ಹೈಟ್ ಬಗ್ಗೆ ಅಸುರಕ್ಷತೆ ಭಾವನೆ ಕಾಡ್ತಿತ್ತು: ಆಮೀರ್ ಖಾನ್ ಹಳೆಯ ಮಾತು ವೈರಲ್

By Shruthi KrishnaFirst Published Jul 3, 2023, 2:20 PM IST
Highlights

ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ ತನ್ನ ಹೈಟ್ ಬಗ್ಗೆ ಅಸುರಕ್ಷತೆ ಭಾವನೆ ಕಾಡ್ತಿತ್ತು ಎಂದು ಆಮೀರ್ ಖಾನ್ ಹೇಳಿದ್ದ ಹಳೆಯ ವಿಡಿಯೋ ವೈರಲ್ ಆಗಿದೆ.  

ಬಾಲಿವುಡ್ ಸ್ಟಾರ್ ಆಮೀರ್ ಖಾನ್ ವಿಭಿನ್ನ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಬಾಲಿವುಡ್‌ನ ಅತ್ಯಂತ ಸಕ್ಸಸ್‌ಫುಲ್ ನಟ ಆಮೀರ್ ಖಾನ್ ಪ್ರಾರಂಭದ ದಿನಗಳಲ್ಲಿ ತನ್ನ ಎತ್ತರದ ಬಗ್ಗೆ ತುಂಬಾ ಚಿಂತಿತರಾಗಿದ್ದರಂತೆ. ಈ ಬಗ್ಗೆ ಸ್ವತಃ ಆಮೀರ್ ಖಾನ್ ಅವರೆ ಬಹಿರಂಗ ಪಡಿಸಿದ್ದಾರೆ. ಹಳೆಯ ಸಂದರ್ಶನವೊಂದರಲ್ಲಿ ಆಮೀರ್ ಖಾನ್ ತನ್ನ ಹೈಟ್ ಬಗ್ಗೆ ಹೇಳಿದ್ದ ಮಾತು ಈಗ ವೈರಲ್ ಆಗಿದೆ. ತಮ್ಮ ಲುಕ್ ವಿಚಾರವಾಗಿ ಕಾಮನ್ ಮ್ಯಾನ್‌ಗೆ ಮಾತ್ರವಲ್ಲದೇ ದೊಡ್ಡ ದೊಡ್ಡ ಸ್ಟಾರ್ಸ್‌ಗೂ ಹಿಂಜರಿಕೆ ಇತ್ತು. ಆಮೀರ್ ಖಾನ್ ಕೂಡ ತನ್ನ ಹೈಟ್ ಬಗ್ಗೆ ತುಂಬಾ ಅಸುರಕ್ಷತೆಯ ಭಾವನೆ ಇತ್ತು. 

ಈ ಹಿಂದೆ ಎಂದರೆ ತಲಾಶ್ ಸಿನಿಮಾದ ಪ್ರಮೋಷನ್ ಸಮಯದಲ್ಲಿ ಆಮೀರ್ ಖಾನ್, ರಾಣಿ ಮುಖರ್ಜಿ ಹಾಗೂ  ಕರೀನಾ ಕಪೂರ್ ಸಂದರ್ಶನದ ತುಣುಕು ಈಗ ವೈರಲ್ ಆಗಿದೆ. ಆಮೀರ್ ಖಾನ್ ತನ್ನ ವೃತ್ತಿ ಜೀವನವನ್ನು ಪ್ರಾರಂಭಿಸುವಾಗ ಎಲ್ಲರೂ ಅವರನ್ನು ಟಿಂಗು ಎಂದು ಕರೆಯುತ್ತಿದ್ದರಂತೆ. ಆ ಬಗ್ಗೆ ಆಮೀರ್ ಖಾನ್ ತುಂಬಾ ಭಯಬಿದ್ದಿದ್ದರಂತೆ. ಅಮಿತಾಭ್ ಬಚ್ಚನ್ ಅವರು ಆಗ ತನ್ನ ಹೈಟ್ ಮೂಲವೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಆ ಸಮದಲ್ಲಿ ಆಮೀರ್ ಖಾನ್ ಹೈಟ್ ತುಂಬಾ ಚರ್ಚೆಯಾಗಿದ್ದು, ಅಸುರಕ್ಷಿತ ಭಾವನೆ ಕಾಡುತ್ತಿತ್ತು ಎಂದು ಹೇಳಿದ್ದಾರೆ.  

