Salaar ಬಿಗ್ ಅಪ್‌ಡೇಟ್; ಕೊನೆಗೂ ಟೀಸರ್ ರಿಲೀಸ್‌ಗೆ ಡೇಟ್ ಫಿಕ್ಸ್

By Shruthi Krishna  |  First Published Jul 3, 2023, 3:17 PM IST

ಪ್ರಭಾಸ್ ನಟನೆಯ ಸಲಾರ್ ಸಿನಿಮಾದಿಂದ ಬಿಗ್ ಅಪ್‌ಡೇಟ್ ಹೊರಬಿದ್ದಿದೆ. ಕೊನೆಗೂ ಸಿನಿಮಾತಂಡ ಟೀಸರ್ ರಿಲೀಸ್ ಡೇಟ್ ಬಹಿರಂಗ ಪಡಿಸಿದೆ.


ಸಲಾರ್ ಭಾರತೀಯ ಸಿನಿಮಾರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ. ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್, ಹೊಂಬಾಳೆ ಫಿಲ್ಮ್ಸ್ ಹಾಗೂ ಪ್ರಭಾಸ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಚಿತ್ರ. ಕೆಜಿಎಫ್ ಸಿನಿಮಾ ನಂತರ ನಿರ್ದೇಶಕ ಪ್ರಶಾಂತ್ ನೀಲ್ ಕೈಗೆತ್ತಿಕೊಂಡಿರುವ ಸಲಾರ್ ಸಿನಿಮಾದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಅದರಲ್ಲೂ ಪ್ರಭಾಸ್ ಬಾಹುಬಲಿ ಸಿನಿಮಾ ಬಳಿಕ ಸಾಲು ಸಾಲು ಸೋಲು ಕಂಡಿದ್ದಾರೆ. ಹಾಗಾಗಿ ಈ ಸಿನಿಮಾ ಮೂಲಕವಾದರೂ ಮತ್ತೆ ಗೆಲುವಿನ ಟ್ರ್ಯಾಕ್‌ಗೆ ಮರಳುತ್ತಾರಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಾಗಲೇ ಪೋಸ್ಟರ್ ಗಳ ಮೂಲಕ ಸದ್ದು ಮಾಡುತ್ತಿರುವ ಸಲಾರ್ ಚಿತ್ರದಿಂದ ಬಿಗ್ ಅಪ್ ಡೇಟ್ ಹೊರಬಿದ್ದಿದೆ. 

ಅಭಿಮಾನಿಗಳು ಕಾಯುತ್ತಿದ್ದ ಆ ದಿನ ಕೊನೆಗೂ ಬಂದೇ ಬಿಟ್ಟಿದೆ. ಹೌದು ಸಲಾರ್ ಸಿನಿಮಾದ ಟೀಸರ್ ರಿಲೀಸ್‌ಗೆ ದಿನಾಂಕ ಬಹಿರಂಗವಾಗಿದೆ. ಹೋದಲ್ಲಿ ಬಂದಲ್ಲಿ ಸಿನಿಮಾದ ಅಪ್‌ಡೇಟ್ ಎಂದು ಕಾಡಿಸುತ್ತಿದ್ದ ಅಭಿಮಾನಿಗಳಿಗೆ ಟೀಸರ್ ರಿಲೀಸ್ ಡೇಟ್ ಬಹಿರಂಗ ಪಡಿಸುವ ಮೂಲಕ ಅವರ ಮನತಣಿಸಲು ಮುಂದಾಗಿದೆ ಸಿನಿಮಾತಂಡ. 

Tap to resize

Latest Videos

Salaar; ಪ್ರಶಾಂತ್ ನೀಲ್-ಪ್ರಭಾಸ್ ಸಿನಿಮಾದ ಸೀಕ್ವೆಲ್ ಬರ್ತಿದಿಯಾ? ನಿರ್ಮಾಪಕರು ಹೇಳಿದ್ದೇನು?

