ಬಹುಭಾಷಾ ನಟಿ ಫ್ಲೋರಾ ಸೈನಿ ತಮ್ಮ ಬದುಕಿನಲ್ಲಿ ಗೆಳೆಯ ನಿರ್ಮಾಪಕನಿಂದ ನಡೆದ ಕರಾಳ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ಏನದು ಕಥೆ?
ಶಿವರಾಜ್ ಕುಮಾರ್ ನಟನೆಯ 'ಕೋದಂಡರಾಮ' (Kodandarama), ಸುದೀಪ್ ನಟನೆಯ 'ನಮ್ಮಣ್ಣ' (Nammanna) ಸೇರಿದಂತೆ 'ಸ್ತ್ರೀ', 'ಪ್ರೇಮ ಕೋಸಂ', 'ನರಸಿಂಹ ನಾಯ್ಡು'ನಂಥ ಹಲವು ಸೂಪರ್ಹಿಟ್ ತಮಿಳು, ತೆಲಗು ಚಿತ್ರಗಳಲ್ಲಿ ನಟಿಸಿರುವ ನಟಿ ಫ್ಲೋರಾ ಸೈನಿ (Flora Saini) ಅಲಿಯಾಸ್ ಆಶಾ ಸೈನಿ. ಸ್ಯಾಂಡಲ್ವುಡ್, ಕಾಲಿವುಡ್, ಟಾಲಿವುಡ್ನ ಸೂಪರ್ಸ್ಟಾರ್ಗಳ ಜೊತೆ ಅಭಿನಯಿಸಿ ಖ್ಯಾತಿ ಗಳಿಸಿರುವ ಫ್ಲೋರಾ ಸೈನಿಯೀಗ ಶಾಕಿಂಗ್ ಹೇಳಿಕೆಯೊಂದನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಬಾಯ್ಫ್ರೆಂಡ್ ಆಗಿದ್ದ ಖ್ಯಾತ ನಿರ್ಮಾಪಕ ಗೌರಂಗ್ ದೋಷಿಯಿಂದ ಅನುಭವಿಸಿರುವ ಭಯಾನಕ ಕರಾಳ ಘಟನೆಗಳನ್ನು ಅವರು ಶೇರ್ ಮಾಡಿಕೊಂಡಿದ್ದಾರೆ.
ಚಂಢೀಗಢ ಮೂಲದ ನಟಿ ಫ್ಲೋರಾ ಸೈನಿ 1999ರಲ್ಲಿ 'ಪ್ರೇಮಕೋಸಂ' ತೆಲುಗು ಚಿತ್ರದ ಮೂಲಕ ಬಣ್ಣದಲೋಕಕ್ಕೆ ಎಂಟ್ರಿ ಕೊಟ್ಟವರು. ಹಲವು ತೆಲುಗು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಆ ಬಳಿಕ ಹಿಂದಿ, ಕನ್ನಡ, ಪಂಜಾಬಿ ಚಿತ್ರಗಳಲ್ಲಿ ಅವರು ನಟಿಸಿದರು. ಗೌರಂಗ್ ದೋಶಿ (Gaurang Doshi) ಅವರಿಂದ ಬದುಕು ನರಕವಾಗಿತ್ತು ಎಂದು ಈ ಮೊದಲು ಅವರ ಆರೋಪ ಮಾಡಿದ್ದರು. ಈಗ ಹೆಸರನ್ನು ಉಲ್ಲೇಖ ಮಾಡದೆ ಅವರು ತಾವು ಅನುಭವಿಸಿರುವ ಕಹಿ ಘಟನೆ ಕುರಿತು ಹೇಳಿಕೊಂಡಿದ್ದಾರೆ. 'ನಾನು ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಯಶಸ್ಸನ್ನು ಕಂಡವಳು. 20 ರ ಹರೆಯದಲ್ಲಿಯೇ ಸಿನಿ ರಂಗಕ್ಕೆ ಪ್ರವೇಶಿಸಿದೆ. 20 ಕ್ಕೂ ಹೆಚ್ಚು ಟಾಪ್ ಡಿಸೈನರ್‌ಗಳಿಗಾಗಿ ಮಾಡೆಲಿಂಗ್ (Modelling) ಮಾಡಿದ್ದೆ. ಅಲ್ಲಿಯವರೆಗೆ ಎಲ್ಲವೂ ಚೆನ್ನಾಗಿತ್ತು. ಆ ನಂತರ ನಿರ್ಮಾಪಕನೊಬ್ಬನ ಬಲೆಗೆ ಬಿದ್ದೆ. ಅಲ್ಲಿಂದ ನನ್ನ ಬದುಕೇ ನರಕವಾಗೋಯ್ತು' ಎಂದು ಫ್ಲೋರಾ ಬರೆದುಕೊಂಡಿದ್ದಾರೆ.
ಕಾಸ್ಟ್ ಕೌಚಿಂಗ್ ಭಯಾನಕ ಅನುಭವ ಬಿಚ್ಚಿಟ್ಟ ನಟ Ankit Gupta!
