ನಾಯಕನಿಗಿಂತಲೂ ಹೆಚ್ಚು ಸಂಭಾವನೆ ಪಡೆದ ಬಾಲಿವುಡ್​ ನಟಿಯರಿವರು!

By Suvarna News  |  First Published Mar 12, 2023, 5:37 PM IST

ಸಾಮಾನ್ಯವಾಗಿ ಚಿತ್ರಗಳಲ್ಲಿ ನಾಯಕಿಗಿಂತ ನಾಯಕನಿಗೆ ಸಂಭಾವನೆ ಹೆಚ್ಚು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಕೆಲವೊಂದು ಚಿತ್ರಗಳಲ್ಲಿ ನಾಯಕಿಯೇ ಹೆಚ್ಚು ಸಂಭಾವನೆ ಪಡೆದಿದ್ದಾರೆ. ಅಂಥ ಬಾಲಿವುಡ್​ ನಟಿಯರು ಯಾರು?
 


ಬಹುತೇಕ ಎಲ್ಲಾ ಕ್ಷೇತ್ರಗಳಂತೆ ಸಿನಿಮಾದಲ್ಲಿಯೂ ನಟರಿಗಿಂತ ಕಡಿಮೆ ಸಂಬಳ ನಟಿಯರಿಗೆ ಸಿಗುತ್ತದೆ ಎನ್ನುವ ಮಾತು ಬಹಳ ಹಿಂದಿನಿಂದಲೂ ಇದೆ. ಇದಕ್ಕೆ ತಕ್ಕಂತೆ ನಿನ್ನೆಷ್ಟೇ ನಟಿ ಪ್ರಿಯಾಂಕಾ ಚೋಪ್ರಾ ಕೂಡ ಈ ವಿಷಯವನ್ನು ಬಹಿರಂಗಪಡಿಸಿದ್ದರು.  22 ವರ್ಷಗಳ ಚಲನಚಿತ್ರ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ  ವೆಬ್ ಸರಣಿ 'ಸಿಟಾಡೆಲ್' ಗಾಗಿ  ಸಹ  ನಟನಿಗೆ ಸಮಾನವಾದ ಶುಲ್ಕವನ್ನು ಪಡೆದಿದ್ದೇನೆ ಎಂದಿದ್ದರು 'ನಾನು 22 ವರ್ಷಗಳಿಂದ ಮನರಂಜನಾ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದೇನೆ ಮತ್ತು 70 ಕ್ಕೂ ಹೆಚ್ಚು ಚಲನಚಿತ್ರಗಳು ಮತ್ತು ಎರಡು ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದೇನೆ. ಆದರೆ ಯಾವಾಗ ನಾನು ಸಿಟಾಡೆಲ್ (Citadel) ಮಾಡಿದ್ದೇನೆ, ನನ್ನ ವೃತ್ತಿಜೀವನದಲ್ಲಿ ಇದು ಮೊದಲ ಬಾರಿಗೆ ನನಗೆ ಸಮಾನ ವೇತನ ಸಿಕ್ಕಿತು' ಎಂದು  ಪ್ರಿಯಾಂಕಾ ಹೇಳಿದರು. ಇವರ ಈ ಹೇಳಿಕೆಯ ಬಳಿಕ ಚಿತ್ರರಂಗದಲ್ಲಿ ಸಮಾನ ವೇತನದ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ನಟರಿಗೇ ಹೆಚ್ಚು ಸಂಬಳ, ಸಂಭಾವನೆ ನೀಡಲಾಗುತ್ತದೆ ಎನ್ನುವ ಮಾತಿಗೆ ವಿರುದ್ಧವಾಗಿ ಕೆಲವೊಂದು ಚಿತ್ರಗಳಲ್ಲಿ ನಟರಿಗಿಂತಲೂ ನಟಿಯರೇ ಹೆಚ್ಚು ಸಂಭಾವನೆ ಪಡೆದಿರುವ ಉದಾಹರಣೆಗಳು ಇವೆ. ಅವು ಯಾವುದು ಎಂಬ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

