ಸೆನ್ಸಿಬಲ್‌ ನಟಿ ಎಂದೇ ಹೆಸರಾಗಿರುವ ರಾಧಿಕಾ ಆಪ್ಟೆ ವಿವಾದಗಳಿಗೂ ಹೆಸರುವಾಸಿ. ಇಂದು ಆಕೆ ಇನ್‌ಸ್ಟಗ್ರಾಮ್‌ನಲ್ಲಿ ಹಾಕಿಕೊಂಡ ಫೋಟೋದಲ್ಲಿ ಆಕೆ ಬರೀ ಬಿಕಿನಿಯಲ್ಲಿದ್ದಾಳೆ. ಸ್ವಿಮ್‌ ಸೂಟ್‌ ಅನ್ನು ಧರಿಸಲು ಆಕೆ ಸಜ್ಜಾಗುತ್ತಿರುವುದು ಕಾಣಿಸುತ್ತದೆ. ದೋಣಿಯ ಅಂಚಿನಲ್ಲಿ ಈಕೆ ಕೂತಿರುವಂತೆ ಕಾಣುತ್ತದೆ. ತಮ್ಮ ಪೋಸ್ಟ್‌ನ ಜೊತೆಗೆ ಈಕೆ ಮೈಂಡ್‌ಗೇಮ್ಸ್, ನೋ ಕೊರೋನಾ ಇನ್‌ ದಿ ಓಷನ್ಸ್‌, ಸೋಶಿಯಲ್‌ ಡಿಸ್ಟೆನ್ಸ್‌ ಎಟ್‌ ಡೈವಿಂಗ್‌ ಡಿಸೈರ್‌, ಡ್ರೀಮಿಂಗ್‌ ಆಫ್‌ ದಿ ಓಷನ್‌ ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಹಾಕಿಕೊಂಡಿದ್ದಾಳೆ. ಫೋಟೋದಲ್ಲಿ ಈಕೆಯ ಮೈಸಿರಿ ಚೆನ್ನಾಗಿ ಕಾಣುವಂತಿದೆ,

ಮದ್ವೆ ಬಗ್ಗೆ ಮೌನ ಮುರಿದ ಸಾಯಿ ಪಲ್ಲವಿ

ಸಹಜವಾಗಿಯೇ ಈಕೆಯ ದಿರಿಸು ಹಲವರ ಗಮನ ಸೆಳೆದಿದೆ. ಸಾವಿರಾರು ಮಂದಿ ಕಮೆಂಟ್‌ ಮಾಡಿದ್ದಾರೆ. ಹೆಚ್ಚಿನವರು ಮೆಚ್ಚುಗೆ ಸೂಚಿಸಿದ್ದರೆ, ಕೆಲವು ಮಂದಿ ಮಡಿವಂತರು, ಏನಮ್ಮಾ ಇನ್ನಷ್ಟು ಮೈ ಮುಚ್ಚುವಂಥ ಬಟ್ಟೆ ತೊಟ್ಟಿರಬಾರದಿತ್ತಾ ಎಂಬಂತೆ ಕಮೆಂಟ್‌ ಹಾಕಿದ್ದಾರೆ. ಇಂಥ ಕಮೆಂಟ್‌ಗಳಿಗೆ ನಕ್ಕು ಮುಂದೆ ಸಾಗಬಹುದು. ಇನ್ನು ಕೆಲವರು ಯಾಕಮ್ಮಾ ಲಾಕ್‌ಡೌನ್‌ ಟೈಮಲ್ಲಿ ಮನೇಲಿ ಇರೋಕಾಗಲ್ವಾ ಎಂದು ದಬಾಯಿಸಿದ್ದಾರೆ. ರಾಧಿಕಾ ಇದು ಈ ಲಾಕ್‌ಡೌನ್‌ ಟೈಮಲ್ಲೇ ತೆಗೆದುಕೊಂಡ ಫೋಟೋ ಎಂದು ಹಾಕಿಕೊಂಡಿಲ್ಲ. ಇರಲಿ, ಇಂಥವರು ಎಲ್ಲ ಕಡೆ ಇದ್ದೇ ಇರುತ್ತಾರೆ.

