
ರಾಕಿಂಗ್ ಸ್ಟಾರ್ ಯಶ್ ಅವರು ರಾಮಾಯಣ ಸಿನಿಮಾದಲ್ಲಿ ನಟಿಸ್ತಿರೋದು ಪಕ್ಕಾ ಆಗಿದೆ. ಈ ಬಗ್ಗೆ ಅವರೇ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಎರಡು ಭಾಗಗಳಲ್ಲಿ ತೆರೆಗೆ ಬರಲಿರುವ ಎಪಿಕ್ ಸಿನಿಮಾ ಇದಾಗಿದೆ.
ಈ ಸಿನಿಮಾ ಯಾವಾಗ ತೆರೆ ಕಾಣಲಿದೆ?
ರಾಮನಾಗಿ ರಣಬೀರ್ ಕಪೂರ್, ರಾವಣನ ಪಾತ್ರದಲ್ಲಿ ಯಶ್ ನಟಿಸಲಿದ್ದಾರೆ. ಸೀತೆ ಪಾತ್ರದಲ್ಲಿ ಸಾಯಿ ಪಲ್ಲವಿ, ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋನ್, ಲಕ್ಷ್ಮಣನಾಗಿ ರವಿ ದುಬೇ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ರಾಮಾಯಣ ಚಿತ್ರದ ಆಫೀಷಿಯನ್ ವಿಡಿಯೋ ರಿಲೀಸ್ ಆಗಿದೆ. 2026 ದೀಪಾವಳಿಗೆ ರಾಮಾಯಣ ಪಾರ್ಟ್-1, 2027 ದೀಪಾವಳಿಗೆ ಪಾರ್ಟ್2 ಬಿಡುಗಡೆಯಾಗಲಿದೆ.
ಯಶ್ ಹೇಳಿದ್ದೇನು?
“ಹತ್ತು ವರ್ಷಗಳ ಆಕಾಂಕ್ಷೆಯಿದು. ಸರ್ವ ಕಾಲದ ಮಹಾನ್ ಮಹಾಕಾವ್ಯವನ್ನು ವಿಶ್ವಕ್ಕೆ ತರುವ ಆಸೆಯಿದು. ವಿಶ್ವದ ಕೆಲವು ಶ್ರೇಷ್ಠರ ಸಹಯೋಗದಿಂದ ರಾಮಾಯಣವನ್ನು ಅತ್ಯಂತ ಗೌರವ ಮತ್ತು ಗೌರವದೊಂದಿಗೆ ಪ್ರಸ್ತುತಪಡಿಸಲು ರೆಡಿಯಾಗಿದ್ದೇವೆ. ರಾಮನ ವಿರುದ್ಧ ರಾವಣನ ಅಮರ ಕಥೆಯನ್ನು ಸಂಭ್ರಮಿಸುವ ಸಮಯ. ನಮ್ಮ ಸತ್ಯ. ನಮ್ಮ ಇತಿಹಾಸ” ಎಂದು ನಟ ಯಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ನಟ ಯಶ್ ಅವರು ರಾವಣನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ರಾಮಾಯಣ ಕಥೆ ಏನು?
ಸೀತೆ ಮೇಲೆ ರಾವಣನ ಕಣ್ಣು ಬಿತ್ತು. ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋದ, ಆಮೇಲೆ ರಾಮ ಹಾಗೂ ರಾವಣನ ನಡುವೆ ಯುದ್ಧವಾಯ್ತು. ಹನುಮಾನ್‌ನ ಸಾಥ್ ಸಿಕ್ಕಿದ್ದರಿಂದ ರಾಮ ಯುದ್ಧ ಗೆಲ್ಲುವಂತೆ ಆಯ್ತು. ಆಮೇಲೆ ಜನರ ಮಾತಿಗೆ ಹೆದರಿ ಸೀತೆಯನ್ನು ರಾಮ ಕಾಡಿಗಟ್ಟಿದ, ಆಮೇಲೆ ಸೀತೆ ಧರೆಯೊಳಗೆ ಇಳಿದಳು ಎಂಬ ಕಥೆಯನ್ನು ನಾವು ಕೇಳುತ್ತ ಬಂದಿದ್ದೇವೆ. ಆದರೆ ರಾವಣನ ಶಕ್ತಿ ಎಂಥಹದ್ದು? ಆತನ ಪರಾಕ್ರಮ ಎಂಥಹದ್ದು? ರಾವಣ ಪಕ್ಕಾ ಬ್ರಾಹ್ಮಣನಾಗಿದ್ದು, ಅವನು ಎಷ್ಟು ದೈವಭಕ್ತ ಹೀಗೆ ಸಾಕಷ್ಟು ವಿಷಯಗಳು ಎಲ್ಲರಿಗೂ ಗೊತಿಲ್ಲ. ಈ ಬಗ್ಗೆ ಬಹುಶಃ ಈ ಸಿನಿಮಾ ಹೇಳಬಹುದು.
ಸಿನಿಮಾಗಳಲ್ಲಿ ಬ್ಯುಸಿ!
ಇಷ್ಟುದಿನಗಳ ಕಾಲ ಕನ್ನಡ ಸಿನಿಮಾಗಳಲ್ಲಿ ಹೀರೋ ಆಗಿ ಮಿಂಚಿದ್ದ ಯಶ್ ಅವರು ‘ರಾಮಾಯಣ’ ಸಿನಿಮಾದಲ್ಲಿ ರಾವಣನಾಗಿ ಹೇಗೆ ಕಾಣುತ್ತಾರೆ ಎಂಬ ದೊಡ್ಡ ಕುತೂಹಲ ಶುರು ಆಗಿದೆ. ನೆಗೆಟಿವ್ ಶೇಡ್‌ನಲ್ಲಿ, ಪೌರಾಣಿಕ ಪಾತ್ರದಲ್ಲಿ ಯಶ್ ಅವರನ್ನು ನೋಡಲು ದೊಡ್ಡ ಅಭಿಮಾನಿ ಬಳಗ ಕಾಯುತ್ತಿದೆ. ಅಂದಹಾಗೆ ‘ಟಾಕ್ಸಿಕ್’ ಸಿನಿಮಾದಲ್ಲಿ ನಟ ಯಶ್ ಅಭಿನಯಿಸುತ್ತಿದ್ದು, ಮುಂದಿನ ವರ್ಷ ಈ ಚಿತ್ರ ರಿಲೀಸ್ ಆಗಬಹುದು.
‘ಕೆಜಿಎಫ್ 2’ ಬಳಿಕ ನಟ ಯಶ್ ಅವರ ಯಾವ ಸಿನಿಮಾ ಕೂಡ ರಿಲೀಸ್ ಆಗಿಲ್ಲ. “ಒಳ್ಳೆಯ ಸಿನಿಮಾ ಕೊಡಬೇಕು ಎಂದಾಗ ಟೈಮ್ ಆಗುವುದು, ಅದಕ್ಕಾಗಿ ಸ್ವಲ್ಪ ಕಾಯಬೇಕು. ಜನರು ನನ್ನ ಮೇಲೆ ಇಟ್ಟ ನಂಬಿಕೆಗೆ ಮೋಸ ಆಗಬಾರದು” ಎಂದು ಯಶ್ ಅವರು ಈ ಹಿಂದೆಯೇ ಹೇಳಿದ್ದರು. ಸದ್ಯ ಯಶ್ ಅವರು ಪತ್ನಿ ರಾಧಿಕಾ ಪಂಡಿತ್, ಮಕ್ಕಳ ಜೊತೆ ಅಮೆರಿಕ ಪ್ರವಾಸದಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.