ಯಾರು ಈ ಸುಜಾತಾ? ಗಟ್ಟಿಯಾಗಿ ಬಿಗಿದಪ್ಪಿ ನಟ ಸಿದ್ಧಾರ್ಥ್ ಬಿಕ್ಕಿಬಿಕ್ಕಿ ಅತ್ತಿದ್ದೇಕೆ?

Published : Jun 09, 2023, 04:35 PM ISTUpdated : Jun 09, 2023, 05:38 PM IST
ಯಾರು ಈ ಸುಜಾತಾ? ಗಟ್ಟಿಯಾಗಿ ಬಿಗಿದಪ್ಪಿ ನಟ ಸಿದ್ಧಾರ್ಥ್ ಬಿಕ್ಕಿಬಿಕ್ಕಿ ಅತ್ತಿದ್ದೇಕೆ?

ಸಾರಾಂಶ

ಯಾರು ಈ ಸುಜಾತಾ? ನಟ ಸಿದ್ಧಾರ್ಥ್ ಗಟ್ಟಿಯಾಗಿ ಬಿಗಿದಪ್ಪಿ ಬಿಕ್ಕಿಬಿಕ್ಕಿ ಅತ್ತಿದ್ದೇಕೆ? ಇಲ್ಲಿದೆ ಸಂಪೂರ್ಣ ವಿವರ.

ತಮಿಳು ಖ್ಯಾತ ನಟ ಸಿದ್ಧಾರ್ಥ್ ಇತ್ತೀಚೆಗೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ನಟಿ ಅದಿತಿ ರಾವ್ ಹೈದರಿ ಜೊತೆ ಡೇಟಿಂಗ್ ವಂದತಿ ವಿಚಾರವಾಗಿ ಸಿದ್ಧಾರ್ಥ ಸದ್ದು ಮಾಡುತ್ತಿದ್ದಾರೆ. ಈ ನಡುವೆ ಸಿದ್ಧು ಟಕ್ಕರ್ ಸಿನಿಮಾದ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಸಿನಿಮಾರಂಗದಲ್ಲಿ 20 ವರ್ಷಗಳನ್ನು ಪೂರೈಸಿರುವ ಸಿದ್ಧಾರ್ಥ್ ತರಹೇವಾರಿ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಖ್ಯಾತ ನಿರ್ದೇಶಕ ಶಂಕರ್ ಅವರ ಬಾಯ್ಸ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಸಿದ್ಧಾರ್ಥ್ ಇಂದು ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಸದ್ಯ ಟಕ್ಕರ್ ಸಿನಿಮಾದ ಪ್ರಚಾರದಲ್ಲಿರುವ ಸಿದ್ಧಾರ್ಥ್ ಅನೇಕ ವಾಹಿನಿಗಳಿಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಸಂದರ್ಶನದ ವೇಳೆ ಸಿದ್ಧು, ಸುಜಾತ್ ಎನ್ನುವವರನ್ನು ಗಟ್ಟಿಯಾಗಿ ತಬ್ಬಿಕೊಂಡು ಗಳಗಳನೆ ಕಣ್ಣೀರಿಟ್ಟಿದ್ದಾರೆ. ಸಿದ್ಧಾರ್ಥ್ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸಿದ್ಧಾರ್ಥ್ ತನ್ನ ಜೀವನದ ವಿಶೇಷ ವ್ಯಕ್ತಿಯನ್ನು ಭೇಟಿಯಾಗಿ ಭಾವುಕರಾಗಿದ್ದಾರೆ. ತಮಿಳಿನ ಖ್ಯಾತ ಲೇಖಕರ ಪತ್ನಿ ಸುಜಾತಾ ರಂಗರಾಜನ್ ಅವರನ್ನು ಭೇಟಿಯಾದಾಗ ಭಾವುಕರಾಗಿದ್ದಾರೆ. ಕಾರ್ಯಕ್ರಮಕ್ಕೆ ಸುಜಾತಾ ಎಂಟ್ರಿ ಕೊಡುತ್ತಿದ್ದಂತೆ ಅಚ್ಚರಿಯಾದ ಸಿದ್ಧಾರ್ಥ್ ಅವರ ಕಾಲಿಗೆ ಬಿದ್ದು ನಮಸ್ಕಾರ ಮಾಡಿದರು. ಬಳಿಕ ಸುಜಾತಾ ಅವರನ್ನು ಗಟ್ಟಿಯಾಗಿ ತಬ್ಬಿಕೊಂಡು ಕಣ್ಣೀರಿಟ್ಟರು. ಸಿದ್ಧಾರ್ಥ್ ಇಷ್ಟು ಭಾವುಕರಾಗಿದ್ದೇಕೆ? ಅಷ್ಟಕ್ಕೂ ಸುಜಾತಾಗೂ ಸಿದ್ಧಾರ್ಥ್ ನಡುವೆ ಏನ್ ಲಿಂಕ್ ಅಂತಿರಾ. ಸಿದ್ಧಾರ್ಥ್ ಅವರನ್ನು ನಟನಾಗಲು ಪ್ರಮುಖ ಕಾರಣರಾದವರಲ್ಲಿ ಸುಜಾತಾ ಕೂಡ ಒಬ್ಬರು. 

