ಫಿಲಂಗಾಗಿ ಸಂಪೂರ್ಣ ಬೆತ್ತಲಾದ ನಟ- ನಟಿಯರು ಇವರು!

By Suvarna News  |  First Published May 20, 2020, 6:16 PM IST

ಹೀರೋ ಅಥವಾ ಹೀರೋಯಿನ್‌ ಅನ್ನು ಬೆತ್ತಲೆಯಾಗಿ ತೋರಿಸುವುದು ಈಗ ಬಾಲಿವುಡ್‌ನಲ್ಲಿ ನೋ ನೋ ಅನ್ನುವ ವಿಷಯ ಖಂಡಿತ ಅಲ್ಲ. ನಗ್ನತೆಯನ್ನು ಕೂಡ ಎಷ್ಟು ಚೆನ್ನಾಗಿ, ಎಷ್ಟು ಕ್ರಿಯೇಟಿವ್‌ ಆಗಿ ತೋರಿಸಬಹುದು ಎಂಬುದು ಈಗ ಮುಖ್ಯವಾಗುತ್ತದೆ. ಕೆಲವು ಬಾಲಿವುಡ್‌ ಸಿನಿಮಾಗಳಲ್ಲಿ ನಟ- ನಟಿಯರು ಬೆತ್ತಲೆಯಾಗಿ ಕಾಣಿಸಿಕೊಂಡಿದ್ದಾರೆ.


ಹೀರೋ ಅಥವಾ ಹೀರೋಯಿನ್‌ ಅನ್ನು ಬೆತ್ತಲೆಯಾಗಿ ತೋರಿಸುವುದು ಈಗ ಬಾಲಿವುಡ್‌ನಲ್ಲಿ ನೋ ನೋ ಅನ್ನುವ ವಿಷಯ ಖಂಡಿತ ಅಲ್ಲ. ನಗ್ನತೆಯನ್ನು ಕೂಡ ಎಷ್ಟು ಚೆನ್ನಾಗಿ, ಎಷ್ಟು ಕ್ರಿಯೇಟಿವ್‌ ಆಗಿ ತೋರಿಸಬಹುದು ಎಂಬುದು ಈಗ ಮುಖ್ಯವಾಗುತ್ತದೆ. ಕೆಲವು ಬಾಲಿವುಡ್‌ ಸಿನಿಮಾಗಳಲ್ಲಿ ನಟ- ನಟಿಯರು ಬೆತ್ತಲೆಯಾಗಿ ಕಾಣಿಸಿಕೊಂಡಿದ್ದಾರೆ. ಈ ನಗ್ನತೆಯನ್ನು ಕೂಡ ನೋಡುವಂತೆ, ಚೆನ್ನಾಗಿಯೇ ತೋರಿಸಲಾಗಿದೆ ಎಂಬುದು ಮುಖ್ಯ.

ಇತ್ತೀಚೆಗೆ ಬಾಲಿವುಡ್‌ನ ಗಮನ ಸೆಳೆಯುತ್ತಿರುವ ನಟಿ ರಾಧಿಕಾ ಆಪ್ಟೆ, ೨೦೧೬ರಲ್ಲಿ ನಂದ ಮ್ಯಾಡ್ಲಿ ಎಂಬ ಫಿಲಂನಲ್ಲಿ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದಳು. ಒಂದು ದೃಶ್ಯದಲ್ಲಿ ಈಕೆ ತನ್ನ ಸೊಂಡದ ಕೆಳಭಾಗವನ್ನು ಪೂರ್ತಿ ನಗ್ನವಾಗಿ ತನ್ನ ಸಹಕಲಾವಿದನಿಗೆ ತೋರಿಸುವ ದೃಶ್ಯ ವೈರಲ್‌ ಆಗಿತ್ತು. ನಂತರ ಪಾರ್ಚ್‌ಡ್‌ ಸಿನಿಮಾದಲ್ಲೂ ಈಕೆ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದಾಳೆ. ಈ ವಿವಾದಗಳೊಂದಿಗೆ ಈಕೆಯ ಅಭಿನಯ ಸಾಮರ್ಥ್ಯವೂ ಆಕೆಯ ಬೇಡಿಕೆ ಹೆಚ್ಚಿಸಿದೆ. 

Tap to resize

Latest Videos

undefined

ರಾಧಿಕಾ ಆಪ್ಟೆ ಲುಕ್ ನೋಡಿ ದಂಗಾದ ಜನ

ಬಾಲಿವುಡ್‌ ಖಾನ್‌ದಾನ್‌ ನಟರಲ್ಲಿ ಒಬ್ಬರಾದ ಅಮೀರ್‌ ಖಾನ್‌, ಪಿಕೆ ಚಿತ್ರದಲ್ಲಿ ನಗ್ನವಾಗಿ ಕಾಣಿಸಿಕೊಂಡಿದ್ದರು. ಇದರಲ್ಲಿ ಅನ್ಯಗ್ರಹದಿಂದ ಬೆತ್ತಲೆಯಾಗಿ ಭೂಮಿಗೆ ಬಂದು ಬೀಳುವ ಜೀವಿಯಾಗಿ ಕಾಣಿಸಿಕೊಳ್ಳುವ ಅಮೀರ್‌, ಚಿತ್ರದ ಮೊದಲ ದೃಶ್ಯದಲ್ಲಿ ನಗ್ನವಾಗಿ ಕಾಣಿಸಿಕೊಂಡು ಗಮನ ಸೆಳೆದಿದ್ದರು. ಈ ದೃಶ್ಯ ಈ ಫಿಲಂಗೆ ಅತ್ಯಗತ್ಯವಾಗಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. 

