ನಟಿ ಮೃಣಾಲ್ ಠಾಕೂರ್ ಅವರು ನಟಿಸಿದ್ದ ತೆಲುಗು ಸಿನಿಮಾ 'ದಿ ಫ್ಯಾಮಿಲಿ ಸ್ಟಾರ್' ತೆರೆಕಂಡು ಮಿಶ್ರ ಪ್ರತಿಕ್ರಿಯೆ ಪಡೆದಿದೆ. ವಿಜಯ್ ದೇವರಕೊಂಡ ಹಾಗೂ ಮೃಣಾಲ್ ಠಾಕೂರ್ ಅಭಿನಯದ ದಿ ಫ್ಯಾಮಿಲಿ ಸ್ಟಾರ್ ಚಿತ್ರವು ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು.
ನಟಿ ಕಿಯಾರಾ ಅಡ್ವಾನಿ ಬಗ್ಗೆ ನಟಿ ಮೃಣಾಲ್ ಠಾಕೂರ್ ಮೆಚ್ಚುಗೆಯ ಮಾತನ್ನಾಡಿದ್ದಾರೆ. 'ವೆಲ್ಲಿಪೋದಂ ನಾನ್ನಾ' ಸಿನಿಮಾದ ಶೂಟಿಂಗ್ ಸಮಯದಲ್ಲಿ ನಡೆದ ಘಟನೆ ಬಗ್ಗೆ ಮೃಣಾಲ್ ಠಾಕೂರ್ ಮಾತನಾಡಿದ್ದಾರೆ. ಮೃಣಾಲ್ ಈ ಬಗ್ಗೆ 'ವೆಲ್ಲಿಪೋದಂ ನಾನ್ನಾ' ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಕಿಯಾರಾ ಟೇಕ್ ತೆಗೆದುಕೊಳ್ಳಲಾಗಿತ್ತು. ಆ ಶಾಟ್‌ಅನ್ನು ನಟಿ ಕಿಯಾರಾ ಅಡ್ವಾನಿ ಅದೆಷ್ಟು ಚೆನ್ನಾಗಿ ನಟಿಸಿ 'ಸೂಪರ್' ಎನ್ನುವಂತೆ ಮಾಡಿದರು ಎಂದರೆ ಅಲ್ಲಿದ್ದ ಎಲ್ಲರೂ ಅಚ್ಚರಿಯಿಂದ ಮೆಚ್ಚುಗೆ ವ್ಯಕ್ತಪಡಿಸಿದರು. ಅದನ್ನು ನಿಜವಾಗಿಯೂ ನಾರ್ಮಲ್ ಹೆಸರಿನಿಂದ ಕರೆಯಲು ಸಾಧ್ಯವಿಲ್ಲ, ಸ್ಪೆಷಲ್ ಹೆಸರೇ ಬೇಕು.
ನಟಿ ಮೃಣಾಲ್ ಠಾಕೂರ್ ಹಾಗೂ ಕಿಯಾರಾ ಅಡ್ವಾನಿ ಇಬ್ಬರೂ ಪ್ರತಿಭಾವಂತ ನಟಿಯರು ಎಂಬುವುದರಲ್ಲಿ ಎರಡು ಮಾತಿಲ್ಲ. ಇಬ್ಬರೂ ಕೂಡ ಬಾಲಿವುಡ್ ಹಾಗೂ ಟಾಲಿವುಡ್ ಎರಡೂ ಕಡೆಗಳಲ್ಲಿ ನಟನೆಗೆ ಅವಕಾಶ ಪಡೆಯುತ್ತಿದ್ದಾರೆ. ಮುಖ್ಯವಾಗಿ ಈ ವೆಲ್ಲಿಪೋದಂ ನಾನ್ನಾ (Vellipodam Nanna) ಸಿನಿಮಾದಲ್ಲಿ ಈ ಇಬ್ಬರೂ ಕೆಲಸ ಮಾಡುತ್ತಿದ್ದು, ಇದೀಗ ಇಬ್ಬರೂ ಕ್ಲೋಸ್ ಫ್ರೆಂಡ್ಸ್ ಆಗಿದ್ದಾರೆ ಎನ್ನಲಾಗಿದೆ. ಒಬ್ಬರ ಬಗ್ಗೆ ಇನ್ನೊಬ್ಬರು ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ಇದೀಗ ಮೃಣಾಲ್ ಠಾಕೂರ್ ಕಿಯಾರಾ ಬಗ್ಗೆ ಹೇಳಿರುವ ಮಾತುಗಳು ವೈರಲ್ ಆಗುತ್ತಿವೆ.
