ಕಮೆಂಟ್ಸ್ ಯಾಕೆ? ನೇರವಾಗಿ ಇನ್‌ಬಾಕ್ಸ್‌ಗೆ ಮೆಸೇಜ್ ಮಾಡಿ ಒಕೆ, ಫ್ಯಾನ್ಸ್‌ಗೆ ಜ್ಯೋತಿ ರೈ ಸಂದೇಶ!

By Chethan Kumar  |  First Published Sep 3, 2024, 10:56 PM IST

ಹಾಟ್ ಅವತಾರ, ವಿಡಿಯೋ ಮೂಲಕ ಬಾರಿ ಸದ್ದು ಮಾಡಿರುವ ನಟಿ ಜ್ಯೋತಿ ರೈ ಇದೀಗ ಹೊಸ ಆಫರ್ ನೀಡಿದ್ದಾರೆ. ಕಮೆಂಟ್ಸ್ ಯಾಕೆ? ನೇರವಾಗಿ ನಟಿ ಇನ್‌ಬಾಕ್ಸ್‌ಗೆ ಮೆಸೇಜ್ ಮಾಡಲು ಜ್ಯೋತಿ ರೈ ಸೂಚಿಸಿದ್ದಾರೆ. 


ಬೆಂಗಳೂರು(ಸೆ.03) ನಟಿ ಜ್ಯೋತಿ ರೈ ಕಳೆದ ಹಲವು ದಿನಗಳಿಂದ ಸದಾ ಸುದ್ದಿಯಲ್ಲಿದ್ದಾರೆ. ಬೋಲ್ಡ್ ಫೋಟೋ ಹಾಗೂ ವಿಡಿಯೋ ಮೂಲಕ ಅಭಿಮಾನಿಗಳ ಹಾಟ್ ಫೇವರಿಟ್ ಆಗಿದ್ದಾರೆ. ಇತ್ತೀಚೆಗೆ ನಟಿ ನಕಲಿ ವಿಡಿಯೋ ಹಾವಳಿಯಿಂದ ಬೇಸತ್ತಿದ್ದ ಜ್ಯೋತಿ ರೈ ಇದೀಗ ಅಭಿಮಾನಿಗಳಿಗೆ ಹೊಸ ಆಫರ್ ನೀಡಿದ್ದಾರೆ. ಇನ್ಮುಂದೆ ಅಭಿಮಾನಿಗಳು ನಟಿ ಜ್ಯೋತಿ ರೈ ಫೋಟೋ, ವಿಡಿಯೋಗಳಿಗೆ ಕಮೆಂಟ್ ಮಾಡುವ ಹರಸಾಹಸ ಮಾಡಬೇಕಿಲ್ಲ, ನೇರವಾಗಿ ನಟಿಯ ಇನ್‌ಬಾಕ್ಸ್‌ಗೆ ಮೆಸೇಜ್ ಮಾಡಿದೆ ಸಾಕು. ಈ ಆಫರ್‌ನ್ನು ಖುದ್ದು ನಟಿ ನೀಡಿದ್ದಾರೆ. 

ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಜ್ಯೋತಿ ರೈ ಮಾಹಿತಿ ಹಂಚಿಕೊಂಡಿದ್ದಾರೆ. ನಿಮಗೆಲ್ಲರಿಗೂ ಒಂದು ಮಾಹಿತಿ ನೀಡುತ್ತಿದ್ದೇನೆ. ನನ್ನ ಸೋಶಿಯಲ್ ಮೀಡಿಯಾದ ಕಮೆಂಟ್ಸ್ ಸೆಕ್ಷನ್ ಆಫ್ ಮಾಡಲು ನಿರ್ಧರಿಸಿದ್ದೇನೆ. ಆದರೆ ನಿಮ್ಮ ಅಭಿಪ್ರಾಯಗಳನ್ನು ನೇರವಾಗಿ ನನಗೆ ಇನ್‌ಬಾಕ್ಸ್ ಮಾಡಿ ಎಂದು ನಟಿ ಜ್ಯೋತಿ ರೈ ಹೇಳಿದ್ದಾರೆ.

Tap to resize

Latest Videos

ಶೆಡ್‌ಗೆ ಕರೆಸುವ ಬದಲು, ಕೆಟ್ಟ ಮೆಸೇಜ್‌ ಮಾಡಿದ 1 ಸಾವಿರ ಅಕೌಂಟ್‌ಅನ್ನು ಬ್ಲಾಕ್‌ ಮಾಡಿದ ಜ್ಯೋತಿ ರೈ!

