ಈ ವಾರ ನಾಲ್ಕು ಜಬರ್ದಸ್ತ್​ ಸೂಪರ್​ಹಿಟ್​ ಚಿತ್ರಗಳು ಓಟಿಟಿಯಲ್ಲಿ

By Suvarna News  |  First Published Jun 9, 2023, 4:18 PM IST

ಈ ವಾರ ನಾಲ್ಕು ಜಬರ್ದಸ್ತ್​ ಚಿತ್ರಗಳು ಓಟಿಟಿಯಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರಗಳು ಯಾವುವು? ಬಿಡುಗಡೆ ದಿನಾಂಕ ಹಾಗೂ ಎಲ್ಲಿ ಬಿಡುಗಡೆಯಾಗಲಿದೆ. ಸಂಪೂರ್ಣ ಡಿಟೇಲ್ಸ್​ ಇಲ್ಲಿದೆ
 


ಓಟಿಟಿ ಪ್ಲಾಟ್‌ಫಾರ್ಮ್ ಈಗ ಜನರಲ್ಲಿ ಮನರಂಜನೆಯ ದೊಡ್ಡ ಸಾಧನವಾಗಿ ಹೊರಹೊಮ್ಮಿದೆ. ಓಟಿಟಿ (OTT) ಎಂದರೆ ಓವರ್ ದಿ ಟಾಪ್ ಎಂಬ ಅರ್ಥವನ್ನು ನೀಡುತ್ತದೆ. ಇದರಲ್ಲಿ ನೀವು ಕೇಬಲ್ ಮತ್ತು ಡಿಟಿಎಚ್‌ನಂತಹ ಸಾಂಪ್ರದಾಯಿಕ ವಿತರಣಾ ಜಾಲಗಳ ಬದಲಿಗೆ ಇಂಟರ್ನೆಟ್ ಮೂಲಕ ಲಭ್ಯವಿರುವ ಯಾವುದೇ ಸೇವೆಯನ್ನು ಬೆರಳ ತುದಿಯಲ್ಲಿ ಪಡೆಯಬಹುದಾಗಿದೆ. ಇದೀಗ ಓಟಿಟಿ  ಮನರಂಜನೆ ವಿಷಯಕ್ಕೆ ಹೆಚ್ಚು ಬಳಕೆ ಆಗುತ್ತಿದೆ. ಅಲ್ಲಿ ಲೈವ್ ಟಿವಿಯಿಂದ ಹಿಡಿದು ಇತರ ಟಿವಿ ಕಾರ್ಯಕ್ರಮಗಳನ್ನೂ ವೀಕ್ಷಿಸಬಹುದು. ಇದರ  ಹೊರತಾಗಿ, ಹೊಸ ಚಲನಚಿತ್ರಗಳು ಸಹ ಓಟಿಟಿಯಲ್ಲಿಯೇ ಈಗ ಬಿಡುಗಡೆಯಾಗುತ್ತಿವೆ. ಈ ವಾರವೂ 4 ಉತ್ತಮ ಚಿತ್ರಗಳು OTT ನಲ್ಲಿ ಬಿಡುಗಡೆಯಾಗಲಿವೆ, ಅವುಗಳ ಪಟ್ಟಿಯನ್ನು ನಾವು ಇಂದು ನಿಮಗಾಗಿ ತಂದಿದ್ದೇವೆ.  ಬಾಲಿವುಡ್ ಹಿರಿಯ ನಟ ಶಾಹಿದ್ ಕಪೂರ್ ಅವರ ಬಹು ನಿರೀಕ್ಷಿತ ಚಿತ್ರ 'ಬ್ಲಡಿ ಡ್ಯಾಡಿ' ನಿಂದ ಆಸ್ಕರ್ ವಿಜೇತ ಚಲನಚಿತ್ರ ನಿರ್ದೇಶಕ ಸ್ಯಾಮ್ ಮೆಂಡೆಸ್ ಅವರ 'ಎಂಪೈರ್ ಆಫ್ ಲೈಟ್' ಚಿತ್ರ, 4 ಚಿತ್ರಗಳು