ಆಡಿಯೋ ಸಂಸ್ಥೆ ಸ್ಥಾಪಿಸಿದ ನಟ ವಸಿಷ್ಠ ಸಿಂಹಗೆ ಗೆಳೆಯ ಧನಂಜಯ್ ಸಾಥ್

Published : Apr 04, 2022, 06:19 PM IST
ಆಡಿಯೋ ಸಂಸ್ಥೆ ಸ್ಥಾಪಿಸಿದ ನಟ ವಸಿಷ್ಠ ಸಿಂಹಗೆ ಗೆಳೆಯ ಧನಂಜಯ್ ಸಾಥ್

ಸಾರಾಂಶ

ಸ್ಯಂಡಲ್ ವುಡ್ ನಟ ವಸಿಷ್ಠ ಸಿಂಹಾ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ನಟನೆ ಮತ್ತು ಗಾಯನದಲ್ಲಿ ಗುರಿತಿಸಿಕೊಂಡಿದ್ದ ವಸಿಷ್ಠ ಇದೀಗ ಹೊಸ ಆಡಿಯೋ ಲೆಬಲ್ ಲಾಂಚ್ ಮಾಡಿದ್ದಾರೆ. ಸಿಂಹ ಆಡಿಯೋ ಹೆಸರಿನಲ್ಲಿ ಆಡಿಯೋ ಸಂಸ್ಥೆ ಪ್ರಾರಂಭಿಸಿದ್ದು ಕಾಲಚಕ್ರ ಸಿನಿಮಾದ ಮೊದಲ ಹಾಡು ಬಿಡುಗಡೆ ಮಾಡಿದ್ದಾರೆ. 

ಸ್ಯಾಂಡಲ್ ವುಡ್ ಖ್ಯಾತ ನಟ, ಗಾಯಕ ವಸಿಷ್ಠ ಸಿಂಹ (Vasishta Simha) ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ. ಈಗಾಗಲೇ ನಟನಾಗಿ, ಗಾಯಕನಾಗಿ ಗುರುತಿಸಿ ಕೊಂಡಿರುವ ವಸಿಷ್ಠ ಸಿಂಹ ಇದೀಗ ಆಡಿಯೋ ಲೋಕಕ್ಕೆ ಹೆಜ್ಜೆ ಇಟ್ಟಿದ್ದಾರೆ. ಚಿತ್ರರಂಗದಲ್ಲಿ ಮತ್ತೊಂದು ಹೆಜ್ಜೆ ಮುಂದಿರುವ ವಸಿಷ್ಠ ಅವರಿಗೆ ಸ್ನೇಹಿತರು ಮತ್ತು ಅಭಿಮಾನಿಗಳು ವಿಶ್ ಮಾಡಿ ಹಾರೈಸುತ್ತಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ನಟನಾಗಿ, ಖಳನಾಗಿ, ಹೀರೋ ಆಗಿ ಅಭಿಮಾನಿಗಳ ಗಮನ ಸೆಳೆಸಿದ್ದ ವಸಿಷ್ಠ ಪಕ್ಕದ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲೂ ಮಿಂಚಿದ್ದರು. ಈ ನಡುವೆ ಇದೀಗ ತಮ್ಮದೇ ಆಡಿಯೋ ಲೇಬಲ್ ಲಾಂಚ್ ಮಾಡಿದ್ದಾರೆ. ಈ ವಿಚಾರವನ್ನು ವಸಿಷ್ಠ ಸಿಂಹ ಅವರೇ ಅಧಿಕೃತವಾಗಿ ಬಹಿರಂಗ ಪಡಿಸಿದ್ದಾರೆ.

