
ಮಹಿಮಾ ಚೌಧರಿ ಮದುವೆ
Mahima Chaudhary Marriage: ನಿಜವಾಹಿ ಹೇಳಬೇಕು ಎಂದರೆ, ಪ್ರೀತಿಗೂ ವಯಸ್ಸಿಗೂ ಸಂಬಂಧವೇ ಇಲ್ಲ ಎನ್ನಬಹುದು. ಯಾವುದೇ ವಯಸ್ಸಿನಲ್ಲಿ ಗಂಡು-ಹೆಣ್ಣು ಆಕರ್ಷಿತರಾಗಬಹುದು ಹಾಗೂ ಅವರ ನಡುವೆ ಪ್ರೇಮಾಂಕುರವಾಗಬಹುದು ಎನ್ನುವ ಮಾತಿದೆ. ಈಗ 52 ವರ್ಷದ ನಟಿ ಮತ್ತು 62 ವರ್ಷದ ನಟ ಅವರಿಬ್ಬರ ಮಧ್ಯೆ ಅದೇ ಆಗಿದೆ. 52 ವರ್ಷದ ನಟಿ ಹಾಗೂ 62 ವರ್ಷದ ನಟ ಪರಸ್ಪರ ಹಾರ ಬದಲಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.
ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯರಾಗಿದ್ದ ಒಂದು ಕಾಲದ ಬಿಂದಾಸ್ ಬೆಡಗಿ ಮಹಿಮಾ ಚೌಧರಿ ಅವರ ಮದುವೆ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗುತ್ತಿದೆ. ಅದ್ಯಾಕೆ ಎಂದರೆ, 52 ವರ್ಷದ ಮಹಿಮಾ ಚೌಧರಿ ತಮಗಿಂತ 10 ವರ್ಷ ದೊಡ್ಡವರಾದ ನಟ ಸಂಜಯ್ ಮಿಶ್ರಾ ಅವರನ್ನು ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಮಹಿಮಾ ಚೌಧರಿ ಮತ್ತು ಸಂಜಯ್ ಮಿಶ್ರಾ ಪರಸ್ಪರ ಹಾರ ಬದಲಿಸಿಕೊಂಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಮಹಿಮಾ ಚೌಧರಿ ಮತ್ತು ಸಂಜಯ್ ಮಿಶ್ರಾ ಪರಸ್ಪರ ಕೊರಳಲ್ಲಿ ಹಾರಹಾಕಿಕೊಂಡು ವಿವಾಹ ವಿಧಿವಿಧಾನಗಳನ್ನು ನಡೆಸಿದ್ದಾರೆ. ಇದು ಚಿತ್ರೀಕರಣವೋ ಅಥವಾ ನಿಜಕ್ಕೂ ಈ ನಟ ನಟಿಯರು ವಿವಾಹವಾಗಿದ್ದಾರೋ ಎನ್ನುವ ಅನುಮಾನ ನೆಟಿಜನ್‌ಗಳನ್ನು ಕಾಡತೊಡಗಿದೆ. ಕಾಮೆಂಟ್ ಬಾಕ್ಸ್ ಪ್ರಶ್ನೆಗಳಿಂದ ತುಂಬಿಹೋಗಿದೆ. ಆದರೆ ಈ ನೆಟ್ಟಿಗರ ಪ್ರಶ್ನೆಗಳಿಗೆ ನಟಿಯಾಗಲೀ ನಟನಾಗಲೀ ಉತ್ತರ ನೀಡಿಲ್ಲ.
ಸತ್ಯ ಸಂಗತಿ ಏನೆಂದರೆ, ಈ ವಿಡಿಯೋದಲ್ಲಿ ಸಂಜಯ್ ಮಿಶ್ರಾ ಮತ್ತು ಮಹಿಮಾ ಚೌಧರಿ ವಿವಾಹ ಸಂಪ್ರದಾಯಗಳನ್ನು ನಿರ್ವಹಿಸಿದ್ದರೂ, ಇಬ್ಬರೂ ನಿಜವಾಗಿಯೂ ಮದುವೆಯಾಗಿಲ್ಲ. ಅವರಿಬ್ಬರೂ ಹೀಗೆ ಜೋಡಿಯಾಗಿ ಕಾಣಿಸಿಕೊಂಡಿದ್ದು ತಮ್ಮ ಮುಂಬರುವ ಚಿತ್ರ 'ದುರ್ಲಭ್ ಪ್ರಸಾದ್ ಕಿ ದೂರ್ಸಿ ಶಾದಿ' ಪ್ರಚಾರದ ಸಲುವಾಗಿ. ಸಿದ್ಧಾಂತ್ ರಾಜ್ ಸಿಂಗ್ ನಿರ್ದೇಶನದ ಈ ಚಿತ್ರ ಡಿಸೆಂಬರ್ 19 ರಂದು ಬಿಡುಗಡೆಯಾಗಲಿದೆ. ಚಿತ್ರದ ಟ್ರೇಲರ್ ಗುರುವಾರ ಬಿಡುಗಡೆಯಾಗಿದ್ದು ಸಂಜಯ್ ಮಿಶ್ರಾ ಮತ್ತು ಮಹಿಮಾ ಚೌಧರಿ ವಿವಾಹ ಎನ್ನುವ ರೀತಿಯಲ್ಲಿ ಚರ್ಚೆ ನಡೆಯಲಿ ಎಂಬ ಉದ್ದೇಶವೇ ಇದೆ ಎನ್ನಲಾಗುತ್ತಿದೆ.
ಈ ಟ್ರೇಲರ್‌ನಲ್ಲಿ, ದುರ್ಲಭ್ ಪ್ರಸಾದ್ (ಸಂಜಯ್ ಮಿಶ್ರಾ) ತಮ್ಮ ಮಗನ ಮದುವೆಗೆ ಸ್ವತಃ ಮದುವೆಗೆ ಸಿದ್ದರಾಗುವುದನ್ನು ನಾವು ನೋಡುತ್ತೇವೆ. ಏಕೆಂದರೆ ವಧು-ವರರು ಮನೆಗೆ ಒಬ್ಬ ಮಹಿಳೆ ಬರುವವರೆಗೆ ಆ ಮನೆಯಲ್ಲಿರುವ ಹುಡುಗಿಯನ್ನು ಮದುವೆಯಾಗಬಾರದು ಎಂಬ ಷರತ್ತನ್ನು ಹೊಂದಿದ್ದಾರೆ ಎನ್ನಲಾಗಿದೆ. ಈ ಸಮಯದಲ್ಲಿ, ಮಹಿಮಾ ಚೌಧರಿ ಅವರು ದುರ್ಲಭ್ ಪ್ರಸಾದ್ ಅವರ ಜೀವನವನ್ನು ಪ್ರವೇಶಿಸುತ್ತಾರೆ. ಆಕೆಗೆ ಮದ್ಯ ಮತ್ತು ಸಿಗರೇಟ್ ಹೀಗೆ ಎಲ್ಲಾ ಕೆಟ್ಟ ಅಭ್ಯಾಸಗಳೂ ಇದೆಯಂತೆ... ಆ ಬಳಿಕ, ಅವರಿಬ್ಬರ ಜೀವನದಲ್ಲಿ ಒಂದು ದೊಡ್ಡ ತಿರುವು ಬರುತ್ತದೆ ಎನ್ನುವುದು ಈ ಚಿತ್ರದ ಕಥೆಯಂತೆ.. ಇನ್ನೇನು ಸಿನಿಮಾ ಸದ್ಯವೇ ಬಿಡುಗಡೆ ಆಗಲಿದೆ.. !
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.