ಜ್ಯೋತಿ ರೈ ಈ ಆಫರ್ ನೀಡಲು ಪ್ರಮುಖ ಕಾರಣವಿದೆ. ಇತ್ತೀಚೆಗೆ ಜ್ಯೋತಿ ರೈ ಕೆಟ್ಟ ಕಮೆಂಟ್‌ಗಳಿಂದ ಬೇಸತ್ತಿದ್ದಾರೆ. ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದ ಹಲವು ಖಾತೆಗಳನ್ನು ನಟಿ ಜ್ಯೋತಿ ರೈ ಬ್ಲಾಕ್ ಮಾಡಿದ್ದಾರೆ. ಆದರೆ ಪ್ರತಿ ದಿನ ಇದೇ ಕೆಲಸವಾಗುತ್ತಿದೆ. ಈ ಕುರಿತು ಈಗಾಗಲೇ ದೂರು ದಾಖಲಿಸಿದ್ದಾರೆ. ಈಗಾಗಲೇ ಸಾವಿರಕ್ಕೂ ಹೆಚ್ಚು ನಕಲಿ ಖಾತೆ, ಕೆಟ್ಟ ಕಮೆಂಟ್ಸ್ ಮಾಡುತ್ತಿದ್ದ ಖಾತೆಗಳನ್ನು ಜ್ಯೋತಿ ರೈ ಬ್ಲಾಕ್ ಮಾಡಿದ್ದಾರೆ. 

ಕೆಟ್ಟ ಕಾಮೆಂಟ್ಸ್ ಕುರಿತು ಹಲವು ಬಾರಿ ನಟಿ ಜ್ಯೋತಿ ರೈ ನೋವು ತೋಡಿಕೊಂಡಿದ್ದಾರೆ. ಕೆಟ್ಟ ಕಮೆಂಟ್ಸ್‌ಗಳಿಂದ ಮಾನಸಿಕ ಆಘಾತ, ಕುಟುಂಬದ ಮೇಲಾಗುತ್ತಿರುವ ಪರಿಣಾಣಗಳ ಕುರಿತು ಮಾತನಾಡಿದ್ದರು. ಆದರೆ ಇದನ್ನು ನಿಯಂತ್ರಿಸಲು ಮಾತ್ರ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಜ್ಯೋತಿ ರೈ ಇದೀಗ ಸಂಪೂರ್ಣವಾಗಿ ಕಮೆಂಟ್ಸ್ ಆಫ್ ಮಾಡಿದ್ದರೆ. ಇದೀಗ ಜ್ಯೋತಿ ರೈ ಪೋಸ್ಟ್‌ಗಳಿಗೆ ಕಮೆಂಟ್ಸ್ ಮಾಡಲು ಸಾಧ್ಯವಿಲ್ಲ. ಆದರೆ ಅಭಿಪ್ರಾಯ ಹಂಚಿಕೊಳ್ಳಲು ಬಯಸುವರಿಗೆ ಇನ್‌ಬಾಕ್ಸ್‌ಗೆ ಮೆಸೇಜ್ ಮಾಡಲು ಸಾಧ್ಯವಿದೆ.

 

 

ಇನ್‌ಬಾಕ್ಸ್‌ಗೂ ಕೆಟ್ಟ ಕಮೆಂಟ್ಸ್ ಬರುವ ಸಾಧ್ಯತೆಗಳಿವೆ. ಇನ್‌ಬಾಕ್ಸ್‌ಗೆ ಬರವು ಮೆಸೇಜ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮತ್ತಷ್ಟು ಅವಕಾಶವಿದೆ. ಇನ್ನು ಹಲವರು ಇನ್‌ಬಾಕ್ಸ್‌ಗೆ ಕೆಟ್ಟ ಮೆಸೇಜ್ ಮಾಡುವ ಧೈರ್ಯ ತೋರುವುದಿಲ್ಲ. ನಟಿಯ ಹೊಸ ನಿರ್ಧಾರ ನೈಜ ಅಭಿಮಾನಿಗಳಿಗೆ ಖುಷಿ ನೀಡಿದೆ. 

ಮತ್ತೆ ಹೊಸ ಫೋಟೋ ಹಂಚಿಕೊಂಡ ಜ್ಯೋತಿ ರೈ, ಹಾಟ್‌ನೆಸ್‌ಗೆ ನೀವೇ ಬ್ರಾಂಡ್‌ ಅಂಬಾಸಿಡರ್‌ ಎಂದ ನೆಟ್ಟಿಗರು
 

click me!