ಎಆರ್‌ ರೆಹಮಾನ್‌ರನ್ನ ಮದುವೆಯಾಗೋ ಆಸೆ ಇತ್ತು, ಅವರು ಮತಾಂತರವಾಗಿದ್ದರಿಂದ ಮನಸ್ಸು ಬದಲಿಸಿದೆ ಎಂದ ಕನ್ನಡದ ನಟಿ!

Published : Feb 26, 2026, 06:43 PM IST
AR Rahaman

ಸಾರಾಂಶ

ದಕ್ಷಿಣ ಭಾರತದ ಖ್ಯಾತ ನಟಿ ಮೋಹಿನಿ, ತಾವು ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರನ್ನು ಗಾಢವಾಗಿ ಪ್ರೀತಿಸುತ್ತಿದ್ದೆ ಮತ್ತು ಮದುವೆಯಾಗಲು ಬಯಸಿದ್ದೆ ಎಂದು ಬಹಿರಂಗಪಡಿಸಿದ್ದಾರೆ. ರೆಹಮಾನ್ ಅವರ ಮತಾಂತರದಿಂದ ತಮಗೆ ನೋವಾಗಿತ್ತು ಎಂದು ಹೇಳಿದ್ದಾರೆ,

ಚೆನ್ನೈ (ಫೆ.26): ದಕ್ಷಿಣ ಭಾರತದ ಖ್ಯಾತ ನಟಿ, ಕನ್ನಡಿಗರಿಗೆ 'ಕಲ್ಯಾಣ ಮಂಟಪ', 'ಶ್ರೀರಾಮಚಂದ್ರ' ಸಿನಿಮಾ ಮೂಲಕ ಚಿರಪರಿಚಿತರಾಗಿರುವ ಮೋಹಿನಿ, ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಬಗ್ಗೆ ದಶಕಗಳ ಕಾಲ ಮನಸ್ಸಿನಲ್ಲಿ ಅಡಗಿಸಿಟ್ಟಿದ್ದ ಗುಟ್ಟೊಂದನ್ನು ಬಿಚ್ಚಿಟ್ಟಿದ್ದಾರೆ. ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮೋಹಿನಿ, "ನಾನು ರೆಹಮಾನ್ ಅವರನ್ನು ಗಾಢವಾಗಿ ಪ್ರೀತಿಸುತ್ತಿದ್ದೆ ಮತ್ತು ಅವರನ್ನು ಮದುವೆಯಾಗುವ ಆಲೋಚನೆಯೂ ಇತ್ತು" ಎಂದು ಹೇಳುವ ಮೂಲಕ ತಮ್ಮ ಜೀವನದ ಬಹುಕಾಲದ ಸತ್ಯವನ್ನು ಹೊರಹಾಕಿದ್ದಾರೆ.

ಧರ್ಮ ಬದಲಾವಣೆ ಮನಸ್ಸಿಗೆ ನೋವು ನೀಡಿತ್ತು!

"ನಾನು ಎ.ಆರ್. ರೆಹಮಾನ್ ಅವರ ಅಪ್ಪಟ ಅಭಿಮಾನಿ. ಅವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಸುದ್ದಿ ಕೇಳಿ ಅಂದು ನಾನು ತೀವ್ರವಾಗಿ ನೊಂದಿದ್ದೆ. ಆಗ ನಾನು ಹಿಂದೂ ಧರ್ಮದಲ್ಲಿದ್ದೆ. ಅವರು ಮತಾಂತರಗೊಳ್ಳದೆ 'ದಿಲೀಪ್' ಆಗಿಯೇ ಉಳಿಯಬೇಕೆಂದು ನಾನು ಬಯಸಿದ್ದೆ. ಅವರ ಮೇಲೆ ನನಗಿದ್ದ ಇಷ್ಟದ ಬಗ್ಗೆ ಮನೆಯವರಲ್ಲಿ ಹೇಳಿಕೊಳ್ಳೋಣ ಎಂದು ಕೂಡ ಯೋಚಿಸಿದ್ದೆ. ನಮ್ಮಿಬ್ಬರ ನಡುವೆ ಹೆಚ್ಚಿನ ವಯಸ್ಸಿನ ವ್ಯತ್ಯಾಸವಿಲ್ಲದ ಕಾರಣ ಮನೆಯವರು ವಿರೋಧಿಸುತ್ತಿರಲಿಲ್ಲ," ಎಂದು ಮೋಹಿನಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಆದರೆ, ಅಂದು ಎಆರ್‌ ರೆಹಮಾನ್‌ ಮತಾಂತರ ಆಗಿದ್ದರಿಂದ ಬೇಸರಗೊಂಡಿದ್ದ ಮೋಹಿನಿ, 2006ರಲ್ಲಿ ತಾವೂ ಕೂಡ ಮತಾಂತರವಾಗಿ ಕ್ರಿಶ್ಚಿಯನ್‌ ಧರ್ಮ ಸೇರಿದ್ದರು.