46ರ ನಟಿ ಮಲೈಕಾ ಆರೋರಾ ಡಯಟ್‌ ಹಾಗೂ ಫಿಟ್ನೆಸ್‌ ! 

ಹೀಗೆ ನಗ್ನವಾದವರಲ್ಲಿ ಹೊಸಬನೆಂದರೆ ರಣಬೀರ್‌ ಕಪೂರ್‌. ಈತ ತನ್ನ ಮೊದಲ ಚಿತ್ರ ಸಾವರಿಯಾದಲ್ಲೇ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದ. ಅದರಲ್ಲಿ ಬೆಳಕಿನ ಕಿಟಕಿಯ ಮುಂದೆ ತನ್ನ ಸೊಂಟಕ್ಕೆ ಪಾರದರ್ಶಕವಾದ ಒಂದು ಟವೆಲ್‌ ಹಿಡಿದಿದ್ದ ಬಿಟ್ಟರೆ ಬೇರೇನೂ ಇರಲಿಲ್ಲ. ಚಿತ್ರರಂಗಕ್ಕೆ ಹೊಸಬನಾಗಿದ್ದ ಆತನಿಂದ ಅದೊಂದು ಬೋಲ್ಡ್‌ ನಡೆಯಾಗಿತ್ತು ಎಂದೇ ಹೇಳಬೇಕು. 
ಜಾನ್‌ ಅಬ್ರಾಹಂನ ಗ್ರೀಕ್‌ ಶಿಲ್ಪದಂಥ ಬಾಡಿಗೆ ಹುಡುಗಿಯರು ಈಗಲೂ ಫಿದಾ ಆಗುತ್ತಾರೆ. ಈತ ಸಕ್ಸಸ್‌ಫುಲ್‌ ಮಾಡೆಲ್‌ ಕೂಡ ಆಗಿದ್ದವನು. ದೋಸ್ತಾನಾ ಚಿತ್ರದಲ್ಲಿ ಈತ ನಗ್ನ ಹಿಂಭಾಗವನ್ನು ತೋರಿಸಿದ್ದ. ಅದಕ್ಕೂ ಮುನ್ನ ನ್ಯೂಯಾರ್ಕ್ ಎಂಬ ಫಿಲಂನಲ್ಲಿ ಸಂಪೂರ್ಣ ನಗ್ನನಾಗುವ ಛಾತಿಯನ್ನೂ ಪ್ರದರ್ಶಿಸಿದ್ದ. 

ಸೋಶಿಯಲ್ ಮೀಡಿಯಾ ಸಂಶೋಧನೆ, ಪ್ರಿಯಾಂಕಾ ಹಳೆ ಅವತಾರ ಜಗಜ್ಜಾಹೀರು! ...

ನೀಲ್ ನಿತಿನ್ ಮುಖೇಶ್‌ ಕೂಡ ಜೈಲ್‌ ಎಂಬ ಚಿತ್ರದಲ್ಲಿ ಬೆತ್ತಲೆಯಾಗಿ ನಟಿಸಿದ. ಈತ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದರೂ ಇನ್ನೂ ಬಾಲಿವುಡ್‌ನಲ್ಲಿ ಭಾರಿ ಸಕ್ಸಸ್ ಪಡೆದಿಲ್ಲವೆಂದೇ ಹೇಳಬೇಕು. 
ನಟಿ ಅಮಲಾ ಪೌಲ್‌, ಆದಾಯಿ ಎಂಬ ಫಿಲಂನಲ್ಲಿ ರೇಪ್‌ಗೆ ಒಳಗಾಗುವ ಸ್ತ್ರೀಯಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಆಕೆ ಸಂಪೂರ್ಣ ನಗ್ನವಾಗಿ ತಮ್ಮ ದೇಹಸಿರಿಯನ್ನು ನೋಡುಗರ ಮುಂದೆ ತೆರೆದಿಟ್ಟಿದ್ದರು.

ಕುಸಿದು ಬಿತ್ತು ಕಣ್ಸನ್ನೆ ಹುಡುಗಿ ಫಾಲೋವರ್ಸ್‌; ಇದು ಒಂದೇ ಕಾರಣ ಸಾಕಿತ್ತು ನೋಡಿ! ...

ಝೆಹರ್‌ ಚಲನಚಿತ್ರದಲ್ಲಿ ನಟಿ ಉದಿತಾ ಗೋಸ್ವಾಮಿ, ಇಮ್ರಾನ್‌ ಹಶ್ಮಿಯನ್ನು ಪ್ರಚೋದಿಸುವ ದೃಶ್ಯದಲ್ಲಿ ಮಾದಕವಾಗಿ ನಟಿಸಿದ್ದರು. ಇದರಲ್ಲಿ ಆಕೆ ವಸ್ತ್ರ ಕಳಚಿ ನಗ್ನವಾಗುವ ದೃಶ್ಯ ಬಹುಕಾಲ ಚರ್ಚೆಯ ವಸ್ತುವಾಗಿತ್ತು. 

ಬ್ಯಾಂಡಿಟ್‌ ಕ್ವೀನ್‌ ಚಿತ್ರದಲ್ಲಿ ಡಕಾಯಿತರ ರಾಣಿಯಾಗಿ ಕಾಣಿಸಿಕೊಂಡ ಸೀಮಾ ಬಿಸ್ವಾಸ್‌, ರೇಪ್‌ಗೆ ಒಳಗಾಗುವ ದೃಶ್ಯಗಳಲ್ಲಿ ಬೆತ್ತಲಾಗಿ ಹಸಿಬಿಸಿಯಾಗಿ ಕಾಣಿಸಿಕೊಂಡದ್ದು ಬಿಸಿಬಿಸಿ ಚರ್ಚೆಯಾಗಿತ್ತು.

click me!