ಆದಿಪುರುಷ್ ಸೋಲಿನಲ್ಲಿರುವ ಪ್ರಭಾಸ್ ಸಲಾರ್ ಮೂಲಕ ಭರ್ಜರಿ ಎಂಟ್ರಿಗೆ ಕಾಯುತ್ತಿದ್ದಾರೆ. ಜುಲೈ 6ಕ್ಕೆಸಿನಿಮಾದ ಟೀಸರ್ ರಿಲೀಸ್ ಆಗಲಿದೆ ಎಂದು ಸಿನಿಮಾತಂಡ ಬಹಿರಂಗ ಪಡಿಸಿದೆ. ಬೆಳ್ಳಂಬೆಳಗ್ಗೆ ಸಿನಿಮಾದ ಟೀಸರ್ ರಿಲೀಸ್ ಆಗುತ್ತಿದೆ. ಹೌದು ಬೆಳಗ್ಗೆ 5.12ಕ್ಕೆ ಸಲಾರ್ ಟೀಸರ್ ರಿಲೀಸ್ ಆಗುತ್ತಿದೆ. ಈ ಬಗ್ಗೆ ಸಿನಿಮಾತಂಡ ಪೋಸ್ಟರ್ ಮೂಲಕ ಬಹಿರಂಗ ಪಡಿಸಿದೆ. ಅಂದಹಾಗೆ ಸಲಾರ್ ಕೊನೆಯ ಹಂತದ ಚಿತ್ರೀಕರಣದಲ್ಲಿದೆ. ಈಗಾಗಲ ನಾಯಕಿ ಶ್ರುತಿ ಹಾಸನ್ ತನ್ನ ಭಾಗದ ಚಿತ್ರೀಕರಣ ಮುಗಿಸಿದ್ದಾರೆ. ಸದ್ಯದಲ್ಲೇ ಟಾಕಿ ಭಾಗ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಹೊರಡಲಿದೆ ಸಿನಿಮಾತಂಡ.

𝐁𝐫𝐚𝐜𝐞 𝐲𝐨𝐮𝐫𝐬𝐞𝐥𝐟 𝐟𝐨𝐫 𝐭𝐡𝐞 𝐦𝐨𝐬𝐭 𝐯𝐢𝐨𝐥𝐞𝐧𝐭 𝐦𝐚𝐧, 🔥

Watch on July 6th at 5:12 AM on https://t.co/QxtFZcNhrGpic.twitter.com/Vx1i5oPLFI

— Hombale Films (@hombalefilms)

ಪ್ರಭಾಸ್-ಪ್ರಶಾಂತ್ ನೀಲ್ 'ಸಲಾರ್'ನಲ್ಲಿ ಕನ್ನಡದ ಖ್ಯಾತ ನಟ; ಚಿತ್ರದ ಬಗ್ಗೆ ಹೇಳಿದ್ದೇನು?

ಅಂದಹಾಗೆ ಸಿನಿಮಾದಲ್ಲಿ ಮಲಾಯಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್, ಕನ್ನಡದ ನಟ ದೇವರಾಜ್, ಜಗಪತಿ ಬಾಬು ಸೇರಿದಂತೆ ಅನೇಕ ಸ್ಟಾರ್ ನಟಿಸಿದ್ದಾರೆ. ನಟಿ ಶ್ರುತಿ ಹಾಸನ್ ಆದ್ಯಾ ಎನ್ನುವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರವಿ ಬಸ್ರೂರ್ ಸಂಗೀತ ಸಿನಿಮಾಗಿದೆ. ಕೆಜಿಎಫ್ ಬಳಿಕ ಬಹುತೇಕ ಅದೇ ತಂಡ ಸಲಾರ‌್‌ನಲ್ಲೂ ಒಂದಾಗಿದ್ದು ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಅದಕ್ಕೂ ಮೊದಲು ಟೀಸರ್ ನೋಡಲು ಫ್ಯಾನ್ಸ್ ತುದಿಗಾಲಿನಲ್ಲಿ ನಿಂತಿದ್ದಾರೆ. ತುಂಬಾ ಸಮಯದಿಂದ ಕಾಯುತ್ತಿದ್ದ ಅಭಿಮಾನಿಗಳು ಟೀಸರ್ ನೋಡಿ ಥ್ರಿಲ್ ಆಗ್ತಾರಾ ಕಾದು ನೋಡಬೇಕು.   

click me!