ತಂಗಿ ಸಿಕ್ಕಿದ ಖುಷಿಯಲ್ಲಿ ಅಗಸ್ತ್ಯ; ಅಶ್ವಿನಿ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ಇವರೇ ನೋಡಿ

Published : May 20, 2022, 07:27 PM IST
ತಂಗಿ ಸಿಕ್ಕಿದ ಖುಷಿಯಲ್ಲಿ ಅಗಸ್ತ್ಯ; ಅಶ್ವಿನಿ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ಇವರೇ ನೋಡಿ

ಸಾರಾಂಶ

ಅಗಸ್ತ್ಯನ ತಂಗಿ ಅಶ್ವಿನಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಯಾರು ಎನ್ನುವುದನ್ನು ಇನ್ನು ರಿವೀಲ್ ಮಾಡಿಲ್ಲ. ಹಾಗಾಗಿ ಅಗಸ್ತ್ಯನ ತಂಗಿ ಪಾತ್ರ ಮಾಡುತ್ತಿರುವ ನಟಿ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಮೂಲಗಳ ಪ್ರಕಾರ ಅಶ್ವಿನಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಅಮೂಲ್ಯ ಗೌಡ (Amulya Gowda). ಈಗಾಗಲೇ ಕಿರುತೆರೆಯಲ್ಲಿ ಮಿಂಚಿರುವ ನಟಿ ಅಮೂಲ್ಯ ಇದೀಗ ನನ್ನರಸಿ ರಾಧೆ ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದಾರೆ. ನಟಿ ಅಮೂಲ್ಯ ಅನೇಕ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ನನ್ನರಸಿ ರಾಧೆ(Nannarasi Radhe) ಕೂಡ ಒಂದು. ಅನೇಕ ಟ್ವಿಸ್ಟ್ ಅಂಡ್ ಟರ್ನ್ ಗಳನ್ನು ಪಡೆದುಕೊಳ್ಳುತ್ತಾ ಧಾರಾವಾಹಿ ಮುನ್ನುಗ್ಗುತ್ತಿದೆ. ಇಂದ್ರಾಣಿಯ ಕೈಯಿಂದ ಅಮ್ಮನ್ನು ಬಿಡಿಸಿಕೊಂಡಿದ್ದ ಅಗಸ್ತ್ಯನಿಗೆ ಮತ್ತೊಂದು ಸವಾಲು ಎದುರಾಗಿತ್ತು, ಜೊತೆಗೆ ಸರ್ಪ್ರೈಸ್ ಕೂಡ ಕಾದಿತ್ತು. ಅಗಸ್ತ್ಯನಿಗೆ ಒಬ್ಬಳು ಸಹೋದರಿ ಕೂಡ ಇದ್ದಾಳೆ ಎನ್ನುವ ಸತ್ಯ ಕೂಡ ಗೊತ್ತಾಗಿತ್ತು. ಅಗಸ್ತ್ಯ ತಂಗಿಯನ್ನು ಕಟ್ಟಿ ಹಾಕಿ ಇಂದ್ರಾಣಿ ಹೊಸ ಗೇಮ್ ಪ್ಲಾನ್ ಮಾಡಿದ್ದಳು. ಆದರೆ ಅದಕ್ಕೆ ಅಗಸ್ತ್ಯ ಅವಕಾಶ ಮಾಡಿಕೊಟ್ಟಿಲ್ಲ.

ತಂಗಿಯನ್ನು ಹುಡುಕುತ್ತೇನೆ ಎಂದು ಹಠಹೊತ್ತು ಅಮ್ಮನ ಹುಡುಕಿದ ಹಾಗೆ ತಂಗಿಯನ್ನು ಹುಡುಕಲು ಪ್ರಾರಂಭಿಸಿದ್ದ. ಅಗಸ್ತ್ಯನ ಹುಡುಕಾಟಕ್ಕೆ ಪತ್ನಿ ಇಂಚರಾ ಸಾಥ್ ನೀಡಿದ್ದಳು. ಅಗಸ್ತ್ಯ್ ತಂಗಿಯನ್ನು ಹುಡುಕಿ ಕರೆದುಕೊಂಡು ಬಂದೇ ಬರುತ್ತೀನಿ ಎಂದು ಅಪ್ಪನ ಬಳಿ ಮಾತು ಕೂಡ ಕೊಟ್ಟಿದ್ದ. ಅದರಂತೆ ತಂಗಿ ಹುಡುಕಲು ಪ್ರಯತ್ನಸುತ್ತಿದ್ದ ಅಗಸ್ತ್ಯನಿಗೆ ಈಗ ತಂಗಿ ಸಿಕ್ಕಿದ್ದಾಳೆ. ಇಂದ್ರಾಣಿ ಅಗಸ್ತ್ಯನ ತಂಗಿಯನ್ನು ಒಂದು ಕತ್ತಲೆ ಕೋಣೆಯಲ್ಲಿ ಕೂಡಿಹಾಕಿದ್ದರು. ಕೈ ಮತ್ತು ಕಾಲುಗಳನ್ನು ಸರಪಳಿಯಿಂದ ಕಟ್ಟಿಹಾಕಿ ಕೋಣೆಯಲ್ಲಿ ಇರಿಸಿದ್ದಳು. ಕೊನೆಗೂ ಅಗಸ್ತ್ಯ ತಂಗಿಯನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾನೆ.

