
ನಿರ್ದೇಶಕರು ಹೇಳಿದರು ಎಂದು ರಿಯಲ್ ಸ್ಲಮ್‌ನಲ್ಲಿ ನಟಿ ದಿವ್ಯಾ ಖೋಸ್ಲಾ ಅವರು ಒಂದು ತಿಂಗಳ ಕಾಲ ಇದ್ದರಂತೆ. ಹೌದು, ನೀಲ್ ನಿತಿನ್ ಮುಕೇಶ್ ಅವರು ‘ಏಕ್ ಚತುರ್ ನಾರ್ʼ ಸಿನಿಮಾ ರಿಲೀಸ್‌ಗೆ ತಯಾರಿ ಕೂಡ ನಡೆಯುತ್ತಿದೆ. ಈ ಸಿನಿಮಾದಲ್ಲಿ ದಿವ್ಯಾ ಅವರು ಲಕ್ನೋದ ಒಂದು ಕೊಳಗೇರಿಯಲ್ಲಿ ವಾಸಿಸುವ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಹೀರೋ ನೀಲ್ ಅವರು ಓರ್ವ ಬ್ಯುಸಿನೆಸ್ ಮ್ಯಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಸಿನಿಮಾ ಶೂಟಿಂಗ್ ಸಲುವಾಗಿ ದಿವ್ಯಾ ಅವರನ್ನು ರಿಯಲ್ ಸ್ಲಮ್‌ನಲ್ಲಿ ಇರುವಂತೆ ಮಾಡಲಾಯಿತು. ಅಲ್ಲಿ ಪಕ್ಕದಲ್ಲೇ ಮೋರಿ ಕೂಡ ಇತ್ತಂತೆ. ನಟಿ ಅರ್ಚನಾ ಪುರಾನ್ ಸಿಂಗ್, ನಟ ಪರಮೀತ್ ಸೇಠಿ, ಆಯುಷ್ಮಾನ್ ಸೇಠಿ ಜೊತೆಯಲ್ಲಿ ದಿವ್ಯಾ ಅವರು ಟಿ ಸೀರೀಸ್ ಕಚೇರಿಗೆ ಭೇಟಿ ನೀಡಿದ್ದಾರೆ. ಅಲ್ಲಿ ‘ಡಬ್ಬೆ ಮೇ ಕ್ಯಾ ಹೈ?’ ಸಿನಿಮಾದ ಶೂಟಿಂಗ್ ಮಾಡಿದ್ದಾರೆ. ಆಗ ಅವರು ಚಿತ್ರರಂಗದ ಗಣ್ಯರನ್ನು ಭೇಟಿಯಾಗಿ ಒಂದಿಷ್ಟು ಸಮಯ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ ಮನೆಯಲ್ಲಿ ತಯಾರಿಸಿದ ಊಟವನ್ನು ಶೇರ್ ಮಾಡಿಕೊಳ್ತಾರೆ. ಆಗ ದಿವ್ಯಾ ಖೋಸ್ಲಾ ಅವರು ಸ್ಲಮ್‌ನಲ್ಲಿ ವಾಸ ಮಾಡಿದ್ದು, ಲೋಕಲ್ ಭಾಷೆ ಕಲಿಯಲು ಕಷ್ಟಪಟ್ಟಿದ್ದರ ಬಗ್ಗೆ ಮಾತನಾಡಿದ್ದಾರೆ
“ನನಗೆ ಲೋಕಲ್ ಉತ್ತರ ಪ್ರದೇಶದ ಭಾಷೆ ಗೊತ್ತಿರಲಿಲ್ಲ, ಆದರೆ ನಾನು ಮನೆಯಲ್ಲಿ ಅಭ್ಯಾಸ ಮಾಡಿ ಕಲಿತೆ. 1 ತಿಂಗಳು ಸ್ಲಮ್‌ನಲ್ಲಿ ವಾಸ ಮಾಡಿ ಅಂತ ಡೈರೆಕ್ಟರ್ ಹೇಳಿದರು. ಲಕ್ನೋದ ಬಾದ್ಶಾಹ್ ನಗರದಲ್ಲಿ ಶೂಟಿಂಗ್ ಮಾಡಿದೆವು. ಅದು ಒಂದು ನಿಜವಾದ ಸ್ಲಮ್ ಆಗಿತ್ತು. ನಾನಿದ್ದ ಗುಡಿಸಲಿನ ಪಕ್ಕ ಮೋರಿ ಕೂಡ ಇತ್ತು, ಆ ಕೆಟ್ಟ ವಾಸನೆಗೆ ನಾನು ಹೇಗೋ ಹೊಂದಿಕೊಂಡೆ” ಎಂದು ಹೇಳಿದ್ದಾರೆ.