ಕರ್ನಾಟಕದ ಪ್ರತಿ ಗೃಹಿಣಿ ಸಂಭ್ರಮಿಸೋಕೆ ಬರ್ತಿದೆ ಸ್ಟಾರ್ ಸುವರ್ಣದಲ್ಲಿ 'ಸುವರ್ಣ ಗೃಹಮಂತ್ರಿ'
ನಟಿ ಕಿಯಾರಾ ಅಡ್ವಾನಿ ಇತ್ತೀಚೆಗೆ ಬಾಲಿವುಡ್ ಮಾತ್ರವಲ್ಲದೇ ತೆಲುಗಿನಲ್ಲಿ ಕೂಡ ಚಾನ್ಸ್ ಪಡೆಯುತ್ತಿದ್ದಾರೆ. ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ, ರಾಕಿಂಗ್ ಸ್ಟಾರ್ ಯಶ್ ನಟನೆಯ ಮುಂಬರುವ ಟಾಕ್ಸಿಕ್ ಚಿತ್ರಕ್ಕೆ ನಾಯಕಿಯಾಗಿ ಇದೇ ಕಿಯಾರಾ ಅಡ್ವಾನಿ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ಸಾಯಿ ಪಲ್ಲವಿ ಹಾಗೂ ಕಿಯಾರಾ ಅಡ್ವಾನಿ ಇಬ್ಬರ ಹೆಸರುಗಳೂ ಕೂಡ ಕೇಳಿಬರುತ್ತಿದ್ದು, ಫೈನಲ್ ಆಗಿ ಯಾರು ಆಯ್ಕೆಯಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ವಿಷ್ಣುವರ್ಧನ್ ಕಾರುಗಳು ಈಗೆಲ್ಲಿವೆ? ಯಾರು ಬೇಕಾದ್ರೂ ನೋಡ್ಬಹುದಂತೆ ಹೌದಾ?
ಅಂದಹಾಗೆ, ನಟಿ ಮೃಣಾಲ್ ಠಾಕೂರ್ ಅವರು ನಟಿಸಿದ್ದ ತೆಲುಗು ಸಿನಿಮಾ 'ದಿ ಫ್ಯಾಮಿಲಿ ಸ್ಟಾರ್' ತೆರೆಕಂಡು ಮಿಶ್ರ ಪ್ರತಿಕ್ರಿಯೆ ಪಡೆದಿದೆ. ವಿಜಯ್ ದೇವರಕೊಂಡ ಹಾಗೂ ಮೃಣಾಲ್ ಠಾಕೂರ್ ಅಭಿನಯದ ದಿ ಫ್ಯಾಮಿಲಿ ಸ್ಟಾರ್ ಚಿತ್ರವು ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು. ಆದರೆ, ಈ ಚಿತ್ರವು ಯಶಸ್ಸು ಪಡೆಯದೇ ಅಭಿಮಾನಿಗಳಿಗೆ ನಿರೀಕ್ಷೆ ಮೂಡಿಸಿದೆ. ಆದರೆ, ಮೃಣಾಲ್ ಠಾಕೂರ್ ಅಭಿನಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಒಟ್ಟಿನಲ್ಲಿ, ಎರಡು ಜಡೆಗಳು ಹೊಂದಿಕೆಯಾಗುವುದಿಲ್ಲ ಎಂಬ ಮಾತು ಇದೀಗ ಸುಳ್ಳಾಗಿದೆ ಎನ್ನಬಹುದು.
ಅಪಘಾತದಲ್ಲಿ ಸಾವಿಗೀಡಾದ ಕನ್ನಡದ ಕಿರುತೆರೆ ಜನಪ್ರಿಯ ನಟಿ ಪವಿತ್ರ ಜಯರಾಂ!