
ನಾವು ಯಾರನ್ನಾದರೂ ತುಂಬಾನೆ ಪ್ರೀತಿಸಿದಾಗ, ನಮ್ಮಲ್ಲಿ ಉಂಟಾಗುವ ದೊಡ್ಡ ಭಯ ಅಂದ್ರೆ, ಅವರನ್ನು ಕಳೆದುಕೊಳ್ಳೋದು. ಆದರೆ ನಟ ಸಯಾಜಿ ಶಿಂಧೆ ಈ ಭಯವನ್ನು ಮಹಾರಾಷ್ಟ್ರದ ಸಾವಿರಾರು ಹಳ್ಳಿಗಳಿಗೆ ಹೊಸ ಜೀವ ತುಂಬುವ ಚಳುವಳಿಯಾಗಿ ಪರಿವರ್ತಿಸಿದ್ದಾರೆ. ಒಬ್ಬ ಮಗನಿಗೆ ತನ್ನ ತಾಯಿಯ ಮೇಲಿನ ಪ್ರೀತಿಯಿಂದ ಪ್ರಾರಂಭವಾದ ಚಳುವಳಿ ಇಂದು ದೇಶದ ಅತ್ಯಂತ ಸ್ಪೂರ್ತಿದಾಯಕ ಪರಿಸರ ಅಭಿಯಾನಗಳಲ್ಲಿ ಒಂದಾಗಿದೆ. ಈ ಅಭಿಯಾನದಿಂದಾಗಿ ಇಂದು ಸಯಾಜಿ ಶಿಂಧೆ 6.5 ಲಕ್ಷ ಮರಗಳನ್ನು ಇಲ್ಲಿವರೆಗೆ ನೆಡುವ ಮೂಲಕ ಅವರ ತಾಯಿಯ ಉಸಿರನ್ನು ಹಸಿರಾಗಿಸಿದ್ದಾರೆ.
ಸಯಾಜಿ ಶಿಂಧೆ ಭಾರತದ ಖ್ಯಾತ ನಟ. ಹಿಂದಿ, ತಮಿಳು, ತೆಲುಗು, ಕನ್ನಡ ಸೇರಿ ಬಹುಭಾಷೆಗಳಲ್ಲಿ ಹಲವು ಪಾತ್ರಗಳಿಗೆ ಜೀವತುಂಬಿ ನಟಿಸಿದ್ದಾರೆ ಸಯಾಜಿ. ಆದರೆ ಇವರು ಹುಟ್ಟು ಶ್ರೀಮಂತರೂ ಅಲ್ಲ, ನಟರ ಕುಟುಂಬದಿಂದ ಬಂದವರೂ ಅಲ್ಲ. ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕೃಷಿ ಕುಟುಂಬದಲ್ಲಿ ಜನಿಸಿದ ಸಯಾಜಿ ಬಾಲ್ಯದಿಂದಲೇ ಕಷ್ಟದಲ್ಲಿ ಬೆಳೆದರು. 1978 ರಲ್ಲಿ, ಸರ್ಕಾರವು ಅಣೆಕಟ್ಟು ಯೋಜನೆಗಾಗಿ ಅವರ ಭೂಮಿಯನ್ನು ತೆಗೆದುಕೊಂಡಿತು ಮತ್ತು ಪ್ರತಿಯಾಗಿ, ಅವರಿಗೆ ನೀರಾವರಿ ಇಲಾಖೆಯಲ್ಲಿ ಕಾವಲುಗಾರನ ಕೆಲಸವನ್ನು ನೀಡಲಾಯಿತು. 35 ವರ್ಷಗಳ ನಂತರ ಕುಟುಂಬಕ್ಕೆ ಭರವಸೆ ನೀಡಿದ ಭೂಮಿ ಸಿಕ್ಕಿತು. ನಟನಿಗೆ ಜೀವನದ ನಿಜವಾದ ಅರ್ಥವಾಗಿದ್ದು, 2016ರಲ್ಲಿ ತಮ್ಮ ತಾಯಿಯನ್ನು ಕಳೆದುಕೊಂಡಾಗ. ಎಷ್ಟು ಶ್ರೀಮಂತರಾದರೂ, ಮಾನವ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವಾಗದೇ ಇದ್ದರೆ ಹಣ ಇದ್ದು ಏನು ಪ್ರಯೋಜನ ಎಂದುಕೊಂಡರು.
ಆದರೆ ಈ ಚಳುವಳಿಯ ಹಿಂದೆ ಭಾವನಾತ್ಮಕ ಕಥೆ ಕೂಡ ಇದೆ. 2016 ರಲ್ಲಿ, ಸಯಾಜಿ ತಾಯಿಗೆ 92 ವರ್ಷ ತುಂಬಿತ್ತು. ಆಕೆಯನ್ನು ಕಳೆದುಕೊಳ್ಳುವ ಭಯ ಅವರನ್ನು ಕಾಡುತ್ತಿತ್ತು. ಜಗತ್ತಿನಲ್ಲಿ ಎಲ್ಲದಕ್ಕಿಂತ ಹೆಚ್ಚಾಗಿ ಪ್ರೀತಿಸುವ ನನ್ನ ತಾಯಿ ಕೊನೆಯ ಉಸಿರು ಇರುವವರೆಗೂ ನನ್ನೊಂದಿಗೆ ಇರಲು ಸಾಧ್ಯವಿಲ್ಲ, ಆಕೆಯ ಬಳಿ ಕುಳಿತು ಆಕೆಯ ಸಾವನ್ನು ತಡೆಯಲು ಸಾಧ್ಯವಿಲ್ಲ ಎನ್ನುವ ಅರಿವಾಗಿ, ನಟ ತಮ್ಮ ತಾಯಿಯ ಉಪಸ್ಥಿತಿಯನ್ನು ಬೇರೆ ಯಾವುದಾದರೂ ರೂಪದಲ್ಲಿ ಸದಾ ಇರುವಂತೆ ಮಾಡಲು ಮರ ನೆಡುವ ಯೋಚನೆ ಮಾಡಿದರು.
