ಸಿಎಂ ವಿಜಯ್ ಮಗ ಜೇಸನ್ ಸಂಜಯ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಹೀರೋ; ಹೀಗೂ ಇರಬಹುದಾ ಸ್ಟಾರ್ ಮಗ?

Published : Jun 04, 2026, 08:02 PM IST
Jason Sanjay Sundeep Kishan

ಸಾರಾಂಶ

ದಳಪತಿ ವಿಜಯ್ ನಟನೆಯಲ್ಲಿ ಸಾಮ್ರಾಜ್ಯ ಕಟ್ಟಿದರೆ, ಅವರ ಪುತ್ರ ಜೇಸನ್ ಸಂಜಯ್ ನಿರ್ದೇಶನದ ಮೂಲಕ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಜುಲೈ 31ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಸಂಜಯ್ ಅವರ ಚೊಚ್ಚಲ ಪ್ರಯತ್ನಕ್ಕೆ ಕ್ಷಣಗಣನೆ ಶುರುವಾಗಿದೆ!

ಕಾಲಿವುಡ್‌ನ ‘ದಳಪತಿ’ ವಿಜಯ್ ಎಂದರೆ ದಕ್ಷಿಣ ಭಾರತದಾದ್ಯಂತ ಇರುವ ಕ್ರೇಜ್ ಅಷ್ಟಿಷ್ಟಲ್ಲ. ಇದೀಗ ವಿಜಯ್ ರಾಜಕೀಯ ಅಖಾಡಕ್ಕೆ ಧುಮುಕಿದ್ದರೆ, ಅವರ ಪುತ್ರ ಜೇಸನ್ ಸಂಜಯ್ (Jason Sanjay) ಬೆಳ್ಳಿಪರದೆಯ ಹಿಂದೆ ನಿಂತು ಕಮಾಲ್ ಮಾಡಲು ಸಜ್ಜಾಗಿದ್ದಾರೆ. ಜೇಸನ್ ನಾಯಕನಾಗಿ ಚಿತ್ರರಂಗಕ್ಕೆ ಬರುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದರು.

ಆದರೆ ಅವರು ಕ್ಯಾಮೆರಾ ಮುಂದೆ ನಿಲ್ಲುವ ಬದಲು ಕ್ಯಾಮೆರಾ ಹಿಂದೆ ಆ್ಯಕ್ಷನ್ ಕಟ್ ಹೇಳಲು ಸಿದ್ಧರಾಗಿದ್ದಾರೆ. ಜೇಸನ್ ನಿರ್ದೇಶಿಸುತ್ತಿರುವ ಚೊಚ್ಚಲ ಸಿನಿಮಾ 'ಸಿಗ್ಮಾ' (Sigma) ಈಗ ಚಿತ್ರರಂಗದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಈ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿರುವ ಪ್ರತಿಭಾವಂತ ನಟ ಸಂದೀಪ್ ಕಿಶನ್ (Sundeep Kishan), ಇತ್ತೀಚಿನ ಸಂದರ್ಶನವೊಂದರಲ್ಲಿ ಜೇಸನ್ ಸಂಜಯ್ ಬಗ್ಗೆ ನೀಡಿರುವ ಹೇಳಿಕೆ ಈಗ ವೈರಲ್ ಆಗಿದೆ.

ದಳಪತಿ ಪುತ್ರನ ತಾಳ್ಮೆಗೆ ಸಂದೀಪ್ ಫಿದಾ!

'ಸಿಗ್ಮಾ' ಚಿತ್ರದ ಮೊದಲ ಸಿಂಗಲ್ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ ಮಾತನಾಡಿದ ಸಂದೀಪ್ ಕಿಶನ್, ಜೇಸನ್ ಸಂಜಯ್ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. "ನಿರ್ದೇಶಕ ಸಂಜಯ್ ಮತ್ತು ಅವರ ತಂಡ ಈ ಚಿತ್ರಕ್ಕಾಗಿ ಹಗಲಿರುಳು ಶ್ರಮಿಸಿದೆ. ಸಿನಿಮಾ ಶುರುವಾಗುವ ಮೊದಲೇ ಪ್ರಿ-ಪ್ರೊಡಕ್ಷನ್ ಕೆಲಸಗಳನ್ನು ಬಹಳ ಅಚ್ಚುಕಟ್ಟಾಗಿ ಮಾಡಿದ್ದರು. 25 ವರ್ಷದ ಯುವಕನೊಬ್ಬ ಇಷ್ಟೊಂದು ಸ್ಪಷ್ಟತೆ ಮತ್ತು ತಾಳ್ಮೆ ಹೊಂದಿರುತ್ತಾನೆ ಎಂದು ನಾನು ಊಹಿಸಿರಲಿಲ್ಲ" ಎಂದು ಸಂದೀಪ್ ಹೇಳಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ಎಷ್ಟೇ ಒತ್ತಡವಿದ್ದರೂ ಜೇಸನ್ ಅತ್ಯಂತ ಶಾಂತವಾಗಿ ಸೆಟ್ ನಿಭಾಯಿಸುತ್ತಿದ್ದ ರೀತಿ ನೋಡಿ ಸಂದೀಪ್ ಅಚ್ಚರಿಗೊಂಡಿದ್ದಾರಂತೆ.

