ಅಂದು ಕನ್ನಡ.. ಇಂದು ತಮಿಳು... ಬಯಲಾದ ವಿಜಯಲಕ್ಷ್ಮಿ ಅಸಲಿ ಮುಖ!

Published : Jul 26, 2020, 10:28 PM IST
ಅಂದು ಕನ್ನಡ.. ಇಂದು ತಮಿಳು... ಬಯಲಾದ ವಿಜಯಲಕ್ಷ್ಮಿ ಅಸಲಿ ಮುಖ!

ಸಾರಾಂಶ

ಯು ಟರ್ನ್ ಹೊಡೆದ ವಿಜಯಲಕ್ಷ್ಮಿ/ ಕಳೆದ ವರ್ಷ ಕನ್ನಡ ಚಿತ್ರರಂಗದ ಮೇಲೆ ಆರೋಪ ಮಾಡಿದ್ದರು/ ಈಗ ತಮಿಳು ಚಿತ್ರರಂಗದವರ ಮೇಲೆ ಆರೋಪ/ ತಮಿಳಿನವಳು ಅನ್ನುವ ಕಾರಣಕ್ಕೆ ಕನ್ನಡದ ನಾಯಕ ನಟ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಬೆಂಗಳೂರು(ಜು. 26)  ನಾಗಮಂಡಲ ಖ್ಯಾತಿಯ ನಟಿ ವಿಜಯಲಕ್ಷ್ಮಿ ಯೂ-ಟರ್ನ್ ಹೊಡೆದಿದ್ದಾರೆ. ಒಂದೇ ವರ್ಷದಲ್ಲಿ ನಟಿ ವಿಜಯಲಕ್ಷ್ಮಿ ಅಸಲಿ ಮುಖ ಬಯಲಾಗಿದೆ.  ಕರ್ನಾಟಕದಲ್ಲೇ ಇದ್ದು ಕಲಾವಿದರಿಂದ ಸಹಾಯ ಪಡೆದಿದ್ದ ನಟಿ ನಂತರ  ಕಿರುಕುಳ ಕೊಡ್ತಿದ್ದಾರೆ ಎಂದು ದೂರಿದ್ದರು.

ವರ್ಷದ ಹಿಂದೆ ಫೇಸ್ ಬುಕ್ ನಲ್ಲಿ ವಿಡಿಯೋ  ಶೇರ್ ಮಾಡಿದ್ದ ವಿಜಯಲಕ್ಷ್ಮಿ ನೀನು ತಮಿಳುನವಳು ಎಂದು ನನಗೆ ಮಾನಸಿಕ ಹಿಂಸೆ ಮಾಡಿದ್ದಾರೆ. ನಟ ರವಿಪ್ರಕಾಶ್ ಅನ್ನೋರು ನನಗೆ ಹಿಂಸೆ ನೀಡಿದ್ದರು.  ನನಗೆ ಮನೆ ಕೂಡ ಇರಲಿಲ್ಲ..ನಾನು ಎಲ್ಲರನ್ನ ಸಹಾಯಕ್ಕಾಗಿ ಬೇಡಿದೆ ಆದರೆ ಎಲ್ಲರೂ ನೀನು ತಮಿಳಿನವಳು ಎಂದು ನನಗೆ ಸಹಾಯ ಮಾಡಲಿಲ್ಲ  ಎಂದು ಹೇಳಿದ್ದರು.