Latest Videos

ಇಬ್ರಾಹಿಂ ಅಲಿ ಖಾನ್‌ನಿಂದ ಅಗಸ್ತ್ಯ ನಂದಾವರೆಗೆ, ಈ ವರ್ಷ ಪಾದಾರ್ಪಣೆ ಮಾಡಲಿರುವ ಸ್ಟಾರ್‌ಕಿಡ್ಸ್!

ಎಲ್ಲರೂ ಅಮಿತಾಭ್ ಬಚ್ಚನ್ ಬಗ್ಗೆಯೇ ಮಾತನಾಡುತ್ತಿದ್ದರು. ಅನೇಕರು ತನ್ನ ಹೈಟ್ ಬಗ್ಗೆ ಮಾತನಾಡಿ ಕಾಲೆಳೆಯುತ್ತಿದ್ದಾರೆ. ಆದರೆ ಬಳಿಕ ಅಭಿಮಾನಿಗಳು ತನ್ನನ್ನು ಸ್ವೀಕರಿಸಿದರು, ತುಂಬಾ ಇಷ್ಟಪಟ್ಟರು ಅದು ಸಂತೋಷವಾಯಿತು ಎಂದು ಆಮೀರ್ ಖಾನ್ ಹೇಳಿದ್ದಾರೆ. ರಾಣಿ ಮುಖರ್ಜಿ ಕೂಡ ಅತ್ಯಂತ ಕುಳ್ಳ ನಾಯಕಿ ಎಂದು ಹೇಳಿದ್ದರು.  ಆಮೀರ್ ಖಾನ್ ನೋಡೊಕೆ ತುಂಬಾ ಕುಳ್ಳಗಿದ್ದರೂ ಅವರ ವ್ಯಕ್ತಿತ್ವವು ತುಂಬಾ ಎತ್ತರದಲ್ಲಿದೆ ಎಂದು ರಾಣಿ ಹೊಗಳಿದರು. ಈಗ ಆ ರೀತಿಯ ಯಾವುದೇ ಭಾವನೆಗಳಿಲ್ಲ ಎಂದು ಆಮೀರ್ ಖಾನ್ ಅಂದು ಹೇಳಿದ್ದ ಮಾತು ಈಗ ವೈರಲ್ ಆಗಿದೆ. 

ಆಮೀರ್​ ಖಾನ್​ ಚಿತ್ರ ರಿಜೆಕ್ಟ್​ ಮಾಡಿದ ಸಲ್ಲು​! ಮಿಡ್​​ನೈಟ್​ ಪಾರ್ಟಿಯಲ್ಲೇನಾಯ್ತು ಅಂತಿದ್ದಾರೆ ಫ್ಯಾನ್ಸ್​!

ಸಿನಿಮಾ ವಿಚಾರಕ್ಕೆ ಬರುವುದಾದರೆ ಆಮೀರ್ ಖಾನ್ ಕೊನೆಯದಾಗಿ ಲಾಲ್ ಸಿಂಗ್ ಚಡ್ಡಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಆ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿತ್ತು. ಆಮೀರ್ ಖಾನ್ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಯಿತು. ಲಾಲ್ ಸಿಂಗ್ ಚಡ್ಡಾ ಸೋಲಿನ ಬಳಿಕ ಆಮೀರ್ ಖಾನ್ ಯಾವುದೇ ಸಿನಿಮಾ ಮಾಡಿಲ್ಲ. ಬಳಿಕ ನಟನೆಯಿಂದ ಬ್ರೇಕ್ ಪಡೆಯುವುದಾಗಿ ಬಹಿರಂಗ ಪಡಿಸಿದರು. ಆಮೀರ್ ಖಾನ್ ಮುಂದಿನ ಸಿನಿಮಾ ಯಾವುದು? ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಸದ್ಯ ಹರಿದಾುತ್ತಿರುವ ಮಾಹಿತಿ ಪ್ರಕಾರ ಅಮೀರ್ ಖಾನ್ ಸೌತ್ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದು ರಾಜಮೌಳಿ ಜೊತೆ ಸಿನಿಮಾ ಮಾಡುತ್ತಾರೆ ಎನ್ನಲಾಗಿದೆ.  

click me!