ಸಲ್ಮಾನ್‌ ಖಾನ್‌ ನನ್ನ ಅಪ್ಪನಂತೆ ಎಂದ ನಟಿ ಪಾಲಕ್​: ಬಿಡ್ತಾರೆಯೇ ಟ್ರೋಲಿಗರು?

By Suvarna News  |  First Published Mar 12, 2023, 5:40 PM IST

​ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರದ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡುತ್ತಿರುವ ನಟಿ ಪಾಲಕ್​ ತಿವಾರಿ, ಸಲ್ಮಾನ್​ ಖಾನ್​ ಅವರನ್ನು ತಂದೆ ಎಂದು ಟ್ರೋಲ್​ಗೆ ಒಳಗಾಗಿದ್ದಾರೆ. ಅವರು ಹೇಳಿದ್ದೇನು? 
 


ಪಾಲಕ್ ತಿವಾರಿ (Palak Tiwari) ಬಾಲಿವುಡ್‌ನ ಉದಯೋನ್ಮುಖ ಸ್ಟಾರ್ ಮಕ್ಕಳಲ್ಲಿ ಒಬ್ಬರು. ಇವರು ಖ್ಯಾತ ಟಿವಿ ತಾರೆ ಶ್ವೇತಾ ತಿವಾರಿ ಅವರ ಪುತ್ರಿ. 22 ವರ್ಷದ ಪಾಲಕ್ ತಮ್ಮ ಅತ್ಯಾಕರ್ಷಕ ನೋಟದಿಂದಾಗಿ ಚಲನಚಿತ್ರ ನಿರ್ಮಾಪಕರನ್ನು ಆಕರ್ಷಿಸುತ್ತಿದ್ದಾರೆ. ಈಕೆ  ಸ್ಟೈಲಿಶ್ ಬಟ್ಟೆಗಳಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಸೆನ್ಸೇಷನ್ ಆಗಿದ್ದಾರೆ. ಸದ್ಯ ಪಾಲಕ್​, ತಮ್ಮ ಅಮ್ಮ ಕಿರುತೆರೆ ನಟಿ ಶ್ವೇತಾ ತಿವಾರಿ ಅವರಿಗಿಂತಲೂ  ಫೇಮಸ್ ಆಗುತ್ತಿದ್ದಾರೆ.  ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟಿವ್ ಆಗಿರೋ ಪಾಲಕ್​,  ವಿವಿಧ ಬ್ರಾಂಡ್‌ಗಳಿಗೆ ಶೂಟ್ ಮಾಡುತ್ತಾರೆ.  ಪಾಲಕ್ ತಿವಾರಿ ಅವರು ತಮ್ಮ ಮೊದಲ ಮ್ಯೂಸಿಕ್ ವಿಡಿಯೋ ಬಿಜ್ಲಿ ಬಿಜ್ಲಿ ಮೂಲಕ ಎಲ್ಲರನ್ನೂ ಮೋಡಿ ಮಾಡಿದರು. ಅವರ ಹೊಸ ಫೋಟೋಗಳು ವೈರಲ್ ಆಗಿವೆ. ಈ ಹಾಡಿನಲ್ಲಿ ಅವರು ಹಾರ್ಡಿ ಸಂಧು ಅವರೊಂದಿಗೆ ಅಭಿನಯಿಸಿದ್ದಾರೆ. ಇದಾದ ನಂತರ ಪಾಲಕ್‌ನ ಲುಕ್‌ಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿತ್ತು. ಇತ್ತೀಚೆಗೆ ತಮ್ಮ  ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಒಂದನ್ನು ಶೇರ್​ ಮಾಡಿಕೊಂಡು ಟ್ರೋಲ್​ಗೂ (Troll) ಒಳಗಾಗಿದ್ದು ಪಾಲಕ್​. ಅದ್ಯಾಕೆ ಅಂದರೆ,  ಕಿತ್ತಳೆ ಬಣ್ಣದ ಕ್ರಾಪ್ ಟಾಪ್ ಮತ್ತು ಮಿನಿ ಸ್ಕರ್ಟ್‌ ಧರಿಸಿ ಫೋಟೋ ಶೂಟ್​ ಮಾಡಿಸಿಕೊಂಡಿದ್ದ ಪಾಲಕ್​ ಅವರ ತುಟಿಯನ್ನು ನೋಡಿದ ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ.  ನಟಿಗೆ ಲಿಪ್ ಸರ್ಜರಿ ಮಾಡಲಾಗಿದೆ ಎನ್ನುವುದು  ನೆಟ್ಟಿಗರ ಮಾತು.