ತಮಿಳಿನವಳು ಅನ್ನೋ ಕಾರಣದಿಂದ ನನಗೆ ಹಿಂಸೆ ಮಾಡುತ್ತಿದ್ದಾರೆ.  ನಾನು ಚೆನ್ನೈ ಗೆ ವಾಪಸ್ ಬರಬೇಕು ನನಗೆ ಸಹಾಯ ಮಾಡಿ  ಕನ್ನಡ ಚಿತ್ರರಂಗದ ಕಲಾವಿದರ ಸಂಘದಿಂದಲೂ ನನಗೆ ಕಿರುಕುಳ ಆಗುತ್ತಿದೆ. ಪೊಲೀಸರು, ಲಾಯರ್ ಎಲ್ಲರೂ ನನಗೆ ಹಿಂಸೆ ನೀಡುತ್ತಿದ್ದಾರೆ. ತಮಿಳಿನವಳು ಎನ್ನುವ ಕಾರಣದಿಂದ ನನಗೆ ಕಿರುಕುಳ ಕೊಡ್ತಿದ್ದಾರೆ ಎಂದು ಹೇಳಿದ್ದರು.

ಲೈವ್ ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ನಾಗಮಂಡಲ ನಟಿ

ಕಳೆದ ವಾರ ನಟ ರವಿಪ್ರಕಾಶ್ ಗೆ ಕಾಲ್ ಮಾಡಿ ಕ್ಷಮೆ ವಿಜಯಲಕ್ಷ್ಮಿ ಸಹೋದರಿ ಕ್ಷಮೆ ಕೇಳಿದ್ದಾರೆ ಎನ್ನಲಾಗಿದೆ. ಕೇಸ್ ವಾಪಸ್ ತೆಗೆದುಕೊಳ್ಳಿ ನಮ್ಮದೇ ತಪ್ಪು ಎಂದದು ಸಹೋದರಿ ಉಷಾದೇವಿ ಕೇಳಿಕೊಂಡಿದ್ದರು.

ಬೆಂಗಳೂರಿಗೆ ಅವಕಾಶಕ್ಕೆ ಎಂದು ಬಂದಿದ್ದೆ. ಇಲ್ಲಿ ಕನ್ನಡದ ಬಿಗ್ ಬಾಸ್ ನಲ್ಲಿ ಅವಕಾಶ ಕೊಡುವುದಾಗಿ ತಿಳಿಸಿದ್ದರು. ಆದರೆ ಆರೋಗ್ಯ ಸರಿ ಇಲ್ಲದ ಕಾರಣ ಹೋಗಲಿಲ್ಲ 
ನೀನು ತಮಿಳುನವಳು ಎಂದು ನನಗೆ ಮಾನಸಿಕ ಹಿಂಸೆ ಮಾಡಿದ್ದಾರೆ.  ಸುದೀಪ್ ನನಗೆ ಸಹಾಯ ಮಾಡಿದ್ರು ಅದನ್ನು ಬಿಟ್ಟು ಇನ್ಯಾರು ಸಹಾಯ ಮಾಡಲಿಲ್ಲ. ನಟ ರವಿಪ್ರಕಾಶ್ ಅನ್ನೋರು ನನಗೆ ಹಿಂಸೆ ನೀಡಿದ್ರು ಎಂದು ಹೇಳಿದ್ದರು.

ಇದೀಗ ತಮಿಳುನಾಡಿನ ಚಿತ್ರರಂಗದಿಂದ ಹಿಂಸೆ ಆಗುತ್ತಿದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ವಿಜಯಲಕ್ಷ್ಮೀ ಎಲ್ಲರ ಮೇಲೆಯೂ ಆರೋಪ ಮಾಡುತ್ತಿದ್ದಾರೆ. 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಮಿತಾಭ್ 14 ಚಿತ್ರಗಳ ರೀಮೇಕ್ ಮಾಡಿ, 33 ವರ್ಷಗಳ ಬಳಿಕ ಅಮಿತಾಭ್ ಜೊತೆ ನಟಿಸಿದ ನಟ ರಜನಿಕಾಂತ್!
Sonali Bendre: 'ಅಡುಗೆಮನೆಗೆ ಹೋಗ್ಬೇಡ ನೀನು'.. ಅಂತ ಖಡಕ್ ಆಗಿ ಹೇಳಿದ್ರು ನನ್ ಅತ್ತೆ!