 ದೀಪಿಕಾ ಪಡುಕೋಣೆ (Deepika Padukone), ಆಲಿಯಾ ಭಟ್​: ದೀಪಿಕಾ ಪಡುಕೋಣೆ ಬಾಲಿವುಡ್‌ನ ದುಬಾರಿ ನಟಿಯರಲ್ಲಿ ಒಬ್ಬರು. ಒಂದು ಚಿತ್ರದಲ್ಲಿ ಕೂಡ ಪತಿ ರಣವೀರ್ ಸಿಂಗ್ ಗಿಂತ ಹೆಚ್ಚು ತೆಗೆದುಕೊಂಡಿದ್ದಾರೆ. ‘ಪದ್ಮಾವತ್’ ಚಿತ್ರದ ಬಗ್ಗೆ ಮಾತನಾಡು ವುದಾದರೆ,  ಸಂಜಯ್ ಲೀಲಾ ಬನ್ಸಾಲಿ ಚಿತ್ರಕ್ಕಾಗಿ ದೀಪಿಕಾ ಸುಮಾರು 13 ಕೋಟಿ ರೂಪಾಯಿಗಳನ್ನು ಪಡೆದರೆ, ಅವರ ಸಹ ನಟರಾದ ರಣವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ಇಬ್ಬರೂ ಚಿತ್ರದಲ್ಲಿ ಸಂಭಾವನೆಯಾಗಿ 10 ಕೋಟಿ ಪಡೆದರು. ಇನ್ನು 'ರಾಜಿ' ಚಿತ್ರಕ್ಕಾಗಿ ಆಲಿಯಾ ಭಟ್ (Alia Bhatt) ತಮ್ಮ ಸಹ ನಟ ವಿಕ್ಕಿ ಕೌಶಲ್‌ಗಿಂತ ಹೆಚ್ಚು ಶುಲ್ಕ ವಿಧಿಸಿದ್ದಾರೆ. ಮೇಘನಾ ಗುಲ್ಜಾರ್ ನಿರ್ದೇಶನದ ಈ ಚಿತ್ರಕ್ಕಾಗಿ, ಆಲಿಯಾ ಭಟ್ ಸುಮಾರು 10 ಕೋಟಿ ರೂಪಾಯಿಗಳನ್ನು ತೆಗೆದುಕೊಂಡರೆ, ಈ ಚಿತ್ರಕ್ಕಾಗಿ ವಿಕ್ಕಿ ಕೌಶಲ್ ಅವರ ಸಂಭಾವನೆಯು ಸುಮಾರು 3 4 ಕೋಟಿ ರೂಪಾಯಿಯಾಗಿದೆ.

Tap to resize

Latest Videos

Priyanka Chopra: ನಿನ್ನದು ಸ್ಯಾಂಪಲ್​ ಸೈಜ್​ ಅಲ್ಲ ಎಂದ್ರು, ಪತಿಯ ಮುಂದೆ ಬಿಕ್ಕಿ ಬಿಕ್ಕಿ ಅತ್ತೆ ಎಂದ