ಸಿದ್ಧಾರ್ಥ್ ಆರಂಭದಲ್ಲಿ ನಿರ್ದೇಶಕ ಮಣಿರತ್ನಂ ಅವರ ಜೊತೆ ಸಹಾಯಕರಾಗಿ ಕೆಲಸ ಮಾಡಿದ್ದರು. ಆಗ ಸುಜಾತಾ ಅವರು ಸಿದ್ಧಾರ್ಥ್ ಅವರನ್ನು ನಿರ್ದೇಶಕ ಶಂಕರ್‌ಗೆ ನಟನಾಗಿ ಶಿಫಾರಸು ಮಾಡಿದರು. ತನ್ನ ಪತಿಗೆ ಸಿದ್ಧಾರ್ಥ್ ಅವರನ್ನು ನಟನಾಗಿ  ಶಿಫಾರಸು ಮಾಡುವಂತೆ ಸೂಚಿಸಿದರು. ಆದರೆ ಅವರು ನಿರಾಕರಿಸಿದರು. ಬಳಿಕ ಸುಜಾತಾ ಅವರೇ ಹಠ ಮಾಡಿ ಶಂಕರ್ ಅವರಿಗೆ ತಿಳಿಸಿ ಸಿದ್ಧಾರ್ಥ್ ಅವರನ್ನು ನಾಯಕನಾಗಿ ಆಯ್ಕೆ ಮಾಡುವಂತೆ ಮಾಡಿದರು. ಇಂದು ಸಿದ್ಧಾರ್ಥ್ ದೊಡ್ಡ ನಟನಾಗಿ ನಿಂತಿದ್ದಾರೆ ಎಂದರೆ ಅದಕ್ಕೆ ಕಾರಣ ಸುಜಾತಾ. ಹಾಗಾಗಿ ಅವರನ್ನು ನೋಡಿದ ತಕ್ಷಣ ಭಾವುಕರಾಗಿ ಗಟ್ಟಿಯಾಗಿ ತಬ್ಬಿ ಕಣ್ಣೀರಿಟ್ಟರು.   

