ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಮದುವೆಯ ಬೆನ್ನಲ್ಲೇ ಕ್ವಿಕ್‌ ಆಗಿ ಬದಲಾದ ವಿಕಿಪೀಡಿಯಾ ಪೇಜ್‌!

Published : Feb 26, 2026, 04:55 PM IST
vijay deverakonda rashmika mandanna

ಸಾರಾಂಶ

Vijay Deverakonda and Rashmika Mandanna ಟಾಲಿವುಡ್ ತಾರೆಯರಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿಕಿಪೀಡಿಯಾ ಪುಟಗಳಲ್ಲಿ ಇಬ್ಬರನ್ನೂ ಪರಸ್ಪರ ಸಂಗಾತಿಗಳೆಂದು ಅಪ್‌ಡೇಟ್ ಮಾಡಲಾಗಿದೆ. 

ಬೆಂಗಳೂರು (ಫೆ.26): ಸೌತ್‌ ಸಿನಿಮಾದ ಪ್ರಮುಖ ಜೋಡಿಯಾದ ವಿಜಯ್‌ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಗುರುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಟಾಲಿವುಡ್‌ನ 'ರೌಡಿ ಸ್ಟಾರ್' ವಿಜಯ್ ದೇವರಕೊಂಡ ಮತ್ತು 'ನ್ಯಾಷನಲ್ ಕ್ರಶ್' ರಶ್ಮಿಕಾ ಮಂದಣ್ಣ ಅವರ ಮದುವೆಯ ಕುರಿತಾಗಿ ಅಧಿಕೃತ ಫೋಟೋಗಳ ನಿರೀಕ್ಷೆಯಲ್ಲಿರುವ ನಡುವೆಯೇ ಇವರಿಬ್ಬರ ವಿಕಿಪೀಡಿಯಾ ಪೇಜ್‌ ಕ್ವಿಕ್‌ ಆಗಿ ಬದಲಾವಣೆ ಕಂಡಿದೆ. ಇಬ್ಬರ ಪ್ರೊಫೈಲ್‌ನಲ್ಲೂ ಸಂಗಾತಿ (Spouse) ಕಾಲಂಗಳಲ್ಲಿ ಪರಸ್ಪರರ ಹೆಸರುಗಳು ಸೇರ್ಪಡೆಯಾಗಿದೆ.

ವಿಜಯ್ ದೇವರಕೊಂಡ ಅವರ ಪೇಜ್‌ನಲ್ಲಿ ಸಂಗಾತಿಯ ಹೆಸರಿನ ಜಾಗದಲ್ಲಿ 'ರಶ್ಮಿಕಾ ಮಂದಣ್ಣ (ವಿವಾಹ 2026)' ಎಂದು ಉಲ್ಲೇಖಿಸಲಾಗಿದೆ. ರಶ್ಮಿಕಾ ಮಂದಣ್ಣ ಅವರ ವಿಕಿಪೀಡಿಯಾ ಪುಟದಲ್ಲೂ ಸಂಗಾತಿಯ ಹೆಸರಿನ ಜಾಗದಲ್ಲಿ 'ವಿಜಯ್ ದೇವರಕೊಂಡ (ವಿವಾಹ 2026)' ಎಂದು ನಮೂದಿಸಲಾಗಿದೆ.

ವಿಜಯ್ ಮತ್ತು ರಶ್ಮಿಕಾ ಕಳೆದ ಕೆಲವು ವರ್ಷಗಳಿಂದ ಪ್ರೀತಿಯಲ್ಲಿದ್ದಾರೆ ಎಂಬ ವದಂತಿಗಳು ಬಲವಾಗಿದ್ದವು. ಕೊನೆಗೂ ಕಳೆದ ವರ್ಷದ ಅಕ್ಟೋಬರ್‌ ಸಮಯದಲ್ಲಿ ಇಬ್ಬರ ನಿಶ್ಚಿತಾರ್ಥವಾಗಿದ್ದ ಸುದ್ದಿ ಹಬ್ಬಿತ್ತು. ಆ ಬಳಿಕ ಪ್ರವಾಸದ ಫೋಟೋಗಳು ಮತ್ತು ಕುಟುಂಬದ ಸಮಾರಂಭಗಳಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. ಆದರೆ, ಇಲ್ಲಿಯವರೆಗೂ ವಿಕಿಪೀಡಿಯಾ ಪೇಜ್‌ಗಳಲ್ಲಿ ಇವರಿಬ್ಬರ ರಿಲೇಷನ್‌ಷಿಪ್‌ ಸ್ಟೇಟಸ್‌ಅನ್ನು ಅಪ್‌ಡೇಟ್‌ ಮಾಡಿರಲಿಲ್ಲ. ಆದರೆ, ಈಗ ಉದಯಪುರದಲ್ಲಿ ವಿಜಯ್‌ ದೇವರಕೊಂಡ, ರಶ್ಮಿಕಾ ಮಂದಣ್ಣಗೆ ತಾಳಿ ಕಟ್ಟಿದ ಬೆನ್ನಲ್ಲಿಯೇ ಪೇಜ್‌ ಅಪ್‌ಡೇಟ್‌ ಆಗಿದೆ.

ವಿಕಿಪೀಡಿಯಾ ಮುಕ್ತ ವೇದಿಕೆ

ವಿಕಿಪೀಡಿಯಾ ಮುಕ್ತ ವೇದಿಕೆಯಾಗಿದ್ದು, ಯಾರು ಬೇಕಾದರೂ ಮಾಹಿತಿಯನ್ನು ಎಡಿಟ್ ಮಾಡಬಹುದಾಗಿದೆ. ಈ ಸ್ಟಾರ್ ಜೋಡಿಗಳು ತಮ್ಮ ಮದುವೆಯ ಬಗ್ಗೆ ತಿಳಿಸಿದ್ದರೂ, ಅದರ ಫೋಟೋ ರಿಲೀಸ್‌ ಮಾಡಿಲ್ಲ.

ವಿಜಯ್ ದೇವರಕೊಂಡ 2011 ರಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು, 'ನೋಟಾ', 'ಅರ್ಜುನ್ ರೆಡ್ಡಿ' ಅಂತಹ ಸಿನಿಮಾಗಳ ಮೂಲಕ ಖ್ಯಾತರಾಗಿದ್ದಾರೆ. ಇನ್ನು ರಶ್ಮಿಕಾ ಮಂದಣ್ಣ 2016 ರಲ್ಲಿ 'ಕಿರಿಕ್ ಪಾರ್ಟಿ' ಮೂಲಕ ಕೆರಿಯರ್ ಆರಂಭಿಸಿದ ಇವರು, ಈಗ ಬಾಲಿವುಡ್ ಮತ್ತು ಟಾಲಿವುಡ್‌ನ ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೈ ತುಂಬಾ ಸಿನಿಮಾಗಳಿದ್ದರೂ ರಶ್ಮಿಕಾ ಮಂದಣ್ಣ ಈಗಲೇ ಮದುವೆ ಆಗಿರೋದು ಯಾಕೆ? ಗುಟ್ಟು ರಟ್ಟಾಯ್ತು!
ರಶ್ಮಿಕಾ -ವಿಜಯ್ ಮದುವೆಯಲ್ಲಿ ಸ್ವೀಟ್ ತಿನ್ನೋಕೂ ಜನರಿಲ್ವಾ? ಬೀದಿಗೆ ಬಂದು ಸಿಹಿತಿಂಡಿ ಹಂಚಿದ ಕುಟುಂಬ ಸದಸ್ಯರು!