ಮುಂದಿನ ಸಿನಿಮಾದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದೇನು?

Published : Mar 28, 2022, 07:32 PM IST
ಮುಂದಿನ ಸಿನಿಮಾದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದೇನು?

ಸಾರಾಂಶ

ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾದ ಬಗ್ಗೆ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ, ಸಂಪೂರ್ಣ ಆದ ಮೇಲೆ ಪ್ರಾರಂಭ ಮಾಡುತ್ತೇನೆ ಎಂದು ಯಶ್ ಹೇಳಿದ್ದಾರೆ.  

ರಾಕಿಂಗ್ ಸ್ಟಾರ್ ಯಶ್(Yash) ಸದ್ಯ ಕೆಜಿಎಫ್ 2 (KGF 2) ಬಿಡುಗಡೆಯ ತಯಾರಿಯಲ್ಲಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಯಶ್ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಕೆಜಿಎಫ್-2 ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿದ್ದು ಅಭಿಮಾನಿಗಳು ಕಾರತರಿಂದ ಕಾಯುತ್ತಿದ್ದಾರೆ. ಇಡೀ ವಿಶ್ವವೇ ಎದುರು ನೋಡುತ್ತಿರುವ ಕೆಜಿಎಫ್-2 ಸಿನಿಮಾ ಏಪ್ರಿಲ್ 14ರಂದು ತೆರೆಗೆ ಬರುತ್ತಿದೆ. ಈ ಸಿನಿಮಾ ಬಳಿಕ ಯಶ್ ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಯಾರು ನಿರ್ದೇಶನ ಮಾಡಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಯಶ್ ಹೋದಲ್ಲೆಲ್ಲಾ ಈ ಪ್ರಶ್ನೆ ಎದುರಾಗುತ್ತಲೆ ಇದೆ.

ಕೆಜಿಎಫ್-2 ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲೂ(kgf 2 trailer launch event) ಪತ್ರಕರ್ತರು ರಾಕಿಂಗ್ ಸ್ಟಾರ್ ಅವರಿಗೆ ಈ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರ ನೀಡಿದ ಯಶ್, 'ನಾನು ಕೂಲಿ ಕೆಲಸಗಾರರ ಹಾಗೆ. ಹೊರುವ ಕೆಲಸ ನನ್ನದು, ಎಷ್ಟು ಆಗುತ್ತೋ ಅಷ್ಟು ಹೊರಣ, ನಾನು ಸಿನಿಮಾ ಮಾಡೋದೆ ಅಭಿಮಾನಿಗಳಿಗಾಗಿ, ಜನರಿಗಾಗಿ. ಅವರು ಖುಷಿಯಾಗಬೇಕು ಎಂದರೆ ಮೊದಲು ನಾನು ಖುಷಿಯಾಗಬೇಕು. ನನಗೆ ಎಲ್ಲಿವರೆಗೂ ಖುಷಿ ಇರುತ್ತೊ ಅಲ್ಲಿವರೆಗೂ ಕೆಲಸ ಮಾಡುತ್ತಿರುತ್ತೇನೆ. ಖುಷಿಗಾಗಿ ಮತ್ತೊಂದು ಸಿನಿಮಾದ ಸ್ಕ್ರಿಪ್ಟ್ ಕೆಲಸ ಮಾಡುತ್ತಿದ್ದೇವೆ. 100 ವರ್ಸೆಂಟ್ ಎನಿಸಿದ ಮೇಲೆ ಶುರುಮಾಡುತ್ತೇವೆ' ಎಂದು ಯಶ್ ಹೇಳಿದ್ದಾರೆ.

