ನಟಿ ಕೃತಿ ಸನೋನ್ ತಮ್ಮ ಮುದ್ದಿನ ನಾಯಿಯ ಜೊತೆ ವಿಡಿಯೋ ಶೇರ್ ಮಾಡಿದ್ದು, ಇದನ್ನು ನೋಡಿದ ಈಕೆಯ ಫ್ಯಾನ್ಸ್ ತಾವೂ ನಟಿ ಮನೆಯ ನಾಯಿ ಆಗಿದ್ರೆ ಚೆನ್ನಾಗಿತ್ತು ಅಂತಿದ್ದಾರೆ!
ನಟಿ ಕೃತಿ ಸನೋನ್ (Kriti Sanon) ಅವರು ಸದ್ಯ ಬಾಲಿವುಡ್ನಲ್ಲಿ ಸಕತ್ ಬಿಜಿಯಾಗಿದ್ದಾರೆ. ಇವರ ಆದಿಪುರುಷ್ ಚಿತ್ರ ಅಷ್ಟೆಲ್ಲಾ ಸದ್ದು ಮಾಡದಿದ್ದರೂ, ‘ಮಿಮಿ’ ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಇವರು ಆಗಾಗ್ಗೆ ಸುದ್ದಿ ಮಾಡುತ್ತಿರುವುದು ಮದುವೆ ವಿಚಾರವಾಗಿ. ನಾನಿನ್ನೂ ಸಿಂಗಲ್ ಆದರೆ ಮದುವೆಗೆ ರೆಡಿ ಎಂದು ಸಂದರ್ಶನವೊಂದರಲ್ಲಿ ಕೃತಿ ತಮ್ಮ ಹುಡುಗ ಹೇಗಿರಬೇಕು ಎಂದು ರಿವೀಲ್ ಮಾಡಿದ್ದರು. ನಾನು ಒಂಟಿ ಆದರೆ ಮದುವೆಯಾಗಲು ರೆಡಿ, ಆ ಹುಡುಗನಲ್ಲಿ ಕೆಲವು ಗುಣಗಳು ಇರಲೇಬೇಕು ಎಂದು ತಮ್ಮ ಮನದಾಸೆಯನ್ನ ನಟಿ ಹಂಚಿಕೊಂಡಿದ್ದಾರೆ. ಪ್ರೀತಿಯಲ್ಲಿ ಪ್ರಾಮಾಣಿಕತೆಯನ್ನು ಬಯಸುತ್ತೇನೆ. ತನಗಿಂತ ತಾನು ಮದುವೆಯಾಗುವ ಹುಡುಗ ಎತ್ತರವಿರಬೇಕು. ಒಳ್ಳೆಯ ಮನುಷ್ಯನಾಗಿರಬೇಕು ಎಂದು ನಟಿ ಹೇಳಿದ್ದರು. ಅದೇನೇ ಇದ್ದರೂ ನಟಿಯಂತೂ ಸಿಂಗಲ್ ಆಗಿಯೇ ಇದ್ದಾರೆ.
ಅದರೆ ಇವರ ವಿಡಿಯೋ ಒಂದು ವೈರಲ್ ಆಗಿದ್ದು, ಅವರು ತಮ್ಮ ನಾಯಿಯ ಜೊತೆ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ. ತಮ್ಮ ನಾಯಿಗೆ ಏಳು ವರ್ಷ ಆಯಿತೆಂದು ಹೇಳಿದ್ದು, ಅಬ್ಬಾ ಹಾಗಿದ್ರೆ ನನ್ನ ನಾಯಿಗೆ 50 ವರ್ಷ ಆಗೋಯ್ತಾ ಅನ್ನುತ್ತಿದ್ದಾರೆ. ಆದರೆ ಇಲ್ಲಿ ಇವರಷ್ಟೇ ಕ್ಯೂಟ್ ಆಗಿದೆ ಇವರ ನಾಯಿ. ಅದಕ್ಕೆ ಕೃತಿ ಅವರನ್ನು ಕಂಡರೆ ಸಿಕ್ಕಾಪಟ್ಟೆ ಇಷ್ಟ, ಪ್ರೀತಿ ಎನ್ನುವುದು ಈ ವಿಡಿಯೋ ನೋಡಿದರೆ ತಿಳಿಯುತ್ತದೆ. ಅದು ಕೃತಿ ಅವರ ಮುಖವನ್ನೆಲ್ಲಾ ನೆಕ್ಕಿದ್ದು, ಕೃತಿ ಅವರನ್ನು ಅಪ್ಪಿಕೊಂಡು ಮುದ್ದಾಡಿದೆ. ಕೃತಿ ಕೂಡ ಅದಕ್ಕೆ ಮುತ್ತುಕೊಟ್ಟು ಅಪ್ಪಿಕೊಂಡಿದ್ದಾರೆ. ಇದನ್ನು ನೋಡಿ ಹೈಕಳು ಹೊಟ್ಟೆ ಉರಿಸಿಕೊಂಡಿದ್ದಾರೆ. ಇಂಥ ಸಿಂಗಲ್ ಸುಂದರಾಂಗಿಯನ್ನು ಆ ನಾಯಿ ತಬ್ಬಿಕೊಳ್ಳುವ, ಮುದ್ದುಮಾಡುವ ಪರಿ ನೋಡಲಾಗುತ್ತಿಲ್ಲ, ಎಂಥ ಲಕ್ಕಿ ಅದು ಎಂದಿರುವ ಕೃತಿ ಫ್ಯಾನ್ಸ್ನಲ್ಲಿ ಕೆಲವರು ಮುಂದಿನ ಜನ್ಮದಲ್ಲಾದರೂ ನಮ್ಮನ್ನು ಕೃತಿ ಮನೆಯ ನಾಯಿ ಮಾಡಪ್ಪಾ ತಂದೆ ಎನ್ನುತ್ತಿದ್ದಾರೆ.
