಬಗ್ಗೆ ನನ್ನ ಫ್ಯಾಮಿಲಿ, ಫ್ರಂಡ್ಸ್ ಹಾಗೂ ನಿನ್ನ ಹಿತೈಷಿಗಳಿಗೆ ನನ್ನ ಪರವಾಗಿ, ನನ್ನ ರಕ್ಷಣೆಗೆ ನಿಂತಿರುವುದಕ್ಕೆ ಥ್ಯಾಂಕ್ಸ್ ಹೇಳುತ್ತೇನೆ. ಆದರೆ, ಈ ಘಟನೆ ನನ್ನ ಸ್ಕೂಲ್ ಅಥವಾ ಕಾಲೇಜಿನಲ್ಲಿ ನಡೆದಿದ್ದರೆ ನಾನು ಆಗ ಇಂತಹ ಮಾನ ಹರಾಜಿನ ಘಟನೆಯನ್ನು ಹೇಗೆ ತೆಗೆದುಕೊಳ್ಳುತ್ತಿದ್ದೆ ಎಂದು ಯೋಚಿಸಿದರೆ ಅದನ್ನೀಗ ನಾನು ಊಹಿಸಲೂ ಅಸಾಧ್ಯ.
ಆದರೆ, ನಾವೆಲ್ಲರೂ ಸೇರಿ ಇಂಥಹ ವೈಯಕ್ತಿಕ ತೇಜೋವಧೆಯ ಕೃತ್ಯ ಹಾಗೂ ದುಃಷ್ಪರಿಣಾಮಗಳನ್ನು ಸಾಮೂಹಿಕವಾಗಿ ಖಂಡಿಸಬೇಕಿದೆ' ಎಂದು ನಟಿ ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ. ರಶ್ಮಿಕಾರ ಈ ಫೋಸ್ಟ್‌ಗೆ ಸಪೋರ್ಟಿವ್ ಆಗಿ ಸಾಕಷ್ಟು ಮೆಚ್ಚುಗೆ ಕಾಮೆಂಟ್‌ಗಳು ಬಂದಿವೆ. ಒಟ್ಟಿನಲ್ಲಿ, ನಟಿ ರಶ್ಮಿಕಾ ಮಂದಣ್ಣ ತಮ್ಮ ವಿರುದ್ಧ ನಡೆದಿರುವ ಮಾನ ಹರಾಜಿನ ಸಂಚಿನ ಕೃತ್ಯದಿಂದ ಸದ್ಯ ಬಚಾವ್ ಆಗಿದ್ದಾರೆ.
ಬಾತ್ ರೂಮಿನಲ್ಲಿ ಫೇಮಸ್ ವ್ಯಕ್ತಿ ಜತೆ ಟವೆಲ್ ಫೈಟ್ ಮಾಡಿದ್ರು ಕತ್ರಿನಾ ಕೈಫ್; ಭಾರೀ ವೈರಲ್ ಆಯ್ತು ವಿಡಿಯೋ!
ಅದು ಫೇಕ್ ವಿಡಿಯೋ ಎಂಬುದು ಸಾಕ್ಷಿ ಸಮೇತ ಪ್ರೂವ್ ಆಗಿದ್ದರ ಬಗ್ಗೆ, ಎಲ್ಲರ ಸಹಕಾರದ ಬಗ್ಗೆ ರಶ್ಮಿಕಾ ಸಂತಸ ಹಂಚಿಕೊಂಡಿದ್ದಾರೆ. ಜತೆಗೆ, ಇಂತಹ ಕೃತ್ಯದ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕಾದ ಕಾಲ ಸನ್ನಿಹಿತವಾಗಿದೆ ಎಂದು ಕೂಡ ಕರೆ ನೀಡಿದ್ದಾರೆ.
ಅನ್ನದ ಬೆಲೆ ಏನೆಂದು ಬಿಗ್ ಬಾಸ್ ಮನೆಯಲ್ಲಿ ಅರ್ಥವಾಯ್ತು; ರಕ್ಷಕ್ ಬುಲೆಟ್