ಅಂದಹಾಗೆ ಅಗಸ್ತ್ಯನ ತಂಗಿ ಅಶ್ವಿನಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಯಾರು ಎನ್ನುವುದನ್ನು ಇನ್ನು ರಿವೀಲ್ ಮಾಡಿಲ್ಲ. ಹಾಗಾಗಿ ಅಗಸ್ತ್ಯನ ತಂಗಿ ಪಾತ್ರ ಮಾಡುತ್ತಿರುವ ನಟಿ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಮೂಲಗಳ ಪ್ರಕಾರ ಅಶ್ವಿನಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಅಮೂಲ್ಯ ಗೌಡ (Amulya Gowda). ಈಗಾಗಲೇ ಕಿರುತೆರೆಯಲ್ಲಿ ಮಿಂಚಿರುವ ನಟಿ ಅಮೂಲ್ಯ ಇದೀಗ ನನ್ನರಸಿ ರಾಧೆ ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದಾರೆ. ನಟಿ ಅಮೂಲ್ಯ ಅನೇಕ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಅರಸು ಮನೆತನದ ಅಭಿನೇತ್ರಿ- ಸಾರಿಕಾ ರಾಜೇ ಅರಸ್ ಅಂತರಾಳ

ಸುಂದರಿ ಸೀಸನ್1, ಅಗ್ನಿಸಾಕ್ಷಿ, ಅಪರಂಜಿ ಸೇರಿದಂತೆ ಹಲವು ಧಾರಾವಾಹಿಯಲ್ಲಿ ನಟಿಸಿದ್ದಾರೆ. ಇದೀಗ ಮತ್ತೊಂದು ಪ್ರಮುಖ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಅಂದಹಾಗೆ ಈ ಬಗ್ಗೆ ವಾಹಿನಿ ಆಗಲಿ ಅಥವಾ ಧಾರಾವಾಹಿ ತಂಡ ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಅಶ್ವಿನಿ ಎಂಟ್ರಿ ಈ ಧಾರಾವಾಹಿಯ ಮತ್ತೊಂದು ತಿರುವಿಗೆ ಕಾರಣವಾಗಲಿದೆ.

ನನ್ನರಸಿ ರಾಧೆಯ ವೈದೇಹಿ- ಹೇಮಾ ಬೆಳ್ಳೂರು ಅಪ್ಪನ ಬಗ್ಗೆ ಭಾವುಕ ಮಾತು

ಸದ್ಯ ತಂಗಿ ಖುಷಿಯಲ್ಲಿದ್ದಾನೆ ಅಗಸ್ತ್ಯ. ಅಶ್ವಿನಿ ಸಿಕ್ಕಿದ ಸಂತೋಷದ ವಿಚಾರವನ್ನು ಅಗಸ್ತ್ಯ ಮನೆಯವರಿಗೆ ಕರೆ ಮಾಡಿ ತಿಳಿಸಿದ್ದಾನೆ. ಮನೆಯವಲರೆಲ್ಲ ಸಂತಸ ಪಟ್ಟಿದ್ದಾರೆ. ಸಂತೋಷ್ ರಾಥೋಡ್ ಖುಷಿಗೆ ಪಾರವೇ ಇಲ್ಲದಂತೆ ಆಗಿದೆ. ಅಗಸ್ತ್ಯ ನಿಜಕ್ಕೂ ತಂಗಿಯನ್ನು ಕರೆದುಕೊಂಡು ಬರ್ತಾನಾ ಅಥವಾ ಮತ್ತೇನಾದ್ರು ಟ್ವಿಸ್ಟ್ ಇದೆಯಾ ಎಂದು ನೋಡಲು ಪ್ರೇಕ್ಷಕರು ಕಾರದಿಂದ ಕಾಯುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Actor Dileep Case: ಖ್ಯಾತ ನಟಿ ಮೇಲಿನ ಅ*ತ್ಯಾಚಾರ ಆರೋಪ; 8 ವರ್ಷಗಳ ಹೋರಾಟ, ನಟ ದಿಲೀಪ್‌ಗೆ ನಿರಾಳ!
ಗಂಡನ ಜಾಕೆಟ್ ಕದ್ದ ದೀಪಿಕಾ ಪಡುಕೋಣೆ.. ಅಂಥ ಪರಿಸ್ಥಿತಿಗೆ ಬಂದು ತಲುಪಿದ್ರಾ ಬಾಲಿವುಡ್ ಸ್ಟಾರ್ ನಟಿ?