ಆತನ ಪ್ರೀತಿಗೆ (Love) ಬಿದ್ದ ಕೆಲವೇ ದಿನಗಳಲ್ಲಿ ಆತ ಕ್ರೂರಿಯೆಂಬುದರ ಅರಿವಾಯಿತು. ಆದರೆ ಕಾಲ ಮಿಂಚಿ ಹೋಗಿತ್ತು. ಆತ ನನ್ನ ಖಾಸಗಿ ಅಂಗಗಳಿಗೆ ಒದೆಯುತ್ತಿದ್ದ, ಮುಖವನ್ನು ಬಾಕ್ಸಿಂಗ್ ಬ್ಯಾಗ್‌ನಂತೆ ಬಳಸುತ್ತಿದ್ದ. ಯಾರಿಗೂ ಫೋನ್ ಮಾಡದಂತೆ ತಡೆಯುತ್ತಿದ್ದ. ಸಿನಿಮಾಗಳಲ್ಲಿ ನಟಿಸದಂತೆ ತಾಕೀತು ಮಾಡುತ್ತಿದ್ದ. ಇದನ್ನು ಯಾರೊಂದಿಗೂ ಹೇಳಿಕೊಳ್ಳಲು ಆಗಲೇ ಇಲ್ಲ. ಅವನಿಗಾಗಿ ಎಲ್ಲರನ್ನು ಬಿಟ್ಟು ಹೋದರೆ ಹೀಗೆಲ್ಲಾ ದೌರ್ಜನ್ಯ ಮಾಡಿದ. ಯಾಕೆ ಆತ ಹೀಗೆ ಹೊಡೆಯುತ್ತಿದ್ದಾನೆ ಎಂದು ಗೊತ್ತಾಗಲಿಲ್ಲ. ಆದರೂ ಆತ ಒಳ್ಳೆಯವನು ಎಂದು ನಂಬಿದ್ದೆ. ಕೊನೆಗೂ ಅವನ ಸಮಸ್ಯೆ ಅರ್ಥವಾಗಲಿಲ್ಲ. ಎಲ್ಲಾದರೂ ಹೋಗಿಬಿಡುತ್ತೇನೆ ಎಂದೆ. ಹಾಗೆ ಮಾಡಿದರೆ ನನ್ನನ್ನು, ನನ್ನ ಪೋಷಕರನ್ನು ಕೊಂದುಬಿಡುತ್ತೇನೆ ಎಂದು ಬೆದರಿಸಿದ್ದ. ಹದಿನಾಲ್ಕು ತಿಂಗಳು ಕತ್ತಲೆಯಲ್ಲಿಯೇ ಬದುಕಿದೆ. ಯಾರನ್ನೂ ಭೇಟಿಯಾಗಲು, ಮಾತನಾಡಲು ಆಗಲೇ ಇಲ್ಲ. ಒಂದು ದಿನ ಚಿತ್ರಹಿಂಸೆ (Torture) ಹೆಚ್ಚಾಯಿತು. ಆತ ನನ್ನ ಹೊಟ್ಟೆಗೆ ಒದ್ದ. ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಮನೆ ಬಿಟ್ಟು ಓಡಿಹೋದೆ' ಎಂದು ಫ್ಲೋರಾ ಬರೆದುಕೊಂಡಿದ್ದಾರೆ. ಜೊತೆಗೆ ತಮ್ಮ ಹೊಡೆತ ತಿಂದ ಫೋಟೋಗಳನ್ನೂ ಶೇರ್ ಮಾಡಿಕೊಂಡಿದ್ದಾರೆ.
ನಂತರ ಓಡಿ ಬಂದ ಫ್ಲೋರಾ ಪಾಲಕರ (parents) ಜತೆ ವಾಸಮಾಡುತ್ತಿದ್ದಾರೆ. ಹಲವು ತಿಂಗಳು ಚೇತರಿಸಿಕೊಂಡ ಬಳಿಕ ನಟನೆ ಆರಂಭಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಬಾಲಿವುಡ್‌ನ 'ಬೇಡಿಯಾ' ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ. 'ನಾನು ಈಗ ಖುಷಿಯಾಗಿದ್ದೇನೆ. ನನಗೆ ಪ್ರೀತಿಯೂ (love) ಸಿಕ್ಕಿದೆ' ಎಂದು ಹೇಳಿಕೊಂಡಿದ್ದಾರೆ. ಈ ಕುರಿತು ಹೇಳಿಕೊಂಡಿರುವ ಅವರು, 'ಇನ್ನೆಂದೂ ಆತನ ಬಳಿಗೆ ಹೋಗಲಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಹೋದರೂ ಅವರು ನನ್ನ ಮಾತು ನಂಬಲಿಲ್ಲ. ಕೊನೆಗೆ ಲಿಖಿತ ರೂಪದಲ್ಲಿ ದೂರು ದಾಖಲಿಸಿದೆ. ಎಷ್ಟೇ ಕತ್ತಲು ನಿಮ್ಮನ್ನು ಆವರಿಸಿದರೂ, ಕೊನೆಯಲ್ಲಿ ಬೆಳಕು ಸಿಕ್ಕೇ ಸಿಗುತ್ತದೆ' ಎಂದಿದ್ದಾರೆ ನಟಿ ಫ್ಲೋರಾ ಸೈನಿ.
ಶಾರುಖ್ ಖಾನ್ ಇಲ್ಲವೇ ಸೆಕ್ಸ್ ಬೇಕು: ನಟಿ ನೇಹಾ ಧೂಪಿಯಾ ಹೇಳಿದ್ದೇನು?