ಕ್ಯಾಮರಾ ಆನ್‌ ಮಾಡಿದ್ರೆ ಮೈಂಡ್‌ ಬ್ಲಾಂಕ್‌, ಉತ್ತರ ನೀಡಲು ತಡಕಾಡಿದ ರಶ್ಮಿಕಾ ಮಂದಣ್ಣ

Published : Sep 06, 2025, 12:34 PM IST
 Rashmika Mandanna

ಸಾರಾಂಶ

Rashmika Mandanna: ನಟಿ ರಶ್ಮಿಕಾ ಮಂದಣ್ಣ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕ್ಯಾಮೆರಾ ಆನ್ ಮಾಡಿ ಪ್ರಶ್ನೆ ಕೇಳಿದ್ರೆ ಉತ್ತರ ನೀಡಲು ನಟಿ ತಡಕಾಡಿದ್ದಾರೆ. ಕ್ಯಾಮೆರಾ ನೋಡ್ತಿದ್ದಂಗೆ ಏನಾಗುತ್ತೆ ಅನ್ನೋದನ್ನು ಒಪ್ಪಿಕೊಂಡಿದ್ದಾರೆ. 

ಕ್ಯಾಜುವಲ್ ಆಗಿ ಎಲ್ಲರ ಮುಂದೆ ಆರಾಮಾಗಿ ಮಾತನಾಡ್ತಿರ್ತೇವೆ. ಎಂಥ ಪ್ರಶ್ನೆ ಕೇಳಿದ್ರೂ ಕೂಲ್ ಆಗಿ ಉತ್ತರ ನೀಡ್ತೇವೆ. ಅದೇ ಕ್ಯಾಮೆರಾ ಆನ್ ಆಯ್ತು ಅಂದ್ರೆ ಬೆವರು ಬರೋಕೆ ಶುರುವಾಗುತ್ತೆ. ಇದು ಅನೇಕರ ಸಮಸ್ಯೆ. ಕ್ಯಾಮೆರಾ ಕಾಣ್ತಿದ್ದಂತೆ ಮೈಂಡ್ ಕೆಲ್ಸ ಮಾಡೋದಿಲ್ಲ. ಮುಖದ ಮೇಲೆ ಟೆನ್ಷನ್ ಸ್ಪಷ್ಟವಾಗಿ ಕಾಣುತ್ತೆ. ಅದೇ ಕಾರಣಕ್ಕೆ ಅನೇಕರು ಕ್ಯಾಮೆರಾ ಮುಂದೆ ಬರೋಕೆ ಹೆದರ್ತಾರೆ. ಇದು ಸಾಮಾನ್ಯರ ಸಮಸ್ಯೆ ಬಿಡಿ ಅಂದ್ಕೊಳ್ಬೇಡಿ. ನಾವೇನೋ ಕ್ಯಾಮೆರಾ (Camera) ಫೇಸ್ ಮಾಡಿರೋದಿಲ್ಲ, ಕ್ಯಾಮೆರಾ ನೋಡ್ತಿದ್ದಂತೆ ಟೆನ್ಷನ್ ಆಗುತ್ತೆ ಸರಿ. ಆದ್ರೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna)ಗೂ ಕ್ಯಾಮೆರಾ ಆನ್ ಆಗ್ತಿದ್ರೆ ಮೈಂಡ್ ಬ್ಲಾಂಕ್ ಆಗುತ್ತಂತೆ. ಯಸ್, ರಶ್ಮಿಕಾ ಮಂದಣ್ಣ ತಮ್ಮ ವೀಕ್ನೆಸ್ ಏನು ಅನ್ನೋದನ್ನು ಹೇಳ್ಕೊಂಡಿದ್ದಾರೆ.

ಕ್ಯಾಮೆರಾ ನೋಡ್ತಿದ್ದಂತೆ ರಶ್ಮಿಕಾ ಮೈಂಡ್ ಬ್ಲಾಂಕ್ : ರಶ್ಮಿಕಾ ಮಂದಣ್ಣ, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಒಂದಿಷ್ಟು ಫೋಟೋ, ವಿಡಿಯೋಗಳನ್ನು ಪೋಸ್ಟ್ ಮಾಡ್ತಾ ಫ್ಯಾನ್ಸ್ ಜೊತೆ ಕನೆಕ್ಟ್ ಆಗಿದ್ದಾರೆ. ಈಗ ತಮ್ಮ ವೀಕ್ನೆಸ್ ವಿಡಿಯೋ ಒಂದನ್ನು ಅವರು ಪೋಸ್ಟ್ ಮಾಡಿದ್ದಾರೆ. ರಶ್ಮಿಕಾ ಮಂದಣ್ಣಗೆ ಕ್ಯಾಮೆರಾ ಆನ್ ಇದ್ದಾಗ ಪ್ರಶ್ನೆ ಕೇಳಿದ್ರೆ ಉತ್ತರಿಸೋದು ಕಷ್ಟವಂತೆ. ಇದು ನನ್ನ ಲೈಫ್ ಸ್ಟೋರಿ ಅಂತ ಶೀರ್ಷಿಕೆ ಹಾಕಿರುವ ರಶ್ಮಿಕಾ ಮಂದಣ್ಣ, ನೀವು ನನ್ನ ಮುಖದ ಮೇಲೆ ಕ್ಯಾಮೆರಾ ಇಟ್ಟು ಪ್ರಶ್ನೆ ಕೇಳಿದ್ರೆ ನನ್ನ ಬ್ರೇನ್ ಖಾಲಿಯಾಗುತ್ತೆ. ನಾನು ಮರಳಿನಲ್ಲಿ ಉತ್ತರ ಹುಡುಕೋಕೆ ಶುರು ಮಾಡ್ತೇನೆ ಅಂತ ಬರೆದು, ವಿಡಿಯೋ ಪೋಸ್ಟ್ ಮಾಡಿದ್ದಾರೆ.