ಅಂದಹಾಗೆ ಆಡಿಯೋ ಲೇಬಲ್ ಗೆ ಆಡಿಯೋ 'ಸಿಂಹ ಆಡಿಯೋ’ (Simmhaa Audio) ಎಂದು ಹೆಸರಿಟ್ಟಿದ್ದಾರೆ. ವಸಿಷ್ಠ ಅವರ ಕನಸಿನ ಆಡಿಯೋ ಸಂಸ್ಥೆಯನ್ನು ಗೆಳೆಯ ಡಾಲಿ ಧನಂಜಯ್(DhananJaya) ಮತ್ತು ನಾದಬ್ರಹ್ಮ ಹಂಸಲೇಖ ಲಾಂಚ್ ಮಾಡಿ ವಸಿಷ್ಠ ಅವರಿಗೆ ಶುಭಹಾರೈಸಿದ್ದಾರೆ. ಈ ಸಂಸ್ಥೆಯಿಂದ ಮೊದಲ ಆಡಿಯೋ ವಸಿಷ್ಠ ಅವರೇ ನಟನೆ ಮಾಡಿರುವ ‘ಕಾಲಚಕ್ರ’ ಸಿನಿಮಾದ ಹಾಡು ಬಿಡುಗಡೆಯಾಗುತ್ತಿದೆ. ಈ ಚಿತ್ರದ ನೀನೆ ಬೇಕು.. ಹಾಡು ಸಿಂಹ ಆಡಿಯೋ ಮೂಲಕ ಬಂದ ಮೊದಲ ಹಾಡಾಗಿದೆ. ಏಪ್ರಿಲ್​ 4ರಂದು ಸಂಜೆ 6 ಗಂಟೆಗೆ ನಡೆದ ಆಡಿಯೋ ಸಂಸ್ಥೆ ಲಾಂಚ್ ಕಾರ್ಯಕ್ರಮದಲ್ಲಿ ಈ ಹಾಡನ್ನು ಸಹ ರಿಲೀಸ್ ಮಾಡಲಾಗಿದೆ. ಈ ವಿಚಾರ ವಸಿಷ್ಠ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಎಲ್ಲರೂ ವಸಿಷ್ಠ ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಜತೆಗೆ ಈ ಆಡಿಯೋ ಸಂಸ್ಥೆಯಿಂದ ಹೆಚ್ಚೆಚ್ಚು ಹಾಡುಗಳು ರಿಲೀಸ್​ ಆಗಲಿ ಎಂದು ಶುಭಹಾರೈಸಿದ್ದಾರೆ.

ವಸಿಷ್ಠ ನಟನೆಯ ಕಾಲಚಕ್ರ(Kalachakra) ಸಿನಿಮಾ ಬಾರಿ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದ ಬಗ್ಗೆ ಅಭಿಮಾನಿಗಳು ಸಹ ಕುತೂಹಲದಿಂದ ಕಾಯುತ್ತಿದ್ದಾರೆ. ಕಾಲಚಕ್ರ ಸಿನಿಮಾ ಸುಮಂತ್​ ಕ್ರಾಂತಿ ನಿರ್ದೇಶನದಲ್ಲಿ ಮೂಡಿಬಂದಿದೆ. ರಶ್ಮಿ ಕೆ. ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಕ್ಷಾ, ಸುಚೇಂದ್ರ ಪ್ರಸಾದ್, ದೀಪಕ್​ ಶೆಟ್ಟಿ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದು, ಇದೊಂದು ಥ್ರಿಲ್ಲರ್ ಶೈಲಿಯ ಸಿನಿಮಾ ಆಗಿದೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ವಸಿಷ್ಠ ಸದ್ಯ ಬಹುನಿರೀಕ್ಷೆಯ ಕೆಜಿಎಪ್-2 ಬಿಡುಗಡೆಗೆ ಕಾಯುತ್ತಿದ್ದಾರೆ. ಕೆಜಿಎಫ್ ಚಾಪ್ಟರ್ 1ರಲ್ಲೂ ವಸಿಷ್ಠ ಕಾಣಿಸಿಕೊಂಡಿದ್ದರು. ಕಮಲ್ ಎನ್ನುವ ಪಾತ್ರ ನಿರ್ವಹಿಸಿದ್ದರು, ಪಾರ್ಟ್-2ನಲ್ಲೂ ಅವರ ಪಾತ್ರ ಮುಂದುವರೆದಿದೆ. ಇತ್ತೀಚಿಗಷ್ಟೆ ರಿಲೀಸ್ ಆದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲೂ ವಸಿಷ್ಠ ಹಾಜರಿದ್ದರು. 