ಈ ವಾರ OTT ನಲ್ಲಿ ಬಿಡುಗಡೆಯಾಗಲಿವೆ. ಬನ್ನಿ, ಯಾವ ಚಿತ್ರಗಳು ಯಾವ ದಿನ ಮತ್ತು ಯಾವ OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿವೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ಬ್ಲಡಿ ಡ್ಯಾಡಿ (Bloody Daddy):  ಶಾಹಿದ್ ಕಪೂರ್ ಅವರ ಚಿತ್ರ ಜೂನ್ 9 ರಂದು ಜಿಯೋ ಸಿನಿಮಾದಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದ ಟ್ರೇಲರ್ ಬಂದಾಗಿನಿಂದಲೂ ಪ್ರೇಕ್ಷಕರು ಈ ಚಿತ್ರಕ್ಕಾಗಿ ಕಾಯುತ್ತಿದ್ದರು. ಶಾಹಿದ್ ಮತ್ತೊಮ್ಮೆ ತಮ್ಮ ಹಳೆಯ ವರ್ಚಸ್ಸಿನಲ್ಲಿ  ಕಾಣಿಸಿಕೊಳ್ಳಲಿದ್ದಾರೆ. ಈ ಆಕ್ಷನ್-ಪ್ಯಾಕ್ಡ್ ಚಲನಚಿತ್ರವಾಗಿದೆ. ಇದರಲ್ಲಿ ಶಾಹಿದ್ ಕಪೂರ್ ಜೊತೆಗೆ  ಸಂಜಯ್ ಕಪೂರ್ , ಡಯಾನಾ ಪೆಂಟಿ , ರೋನಿತ್ ರಾಯ್ , ರಾಜೀವ್ ಖಂಡೇಲ್ವಾಲ್ , ಅಂಕುರ್ ಭಾಟಿಯಾ ಮತ್ತು ವಿವಾನ್ ಭಟೇನಾ ಕಾಣಿಸಿಕೊಂಡಿದ್ದಾರೆ. ಸುಮೈರ್ ಆಜಾದ್   ಎನ್‌ಸಿಬಿ ಅಧಿಕಾರಿಯಾಗಿದ್ದು, ಗುರುಗ್ರಾಮದಲ್ಲಿ  ತನ್ನ ತಂಡದೊಂದಿಗೆ ಡ್ರಗ್ ಡೀಲ್ ಅನ್ನು ಭೇದಿಸುತ್ತಾನೆ. ಡ್ರಗ್ ಲಾರ್ಡ್ ಸಿಕಂದರ್ ಕೊಕೇನ್ ಬ್ಯಾಗ್ ಅನ್ನು ಹಿಂಪಡೆಯಲು ಸುಮೈರ್‌ನ ಮಗ ಅಥರ್ವನನ್ನು ಅಪಹರಿಸುತ್ತಾನೆ.  ಬೇರೆ ಯಾವುದೇ ಆಯ್ಕೆಯಿಲ್ಲದೆ, NCB ಪ್ರಧಾನ ಕಚೇರಿಯಿಂದ ಚೀಲವನ್ನು ಹಿಂಪಡೆಯಲು ಮತ್ತು ವಿನಿಮಯಕ್ಕಾಗಿ ತನ್ನ ಕ್ಲಬ್‌ಗೆ ತರಲು ಸುಮೈರ್ ಒಪ್ಪುತ್ತಾನೆ. ಕ್ಲಬ್‌ಗೆ ಪ್ರವೇಶಿಸಿದ ನಂತರ ಮುಂದೇನಾಗುತ್ತದೆ ಎನ್ನುವ ಕಥೆಯನ್ನು ಈ ಚಿತ್ರ ಹೊಂದಿದೆ.

