ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!

Published : Dec 05, 2025, 02:56 PM ISTUpdated : Dec 05, 2025, 03:05 PM IST
James Cameron Mahesh Babu SS Rajamouli

ಸಾರಾಂಶ

ರಾಜಮೌಳಿ  'ಆರ್‌ಆರ್‌ಆರ್' ಸಿನಿಮಾವನ್ನು ವೀಕ್ಷಿಸಿದ್ದ ಕ್ಯಾಮರೂನ್ ಅವರು, ರಾಜಮೌಳಿಯವರ ನಿರ್ದೇಶನಕ್ಕೆ ಮನಸೋತು ಕೊಂಡಾಡಿದ್ದರು. ಹಾಲಿವುಡ್‌ನಲ್ಲಿ ಸಿನಿಮಾ ಮಾಡುವ ಕುರಿತು ಅವರಿಗೆ ಬೆಂಬಲ ನೀಡುವ ಆಫರ್ ಸಹ ನೀಡಿದ್ದರು. ಈಗ ತಮ್ಮದೇ ಸಿನಿಮಾ ಮೂಲಕ ರಾಜಮೌಳಿಯವರ ಕನಸಿನ ಯೋಜನೆಗೆ ‘ಅಸ್ತು’ ಎಂದಿದ್ದಾರೆ.

ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಪ್ಲಾನ್!

ಖ್ಯಾತ ನಟ ಮಹೇಶ್ ಬಾಬು (Mahesh Babu) ಅವರು ಸದ್ಯ ಪ್ಯಾನ್-ವರ್ಲ್ಡ್ (Pan world) ಮಹತ್ವಾಕಾಂಕ್ಷೆಯ ಸಿನಿಮಾ 'ವಾರಣಾಸಿ' (Varanasi) ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರವನ್ನು ದೃಶ್ಯ ವೈಭವಕ್ಕೆ ಹೆಸರುವಾಸಿ ಆಗಿರುವ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರು ನಿರ್ದೇಶಿಸುತ್ತಿದ್ದು, ಇದನ್ನು ಜಾಗತಿಕ ಮಟ್ಟದಲ್ಲಿ ಬಿಡುಗಡೆ ಮಾಡಲು ಭಾರಿ ಯೋಜನೆ ಹಾಕಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಸಿನಿಮಾದ ಟೈಟಲ್ ಮತ್ತು ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ವಿಶ್ವದರ್ಜೆಯಲ್ಲಿ ಆಯೋಜಿಸುವ ಮೂಲಕ ರಾಜಮೌಳಿ ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ.

ಮುಂಬರುವ ವಾರಣಾಸಿ ಚಿತ್ರದ ಮೂಲಕ ಮಹೇಶ್ ಬಾಬು ಅವರು ಸಂಪೂರ್ಣವಾಗಿ ಪ್ಯಾನ್-ವರ್ಲ್ಡ್ ನಟನಾಗಿ ಹೊರಹೊಮ್ಮುವ ಎಲ್ಲ ಸಾಧ್ಯತೆಗಳು ದಟ್ಟವಾಗಿ ಕಾಣಿಸುತ್ತಿವೆ. ಈ ಬೆಳವಣಿಗೆ ನಡುವೆ, ಶೀಘ್ರವೇ ವಿಶ್ವದಾದ್ಯಂತ ಬಿಡುಗಡೆಯಾಗಲಿರುವ 'ಅವತಾ‌ರ್ 3' ಚಲನಚಿತ್ರದಲ್ಲಿ ಮಹೇಶ್ ಬಾಬು ಅವರ 'ವಾರಣಾಸಿ' ಚಿತ್ರದ  ಟೀಸರ್ ಪ್ರದರ್ಶನವಾಗಲಿದೆ ಎಂಬ ಮಹತ್ವದ ಸುದ್ದಿ ಈಗ ಭಾರೀ ಸದ್ದು ಮಾಡುತ್ತಿದೆ.

ಮಹೇಶ್ ಬಾಬು ಅವರ 'ವಾರಣಾಸಿ' ಚಿತ್ರದ ಟೀಸರ್ ಪ್ರದರ್ಶನ

ಹಾಲಿವುಡ್‌ನ ನಿರ್ದೇಶಕ, ದಿಗ್ಗಜ ಜೇಮ್ಸ್ ಕ್ಯಾಮರೂನ್ ನಿರ್ದೇಶನದ 'ಅವತಾ‌ರ್ 3' ಸಿನಿಮಾ ಡಿಸೆಂಬರ್ 19 ರಂದು ಭಾರತ ಸೇರಿದಂತೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಪ್ರಪಂಚದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ 'ಅವತಾರ್' ಸರಣಿಯ ಈ ಚಿತ್ರವನ್ನು ಮುಗಿಬಿದ್ದು ನೋಡುವ ಪ್ರೇಕ್ಷಕರ ಸಂಖ್ಯೆ ಬಹಳಷ್ಟಿದೆ. ಸಿನಿಮಾದ ಈ ಜಾಗತಿಕ ಪ್ರೇಕ್ಷಕ ವರ್ಗವನ್ನು ತಮ್ಮ 'ವಾರಣಾಸಿ' ಪ್ರಚಾರಕ್ಕೆ ಬಳಸಿಕೊಳ್ಳಲು ರಾಜಮೌಳಿ ಒಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