'KGF 2' ಚಿತ್ರದಲ್ಲಿ ಅನಂತ್ ನಾಗ್ ಯಾಕಿಲ್ಲ? ಅಭಿಮಾನಿಗಳ ಪ್ರಶ್ನೆ

ಅಂದಹಾಗೆ ಯಶ್ ಮುಂದಿನ ಸಿನಿಮಾಗೆ ಮಫ್ತಿ ಸಿನಿಮಾ ಖ್ಯಾತಿಯ ನಿರ್ದೇಶಕ ನರ್ತನ್ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ನರ್ತನ್ ಸ್ಕ್ರಿಪ್ಟ್ ಕೆಲಸ ಪ್ರಾರಂಭ ಮಾಡಿದ್ದಾರೆ ಎನ್ನುವ ಮಾತು ಕಳೆದ ಕೆಲ ತಿಂಗಳಿಂದ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಇನ್ನು ಅಧಿಕೃತ ಮಾಹಿತಿ ಎಲ್ಲಾ ಬಹಿರಂಗವಾಗಿಲ್ಲ. ಸದ್ಯ ಯಶ್ ಕೆಜಿಎಫ್2 ಕಡೆ ಸಂಪೂರ್ಣ ಗಮನ ಹರಿಸಿದ್ದಾರೆ.

ಯಶ್ ಕೆಜಿಎಫ್ ಸಿನಿಮಾ ಒಪ್ಪಿಕೊಂಡಾಗಿನಿಂದ ಬೇರೆ ಸಿನಿಮಾ ಒಪ್ಪಿಕೊಂಡಿಲ್ಲ. ಸುಮಾರು ಐದು ವರ್ಷಗಳಿಂದ ಯಶ್ ಕೆಜಿಎಫ್ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಕೆಜಿಎಫ್ ಪಾರ್ಟ್-1 ಮತ್ತು ಪಾರ್ಟ್-2ಗಾಗಿ ಸಿಕ್ಕಾಪಟ್ಟೆ ಶ್ರಮಿಸಿದ್ದಾರೆ. ಮೊದಲ ಭಾಗ ದೊಡ್ಡ ಮಟ್ಟದ ಸಕ್ಸಸ್ ಕಂಡಿದೆ. ಇದೀಗ ಕೆಜಿಎಫ್-2 ಬಿಡುಗಡೆಗೆ ಸಿದ್ಧವಾಗಿದೆ. ಮುಂದಿನ ತಿಂಗಳೇ ಬಿಡುಗಡೆಯಾಗುತ್ತಿದೆ. ಪಾರ್ಟ್-2 ಕೂಡ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಾಣುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸೌತ್ ಸಿನಿರಂಗದಲ್ಲಿ ಶುರುವಾಯ್ತು KGF 2 ಹವಾ, ಜೈಹೋ ರಾಕಿಭಾಯ್..!

ಈ ಸಿನಿಮಾ ಬಳಿಕ ಯಶ್ ಮುಂದಿನ ಸಿನಿಮಾದ ಮೇಲಿನ ನಿರೀಕ್ಷೆ ಕೂಡ ಹೆಚ್ಚಾಗಲಿದೆ. ಯಾವ ರೀತಿಯ ಸಿನಿಮಾ ಮಾಡಲಿದ್ದಾರೆ, ಯಾರು ನಿರ್ದೇಶನ ಮಾಡಲಿದ್ದಾರೆ, ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದ್ಯಾ ಎಂದು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಎಲ್ಲಾ ಪ್ರಶ್ನೆ ಕಾತರತೆಗೆ ಉತ್ತರ ಕೆಜಿಎಫ್-2 ಬಿಡುಗಡೆಯಾದ ಬಳಿಕವೇ ಸಿಗಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಉಸಿರು ಬಿಗಿದಿಟ್ಟುಕೊಂಡು ನೋಡುವಂತಹ Serial Killer ಚಿತ್ರಗಳು Don't Miss It
ಬಾಲಿವುಡ್‌ಗೆ ಕಾಲಿಡಲಿರೋ 'ಬೀರ್‌ಬಲ್' ಚತುರೆ.. 'ಕಾಂತಾರ 'ಕನಕವತಿ' ಹಿಂದಿ ಸಿನಿಮಾ ಯಾವುದು?