 

 
 
 
 
 
 
 
 
 
 
 
 
 

Loving the locked down 😎#mindgames #nocoronaintheocean #sociallydistantdivingdesire #dreamingoftheocean

A post shared by Radhika (@radhikaofficial) on Apr 21, 2020 at 2:02am PDT

 

ರಾಧಿಕಾ ಲಾಕ್‌ಡೌನ್‌ ಆರಂಭವಾಗುವ ಕೆಲವೇ ದಿನಗಳಿಗೆ ಮುನ್ನ ಲಂಡನ್‌ಗೆ ಹಾರಿದ್ದರು. ಏಕಕಾಲದಲ್ಲಿ ಅಲ್ಲೂ ಇಲ್ಲೂ ಲಾಕ್‌ಡೌನ್‌ ಆಗಿತ್ತು. ರಾಧಿಕಾ ಭಾರತಕ್ಕೆ ಹಿಂದಿರುಗಿ ಬರಲಾಗದೆ ಅಲ್ಲೇ ಉಳಿದಿದ್ದಾರೆ. ನಂತರ ಒಂದು ತಾನು ಆಸ್ಪತ್ರೆಯಲ್ಲಿ ಕಾಯುತ್ತಿರುವ ಒಂದು ಫೋಟೋ ಹಾಕಿಕೊಂಡಿದ್ದರು. ಅದರ ಜೊತೆಗೆ, ಕೋವಿಡ್‌ಗೆ ಸಂಬಂಧಿಸಿ ಈ ಭೇಟಿಯಲ್ಲ, ಗೆಳತಿಯೊಬ್ಬಳ ಪ್ರೆಗ್ನೆನ್ಸಿ ಟೆಸ್ಟ್‌ಗೆ ಸಂಬಂಧಿಸಿ ಬಂದಿದೀನಿ ಎಂದು ಹಾಕಿಕೊಂಡಿದ್ದರು.

ರಾಧಿಕಾ ಸ್ವತಃ ಚುರುಕು ಸ್ವಭಾವದ ನಟಿ. ಅವರ ರೋಲ್‌ಗಳೂ ಅಷ್ಟೆ. ವಿಶಿಷ್ಟ, ವಿಚಿತ್ರವಾಗಿರುತ್ತವೆ. ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುವ ಲಸ್ಟ್‌ ಸ್ಟೋರೀಸ್‌, ಸೇಕ್ರೆಡ್‌ ಗೇಮ್ಸ್ ಮತ್ತು ಘೌಲ್‌ ಸರಣಿಗಳಲ್ಲಿ ಈಕೆಯ ಅಭಿನಯ ಎಲ್ಲರ ಗಮನ ಸೆಳೆದಿವೆ. ಬಾಲಿವುಡ್‌ನಲ್ಲೂ ಪಾರ್ಚ್ಡ್, ಅಂಧಾಧುನ್‌, ಪ್ಯಾಡ್‌ಮ್ಯಾನ್‌, ಕಬಾಲಿ ಮತ್ತು ಶೋರ್‌ ಇನ್ ದಿ ಸಿಟಿಗಳಲ್ಲಿ ನಟಿಸಿ ಒಂದು ಸ್ಥಾನ ಗಳಿಸಿಕೊಂಡಿದ್ದಾಳೆ. ಈಕೆ ನಾಯಕಿ, ಪೋಷಕ ನಟಿ ಎಲ್ಲ ಪಾತ್ರಗಳಿಗೆ ಸೈ.

ವೈರಲ್‌ ಆಗಿದೆ ಕಿಂಗ್‌ ಖಾನ್‌ ಪುತ್ರಿ ಸುಹಾನಾಳ ಹಳೆ ವಿಡಿಯೋ ...