'ಅವತಾರ್ 3' ಚಿತ್ರದ ಬಿಡುಗಡೆಯಾಗಲಿರುವ ಕೆಲವು ಪ್ರಮುಖ ದೇಶಗಳಲ್ಲಿ, ಚಿತ್ರದ ಇಂಟರ್ವೆಲ್ ಸಮಯದಲ್ಲಿ ಮಹೇಶ್ ಬಾಬು ನಟನೆಯ 'ವಾರಣಾಸಿ' ಟೀಸರ್ ಅನ್ನು ಅಟ್ಯಾಚ್ ಮಾಡಿ ಪ್ರದರ್ಶನ ಮಾಡಲು ಯೋಜನೆ ರೂಪಿಸಲಾಗಿದೆ. ವಿಶ್ವ ಮಟ್ಟದಲ್ಲಿ 'ವಾರಣಾಸಿ'ಯನ್ನು ಪರಿಚಯಿಸುವ ರಾಜಮೌಳಿಯ ಮೊದಲ ಕಾರ್ಯತಂತ್ರ ಇದಾಗಿದೆ. ಇಬ್ಬರು ದೈತ್ಯ ನಿರ್ದೇಶಕರ ನಡುವಿನ ಸ್ನೇಹ ಮುಂದೆ ಅಸಾಮಾನ್ಯ ಪ್ರಚಾರಕ್ಕೆ ಕಾರಣವಾಗಲಿದೆ. ಜೇಮ್ಸ್ ಕ್ಯಾಮರೂನ್ ಮತ್ತು ರಾಜಮೌಳಿ ಉತ್ತಮ ಮಿತ್ರರಾಗಿದ್ದಾರೆ.

ರಾಜಮೌಳಿ 'ಆರ್‌ಆರ್‌ಆರ್' ಸಿನಿಮಾ ವೀಕ್ಷಿಸಿದ್ದ ಕ್ಯಾಮರೂನ್

ಎಸ್‌ಎಸ್ ರಾಜಮೌಳಿಯವರ 'ಆರ್‌ಆರ್‌ಆರ್' ಸಿನಿಮಾವನ್ನು ವೀಕ್ಷಿಸಿದ್ದ ಕ್ಯಾಮರೂನ್ ಅವರು, ರಾಜಮೌಳಿಯವರ ನಿರ್ದೇಶನಕ್ಕೆ ಮನಸೋತು ಹೊಗಳಿದ್ದರು. ಹಾಲಿವುಡ್‌ನಲ್ಲಿ ಸಿನಿಮಾ ಮಾಡುವ ಕುರಿತು ಅವರಿಗೆ ಬೆಂಬಲ ನೀಡುವ ಆಫರ್ ಸಹ ನೀಡಿದ್ದರು. ಈಗ ತಮ್ಮದೇ ಸಿನಿಮಾ ಮೂಲಕ ರಾಜಮೌಳಿಯವರ ಕನಸಿನ ಯೋಜನೆ ವಾರಣಾಸಿಗೆ ಪ್ರಚಾರ ನೀಡಲು ಒಪ್ಪಿಗೆ ಸೂಚಿಸುವ ಮೂಲಕ ಈ ಇಬ್ಬರು ದಿಗ್ಗಜರು ಹೊಸ ಮೈಲಿಗಲ್ಲನ್ನು ಸೃಷ್ಟಿಸಿದ್ದಾರೆ. ಸದ್ಯದಲ್ಲೇ, 'ಅವತಾರ್ 3' ಸಿನಿಮಾ ಮಧ್ಯೆ ಪ್ರೇಕ್ಷಕರು ‘ವಾರಣಾಸಿ’ ಟೀಸರ್ ನೋಡಲಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!
ಹೊರ ಹೋದ್ಮೇಲೆ ನೀನೇ ಟ್ರೇನ್ ಮಾಡ್ಬೇಕಲ್ವಾ ! ಮನಸ್ಸಿನ ಮಾತು ಹೊರ ಹಾಕಿದ ರಾಶಿಕಾ