ನಾವಿಲ್ಲ ಅಂದ್ರೆ ಮನೋರಂಜನೆ ಎಲ್ಲಿದೆ: ಬಾಯ್ಕಾಟ್ ಬಗ್ಗೆ ಕರೀನಾ ಕಪೂರ್ ರಿಯಾಕ್ಷನ್ ವೈರಲ್

By Vaishnavi ChandrashekarFirst Published Jan 23, 2023, 2:18 PM IST
Highlights

ಬಾಯ್ಕಾಟ್‌ ಬಗ್ಗೆ ಮೌನ ಮುರಿದ ಕಪೂರ್‌ನ ಕುಡಿ. ಎಲ್ಲರು ಇದೇ ಹೇಳಿದ್ದರೆ ಮನೋರಂಜನೆ ಬೆಲೆ ಇರಲ್ಲ ಎಂದ ನಟಿ.....

ಬಾಲಿವುಡ್ ಬೇಬೋ ಕರೀನಾ ಕಪೂರ್ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೆ ಸಿನಿಮಾ ಆಯ್ಕೆ ಮಾಡಿಕೊಳ್ಳುವ ರೀತಿ ತುಂಬಾನೇ ಬದಲಾಗಿದೆ. ಪುತ್ರ ತೈಮೂರ್ ಆಗಮನದ ನಂತರ ಯೂಟ್ಯೂಬ್‌ ಮತ್ತು ಓಟಿಟಿ ಲೋಕಕ್ಕೆ ಕಾಲಿಟ್ಟರು. ಎರಡನೇ ಪುತ್ರ ಜೆಹ್ ಅಲಿ ಹುಟ್ಟಿದ ಮೇಲೆ ಪ್ಯಾಪರಾಜಿಗಳಿಂದಲೂ ದೂರ ಉಳಿದುಕೊಂಡು ಕೇವಲ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದಾರೆ. ಹೀಗಾಗಿ ಸೊಸೈಟಿಯ ಹಾಟ್‌ ಟಾಪಿಕ್‌ಗಳ ಬಗ್ಗೆ ಕರೀನಾ ರಿಯಾಕ್ಟ್‌ ಮಾಡುವುದು ಸ್ವಲ್ಪ ಕಡಿಮೆನೇ. ಬಿ-ಟೌನ್‌ನಲ್ಲಿ ದೊಡ್ಡ ಟ್ರೆಂಡ್ ಕ್ರಿಯೇಟ್ ಮಾಡಿರುವ ಬಾಯ್ಕಾಟ್‌ ಬಾಲಿವುಡ್‌ ವಿಚಾರಕ್ಕೆ ರಿಯಾಕ್ಟ್‌ ಮಾಡಿದ್ದಾರೆ. 

ಭಾನುವಾರ ಕೋಲ್ಕತಾದಲ್ಲಿ ನಡೆದ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್‌ ಯಂಗ್ ಲೀಡರ್‌ ಫೋರಮ್‌ನಲ್ಲಿ ಕರೀನಾ ಕಪೂರ್ ಭಾಗಿಯಾಗಿದ್ದರು. 'ಬಾಯ್ಕಾಟ್ ಬಾಲಿವುಡ್ ಟ್ರೆಂಡ್‌ನ ನಾನು ನಂಬುವುದಿಲ್ಲ. ಒಂದು ವೇಳೆ ಬಾಯ್ಕಾಟ್ ಆದರೂ ನಾವು ಹೇಗೆ ಮನೋರಂಜನೆ ನೀಡುವುದು? ನಮ್ಮ ಜೀವನದಲ್ಲಿ ಸಂತೋಷ ಮತ್ತು ನೆಮ್ಮದಿಯನ್ನು ಕಾಣುವುದು ಹೇಗೆ? ಪ್ರತಿಯೊಬ್ಬರಿಗೂ ವೃತ್ತಿಯಲ್ಲಿ ಸ್ವಾತಂತ್ರ್ಯ ಬೇಕು. ಸಿನಿಮಾಗಳು ನಮಗೆ ಖುಷಿ ಕೊಡುತ್ತಿದೆ ಮುಂದಕ್ಕೂ ಕೊಡುತ್ತದೆ. ಸಿನಿಮಾಗಳು ಮಾಡಿಲ್ಲ ಅಂದ್ರೆ ಹೇಗೆ ಮನೋರಂಜನೆ ಸಿಗುತ್ತದೆ?' ಎಂದು ಕರೀನಾ ಕಪೂರ್ ಮಾತನಾಡಿದ್ದಾರೆ. 

2020ರಲ್ಲಿ ನಟ ಸುಶಾಂತ್ ಸಿಂಗ್ ರಾಜ್‌ಪುತ್‌ ಸಾವಿನ ಪ್ರಕರಣ ನಂತರ ಬಾಲಿವುಡ್‌ನಲ್ಲಿ ಬಾಯ್ಕಾಟ್‌ ಟ್ರೆಂಡ್ ಶುರುವಾಗಿದ್ದು. ಅದರಲ್ಲೂ ಲಾಲ್ ಸಿಂಗ್ ಚಡ್ಡಾ, ಲೈಗರ್, ಬ್ರಹ್ಮಾಸ್ತ್ರ ಮತ್ತು ರಕ್ಷಾ ಬಂಧನ ಸಿನಿಮಾಗಳ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಈ ಸಿನಿಮಾಗಳನ್ನು ನೋಡಬೇಡಿ ಸಂದೇಶ ಏನೂ ಇಲ್ಲ ಎನ್ನುವ ರೀತಿಯಲ್ಲಿ ಬಾಯ್ಕಾಟ್ ಮಾಡಿದ್ದರು. ಹೀಗಾಗಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನಲ್ಲಿ ಫೇಲ್ ಆಗಿದೆ ಎನ್ನಬಹುದು, ಓಟಿಟಿಯಲ್ಲಿ ಒಂದು ಮಟ್ಟಕ್ಕೆ ವೀಕ್ಷಣೆ ಪಡೆದಿದೆ. 