ವಿಡಿಯೋದಲ್ಲಿ ಏನಿದೆ? : ರಶ್ಮಿಕಾ ಪೋಸ್ಟ್ ಮಾಡಿರೋ ವಿಡಿಯೋದಲ್ಲಿ ಎಐ ರಶ್ಮಿಕಾಗೆ ಪ್ರಶ್ನೆ ಕೇಳ್ತಿದೆ. ರಶ್ಮಿಕಾ ಅದಕ್ಕೆ ಹತ್ತು ಸೆಕೆಂಡಿನಲ್ಲಿ ಉತ್ತರ ನೀಡ್ಬೇಕು. ನಿಮಗೆ ಗೊತ್ತಿರುವ ಪ್ರೋಟೀನ್ ಹಣ್ಣುಗಳನ್ನು ಹೇಳ್ಬೇಕು ಅಂತ ಎಐ ಹೇಳುತ್ತೆ. ರಶ್ಮಿಕಾ ಒಂದೊಂದೇ ಹಣ್ಣಿನ ಹೆಸ್ರು ಹೇಳ್ತಾ ಹೋಗ್ತಾರೆ. ಕೊನೆಯಲ್ಲಿ ಒಂದಕ್ಕೆ ತಡಕಾಡ್ತಾರೆ. ಕೊನೆಗೂ ಅವರು ಉತ್ತರ ಹೇಳ್ತಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅನೇಕರು ರಶ್ಮಿಕಾ ಕ್ಯೂಟ್ ಆನ್ಸರ್ ಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ.

ರಶ್ಮಿಕಾ ಮಂದಣ್ಣಗೆ ಅತ್ಯುತ್ತಮ ನಟಿ ಪಟ್ಟ : ಸದ್ಯ ರಶ್ಮಿಕಾ ಮಂದಣ್ಣ ದುಬೈನಲ್ಲಿದ್ದಾರೆ. 2025 ರ ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (SIIMA) ದುಬೈನಲ್ಲಿ ಅದ್ದೂರಿಯಾಗಿ ನಡೆದಿದೆ. 'ಪುಷ್ಪ 2' ಚಿತ್ರದಲ್ಲಿ ಶ್ರೀವಲ್ಲಿ ಪಾತ್ರದ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಗೆದ್ದ ರಶ್ಮಿಕಾ ಮಂದಣ್ಣ ಅತ್ಯುತ್ತಮ ನಟಿ ( ತೆಲುಗು) ಪ್ರಶಸ್ತಿ ಪಡೆದಿದ್ದಾರೆ.

ರಶ್ಮಿಕಾ ಸಿನಿಮಾ ಲೀಸ್ಟ್ : ಸ್ಯಾಂಡಲ್ವುಡ್ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ತೆಲುಗು, ತಮಿಳು, ಹಿಂದಿ ಸಿನಿಮಾ ರಂಗದಲ್ಲಿ ಮಿಂಚುತ್ತಿದ್ದಾರೆ. ಅತಿ ಹೆಚ್ಚು ಬೇಡಿಕೆ ಇರುವ ನಟಿಯರಲ್ಲಿ ರಶ್ಮಿಕಾ ಮಂದಣ್ಣ ಒಬ್ಬರು. ಸದ್ಯ ಮೈಸಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾ ಭಿನ್ನ ಪಾತ್ರದಲ್ಲಿ ಮಿಂಚಲಿದ್ದಾರೆ. ಇದು ಡಿಸೆಂಬರ್ ನಲ್ಲಿ ತೆರೆಗೆ ಬರಲಿದೆ. ಇದಲ್ದೆ ಎಎ 22, ಪ್ರೇಮಿಕಾ, ಪುಷ್ಪಾ 3 ಸೇರಿದಂತೆ ಅನೇಕ ಚಿತ್ರಗಳು ರಶ್ಮಿಕಾ ಕೈನಲ್ಲಿದ್ದು, ಸಿಕಂದರ್, ಕುಬೇರ, ಛಾವಾದಲ್ಲೂ ಈ ವರ್ಷ ರಶ್ಮಿಕಾ ಕಾಣಿಸಿಕೊಂಡಿದ್ದಾರೆ.

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