
ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿ ಅಧ್ಬುತ ಬಂಗಲೆ ಕಟ್ಟಿದ ನಟಿ ಅಂದ್ರೆ ಅದು ಕಲ್ಪನಾ. ಮಿನುಗು ತಾರೆ ಎಂದೇ ಪ್ರಸಿದ್ಧಿ ಪಡೆದಿರುವ ಕಲ್ಪನಾ, ದುರಂತ ಅಂತ್ಯ ಕಂಡ್ರೂ ಅವರ ಸಿನಿಮಾ, ದಾಖಲೆಗಳು ಈಗ್ಲೂ ಜೀವಂತ. ಬೆಂಗಳೂರಿನ ಫ್ರೇಜರ್ ಟೌನ್ (Frazer Town) ಪ್ರದೇಶದ ಡೇವಿಸ್ ರಸ್ತೆಯಲ್ಲಿ ಕಲ್ಪನಾ ಎಲ್ಲರನ್ನು ಬೆರಗುಗೊಳಿಸುವ ಬಂಗಲೆ ಕಟ್ಟಿಸಿದ್ದರು.
ಇದು ಇಂದು, ನಿನ್ನೆಯ ಕಥೆಯಲ್ಲ. 1970ರ ಕಥೆ. ಕಲ್ಪನಾ ಆಗ್ಲೇ ಬಂಗಲೇ ನಿರ್ಮಾಣ ಮಾಡಿದ್ರು. ಡೇವಿಸ್ ರಸ್ತೆಯಲ್ಲಿ ಅವರ ಕನಸಿನ ಬಂಗಲೆ ತಲೆ ಎತ್ತಿ ನಿಂತಿತ್ತು. ಅನುಗ್ರಹ ಎಂದು ಬಂಗಲೆಗೆ ಹೆಸರಿಟ್ಟಿದ್ದರು ನಟಿ. ಈ ಬಂಗಲೆ ಮುಖ್ಯ ಬಾಗಿಲು ದಾಟಿ ಮುಂದೆ ಹೋಗ್ತಿದ್ದಂತೆ ದೊಡ್ಡ ಅಂಗಳ ಎಲ್ಲರ ಗಮನ ಸೆಳೆಯುತ್ತಿತ್ತು. 200 ಅಡಿಯಲ್ಲಿ ಮನೆ ಕಟ್ಟಿಸಿದ್ದ ಕಲ್ಪನಾ, ಆ ಜಾಗಕ್ಕೆ ಟ್ರಾನ್ಸ್ಫಾರ್ಮ್ ತರಿಸಿದ್ರು. ಅದ್ರ ಮೇಲೆ ಕಲ್ಪನಾ ಹೆಸರು ಈಗ್ಲೂ ಇದೆ. ಡೇವಿಸ್ ರಸ್ತೆಗೆ ನೆರಳು ನೀಡ್ತಿರುವ ಮರಗಳನ್ನು ಬೆಳೆಸಿದ್ದೇ ಕಲ್ಪನಾ. ಕಲ್ಪನಾ ಅವರ ಬಂಗಲೆ ಬಗ್ಗೆ ಅನೇಕರು ತಮ್ಮ ಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ. ಎತ್ತರವಾದ ದೀಪ, ವಿಕೋರಿಯಾ ಮಾದರಿ ಮೊಗಸಾಲೆ, ಊಟದ ಮನೆಗೆ ರಕ್ತಚಂದನದ ಮರಗಳನ್ನು ಹಾಕಿಸಿದ್ರು ಕಲ್ಪನಾ.
