ಮಲೆಯಾಳಂ ಸಿನಿಮಾ ಕ್ಷೇತ್ರದಲ್ಲಿ ಇದೀಗ ಲೈಂಗಿಕ ಕಿರುಕುಳಗಳ ದೂರಿನ ಸುರಿಮಳೆಯಾಗುತ್ತಿದೆ. ಹೇಮಾ ವರದಿ ಬಳಿಕ ಅಲ್ಲೋಲ ಕಲ್ಲೋಲವಾಗಿದೆ. ಇದೀಗ ಖ್ಯಾತ ನಟ ನವಿನ್ ಪೌಲಿ ಹಾಗೂ ಇತರ ಐವರ ವಿರುದ್ದ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಮಹಿಳೆ ಜಾಮೀನು ರಹಿತ ಪ್ರಕರಣ ದಾಖಲಿಸಿದ್ದಾರೆ.
ತಿರುವನಂತಪುರಂ(ಸೆ.03) ಮಲೆಯಾಳಂ ಸಿನಿಮಾ ಕ್ಷೇತ್ರದಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಜಸ್ಟೀಸ್ ಹೇಮಾ ಸಮಿತಿ ಸಲ್ಲಿಸಿದ ಸಿನಿಮಾದಲ್ಲಿ ಮಹಿಳೆಯರ ಸುರಕ್ಷತೆ ಕುರಿತ ವರದಿಯಲ್ಲಿ ಹಲವು ಬೆಚ್ಚಿ ಬೀಳಿಸುವ ಘಟನೆಗಳನ್ನು ಉಲ್ಲೇಖಿಸಿದ್ದಾರೆ. ಈ ವರದಿ ಸಲ್ಲಿಕೆಯಾಗುತ್ತಿದ್ದಂತೆ ಮಲೆಯಾಳಂ ಸಿನಿಮಾದಲ್ಲಿನ ಲೈಂಗಿಕ ಹಗರಣಗಳ ಪಟ್ಟಿ ಬಯಲಾಗಿದೆ. ಸಿನಿಮಾ ನಟರ ಸಂಘದ ಅಧ್ಯಕ್ಷ ಮೋಹನ್‌ಲಾಲ್ ಸೇರಿ ಎಲ್ಲಾ 16 ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ. ಪ್ರತಿ ದಿನ ಒಂದಲ್ಲಾ ಒಬ್ಬ ಸಿನಿ ಕ್ಷೇತ್ರದವರ ವಿರುದ್ದ ಲೈಂಗಿಕ ಪ್ರಕರಣ ದಾಖಲಾಗುತ್ತಿದೆ. ಇದೀಗ ಮಲೆಯಾಳಂ ಖ್ಯಾತ ನಟ ನಿವಿನ್ ಪೌಲಿ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ. ನಿವಿನ್ ಪೌಲಿ ಹಾಗೂ ಇತರ ಐವರ ವಿರುದ್ದ ಜಾಮೀನು ರಹಿತ ಪ್ರಕರಣ ದಾಖಳಾಗಿದೆ.
ನೆರಿಯಮಂಗಲಂ ನಿವಾಸಿಯಾಗಿರುವ ಮಹಿಳೆ ನೀಡಿರುವ ದೂರಿನಲ್ಲಿ, 2023ರಲ್ಲಿ ನಿವಿನ್ ಪೌಲಿ ಹಾಗೂ ಇತರ ಐವರ ವಿರುದ್ಧ ದೂರು ದಾಖಲಿಸಿದ್ದಾರೆ. ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ದುಬೈನಲ್ಲಿ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ನಿರ್ಮಾಪಕ ಎಕೆ ಸುನಿಲ್, ಶ್ರೇಯ್, ಬಿನು, ಬಶೀರ್ ಕುಟ್ಟನ್ ಹಾಗೂ ನಿವಿನ್ ಪೌಲಿ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಎರ್ನಾಕುಲಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
undefined
ಲೈಂಗಿಕ ಕಿರುಕಳ ವರದಿ ಕೋಲಾಹಲ, ಕೇರಳ ಕಲಾವಿಧರ ಸಂಘ ಅಧ್ಯಕ್ಷ ಸ್ಥಾನಕ್ಕೆ ಮೋಹನ್‌ಲಾಲ್ ರಾಜೀನಾಮೆ!
ಕೆಲಸ ಕೊಡಿಸುವ ವಿಚಾರದಲ್ಲಿ ಮಹಿಳೆಗೆ ಶ್ರೇಯ್ ಪರಿಚಯವಾಗಿದೆ. ಈತ ಯೂರೋಪ್‌ನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಮಹಿಳೆಯಿಂದ ಹಣ ಪಡೆದಿದ್ದ ಎಂದು ದೂರಿನಲ್ಲಿ ಹೇಳಲಾಗಿದೆ. ಆಧರೆ ಈ ಕೆಲಸ ಪ್ರಾಯೋಗಿಕವಾಗಿ ಸಾಧ್ಯವಿಲ್ಲದ ಕಾರಣ ಮಹಿಳೆ ಹಣ ಮರಳಿಸುವಂತೆ ಸೂಚಿಸಿದ್ದಾಳೆ. ಆದರೆ ಹಣ ವಾಪಸ್ ಕೊಡದ ಶ್ರೇಯ್, ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ದುಬೈಗೆ ಕರೆಸಿಕೊಂಡಿದ್ದಾರೆ. ಬಳಿಕ ಮಾದಕ ವಸ್ತುಗಳನ್ನು ನೀಡಿ ನಿವಿನ್ ಪೌಲಿ ಸೇರಿದಂತೆ 6 ಮಂದಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ದೂರಿನಲ್ಲಿ ಮಹಿಳೆ ಹೇಳಿದ್ದಾರೆ.
ದೂರು ದಾಖಲಾದ ಬೆನ್ನಲ್ಲೇ ನವಿನ್ ಪೌಲಿ ಸ್ಪಷ್ಟನೆ ನೀಡಿದ್ದಾರೆ. ನನ್ನ ವಿರುದ್ದ ನೀಡಿರುವ ದೂರು ಸುಳ್ಳು. ನಾನು ತಪ್ಪು ಮಾಡಿಲ್ಲ. ಹೀಗಾಗಿ ಸತ್ಯ ಹಾಗೂ ನ್ಯಾಯಕ್ಕಾಗಿ ನಾನು ಕಾನೂನು ಹೋರಾಟ ಮಾಡುತ್ತೇನೆ. ದೂರಿನಲ್ಲಿ ಉಲ್ಲೇಖಿಸಿರುವ ಘಟನೆ ನಡೆದಿಲ್ಲ. ಇದು ಸತ್ಯಕ್ಕೆ ದೂರವಾಗಿದೆ. ಹೀಗಾಗಿ ಮುಂದಿನ ಎಲ್ಲಾ ನಡೆ ಕಾನೂನಾತ್ಮಕವಾಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕತ್ತಲೆ ರೂಮಿಗೆ ಕರೆದು ಬಳೆಗಳ ಜೊತೆ ಆಟ ಆಡಿದ್ದ ನಿರ್ದೇಶಕ: ಮಲಯಾಳಂ ಚಿತ್ರರಂಗದ 'ಕಾಮಕಾಂಡ' ಮತ್ತಷ್ಟು ಬಯಲು!