ಸಯಾಜಿ ಹೈದರಾಬಾದ್‌ನಿಂದ ಎರಡು ಟ್ರಕ್‌ಗಳಷ್ಟು ಸಸಿಗಳನ್ನು ಆರ್ಡರ್ ಮಾಡಿದರು, ಪ್ರತಿಯೊಂದೂ ಸುಮಾರು 1 ಲಕ್ಷ ರೂಪಾಯಿಗಳ ಬೆಲೆಬಾಳುವಂತಿತ್ತು. ಅದೇ ಸಮಯದಲ್ಲಿ, ಅವರು 'ದೇವರೈ' ಎಂಬ ಪ್ರಾಚೀನ ಭಾರತೀಯ ಪರಿಕಲ್ಪನೆಯ ಬಗ್ಗೆ ತಿಳಿದರು. ‘ದೇವರೈ’ ಎಂದರೆ ಪೀಳಿಗೆಯಿಂದ ಸಮುದಾಯಗಳಿಂದ ರಕ್ಷಿಸಲ್ಪಟ್ಟ ಮತ್ತು ಪೂಜಿಸಲ್ಪಡುತ್ತಿರುವ ಪವಿತ್ರ ಕಾಡುಗಳು. ಈ ಕಲ್ಪನೆಯಿಂದ ಪ್ರೇರಿತರಾಗಿ, ಅವರು ಕಾಡುಗಳನ್ನು ರಚಿಸಲು ಪ್ರಾರಂಭಿಸಿದರು, ನಂತರ ಅದನ್ನು 'ಸಹ್ಯಾದ್ರಿ ದೇವರೈ' ಎಂದು ಕರೆಯಲಾಯಿತು, ಇದಕ್ಕೆ ಅವರ ತಾಯಿಯ ಹೆಸರಿಡಲಾಯಿತು.
ಇಂದು, ಸಯಾಜಿ 48 ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ಸಾವಿರಾರು ಮರಗಳಿಂದ ಲಕ್ಷಾಂತರ ಮರಗಳವರೆಗೆ ಇವರು ನೆಟ್ಟು ಬೆಳೆಸಿದ್ದಾರೆ. ಈ ಮರಗಳಲ್ಲಿ ಹಲವು ಫಲಪ್ರದ, ಸೊಂಪಾದ ಕಾಡುಗಳಾಗಿ ಬೆಳೆದಿವೆ. ಈ ಆಂದೋಲನದ ದೊಡ್ಡ ಶಕ್ತಿಯೆಂದರೆ ಅದು ಪರಿಸರ ಸಂರಕ್ಷಣೆಗೆ ಸೀಮಿತವಾಗಿಲ್ಲ. ಇದು ಜೀವನೋಪಾಯ, ಮನಸ್ಥಿತಿ ಬದಲಾವಣೆ ಮತ್ತು ಗ್ರಾಮ ಪುನರ್ನಿರ್ಮಾಣಕ್ಕೂ ಸಂಬಂಧಿಸಿದೆ. ಆದಾಯ ಕೊಡುವ ಮರಗಳನ್ನು ನೆಟ್ಟು ಅದರಿಂದ ಜನರಿಂದ ಉಪಕಾರ ಆಗುವಂತೆ ಕೂಡ ಮಾಡಿದ್ದಾರೆ. 2,000 ಮರಗಳಿಂದ ಆರಂಭವಾದದ್ದು ಇಂದು ಒಂದು ಚಳುವಳಿಯಾಗಿ ಮಾರ್ಪಟ್ಟಿದೆ. ತಮ್ಮ ತಾಯಿಯ ಕೊನೆಯ ಆಸೆ ನೆರವೇರಿಸಲು ಗ್ರಾಮದಲ್ಲಿ 2,000 ಮರಗಳಿಂದ ಆರಂಭವಾದ ಈ ಚಳುವಳಿಯಲ್ಲಿ ಈಗ ದಶಕದ ಸಾಮೂಹಿಕ ಚಳುವಳಿಯಾಗಿ ಅರಳಿದೆ. ಒಂದು ಕಾಲದಲ್ಲಿ ಅವರು ಸಸಿಗಳನ್ನು ನೆಡುವುದನ್ನು ನೋಡುತ್ತಿದ್ದ ಗ್ರಾಮಸ್ಥರು ಈಗ ಅವುಗಳಿಗೆ ಪ್ರೀತಿ ಮತ್ತು ಹೆಮ್ಮೆಯಿಂದ ನೀರುಣಿಸುತ್ತಾರೆ. ಮಹಾರಾಷ್ಟ್ರದಾದ್ಯಂತ, ಹೂವುಗಳ ಪರಿಮಳ, ನೆರಳಿನ ತಂಪು, ಹಣ್ಣುಗಳನ್ನು ಬಿಡುವ ಮರಗಳು ಸೇರಿ ಬರೋಬ್ಬರಿ 6.5ಲಕ್ಷ ಮರಗಳನ್ನು ಸಯಾಜಿ ನೆಟ್ಟಿದ್ದಾರೆ. ಈ ಲಕ್ಷಾಂತರ ಮರಗಳ ಮೂಲಕ ನಟ ತಮ್ಮ ತಾಯಿಯನ್ನು ಶಾಶ್ವತವಾಗಿ ಪರಿಸರದೊಂದಿಗೆ ಜೀವಂತವಾಗಿರಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.