ಅದೇನೇ ಇರಲಿ, ಸದ್ಯ, ಸಲ್ಮಾನ್ ಖಾನ್ ಅವರ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' (Kisi Ka Bhai Kisi Ki Jaan) ಚಿತ್ರದ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡಲಿದ್ದಾರೆ ಪಾಲಕ್​. ಇದಕ್ಕಾಗಿ ಅವರು ಸಕಲ ರೀತಿಯಲ್ಲಿ ಸಿದ್ಧರಾಗಿದ್ದಾರೆ. ಬಾಲಿವುಡ್ ನ ಸುಲ್ತಾನ್  ಸಲ್ಮಾನ್ ಖಾನ್ ಜೊತೆಗಿನ ಶೂಟಿಂಗ್ ಅನುಭವವನ್ನು ನಟಿ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದು, ಅದೀಗ ಭಾರಿ ಸುದ್ದಿಯಾಗುತ್ತಿದೆ. ಈಕೆಯ ಸಂದರ್ಶನ ಸುದ್ದಿಯಾಗುತ್ತಿಲ್ಲ. ಬದಲಿಗೆ ಸಂದರ್ಶನದಲ್ಲಿ (Interview)ಸಲ್ಮಾನ್​ ಖಾನ್​ ಅವರನ್ನು ಅಪ್ಪನಂತೆ ಎಂದು ಸಂಬೋಧಿಸಿರುವುದು ಈಗ ಸುದ್ದಿಯಾಗಿದ್ದು, ನೆಟ್ಟಿಗರು ನಟಿ ಮತ್ತು ಮೋಸ್ಟ್​ ಎಲಿಜಿಬಲ್​ ಬ್ಯಾಚುಲರ್​ ಎನಿಸಿಕೊಂಡಿರೋ ಸಲ್ಲುಭಾಯಿ ಕಾಲೆಳೆಯುತ್ತಿದ್ದಾರೆ.

Tap to resize

Latest Videos

Actress Meena: ಆ ನಟನ ಮದ್ವೆ ಸುದ್ದಿ ಕೇಳಿ ನನ್ನ ಹೃದಯನೇ ಒಡೆದು ಹೋಗಿತ್ತು ಎಂದ ನಟಿ

ಅಷ್ಟಕ್ಕೂ, ಪಾಲಕ್​ ಸಂದರ್ಶನದಲ್ಲಿ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರೀಕರಣದ ಅನುಭವದ ಬಗ್ಗೆ ಮಾತನಾಡಿದ್ದಾರೆ. 'ಚಿತ್ರೀಕರಣದ ವಾತಾವರಣಕ್ಕೆ ನಾನು ಹೊಸಬಳಾಗಿದ್ದರಿಂದ ಮೊದಮೊದಲು ನರ್ವಸ್ ಆಗಿದ್ದೆ. ಆದರೆ ಸಲ್ಮಾನ್ ಖಾನ್ ಅವರು ಸ್ವಂತ ಮನೆಯಲ್ಲಿ ಇರುವ ಅನುಭವವನ್ನೇ ನನಗೆ ಮಾಡಿದರು.  ಅವರು ಬಾಲಿವುಡ್‌ನ ಆಧಾರಸ್ತಂಭ. ಚಿತ್ರೀಕರಣದ ವೇಳೆ ನಾನು ತುಂಬಾ ನರ್ವಸ್ ಆಗಿದ್ದೆ, ಆದರೂ ಅವರು ನನ್ನನ್ನು ಸೆಟ್‌ಗಳಲ್ಲಿ ತುಂಬಾ ಪ್ರೀತಿಯಿಂದ ನೋಡಿಕೊಂಡರು ಎಂದ ಪಾಲಕ್​, ಸಲ್ಮಾನ್​ ಖಾನ್​ ನನ್ನ ತಂದೆಯಂತೆ, ಅವರು ನನ್ನನ್ನು ತಂದೆಯಂತೆ ನೋಡಿಕೊಳ್ಳುತ್ತಾರೆ, ಮನೆಯಲ್ಲಿ ಇರುವ ವಾತಾವರಣವನ್ನೇ ಕಲ್ಪಿಸುತ್ತಾರೆ. ನನಗೆ ಉತ್ತಮ ಆಹಾರ ನೀಡುವತ್ತ ಗಮನ ಹರಿಸುತ್ತಾರೆ. ಅವರು ನನ್ನ ತಂದೆಯೇ ಎಂದು ಸಲ್ಮಾನ್​ ಖಾನ್​ (Salman Khan) ಅವರನ್ನು ಹೊಗಳಿದರು. 