ಲಾನ್ ನಲ್ಲಿದ್ದ ಡಿಸೈನ್ ಕಲ್ಲುಗಳು, ನೀರಿನ ಚಿಲುಮೆಗಳು ಕಲ್ಪನಾ ಮನೆಯ ಶ್ರೀಮಂತಿಕೆ ಹೆಚ್ಚಿಸಿತ್ತು. ಅಷ್ಟೇ ಅಲ್ಲ ವಿಶೇಷ ಚಪ್ಪಲಿ ಸ್ಟ್ಯಾಂಡ್ ಮಾಡಿಸಿದ್ರು ಕಲ್ಪನಾ. ಮನೆ ಹೊರಗೆ ಈ ಸ್ಟ್ಯಾಂಡ್ ನಲ್ಲಿ ಬೇರೆ ಬೇರೆ ಸೈಜ್ ನ ಚಪ್ಪಲಿಗಳಿದ್ವು. ಹೊರಗಡೆಯಿಂದ ಬಂದವರು ತಮ್ಮ ಚಪ್ಪಲಿ ಬಿಚ್ಚಿಟ್ಟು, ಸ್ಟ್ಯಾಂಡ್ ಮೇಲಿದ್ದ ಚಪ್ಪಲಿ ಹಾಕಿ ಒಳಗೆ ಹೋಗ್ಬೇಕಿತ್ತು. ಆಗಿನ ಕಾಲದಲ್ಲಿ ಅಪರೂಪವಾಗಿದ್ದ ಈ ಚಪ್ಪಲಿ ಸ್ಟೈಲನ್ನು ಕಲ್ಪನಾ ಆಗ್ಲೇ ಪಾಲನೆ ಮಾಡ್ತಿದ್ದರು. 1970ರ ಸಮಯದಲ್ಲೇ ನಾಯಿಗಾಗಿ ವಿಶೇಷ ಮನೆ ಕಟ್ಟಿಸಿದ್ದ ಕಲ್ಪನಾ, ಮನೆಯಲ್ಲಿ ಅಕ್ವೇರಿಯಂ ಸೇರಿದಂತೆ ಅನೇಕ ವಿಶೇಷ ವಸ್ತುಗಳನ್ನು ಇಟ್ಕೊಂಡಿದ್ದರು.
ಕರೆಂಟ್ ವ್ಯವಸ್ಥೆ
ಕಲ್ಪನಾ ಮನೆಯಲ್ಲಿದ್ರಾ ಇಲ್ಲ ಹೊರಗೆ ಹೋಗಿದ್ದಾರಾ ಅನ್ನೋದನ್ನು ನೀವು ಲೈಟ್ ನೋಡಿ ಪತ್ತೆ ಮಾಡ್ಬಹುದಿತ್ತು. ಕಲ್ಪನಾ ಮನೆಯಲ್ಲಿದ್ರೆ ಲೈಟ್ ಆನ್ ಆಗಿರ್ತಿತ್ತು. ಕಲ್ಪನಾ ಮನೆಯಲ್ಲಿಲ್ಲ ಅಂದ್ರೆ ಲೈಟ್ ಆಫ್ ಆಗಿರ್ತಿತ್ತಂತೆ. ಅಚ್ಚುಕಟ್ಟಾಗಿದ್ದ ಈ ಮನೆಯಲ್ಲಿ ಎಲ್ಲವೂ ಇತ್ತು ಎಂದು ಸಂದರ್ಶನವೊಂದರಲ್ಲಿ ಕಲ್ಪನಾ ಬಗ್ಗೆ ಪುಸ್ತಕ ಬರೆದ ಶ್ರೀಧರ್ ಹೇಳಿದ್ದಾರೆ.
ಬಂಗಲೆ ಈಗೇನಾಗಿದೆ?
ಕಲ್ಪನಾ ಸಾವಿನ ನಂತ್ರ ಅವರ ಸಹೋದರ ಈ ಬಂಗಲೆಯನ್ನು ಮಾರಾಟ ಮಾಡಿದ್ರು. ಈಗ ಬೆಂಗಳೂರಿನಲ್ಲಿ ಕಲ್ಪನಾ ಸಂಬಂಧಿಕರ್ಯಾರೂ ಇಲ್ಲ. ಕಲ್ಪನಾ ತಂದೆ, ಕಲ್ಪನಾ ಸಿನಿಮಾ ಸೇರ್ತಿದ್ದಂತೆ ಅವರು ಸನ್ಯಾಸಿಯಾಗಿ ಮಠ ಸೇರಿದ್ರಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.