
ದಕ್ಷಿಣ ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಅನುಷ್ಕಾ ಶೆಟ್ಟಿ ಅಪ್ಪನ ಜನ್ಮ ದಿನಕ್ಕೆ ಬರೆದ ಪ್ರೀತಿಯ ಸಂದೇಶ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
'ನನ್ನ ಮೋಸ್ಟ್ ಲವ್ಲಿ, ಮೋಸ್ಟ್ ಕೇರಿಂಗ್ ಹಾಗೂ ಹೆಚ್ಚು ಪ್ರೋತ್ಸಾಹಿಸುವ ವ್ಯಕ್ತಿ ಅಂದರೆ ನನ್ನ ತಂದೆ . ನೀವು ನಮಗಾಗಿ ಕಷ್ಟ ಪಟ್ಟಿದೀರಾ, ಇಂದು ನಿಮ್ಮ ದಿನ ಹಾಗೂ ಪ್ರತಿ ಕ್ಷಣವೂ ನಗು ನಗುತ್ತಿರಿ. ಏಕೆಂದರೆ ಅದು ನಮಗೂ ಖುಷಿ ನೀಡುತ್ತದೆ. ಹ್ಯಾಪಿ ಬರ್ತಡೇ ಲವ್ಲಿ ಪಾಪಾ,' ಎಂದು ಬೆರೆದುಕೊಂಡಿದ್ದಾರೆ.
ಕನ್ನಡಿಗರ ಮನ ಗೆದ್ದ ಅನುಷ್ಕಾ ಶೆಟ್ಟಿ; 'ಯುಗಾದಿ' ಶುಭಾಶಯ ಹೇಗಿದೆ ನೋಡಿ
ತಮಿಳು- ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿದ್ದರು ನಟಿ ಅನುಷ್ಕಾಗೆ ಕನ್ನಡ ಭಾಷೆ ಮೇಲೆ ಅಪಾರವಾದ ಪ್ರೀತಿ ಹಾಗೂ ಗೌರವ ಇಟ್ಟುಕೊಂಡಿದ್ದಾರೆ. ದಕ್ಷಿಣ ಭಾರತದ ಯಾವುದೇ ಹಬ್ಬವಿದ್ದರೂ ಕನ್ನಡದಲ್ಲಿಯೇ ಅಭಿಮಾನಿಗಳಿಗೆ ಶುಭ ಕೋರುತ್ತಾರೆ.
'ನಿಶಬ್ಧಂ' ಚಿತ್ರ ರಿಲೀಸ್‌ಗಾಗಿ ಕಾಯುತ್ತಿರುವ ಅನುಷ್ಕಾ ಕೊರೋನಾ ವೈರಸ್‌ನಿಂದ ಮನೆಯಲ್ಲಿಯೇ ಲಾಕ್‌ಡೌನ್ ಆಗಿ ಕುಟುಂಬಸ್ಥರ ಜೊತೆ ಟೈಂ ಪಾಸ್ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.