ಕಂಗನಾ ರಣಾವತ್ (Kangana Ranaut)​, ಶ್ರದ್ಧಾ ಕಪೂರ್​: ಕಂಗನಾ ರಣಾವತ್​ ಅನೇಕ ಮಹಿಳಾ ಪ್ರಧಾನ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಅನೇಕ ಚಿತ್ರಗಳಲ್ಲಿ ಅವರು ತಮ್ಮ ಸಹ ನಟರಿಗಿಂತ ಹೆಚ್ಚು ಶುಲ್ಕವನ್ನು ಪಡೆದಿದ್ದಾರೆ. 'ರಂಗೂನ್' ಚಿತ್ರಕ್ಕೆ ಶಾಹಿದ್ ಕಪೂರ್ ಮತ್ತು ಸೈಫ್ ಅಲಿ ಖಾನ್, 'ಕಟ್ಟಿ ಬಟ್ಟಿ' ಚಿತ್ರಕ್ಕೆ ಇಮ್ರಾನ್ ಖಾನ್ ಅವರಿಗಿಂತ ಹೆಚ್ಚು ಶುಲ್ಕ ವಿಧಿಸಿದ್ದರು ಎನ್ನಲಾಗಿದೆ. ಆದರೆ, ಅವರ ಶುಲ್ಕ ಎಷ್ಟು ಎಂಬುದು ಬಹಿರಂಗವಾಗಿಲ್ಲ. ಇನ್ನು ಶ್ರದ್ಧಾ ಕಪೂರ್ (Shruddha Kapoor)​. ದಿನೇಶ್ ವಿಜನ್ ಅವರ 'ಸ್ತ್ರೀ' ಚಿತ್ರದಲ್ಲಿ ಶ್ರದ್ಧಾ ಕಪೂರ್ ಪ್ರಮುಖ ಪಾತ್ರವನ್ನು ಹೊಂದಿದ್ದರು,  ಅವರ ಎದುರು ರಾಜಕುಮಾರ್ ರಾವ್ ಕಾಣಿಸಿಕೊಂಡರು. ಈ ಚಿತ್ರಕ್ಕಾಗಿ ರಾಜ್‌ಕುಮಾರ್‌ಗಿಂತ ಹೆಚ್ಚು ಶುಲ್ಕವನ್ನು ಶ್ರದ್ಧಾ ಪಡೆದುಕೊಂಡಿದ್ದಾರೆ. ಶ್ರದ್ಧಾ ಪಡೆದದ್ದು ಏಳು ಕೋಟಿ ರೂಪಾಯಿ ಎನ್ನಲಾಗಿದೆ. ಅದೇ ಸಮಯದಲ್ಲಿ, 'ಚಿಚೋರೆ' ಚಿತ್ರಕ್ಕೆ ಅವರ ಸಂಭಾವನೆ ಅವರ ಸಹ-ನಟ ಸುಶಾಂತ್ ಸಿಂಗ್ ರಜಪೂತ್‌ಗಿಂತ ಹೆಚ್ಚು.

ಕರೀನಾ ಕಪೂರ್ (Kareena Kapoor), ಮಾಧುರಿ ದೀಕ್ಷಿತ್: 'ವೀರೆ ದಿ ವೆಡ್ಡಿಂಗ್' ಚಿತ್ರಕ್ಕಾಗಿ ಕರೀನಾ ಕಪೂರ್ ಸುಮಾರು 7 ಕೋಟಿ ರೂ. ಈ ಚಿತ್ರದಲ್ಲಿ ಅವರ ಸಹ ನಟ ಸುಮಿತ್ ವ್ಯಾಸ್ ಅವರ ಸಂಭಾವನೆ ಕೇವಲ 80 ಲಕ್ಷ ರೂ. ಅದರಂತೆ ಕರೀನಾ ಅವರ ಶುಲ್ಕ ಸುಮಿತ್ ಅವರಿಗಿಂತ 8.75 ಪಟ್ಟು ಹೆಚ್ಚು. 'ಹಮ್ ಆಪ್ಕೆ ಹೈ ಕೌನ್' ಚಿತ್ರಕ್ಕಾಗಿ ಮಾಧುರಿ ದೀಕ್ಷಿತ್ (Madhuri Dixit) ತಮ್ಮ ಸಹ ನಟ ಸಲ್ಮಾನ್ ಖಾನ್‌ಗಿಂತ ಹೆಚ್ಚು ಶುಲ್ಕವನ್ನು ಪಡೆದಿದ್ದಾರೆ ಎಂದು ಹೇಳಲಾಗಿದೆ. ಸೂರಜ್ ಬರ್ಜತ್ಯಾ ನಿರ್ದೇಶನದ ಈ ಚಿತ್ರ 1994 ರಲ್ಲಿ ಬಂದಿತ್ತು. ಈ ಚಿತ್ರಕ್ಕಾಗಿ ಮಾಧುರಿ ಸುಮಾರು 3 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಈ ಚಿತ್ರಕ್ಕೆ ಸಲ್ಮಾನ್ ಸಂಭಾವನೆ 2.75 ಕೋಟಿ ಎಂದು ಹೇಳಲಾಗುತ್ತಿದೆ.

Actress Meena: ಆ ನಟನ ಮದ್ವೆ ಸುದ್ದಿ ಕೇಳಿ ನನ್ನ ಹೃದಯನೇ ಒಡೆದು ಹೋಗಿತ್ತು ಎಂದ ನಟಿ

click me!