ತಂದೆಯಂತೆಯೇ ಕಾಣುವ ಸರಳ ವ್ಯಕ್ತಿ:

ಜೇಸನ್ ಸಂಜಯ್ ಬಗ್ಗೆ ಮತ್ತೊಂದು ಆಸಕ್ತಿದಾಯಕ ವಿಷಯವೆಂದರೆ, ಅವರು ನೋಡಲು ಅಚ್ಚುತಂದೆ ವಿಜಯ್ ಅವರಂತೆಯೇ ಕಾಣುತ್ತಾರಂತೆ. "ಸಂಜಯ್ ಅವರಲ್ಲಿ ಸ್ಟಾರ್ ಗಿರಿಯ ಅಹಂಕಾರ ಲವಲೇಶವೂ ಇಲ್ಲ. ಅವರು ತುಂಬಾ ವಿನಮ್ರ ಮತ್ತು ಸರಳ ವ್ಯಕ್ತಿ. ಅವರ ಚರ್ಮದ ಬಣ್ಣದಿಂದ ಹಿಡಿದು ನಡೆದುಕೊಳ್ಳುವ ರೀತಿಯವರೆಗೆ ತಂದೆಯನ್ನೇ ನೆನಪಿಸುತ್ತಾರೆ. ಅವರನ್ನು ನಿರ್ದೇಶಕ ಎನ್ನುವುದಕ್ಕಿಂತ ಒಬ್ಬ ಒಳ್ಳೆಯ ಸಹೋದರ ಎಂದು ಕರೆಯಲು ನಾನು ಇಷ್ಟಪಡುತ್ತೇನೆ" ಎಂದು ಸಂದೀಪ್ ಭಾವುಕರಾಗಿ ನುಡಿದಿದ್ದಾರೆ.

ಕೆನಡಾದಲ್ಲಿ ಸಿನಿಮಾ ಪಾಠ ಕಲಿತ ಜೇಸನ್:

ಜೇಸನ್ ಅವರಿಗೆ ಬಾಲ್ಯದಿಂದಲೂ ನಟನೆಗಿಂತ ತಾಂತ್ರಿಕ ವಿಷಯಗಳಲ್ಲೇ ಆಸಕ್ತಿ ಇತ್ತಂತೆ. ಅದಕ್ಕಾಗಿಯೇ ಅವರು ಕೆನಡಾದ "ಟೊರೊಂಟೊ ಫಿಲ್ಮ್ ಸ್ಕೂಲ್" ನಿಂದ ಚಲನಚಿತ್ರ ನಿರ್ಮಾಣ ಮತ್ತು ನಿರ್ದೇಶನದಲ್ಲಿ ತರಬೇತಿ ಪಡೆದಿದ್ದಾರೆ. ಎಡಿಟಿಂಗ್ ಬಗ್ಗೆಯೂ ಅಪಾರ ಜ್ಞಾನ ಹೊಂದಿರುವ ಜೇಸನ್, ತಾಂತ್ರಿಕವಾಗಿ ಸಿನಿಮಾ ಬಹಳ ಅದ್ಧೂರಿಯಾಗಿ ಮೂಡಿಬರುವಂತೆ ನೋಡಿಕೊಳ್ಳುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಅಡಿಯಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಎಸ್.ಎಸ್. ಥಮನ್ ಸಂಗೀತ ನೀಡುತ್ತಿದ್ದು, ರಾಜು ಸುಂದರಂ ಮತ್ತು ಸಂಪತ್ ರಾಜ್ ಅವರಂತಹ ಅನುಭವಿ ನಟರು ತಾರಾಗಣದಲ್ಲಿದ್ದಾರೆ.

ಒಟ್ಟಿನಲ್ಲಿ, ದಳಪತಿ ವಿಜಯ್ ನಟನೆಯಲ್ಲಿ ಸಾಮ್ರಾಜ್ಯ ಕಟ್ಟಿದರೆ, ಅವರ ಪುತ್ರ ಜೇಸನ್ ಸಂಜಯ್ ನಿರ್ದೇಶನದ ಮೂಲಕ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಜುಲೈ 31ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಸಂಜಯ್ ಅವರ ಚೊಚ್ಚಲ ಪ್ರಯತ್ನಕ್ಕೆ ಕಾಲಿವುಡ್ ಮಾತ್ರವಲ್ಲದೆ ಇಡೀ ಸೌತ್ ಇಂಡಿಯಾ ಶುಭ ಹಾರೈಸುತ್ತಿದೆ. ವಿಜಯ್ ಪತ್ನಿ ಸಂಗೀತಾ ಅವರ ಮಾರ್ಗದರ್ಶನದಲ್ಲಿ ಮಗನ ವೃತ್ತಿಜೀವನ ಅದ್ಧೂರಿಯಾಗಿ ಆರಂಭವಾಗುತ್ತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Peddi Movie Review: ರಾಮ್ ಚರಣ್ ಅದ್ಭುತ ನಟನೆ, ಶಿವಣ್ಣ ಪವರ್‌ಫುಲ್ ಪಾತ್ರ: ಭಾವನಾತ್ಮಕ ಕಥೆ ಗೆದ್ದಿದೆಯೇ?
Lalit Modi: ನನ್ನ ಪಾತ್ರಕ್ಕೆ ರಣವೀರ್ ಸಿಂಗ್ ಸೂಕ್ತ, ದಾವೂದ್‌ನಿಂದಲೇ ಕ್ರಿಕೆಟ್‌ಗೆ ಗುಡ್‌ಬೈ ಎಂದ ಮೋದಿ!