ನಾಯಕಿ ಪಾತ್ರ ಆಫರ್ ಮಾಡಲಾಗಿತ್ತು. ಆದರೆ ಹೀರೋ ಜೊತೆ ಸಲುಗೆಯಿಂದ ಇರಬೇಕು, ಹೊಟೆಲ್‌ಗೆ ಒಬ್ಬಳೇ ಬರಬೇಕು ಎಂದು ಸೂಚಿಸಲಾಗಿತ್ತು. ಆ ಕರಾಳ ಘಟನೆಯಿಂದ ಚಿತ್ರರಂಗವನ್ನೇ ತೊರೆಯಲು ಬಯಸಿದ್ದೆ ಎಂದು ಸೂರ್ಯವಂಶದಲ್ಲಿ ನಾಯಕಿಯಾಗಿ ನಟಿಸಿದ ನಟಿ ಹೇಳಿದ್ದಾರೆ.
ಮುಂಬೈ(ಜೂ.21) ಕನ್ನಡದ ಸೂಪರ್ ಹಿಟ್ ಚಿತ್ರ ಸೂರ್ಯವಂಶದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ನಟಿ ಇಶಾ ಕೊಪ್ಪಿಕ್ಕರ್ ಇದೀಗ ತಮ್ಮ ಜೀವನದ ಕರಾಳ ಘಟನೆ ಬಿಚ್ಚಿಟ್ಟಿದ್ದಾರೆ. ನೀನು ಈ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಿ. ನಾಯಕನ ಜೊತೆ ಆತ್ಮೀಯವಾಗಿರಬೇಕು. ಇಂದು ರಾತ್ರಿ ಹೊಟೆಲ್‌ಗೆ ಒಬ್ಬಳೇ ಬಾ, ಡ್ರೈವರ್ ಸೇರಿದಂತೆ ಯಾರನ್ನೂ ಕರೆದುಕೊಂಡು ಬರಬೇಡ. ಈ ಚಿತ್ರದ ಜೊತೆಗೆ ಮತ್ತಷ್ಟು ಚಿತ್ರದ ಆಫರ್ ಸಿಗಲಿದೆ ಎಂದು ಸ್ಟಾರ್ ಹೀರೋ ಸೂಚಿಸಿದ್ದ ಎಂದು ಇಶಾ ಕೊಪ್ಪಿಕರ್ ಹೇಳಿದ್ದಾರೆ.
ಚಿತ್ರರಂಗದ ಕರಿಯರ್ ಆರಂಭದಲ್ಲೇ ಸ್ಟಾರ್ ಹೀರೋ ನಡೆದುಕೊಂಡ ರೀತಿ, ಕಹಿ ಘಟನೆಯಿಂದ ಚಿತ್ರರಂಗವನ್ನೇ ತೊರೆಯಲು ನಿರ್ಧರಿಸಿದ್ದೆ ಎಂದು ಇಶಾ ಕೊಪ್ಪಿಕರ್ ಹೇಳಿದ್ದಾರೆ. ಸಿನಿ ಕರಿಯರ್ ಆರಂಭಿಕ ದಿನಗಳಲ್ಲಿ ನಾನು ಪಡಬಾರದ ಕಷ್ಟ ಅನುಭವಿಸಿದ್ದೇನೆ.ನನಗೆ ಆಗ 18 ವರ್ಷ. ಖ್ಯಾತ ಹೀರೋ ಸೀಕ್ರಟರಿ ಕರೆ ಮಾಡಿದ್ದರು. ಸಿನಿಮಾದಲ್ಲಿ ಅವಕಾಶ ಬಯಸುತ್ತಿದ್ದ ನನಗೆ ಈ ಕರೆಯಿಂದ ಖುಷಿಯಾಗಿತ್ತು. ಆದರೆ ಸೆಕ್ರಟರಿ ಬೇಡಿಕೆ ಮಾತ್ರ ನನಗೆ ಆಘಾತ ತಂದಿತ್ತು ಎಂದು ಇಶಾ ಹೇಳಿದ್ದಾರೆ.
ಇಷಾ ಕೊಪ್ಪೀಕರ್-ಟಿಮ್ಮಿ ನಾರಂಗ ಮಧ್ಯೆ ಪ್ರೀತಿ ಜಿಂಟಾ ಹೆಸರೇಕೆ ಬಂತು; ರಿಯಲ್ ಕಥೆ ಶುರುವಾಗಿದ್ದೇ ಅಲ್ಲಿ..!