 ತಾಯಿ  ಶ್ವೇತಾ ತಿವಾರಿ (Shwetha Tiwari) ಬಗ್ಗೆ ಮಾತನಾಡಿದ ಪಾಲಕ್, 'ನಾನು ಶೂಟಿಂಗ್ ಮಾಡುವಾಗ, ಅಮ್ಮ  ನನ್ನನ್ನು ನೋಡಿಕೊಳ್ಳುತ್ತಾರೆ ಎಂಬ ಸಂಪೂರ್ಣ ನಂಬಿಕೆಯಿದೆ. ಆದರೆ ಸಲ್ಮಾನ್​ ಖಾನ್​ ಅವರು ಚೆನ್ನಾಗಿ ನೋಡಿಕೊಳ್ಳುವ ಕಾರಣ, ಯಾರಿಗೂ ನನ್ನನ್ನು ನೋಡಿಕೊಳ್ಳುವ ಅಗತ್ಯವಿಲ್ಲ.  ಸಲ್ಮಾನ್‌ ಅವರಿಗೆ ಚಿತ್ರದ ಸೆಟ್ ಬಗ್ಗೆ ಮತ್ತು ಪ್ರತಿಯೊಬ್ಬ ಕಲಾವಿದನ ಬಗ್ಗೆ ಸಂಪೂರ್ಣ ಜ್ಞಾನವಿದೆ. ಎಲ್ಲರನ್ನೂ ಸಮಾನವಾಗಿ ನೋಡಿಕೊಳ್ಳುತ್ತಾರೆ ಎಂದರು. ಹೀಗೆ ಸಲ್ಮಾನ್​ ಖಾನ್​ ಅವರನ್ನು ತಮ್ಮ ತಂದೆ ಎಂದು ಹೇಳಿದ ಮಾತನ್ನು ಕೇಳಿ ಟ್ರೋಲಿಗರು ಬಿಡುತ್ತಾರೆಯೆ? ಅಯ್ಯೋ ಶಿವನೇ.. ನಿನ್ನ ಅಪ್ಪನ ಮುಂದೆ ಹೀಗೆ ಹೇಳಬೇಡಪ್ಪಾ... ಎಂದು ನಟಿಯ ಕಾಲೆಳೆದಿದ್ದಾರೆ. ಸಲ್ಮಾನ್​ ಖಾನ್​ ಅವರನ್ನು ಬೇಕಾದಷ್ಟು ಹೊಗಳಿಕೋ, ಆದರೆ ಅಪ್ಪ-ಗಿಪ್ಪ ಎನ್ನಬೇಡ. ಪಾಪ ಅವರಿಗಿನ್ನೂ ಮದುವೆನೇ ಆಗಿಲ್ಲ ಎಂದು ಇನ್ನು ಕೆಲವರು ತಮಾಷೆ ಮಾಡುತ್ತಿದ್ದಾರೆ.  

Satish Kaushik ಸಾವಿಗೆ ಭಾರಿ ಟ್ವಿಸ್ಟ್​: ನನ್ನ ಪತಿಯೇ ಕೊಲೆ ಮಾಡಿದ್ದು ಎಂದ ಮಹಿಳೆ!

ಅಂದಹಾಗೆ, ಕಿಸಿ ಕಿ ಭಾಯ್ ಕಿಸಿ ಕಿ ಜಾನ್ ಅನ್ನು ಫರ್ಹಾದ್ ಸಾಮ್ಜಿ ನಿರ್ದೇಶಿಸಿದ್ದಾರೆ. ಇದನ್ನು ಸಲ್ಮಾನ್ ಮತ್ತು ಸಲ್ಮಾ ಖಾನ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಸಲ್ಮಾನ್ ಖಾನ್, ಪೂಜಾ ಹೆಗ್ಡೆ, ಶಹನಾಜ್ ಗಿಲ್, ಪಾಲಕ್ ತಿವಾರಿ, ಭೂಮಿಕಾ ಚಾವ್ಲಾ, ವೆಂಕಟೇಶ್ ದಗ್ಗುಬಾಟಿ (Venkatesh Daggubati), ಜಗಪ್ತಿ ಬಾಬು, ವಿಜೇಂದರ್ ಸಿಂಗ್, ಅಭಿಮನ್ಯು ಸಿಂಗ್, ರಾಘವ್ ಜುಯಲ್, ಸಿದ್ಧಾರ್ಥ್ ನಿಗಮ್, ಜಸ್ಸಿ ಗಿಲ್ ಮತ್ತು ವಿನಾಲಿ ಭಟ್ನಾಗರ್ ನಟಿಸಿದ್ದಾರೆ. ಚಿತ್ರ ಈದ್ 2023 ರಂದು ಬಿಡುಗಡೆಯಾಗಲಿದೆ. ಇನ್ನು ಪಾಲಕ್​ ಅವರ ಕುರಿತು ಹೇಳುವುದಾದರೆ,  ಅವರು 'ರೋಸಿ: ದಿ ಸ್ಯಾಫ್ರಾನ್ ಚಾಪ್ಟರ್' ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ವರದಿಯ ಪ್ರಕಾರ, ಅವರು ವರುಣ್ ಧವನ್ ಜೊತೆಯೂ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ.

click me!