ಈ ಸಿನಿಮಾ ನಿರ್ದೇಶಕ ಉಮೇಶ್ ಶುಕ್ಲಾ, ಅವರು ಈ ಹಿಂದೆ ‘102 ನಾಟ್ ಔಟ್’ ಸಿನಿಮಾ ಮಾಡಿದ್ದರು. ದಿವ್ಯಾ ಅವರ ಕತೆ ಕೇಳಿದ ಪರಮೀತ್ “ಕಲಾವಿದರು ಸಿನಿಮಾ ಮಾಡಲು ಎಷ್ಟು ಕಷ್ಟಪಡುತ್ತಾನೆ ಎಂಬುದನ್ನು ಗಮನಿಸಿ” ಎಂದು ಹೇಳಿದ್ದಾರೆ.
ನಿರ್ದೇಶಕ ಉಮೇಶ್ ಶುಕ್ಲಾ, “ಕೆಲವೊಮ್ಮೆ, ನಾವು ಕಲಾವಿದರಿಗೆ ಮುಂದೆ ಯಾವ ಥರ ಸೀನ್ ಮಾಡ್ತೀನಿ ಅಂತ ಹೇಳೋದಿಲ್ಲ. ದಿವ್ಯಾಗೂ ಕೂಡ ಪಕ್ಕದಲ್ಲಿ ಮೋರಿ ಇರೋ ಬಗ್ಗೆ ಹೇಳಿರಲಿಲ್ಲ. ಅಲ್ಲಿಗೆ ಕರೆದುಕೊಂಡು ಹೋಗಿ ಶೂಟ್ ಮಾಡೋಣ ಅಂತ ಅಂದೆವು” ಎಂದು ಹೇಳಿದ್ದಾರೆ.
ದಿವ್ಯಾ ಹೇಳಿದ್ದೇನು?
ದಿವ್ಯಾ ಅವರು “ಓಹ್ ಮೈ ಗಾಡ್! ಅದು ಒಪನ್ ಆಗಿರೋ ಮೋರಿ ಆಗಿತ್ತು. ನಾನು ಮೋರಿಯ ಅಂಚಿನಲ್ಲಿ ನಿಂತಿದ್ದೆ. ನಾನು ಅಲ್ಲಿಂದ ಬೀಳುವಷ್ಟು ಹತ್ತಿರದಲ್ಲಿದ್ದೆ. ನನಗಂತೂ ತುಂಬ ಭಯವಾಗಿತ್ತು. ಆಮೇಲೆ ಕಸ ಗುಡಿಸೋದು, ಪಾತ್ರೆ ತೊಳೆಯೋದು, ನೆಲ ಒರೆಸೋ ಕೆಲಸವನ್ನು ಮಾಡಿಸಿದ್ದಾರೆ” ಎಂದಿದ್ದಾರೆ. ಆಗ ನೀಲ್ ಅವರು, “ಆ ಮೋರಿಯಲ್ಲಿ ತಾಜಾ ಕಸ ಇತ್ತು, ತುಂಬಾ ತಾಜಾ ಇತ್ತು” ಎಂದಿದ್ದಾರೆ.
ಆಗ ಪರಮೀತ್ ಅವರು “ನೀವು ಯಾರೇ ಆಗಿರಲಿ, ಏನೇ ಆಗಿರಲಿ, ಜೀವನದಲ್ಲಿ ಇದೇ ಕೆಲಸವನ್ನು ಮಾಡಬೇಕು ಅಂತಿದ್ರೆ ವಿಧಿಯು ಮಾಡಿಸುತ್ತದೆ” ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.