ಬಹಿಷ್ಕಾರಕ್ಕೆ ಗುರಿಯಾದ ಸಿನಿಮಾಗಳು: 

ಬಾಲಿವುಡ್‌ಗೆ ಬಾಯ್ಕಾಟ್‌ ಬಿಸಿ ತಟ್ಟಿ ಬಹಳ ವರ್ಷಗಳೇ ಆಗಿದೆ. ಸುಶಾಂತ್ ಸಾವಿನ ನಂತರ ನಟರನ್ನು ಬಾಯ್ಕಾಟ್ ಮಾಡುತ್ತಿದ್ದರು ಆದರೆ ಮೊದಲು ಸಿನಿಮಾಗಳನ್ನು ಬಾಯ್ಕಾಟ್ ಮಾಡುತ್ತಿದ್ದರು. 1998ರಲ್ಲಿ ಫೈಯರ್ ಸಿನಿಮಾ, ವಾಟರ್ , 2014ರಲ್ಲಿ ಹೈದರ್, ಅಮೀರ್ ಖಾನ್ ಪಿಕೆ, 2015ರಲ್ಲಿ ದಂಗಲ್, 2017ರಲ್ಲಿ ಲಿಪ್‌ಸ್ಟಿಕ್ ಅಂಡರ್ ಮೈ ಬುರ್ಖಾ ಸೇರಿದತೆ ಹಲವಾರು ಸಿನಿಮಾಗಳು ಈ ಲಿಸ್ಟ್‌ ಸೇರಿಕೊಳ್ಳುತ್ತದೆ. 

'ಹಲೋ ಆಂಟಿ... ಬುರ್ಖಾ ಬದ್ಲು ರಾತ್ರೀಲಿ ಕಪ್ಪು ಕನ್ನಡಕ ಯಾಕೆ' ಅಂತಿದ್ದಾರೆ ಟ್ರೋಲಿಗರು!

ಬಾಯ್ಕಾಟ್‌ ಬಗ್ಗೆ ಅಮಿತಾಭ್:

'ನನಗೆ ಕೆಲವು ವಿಷಯಗಳ ಬಗ್ಗೆ ಮಾತನಾಡಬೇಕು ಎನಿಸುತ್ತದೆ. ಆದರೆ ಅದನ್ನು ಹೇಗೆ ಹೇಳುವದು. ಈ ದಿನಗಳಲ್ಲಿ ಎಲ್ಲವೂ ಮ್ಯಾಟರ್ ಆಗುತ್ತೆ' ಎಂದು ಹೇಳಿದ್ದಾರೆ. ಅಮಿತಾಭ್ ಬಚ್ಚನ್ ಅವರ ಈ ಟ್ವೀಟ್ ಪಕ್ಕಾ ಬಾಯ್ಕಟ್ ಬಗ್ಗೆಯೇ ಮಾಡಿರುವುದು ಎನ್ನುವ ಮಾತುಗಳು ಕೇಳಿಬರುತ್ತಿದೆ. ಬಾಯ್ಕಟ್ ಬಗ್ಗೆ ಅಮಿತಾಭ್ ನೇರವಾಗಿ ಏನು ಹೇಳದಿದ್ದರು ಪರೋಕ್ಷವಾಗಿ ಬೇಸರ ಹೊರಹಾಕಿದ್ದಾರೆ. 

ಬೀದಿಯಲ್ಲೇ ಸೈಫೀನಾ ಚುಂಬನ: ಮನೆಯಲ್ಲಿ ಏನ್ಮಾಡ್ತಾರೆ ಇವರೆಂದ ನೆಟ್ಟಿಗರು!

ಆಲಿಯಾ ಭಟ್: 

'ನೀವು ನನ್ನನ್ನು ಇಷ್ಟಪಡದಿದ್ದರೆ, ನನ್ನನ್ನು ನೋಡಲೇ ಬೇಡಿ.ನಾನು ಏನು ಎಂಬುದನ್ನು ಮಾತಿನಲ್ಲಿ ಹೇಳಿ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ನಿಮಗೆ ನಾನು ಇಷ್ಟ ಇಲ್ಲ ಎಂದಾದರೆ ನನ್ನನ್ನು ನೋಡಬೇಡಿ. ನಾನೇನು ಮಾಡಲು ಸಾಧ್ಯವಿಲ್ಲ. ಜನರಿಗೆ ಹೇಳಲು ಏನಾದರೂ ಇರುತ್ತೆ. ನಾನೀಗ ಇರುವ ಜಾಗಕ್ಕೆ ನಾನು ಯೋಗ್ಯನಾಗಿದ್ದೇನೆ ಎಂದು ನನ್ನ ಸಿನಿಮಾಗಳ ಮೂಲಕ ನಾನು ಸಾಬೀತುಪಡಿಸುತ್ತೇನೆ' ಎಂದು ಹೇಳಿದ್ದರು. 

click me!