ಕೆಲವು ವಿವಾದಗಳೂ ಈಕೆಯನ್ನು ಕಾಡದೆ ಬಿಟ್ಟಿಲ್ಲ. ಉದಾಹರಣೆಗೆ ಈಕೆಯ ನ್ಯೂಡ್‌ ಚಿತ್ರಗಳ ವಿವಾದ. ಈಕೆ ಸ್ವತಃ ಬಟ್ಟೆ ಕಳಚಿ ಬೆತ್ತಲಾಗುತ್ತಿರುವ ಮತ್ತು ಒಬ್ಬಾತ ಅದನ್ನು ಶೂಟ್‌ ಮಾಡಿಕೊಳ್ಳುತ್ತಿರುವ ದೃಶ್ಯಗಳು ಲೀಕ್‌ ಆಗಿ ಎಲ್ಲೆಡೆ ಹರಿದಾಡಿದವು. ಆಕೆಗೆ ಭಾರಿ ಜನಪ್ರಿಯತೆಯನ್ನೂ ತಂದುಕೊಟ್ಟವು. ನಂತರ ಇನ್ನೊಂದು ನ್ಯೂಡ್‌ ಸೀನ್‌ ಎಲ್ಲೆಡೆ ಓಡಾಡಲು ಆರಂಭಿಸಿತು. ಅದು ಆಕೆ ನಟಿಸಿದ್ದ ತಮಿಳಿನ ಲಯನ್ ಎಂಬ ಸಿನಿಮಾ ತೆರೆಗೆ ಬರುವ ಮೊದಲಿನ ಸಂದರ್ಭ. ಇದು ರಾಧಿಕಾಗೂ ಸಿನಿಮಾಗೂ ಹೆಚ್ಚು ಪ್ರಚಾರ ಸಲ್ಲಿಸಿತು. ನಂತರ ಅನುರಾಗ್‌ ಠಾಕೂರ್‌ ಚಿತ್ರವೊಂದರಲ್ಲಿ ಈಕೆ ಪೂರ್ತಿ ನಗ್ನಳಾಗಿ ಕಾಣಿಸಿಕೊಂಡಿದ್ದಾಳೆ ಎಂಬ ದೃಶ್ಯಗಳು ಕೂಡ ಓಡಾಡಲಾರಂಭಿಸಿದವು. ರಾಧಿಕಾ ಇದಕ್ಕೆಲ್ಲ ಒಂದು ಮಿತಿಗಿಂತ ಹೆಚ್ಚು ಪ್ರತಿಕ್ರಿಯಿಸಲಿಲ್ಲ. ಯಾರಾದರೂ ಜೋರಾಗಿ ಟೀಕಿಸಿದರೂ ಕೂಡ, ""ನನ್ನ ದೇಹ, ಯಾವಾಗ ಹೇಗೆ ಪ್ರದರ್ಶಿಸಬೇಕು, ಪ್ರದರ್ಶಿಸಬೇಕೋ ಬೇಡವೋ ಎಂಬ ವಿವೇಚನೆ ನನಗೆ ಬಿಟ್ಟದ್ದು. ಕೇಳಲು ನೀವ್ಯಾರು?'' ಎಂಬ ದಿಟ್ಟ ಧಾಟಿಯಲ್ಲಿ ಮಾತಾಡಿದಳು.

ಲಾಕ್‌ಡೌನ್ ಟೈಮಲ್ಲಿ ಕಲಿಯಬಹುದಾದ 5 ಪಾಠಗಳು! ...

ಹೀಗೆಲ್ಲ ಆಗಿ ಈಕೆ ಇಂದು ಪಡ್ಡೆ ನೆಟ್ಟಿಗರ ಡಾರ್ಲಿಂಗ್‌ ಆಗಿದ್ದಾಳೆ. ಹುಡುಗಿಯರಿಗೆ ಒಂದು ಬಗೆಯ ರೋಲ್‌ ಮಾಡೆಲ್‌ ಕೂಡಾ.