ರಾಖಿ ಪತಿ ಆದಿಲ್ ಜೊತೆ ಶೆರ್ಲಿನ್ ಚೋಪ್ರಾ ಮತ್ತೆ ರೊಮ್ಯಾನ್ಸ್: ವಿಡಿಯೋ ನೋಡಿ ದಂಗಾದ ಫ್ಯಾನ್ಸ್!
ಅಂದಹಾಗೆ ಕೆಲ ದಿನಗಳ ಹಿಂದೆ ಕೃತಿ ಅವರ ಮೂಗಿನ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. 'ಶಹಜಾದಾ' ಚಿತ್ರದಲ್ಲಿ ಕಾಣಿಸಿಕೊಂಡಿರುವ ಕೃತಿ ಸನೋನ್ ಅವರ ಹಳೆಯ ಮತ್ತು ಹೊಸ ಫೋಟೋ ವೈರಲ್ ಆಗಿದ್ದು, ಕೃತಿ ಮೂಗಿನ ಕುರಿತು ಭಾರಿ ಚರ್ಚೆ ಶುರುವಾಗಿತ್ತು. ಕೃತಿ ಅವರ ಹಳೆಯ ಮೂಗನ್ನು ಹೊಸ ಮೂಗಿಗೆ ಹೋಲಿಸಿ ನೆಟ್ಟಿಗರು ವಿಭಿನ್ನ ರೀತಿಯ ಕಮೆಂಟ್ ಮಾಡಿದ್ದರು. ಎರಡೂ ಚಿತ್ರಗಳನ್ನು ಹೋಲಿಸಿ ನೋಡಿದರೆ, ಮೂಗಿನ ಭಾರಿ ವ್ಯತ್ಯಾಸ ಇರುವುದು ತಿಳಿಯುತ್ತದೆ. ಮೂಗು ವಿಭಿನ್ನ ಆಗಿರುವ ಕಾರಣದಿಂದ ಕೃತಿ ಪ್ಲಾಸ್ಟಿಕ್ ಸರ್ಜರಿ (Plastic Surgery) ಮಾಡಿಸಿಕೊಂಡಿದ್ದಾರೆ ಎಂದು ಹೇಳುತ್ತಿದ್ದರು. ’ಇವರ ಮೂಗಿನ ಹೊಳ್ಳೆಗಳ ಕ್ಲೋಸ್-ಅಪ್ (Close Up) ನೋಡಿದರೆ ಚೆನ್ನಾಗಿ ತಿಳಿಯುತ್ತದೆ, ಈಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ’ ಎಂದು ಹಲವರು ಹೇಳಿದ್ದರೆ, ಕೃತಿ ಚೆನ್ನಾಗಿ ಮೂಗಿನ ಕೆಲಸವನ್ನು ಮಾಡಿದ್ದಾರೆ, ಇದು ಆಕೆಯ ಸೌಂದರ್ಯವನ್ನು ಹೆಚ್ಚಿಸಿದೆ. ಅಂದರೆ ಇವರ ಅಂದ ಒರಿಜಿನಲ್ ಅಲ್ಲ ಎಂದಾಯ್ತು ಎಂದು ಇನ್ನು ಕೆಲವರು ಹೇಳಿದ್ದಾರೆ. ಆದರೆ ಕೃತಿಯ ಕೆಲವು ಅಭಿಮಾನಿಗಳು, ಇದು ಪ್ಲಾಸ್ಟಿಕ್ ಸರ್ಜರಿ ಅಲ್ಲ, ಕ್ಯಾಮೆರಾದ ಒಂದೊಂದು ಆ್ಯಂಗಲ್‌ನಲ್ಲಿ ಮುಖ ಒಂದೊಂದು ರೀತಿಯಲ್ಲಿ ಕಾಣಿಸುತ್ತದೆ, ಕೆಲವೊಮ್ಮೆ ಲೈಟಿಂಗ್‌ನಿಂದಾಗಿಯೂ ಲುಕ್ ವಿಭಿನ್ನವಾಗಿ ಕಾಣುತ್ತದೆ. ವಯಸ್ಸು ಹೆಚ್ಚುತ್ತಿರುವ ಕಾರಣ ಮತ್ತು ವ್ಯಾಯಾಮದಿಂದ ಅವರ ನೋಟದಲ್ಲಿ ಬದಲಾವಣೆಯಾಗಿದೆ ಎಂದು ಹೇಳಿದ್ದರು. ಆದರೆ ಇದುವರೆಗೂ ಕೃತಿ ಈ ಬಗ್ಗೆ ಬಾಯಿ ಬಿಟ್ಟಿಲ್ಲ.