Tap to resize

Latest Videos

Shilpa Shetty Birthday: ಶಿಲ್ಪಾ ಜತೆ ಸಂಬಂಧ, ಟ್ವಿಂಕಲ್​ ಜತೆ ಮದ್ವೆ, ಅಕ್ಷಯ್​ ಮಹಾಮೋಸ ಬಯಲು!
 
ಎಂಪೈರ್ ಆಫ್ ಲೈಟ್  (Empire of Light): ಆಸ್ಕರ್ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಸ್ಯಾಮ್ ಮೆಂಡೆಸ್ ಅವರ 'ಎಂಪೈರ್ ಆಫ್ ಲೈಟ್' ಚಿತ್ರವನ್ನು ನೀವು ಈಗ ಮನೆಯಲ್ಲಿ ಕುಳಿತು ವೀಕ್ಷಿಸಬಹುದು, ಏಕೆಂದರೆ ಅದು ಜೂನ್ 9 ರಂದು OTT ನಲ್ಲಿ ಬಿಡುಗಡೆಯಾಗಲಿದೆ. ನೀವು ಈ ಚಿತ್ರವನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು.

ಅದಾಯಿ ಮಝಾಯಿ ಕಲಾಂ (Adai Mazhai Kaalam): ಚಲನಚಿತ್ರ ನಿರ್ದೇಶಕ ಕಾರ್ತಿಕ್ ಶಾಮ್ಲನ್ ಅವರ ಚಿತ್ರ 'ಅದಾಯಿ ಮಝಾಯಿ ಕಲಾಂ' ಜೂನ್ 11 ರಂದು OTT ನಲ್ಲಿ ಬಿಡುಗಡೆಯಾಗಲಿದೆ. ಇದು ತಮಿಳು ಚಿತ್ರವಾಗಿದ್ದು, ಇದರಲ್ಲಿ ಐವರಾಣಿ, ಜೈಕಿಶನ್ ಮತ್ತು ಥಿಯಾ ಲಕ್ಷ್ಮಣ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ಇಡೀ ಕುಟುಂಬದೊಂದಿಗೆ ನೆಟ್‌ಫ್ಲಿಕ್ಸ್‌ನಲ್ಲಿ ಈ ಚಲನಚಿತ್ರವನ್ನು ವೀಕ್ಷಿಸಬಹುದು.

ಫ್ಲಾಮಿನ್ ಹಾಟ್  (Flamin' Hot):  ಇದು ರಿಚರ್ಡ್ ಮೊಂಟಾನೆಜ್ ಅವರ ಸ್ಫೂರ್ತಿದಾಯಕ ನೈಜ ಕಥೆಯಾಗಿದೆ. ಚೀಟೋಸ್ ಅನ್ನು ಹೇಗೆ ಕಂಡುಹಿಡಿಯಲಾಯಿತು ಮತ್ತು ಯಾರು ಅದನ್ನು ತಯಾರಿಸಿದರು ಎಂಬುದನ್ನು ಇದರಲ್ಲಿ ತೋರಿಸಲಾಗಿದೆ.  ಜೂನ್ 10 ರಂದು OTT ನಲ್ಲಿ ಬಿಡುಗಡೆಯಾಗಲಿರುವ ಸಾಕ್ಷ್ಯಚಿತ್ರವಿದು. ನೀವು ಅದನ್ನು Disney Plus Hotstar ನಲ್ಲಿ ವೀಕ್ಷಿಸಬಹುದು.

ಇಂಚಿಂಚು ದೇಹ ತೋರಿಸಿ ನಟಿ ಪೂಜಾ ವಿಡಿಯೋಶೂಟ್​: ಎರಡು ಕಣ್ಣು ಸಾಲ್ದು ಅಂತಿದ್ದಾರೆ ಫ್ಯಾನ್ಸ್​!

click me!