ಪ್ರವಾಸ ಎಂಜಾಯ್ ಮಾಡುತ್ತಿರುವ ಅದಿತಿ-ಸಿದ್ಧಾರ್ಥ್ ಜೋಡಿ: ಸದ್ಯ ಎಲ್ಲಿದ್ದಾರೆ ಈ ಲವ್ ಬರ್ಡ್ಸ್

ಸುಜಾತ ಮಾತನಾಡಿ, 'ನಾನು ನನ್ನ ಪತಿಗೆ ಶಂಕರ್ ಅವರಿಗೆ ಶಿಫಾರಸು ಮಾಡುವಂತೆ ಸೂಚಿಸಿದೆ. ಆದರೆ ಅವರು ನಿರಾಕರಿಸಿದರು, ಹುಡುಗ ನಿರ್ದೇಶಕನಾಗಲು ಬಯಸುತ್ತಾನೆ ಎಂದು ಹೇಳಿದರು. ಆದರೆ ಆ ಪಾತ್ರಕ್ಕೆ ಅವರೇ ಪರ್ಫೆಕ್ಟ್ ಆಗುತ್ತಾರೆ ಎಂದು ಹಠ ಹಿಡಿದು ನನ್ನ ಅಭಿಪ್ರಾಯವನ್ನು ಶಂಕರ್ ಅವರಿಗೆ ತಿಳಿಸಿದ್ದೆ. ಶಂಕರ್ ಸಿದ್ಧಾರ್ಥ್‌ಗೆ ಕರೆ ಮಾಡಿದಾಗ, ಅವರು ನಿರ್ದೇಶಕನಾಗುವ ಬಯಕೆಯನ್ನು ವ್ಯಕ್ತಪಡಿಸಿ ಆರಂಭದಲ್ಲಿ ನಿರಾಕರಿಸಿದರು. ನಂತರ, ಶಂಕರ್ ಅವರನ್ನು ಫೋಟೋ ಶೂಟ್‌ಗೆ ಬರುವಂತೆ ಕೇಳಿಕೊಂಡರು ಮತ್ತು ಮಣಿರತ್ನಂ ಕೂಡ ಅವಕಾಶವನ್ನು ಬಳಸಿಕೊಳ್ಳುವಂತೆ ಪ್ರೋತ್ಸಾಹಿಸಿದರು. ಅಂತಿಮವಾಗಿ ಸಿದ್ಧಾರ್ಥ್‌ನನ್ನು ನಾಯಕನಾಗಿ ಆಯ್ಕೆ ಮಾಡಿದರು' ಎಂದು ಹೇಳಿದರು.

ಮುಖ ಮುಚ್ಚಿಕೊಂಡು ಗರ್ಲ್‌ಫ್ರೆಂಡ್ ಅದಿತಿ ರಾವ್ ಜೊತೆ ವಿದೇಶಕ್ಕೆ ಹಾರಿದ ಸಿದ್ಧಾರ್ಥ್: ವಿಡಿಯೋ ವೈರಲ್

ಸುಜಾತಾ ಅವರನ್ನು ಅಭಿಮಾನಿಗಳಿಗೆ ಪರಿಚಯಿಸಿದರು. ಸಿದ್ಧಾರ್ಥ್ ಅವರ ಪ್ರೀತಿಗೆ ಅಭಿಮಾನಿಗಳು ಕೂಡ ಫಿದಾ ಆಗಿದ್ದಾರೆ. ಸಿದ್ಧಾರ್ಥ್ ಮುಂದಿನ ಸಿನಿಮಾಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಸದ್ಯ ಟಕ್ಕರ್ ಮೂಲಕ ಎಂಟ್ರಿ ಕೊಟ್ಟಿರುವ ಸಿದ್ಧಾರ್ಥ್ ಅಭಿಮಾನಿಗಳ ಹೃದಯ ಗೆಲ್ತಾನಾ ಕಾದುನೋಡಬೇಕಿದೆ. ಈ ಸಿನಿಮಾ ಜೊತೆಗೆ ಇತ್ತೀಚೆಗಷ್ಟೆ ಶಂಕರ್ ನಿರ್ದೇಶನದ ಇಂಡಿಯನ್ -2 ಸಿನಿಮಾದಲ್ಲಿ ನಟಿಸಿದ್ದಾರೆ. ಕಮಲ್ ಹಾಸನ್ ಜೊತೆ ನಟಿಸಿದ್ದಾರೆ. ಈ ಬಗ್ಗೆ ಸಿದ್ಧಾರ್ಥ್ ಸಂತಸ ಹಂಚಿಕೊಂಡಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?