ಕೃತಿ ಈಗ ಯಶಸ್ವಿಯಾಗಿ ಗುರುತಿಸಿಕೊಂಡಿದ್ದರೂ, ಇವರ ಆರಂಭದ ದಿನಗಳು ಚೆನ್ನಾಗಿರಲಿಲ್ಲ. ಇದನ್ನು ಕೂಡ ನಟಿ ಒಮ್ಮೆ ಹೇಳಿಕೊಂಡಿದ್ದರು. 'ನನ್ನ ಮೊದಲ ಫೋಟೋಶೂಟ್ ಮಾಡುವಾಗ ನಾನು ತುಂಬ ನರ್ವಸ್ ಆಗಿದ್ದೆ. ನನಗೆ ಇನ್ನೂ ಚೆನ್ನಾಗಿ ಅದು ನೆನಪಿದೆ. ನಾನು ಅಳುತ್ತಲೇ ಮನೆಗೆ ಬಂದೆ. ಯಾಕೆಂದರೆ, ಅಂದು ನಾನು ಚೆನ್ನಾಗಿ ಮಾಡಿರಲಿಲ್ಲ. ಎಲ್ಲ ಕೆಲಸವನ್ನೂ ಪರ್ಫೆಕ್ಟ್ ಆಗಿ ಮಾಡಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಆದರೆ ಆ ದಿನ ಫೋಟೋಶೂಟ್ ನಾನು ಅಂದುಕೊಂಡ ರೀತಿ ಬರಲಿಲ್ಲ. ಇದಕ್ಕಾಗಿ ಬೇಸರ ಆಗಿತ್ತು. ಫೋಟೋಶೂಟ್ ಚೆನ್ನಾಗಿ ಆಗಲಿಲ್ಲ ಎಂಬ ಕಾರಣಕ್ಕೆ ಕಣ್ಣೀರು ಹಾಕುತ್ತ ಮನೆಗೆ ಬಂದೆ ಎಂದಿರುವ ಕೃತಿ, ನಂತರ ತಮ್ಮ ತಪ್ಪುಗಳಿಂದಲೇ ಪಾಠ ಕಲಿತೆ ಎಂದಿದ್ದರು. ಚಿತ್ರರಂಗಕ್ಕೆ ಕಾಲಿಟ್ಟು ಯಶಸ್ವಿ ನಟಿಯಾಗಿ ಗುರುತಿಸಿಕೊಂಡರು. ಆದರೆ ಕಾಲಾನಂತರದಲ್ಲಿ ನನ್ನೊಳಗೆ ನಾನು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡೆ. ನಮ್ಮ ಯಶಸ್ಸಿಗಿಂತ ನಮ್ಮ ವೈಫಲ್ಯಗಳಿಂದ ನಾವು ಹೆಚ್ಚು ಕಲಿಯಬಹುದು ಎಂಬುದನ್ನು ನಾನು ನಂಬುತ್ತೇನೆ. ನನ್ನ ತಪ್ಪುಗಳಿಂದ ಕಲಿಯುವುದು ಮತ್ತು ಮುಂದುವರಿಯುವುದು ನನ್ನ ಮಂತ್ರವಾಗಿದೆ' ಎನ್ನುತ್ತಾರೆ ನಟಿ ಕೃತಿ ಸನೋನ್.
ಟಬು @52: ಮದ್ವೆಯಾಗಿದ್ರೆ ಅನ್ಯಾಯವಾಗ್ತಿತ್ತು, ಸಿಂಗಲ್ ಆಗಿದ್ದೇ ನನ್ನ ಯಶಸ್ಸಿನ ಗುಟ್ಟು ಎಂದ ನಟಿ