
ಕಾಲಿವುಡ್ ಎನರ್ಜಿಟಿಕ್ ನಟ ವಿಜಯ್ ಸೇತುಪತಿ ಕೈಯಲ್ಲಿರುವುದು ಎಲ್ಲವೂ ಬಿಗ್ ಬಿಗ್ ಪ್ರಾಜೆಕ್ಟ್‌ಗಳೇ. ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿಯರು ಒಂದೇ ಮಾತುಕತೆಗೆ ವಿಜಯ್ ಸಿನಿಮಾ ಒಪ್ಪಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ನಟಿ ಅವರಾಗಿ ಅವರೇ ಕಾಲ್ ಶೀಟ್ ಕೊಟ್ಟರೂ ವಿಜಯ್ ಬೇಡ ಎಂದು ತಿರಸ್ಕಾರ ಮಾಡಿದ್ದಾರೆ.
ಈಗಷ್ಟೇ ತಮಿಳು ಚಿತ್ರರಂಗದಲ್ಲಿ ಹೆಸರು ಮಾಡುತ್ತಿರುವ ಕೃತಿ ಶೆಟ್ಟಿ ಮತ್ತು ವಿಜಯ್ ಸೇತುಪತಿ ಕಾಂಬಿನೇಷನ್‌ನಲ್ಲಿ ಚಿತ್ರಕತೆ ತಯಾರಿ ಮಾಡಲಾಗಿದೆ. ನಿರ್ದೇಶಕರು ನಿರ್ಮಾಪಕರು ವಿಜಯ್‌ಗೆ ಕಥೆ ಒಪ್ಪಿಸಿದ್ದಾರೆ. ಆದರೆ ನಟಿ ಯಾರು ಎಂದು ತಿಳಿದ ಕೂಡಲೇ ವಿಜಯ್ ಬೇಡ ಈ ಸಿನಿಮಾ ಬೇಡವೇ ಬೇಡ ಎಂದಿದ್ದಾರೆ.
'ನಾನು ಸನ್ ಸಿನಿಮಾ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿರುವ ಸಿನಿಮಾದಲ್ಲಿ ನಟಿಸಬೇಕಾಗಿದೆ. ಆ ಸಿನಿಮಾವನ್ನು ಪ್ರೊನ್ರಮ್ ನಿರ್ದೇಶನ ಮಾಡುತ್ತಿದ್ದಾರೆ. ಅವರ ಚಿತ್ರಕತೆಯನ್ನು ಕಳುಹಿಸಿದ್ದಾರೆ. ಆದರೆ ನನಗೆ ನಟಿಸಲು ಸಾಧ್ಯವಿಲ್ಲ ಎಂದಿರುವೆ' ಎಂದು ನಟ ವಿಜಯ್ ಹೇಳಿದ್ದಾರೆ.
' ಪ್ರೊಡಕ್ಷನ್ ಸಂಸ್ಥೆಯವರು ಚಿತ್ರಕತೆ ಜೊತೆಗೆ ನಟಿ ಕೃತಿ ಫೋಟೋ ಕಳುಹಿಸಿದ್ದಾರೆ. ಇವರೇ ನಾಯಕಿ ಎಂದು ಹೇಳಿದ್ದರು. ನಾನು ಈಗಷ್ಟೆ ಆಕೆಯ ತಂದೆಯ ಪಾತ್ರದಲ್ಲಿ ನಟಿಸಿದ್ದೀನಿ. ನನಗೆ ಆಕೆಯನ್ನು ನನ್ನ ನಾಯಕಿ ಎಂದುಕೊಳ್ಳಲು ಆಕೆಯೊಂದಿಗೆ ರೊಮ್ಯಾನ್ಸ್ ದೃಶ್ಯಗಳಲ್ಲಿ ನಟಿಸಲು ಸಾಧ್ಯವಿಲ್ಲ ಎಂದು ತಿಳಿಸಿರುವೆ. ಈಗ ಮಾತ್ರವಲ್ಲ ಮುಂದೆಯೂ ಸಹ ನಾನು ಕೃತಿಯ ಬಾಯ್‌ಫ್ರೆಂಡ್ ಅಥವಾ ಪತಿ ಪಾತ್ರದಲ್ಲಿ ನಟಿಸಲಾರೆ ಏಕೆಂದರೆ ನಾನು ಆಕೆಯನ್ನು ಮಗಳ ರೀತಿ ಕಂಡಾಗಿದೆ' ಎಂದು ವಿಜಯ್ ಸೇತಪತಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.