'ಬಿರಿಯಾನಿ ಮಾಡೋದನ್ನ ಕಲಿ' ಅಂದಿದ್ದ ನಟಿ ಲಕ್ಷ್ಮಿ!

ಈ ವೇಳೆ ಮತ್ತೊಂದು ಸ್ವಾರಸ್ಯಕರ ಸಂಗತಿಯನ್ನು ಹಂಚಿಕೊಂಡ ಮೋಹಿನಿ, "ಹಿರಿಯ ನಟಿ ಲಕ್ಷ್ಮಿ ಆಗಾಗ ನನ್ನನ್ನು ಚುಡಾಯಿಸುತ್ತಿದ್ದರು. 'ನಿನಗೆ ರೆಹಮಾನ್ ಅಂದ್ರೆ ಇಷ್ಟ ಅಲ್ವಾ? ಹಾಗಾದ್ರೆ ಮೊದಲು ಬಿರಿಯಾನಿ ಮಾಡೋದನ್ನ ಕಲಿ. ರೆಹಮಾನ್ ಅವರಿಗೆ ಬಿರಿಯಾನಿ ಅಂದ್ರೆ ತುಂಬಾ ಇಷ್ಟ, ನೀನು ಅವರನ್ನ ಮದುವೆಯಾಗಬೇಕಾದ್ರೆ ಇದು ಕಡ್ಡಾಯ' ಎಂದು ತಮಾಷೆ ಮಾಡುತ್ತಿದ್ದರು," ಎಂದು ಹೇಳಿದ್ದಾರೆ.

ವಿಮಾನದಲ್ಲಿ ನಡೆದ ಆ ಘಟನೆ

ರೆಹಮಾನ್ ಅವರನ್ನು ಮೋಹಿನಿ ಕೇವಲ ಒಮ್ಮೆ ಮಾತ್ರ ಭೇಟಿಯಾಗಿದ್ದರಂತೆ. ಮಲೇಷ್ಯಾದಲ್ಲಿ ನಡೆದ ರೆಹಮಾನ್ ಅವರ ಸಂಗೀತ ಕಾರ್ಯಕ್ರಮವೊಂದಕ್ಕೆ ಮೋಹಿನಿ ನಿರೂಪಕಿಯಾಗಿದ್ದರು. "ಕಾರ್ಯಕ್ರಮ ಮುಗಿಸಿ ವಿಮಾನದಲ್ಲಿ ಹಿಂತಿರುಗುವಾಗ, ಅಲ್ಲಿದ್ದ ಹಲವು ಕಲಾವಿದರ ನಡುವೆ ರೆಹಮಾನ್ ಅವರು ಸ್ವತಃ ಬಂದು ನನಗೆ 'ಹಲೋ' ಎಂದು ವಿಶ್ ಮಾಡಿದ್ದರು. ಅವತ್ತು ಅವರ ವರ್ತನೆ ನೋಡಿ ವಿಮಾನದಲ್ಲಿದ್ದ ಇತರ ಕಲಾವಿದರೆಲ್ಲರೂ ನನ್ನ ಬಗ್ಗೆ ಅಸೂಯೆ ಪಟ್ಟಿದ್ದರು," ಎಂದು ಅವರು ವಿವರಿಸಿದ್ದಾರೆ.

ನಟಿ ಮೋಹಿನಿ ಸದ್ಯ ಸಿನೆಮಾ ರಂಗದಿಂದ ದೂರವಿದ್ದು, ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ದಶಕಗಳ ನಂತರ ಅವರು ನೀಡಿರುವ ಈ 'ಲವ್ ಕನ್ಫೆಷನ್' ಈಗ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಲವ್ ಮಾಡೋ ಮೊದಲು ವಿಜಯ್‌ಗೆ ಹಿಗ್ಗಾಮುಗ್ಗಾ 'ವಾರ್ನಿಂಗ್' ಮಾಡಿದ್ರು ರಶ್ಮಿಕಾ ಮಂದಣ್ಣ!
ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಮದುವೆಯ ಬೆನ್ನಲ್ಲೇ ಕ್ವಿಕ್‌ ಆಗಿ ಬದಲಾದ ವಿಕಿಪೀಡಿಯಾ ಪೇಜ್‌!