ಹೀರೋ ನಿಮ್ಮನ್ನು ಒಬ್ಬಂಟಿಯಾಗಿ ಸಿಗುವ ಬೇಡಿಕೆ ಇಟ್ಟಿದ್ದಾರೆ ಎಂದು ಸೆಕ್ರಟರಿ ಹೇಳಿದ್ದರು. ಹೀರೋ ಜೊತೆ ನೀವು ಸ್ವಲ್ಪ ಫ್ರೆಂಡ್ಲಿ ಆಗಿರಬೇಕು ಎಂದು ಸೂಚಿಸಿದ್ದಾರೆ. ನಾನು ಎಲ್ಲರ ಜೊತೆಗೂ ಫ್ರೆಂಡ್ಲಿ ಆಗಿದ್ದೇನೆ. ಆದರೆ ನೀವು ಹೇಳುವ ಫ್ರೆಂಡ್ಲಿ ಅರ್ಥವಾಗಿಲ್ಲ ಎಂದು ಹೇಳಿ ಫೋನ್ ಇಟ್ಟಿದ್ದೆ. ನಾನು ಎಲ್ಲ ಜೊತೆ ಖುಷಿಯಾಗಿ ಆತ್ಮೀಯವಾಗಿ ನಡೆದುಕೊಳ್ಳುತ್ತೇನೆ. ನಿರ್ದೇಶಕಿ ಏಕ್ತಾ ಕಪೂರ್ ನನಗೆ ಹಲವು ಬಾರಿ ಸೂಚನೆ ಕೊಟ್ಟಿದ್ದಾರೆ. ಸ್ವಲ್ಪ ಆ್ಯಟಿಟ್ಯೂಡ್ ಇರಬೇಕು. ಇಷ್ಟು ಫ್ರೆಂಡ್ಲಿ ಇದ್ದರೆ ಕಷ್ಟ ಪ್ರತಿ ಬಾರಿ ಹೇಳಿದ್ದಾರೆ ಎಂದು ಇಶಾ ಹೇಳಿದ್ದಾರೆ.
ಬಾಲಿವುಡ್, ತೆಲುಗು, ಕನ್ನಡ ಸೇರಿದಂತೆ ಚಿತ್ರರಂಗದಲ್ಲಿ ಅವಕಾಶಗಳನ್ನು ಪಡೆಯುತ್ತಿದ್ದ ಸಂದರ್ಭದಲ್ಲಿ ಮತ್ತೊಬ್ಬ ಹಿಂದಿ ಸ್ಟಾರ್ ನಟ ಕರೆ ಮಾಡಿದ್ರು. ಆತ ಎ ಸ್ಟಾರ್ ನಟರ ಲಿಸ್ಟ್‌ನಲ್ಲಿದ್ದ. ಕರೆ ಮಾಡಿದ ನಟ, ಇಂದು ಸಂಜೆ ಹೊಟೆಲ್‌ಗೆ ಬರುವಂತೆ ಸೂಚಿಸಿದ್ದ. ಒಬ್ಬಳೇ ಬರಬೇಕು, ಕಾರು ಚಾಲಕನ ಕರೆದುಕೊಂಡು ಬರದಂತೆ ಸೂಚಿಸಿದ್ದರು. ಒಂದು ಸಿನಿಮಾ ಆಫರ್ ನೀಡಿ ಇದರ ಹಿಂದೆ ಈ ರೀತಿ ಬೇಡಿಕೆ ಇಡುತ್ತಿದ್ದರು ಎಂದು ಇಶಾ ಹೇಳಿದ್ದಾರೆ.
ಈ ಘಟನೆಗಳಿಂದ ನಾನು ಚಿತ್ರರಂಗ ತೊರೆಯುವ ನಿರ್ಧಾರ ಮಾಡಿದ್ದೆ. ಆದರೆ ಧೈರ್ಯ ಮಾಡಿ ಹೋರಾಟ ಮಾಡಲು ನಿರ್ಧರಿಸಿದೆ. ನನ್ನಂತೆ ಕೆಲವೇ ಕೆಲವು ಮಂದಿ ಚಿತ್ರರಂಗದಲ್ಲಿ ಹೋರಾಟ ಮಾಡುತ್ತಿದ್ದಾರೆ. ಹಲವು ನಟಿಯರು ಇಂತಹ ಘಟನೆಗಳಿಂದ ಚಿತ್ರರಂಗ ತೊರೆದಿದ್ದಾರೆ. ಮತ್ತೆ ಕೆಲವರು ಬೇರೆ ದಾರಿಯಿಲ್ಲದೆ ಒಪ್ಪಿಕೊಂಡಿದ್ದಾರೆ ಎಂದು ಇಶಾ ಕೊಪ್ಪಿಕರ್ ಹೇಳಿದ್ದಾರೆ.
ಡಿವೋರ್ಸ್ ಸೀಕ್ರೆಟ್ ಬಿಚ್ಚಿಟ್ಟ ನಟಿ ಇಷಾ ಕೊಪ್ಪೀಕರ್; ಇಂದರ್ ಕುಮಾರ್ ನೆನಪು ಮರೆಯಾಗಿಲ್ಲವೇ?