ತಮಿಳಿನ ಖ್ಯಾತ ನಟ ಸಿಂಬು(Simbu)ಒಡೆತನದ ಕಾರು ಅಪಘಾತಕ್ಕೆ(Car Accident) ಒಳಗಾಗಿದ್ದು 70 ವರ್ಷದ ವೃದ್ಧರೊಬ್ಬರು ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ವಿಡಿಯೋ ವೈರಲ್ ಆಗಿದೆ.
ತಮಿಳಿನ ಖ್ಯಾತ ನಟ ಸಿಂಬು(Simbu)ಒಡೆತನದ ಕಾರು ಅಪಘಾತಕ್ಕೆ(Car Accident) ತುತ್ತಾಗಿದ್ದು 70 ವರ್ಷದ ವೃದ್ಧರೊಬ್ಬರು ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ವಿಡಿಯೋ ವೈರಲ್ ಆಗಿದೆ. ವೈರಲ್ ಆದ ಬಳಿಕ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿದೆ. ಮಾರ್ಚ್ 18ರಂದು ಈ ಘಟನೆ ಸಂಬವಿಸಿದ್ದು ಪೊಲೀಸರು ಈಗಾಗಲೇ ಕಾರು ಚಾಲಕನನ್ನು ಬಂಧಿಸಿದ್ದಾರೆ.
ಮೃತಪಟ್ಟ ವ್ಯಕ್ತಿ ಮುನಿಸ್ವಾಮಿ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದು ತನಿಖೆ ಮುಂದುವರೆಸಿದ್ದಾರೆ. ಮೃತ ವ್ಯಕ್ತಿ ಮುನುಸ್ವಾಮಿ ಬೀದಿ ಬದಿಯಲ್ಲಿ ವಾಸಿಸುತ್ತಿದ್ದರು. ತೇನಂಪೇಟ್ ಪ್ರದೇಶದ ಸುತ್ತಮುತ್ತ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ. ಒಂದು ವಾರದ ಹಿಂದೆ ಚರಂಡಿ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದ ವೇಳೆ ಅವರ ಕಾಲಿಗೆ ಪೆಟ್ಟಾಗಿತ್ತು. ಆದ್ದರಿಂದ ಅವರಿಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ತೆವಳುತ್ತ ರಸ್ತೆ ದಾಟುತ್ತಿದ್ದ ಸಿಂಬು ಒಡೆತನದ ಕಾರು ಹರಿದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಘಟನೆ ಬೆಳಗ್ಗೆ 8.30 ಸುಮಾರಿಗೆ ನಡೆದಿದೆ.
Simbu Relationhips: ಕಾಲಿವುಡ್‌ನ ಲೇಡೀಸ್ ಮ್ಯಾನ್ ಸಿಂಬು ಜೊತೆ ಸಂಬಂಧದಲ್ಲಿದ್ದ ನಟಿಯರು!
ಅಪಘಾತ ನಡೆದ ಕೂಡಲೇ ಕಾರಿನಲ್ಲಿ ಇದ್ದವರು ಪರಾರಿ ಆಗಿದ್ದಾರೆ. ಮುನಿಸ್ವಾಮಿ ಗಂಭೀರವಾಗಿ ಗಾಯಗೊಂಡಿದ್ದರು. ತಲೆ, ಸೊಂಟ ಮತ್ತು ಕಾಲಿಗೆ ತೀವ್ರ ಪೆಟ್ಟು ಬಿದ್ದು ಒದ್ದಾಡುತ್ತಿದ್ದ ಮುನುಸ್ವಾಮಿ ಅವರನ್ನು ಸ್ಥಳಿಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಅವರು ಮೃತಪಟ್ಟರು ಎಂಬುದು ತಿಳಿದುಬಂದಿದೆ.
ಇನ್ನು ಬಂಧಿತ ಕಾರು ಚಾಲಕ ಸಿಂಬು ಅವರ ತಂದೆ ಟಿ.ರಾಜೇಂದ್ರ ಅವರ ಕಾರು ಚಾಲಕರಾಗಿದ್ದರು ಎನ್ನಲಾಗಿದೆ. ಚಾಲಕನ ಹೆಸರು ಸೆಲ್ವಂ ಎಂದು ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಕಾರಿನಲ್ಲಿ ಸಿಂಬು ಇದ್ರಾ, ಯಾರೆಲ್ಲ ಇದ್ದರೂ, ಪರಾರಿಯಾದವರು ಯಾರು, ಕಾರು ಎಲ್ಲಿಂದ ಬರುತ್ತಿತ್ತು ಎನ್ನುವ ಇತ್ಯಾದಿ ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.
Maanadu Simbu: ನೀವಿಲ್ಲದೇ ನಾನಿಲ್ಲ ಎಂದು ಟ್ವೀಟ್ ಮಾಡಿದ ಕಾಲಿವುಡ್ ನಟ
ಸಿಂಬು ತಮಿಳಿನಲ್ಲಿ ಸ್ಟಾರ್ ನಟರಾಗಿ ಗುರುತಿಸಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ನಟನಾಗಿ ತೆರೆಮೇಲೆ ಮಿಂಚಿದ ಸಿಂಬು ಇವತ್ತಿಗೂ ಬೇಡಿಕೆಯ ನಟರಾಗಿದ್ದಾರೆ. ಇತ್ತೀಚಿಗಷ್ಟೆ ಮಾನಾಡು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಸಿಂಬುಗೆ ದೊಡ್ಡ ಸಕ್ಸಸ್ ತುಂದುಕೊಟ್ಟಿದೆ. ಸಾಲು ಸಾಲು ಸಿನಿಮಾಗಳಲ್ಲಿ ಸಿಂಬು ಬ್ಯುಸಿಯಾಗಿದ್ದಾರೆ.