ಕೆಲವರು ನನ್ನನ್ನ Unlucky ಅಂದ್ರೂ ಶಿವಣ್ಣ ಮಾತ್ರ ಲಕ್ಕಿ ಅಂತಾರೆ: ಡಾಲಿ ಧನಂಜಯ್

ಇನ್ನು ವಸಿಷ್ಠ ಸಿನಿಮಾ ಪಯಣದ ಬಗ್ಗೆ ಹೇಳುವುದಾದರೆ ಯಶ್ ನಟನೆಯ ರಾಜಹುಲಿ ಸಿನಿಮಾದಲ್ಲಿ ಮಿಂಚಿದ್ದ ವಸಿಷ್ಠ ಅವರಿಗೆ ಆ ಸಿನಿಮಾ ದೊಡ್ಡ ಮಟ್ಟದಲ್ಲಿ ಬ್ರೇಕ್ ನೀಡಿತ್ತು. ಬಳಿಕ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಗೋಧಿ ಬಣ್ಣ ಸಾಧಾರಣ ಮೈ ಕಟ್ಟು ಸಿನಿಮಾ ಮತ್ತಷ್ಟು ಖ್ಯಾತಿ ತಂದುಕೊಟ್ಟ ಸಿನಿಮಾಗಳಲ್ಲಿ ಒಂದಾಗಿದೆ. ಸುಂದರಂಗ ಜಾಣ, ಮಫ್ತಿ, ಟಗರು, ಮಾಯಾಬಜಾರ್ ಸೇರಿದಂತೆ ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

ನಟನೆ ಜೊತೆಗೆ ವಸಿಷ್ಠ ಗಾಯನದಲ್ಲೂ ಗುರುತಿಸಿಕೊಂಡಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾದ ಹಾಡು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ನಂತರ ದಯವಿಟ್ಟು ಗಮನಿಸು, ರಾಮಾರ್ಜುನ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಹಾಡಿದ್ದಾರೆ. ಅಂದಹಾಗೆ ವಸಿಷ್ಠ ಅವರಿಗೆ ನಟನೆ ಜೊತೆ ಗಾಯನ ಕೂಡ ತುಂಬಾ ಇಷ್ಟ. ಸಂಗೀತದ ಮೇಲಿನ ಆಸಕ್ತಿಯಿಂದನೇ ವಸಿಷ್ಠ ಆಡಿಯೋ ಸಂಸ್ಥೆಯನ್ನು ಲಾಂಚ್ ಮಾಡಿದ್ದಾರೆ.

ವಿಭಿನ್ನ ಪಾತ್ರದಿಂದ ವೀಕ್ಷಕರು ನೋಡುವ ರೀತಿ ಬದಲಾಗುತ್ತದೆ: Vasishta Simha

ಸದ್ಯ ವಸಿಷ್ಠ ಕೆಜಿಎಫ್-2, ಕಾಲಚಕ್ರ ಸೇರಿದಂತೆ ಪಂಥ ಎನ್ನುವ ಸಿನಿಮಾದಲ್ಲೂ ನಟಿಸಿದ್ದಾರೆ. ಈ ಎಲ್ಲಾ ಸಿನಿಮಾಗಳ ಬಿಡುಗಡೆಗೆ ವಸಿಷ್ಠ ಕಾಯುತ್ತಿದ್ದಾರೆ. ಹೀರೋ ಮತ್ತು ಖಳನಟ ಎರಡನ್ನು ಬ್ಯಾಲೆನ್ಸ್ ಮಾಡಿಕೊಂಡು ಸಾಗುತ್ತಿರುವ ವಸಿಷ್ಠ ಇದೀಗ ಆಡಿಯೋ ಲೋಕಕ್ಕ್ ಎಂಟ್ರಿ ಕೊಡುವ ಮೂಲಕ ಮತ್ತಷ್ಟು ಬ್ಯುಸಿಯಾಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?