ನಟಿ ಶೆಫಾಲಿ ಜರಿವಾಲ ಸಾವಿನ ಮುಖ್ಯ ಕಾರಣ ಬಹಿರಂಗಪಡಿಸಿದ ಪೊಲೀಸ್

Published : Jun 30, 2025, 04:09 PM IST
Shefali Jariwala Death Mystery

ಸಾರಾಂಶ

ನಟಿ ಶೆಫಾಲಿ ಜರಿವಾಲ ದಿಢೀರ್ ಕುಸಿದು ಬಿದ್ದು ಮೃತಪಟ್ಟಿರುವುದು ಹಲವು ಅನುಮಾನಕ್ಕೆ ಕಾರಣವಾಗಿತ್ತು. ಹೃದಯಾಘಾತ, ಡಯೆಟ್, ಸೌಂದರ್ಯ ವರ್ಧಕ ಔಷಧಿ ಸೇರಿದಂತೆ ಸಾವಿಗೆಹಲವು ಕಾರಣಗಳು ಕೇಳಿಬಂದಿತ್ತು. ಇದೀಗ ಪೊಲೀಸರು ವೈದ್ಯರು ಹೇಳಿದ ಸಾವಿನ ಕಾರಣ ಬಹಿರಂಗಪಡಿಸಿದ್ದಾರೆ.

ಮುಂಬೈ (ಜೂ.30 ) ಕಾಂಟಾ ಲಗಾ, ತೊಂದ್ರೆ ಇಲ್ಲ ಪಂಕಜ್ ಸೇರಿದಂತೆ ಜನಪ್ರಿಯ ಹಾಡುಗಳಲ್ಲಿ ಹೆಜ್ಜೆ ಹಾಕಿ ಅಪಾರ ಅಭಿಮಾನಿ ಬಳಗ ಸೃಷ್ಟಿಸಿರುವ ಶೆಫಾಲಿ ಜರಿವಾಲ ಹಠಾತ್ ನಿಧನ ಎಲ್ಲರನ್ನು ಆತಂಕಕ್ಕೀಡು ಮಾಡಿದೆ. ಕೇವಲ 42ರ ಹರೆಯದ ನಟಿ ದಿಢೀರ್ ಸಾವಿಗೆ ಕಾರಣವೇನು ಅನ್ನೋದು ಚರ್ಚೆಯಾಗುತ್ತಿದೆ. ನಟಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ವರದಿ ಹೇಳಿದೆ. ಫಿಟ್ ಆಗಿದ್ದ, ಉತ್ತಮ ಆಹಾರ, ವ್ಯಾಯಾಮದಲ್ಲಿ ತೊಡಗಿಸಿಕೊಂಡಿದ್ದ ಶೆಫಾಲಿ ದಿಢೀರ್ ಸಾವಿಗೆ ಇನ್ನೇನಾದರು ಕಾರಣವಿದೆಯಾ ಎಂದು ಪೊಲೀಸರು ತನಿಖೆ ನಡೆಸುತ್ತಿದೆ. ಈ ವೇಳೆ ವೈದ್ಯರು ಗಮನಿಸಿದ ಸಾವಿನ ಕಾರಣವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಶೆಫಾಲಿ ಸಾವಿಗೆ ಮೂಲಕ ಕಾರಣ ಬಿಪಿ ಲೋ ಎಂದು ವೈದ್ಯರು ಹೇಳಿದ್ದಾರೆ.

ಬಿಪಿ ಕುಸಿತದಿಂದ ಅಪಾಯ

ಶೆಫಾಲಿ ಜರಿವಾಲಾಗೆ ಅವರ ಮನೆಯವರು ಹೇಳುವಂತೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ, ನೋಡಲು ಫಿಟ್ ಆಗಿದ್ದರು, ಅವರ ಸಾವು ಹಲವು ಸಂಶಯಗಳನ್ನುಂಟು ಮಾಡಿತು. ಚಿಕ್ಕ ವಯಸ್ಸಿನಲ್ಲಿ ಸಂಭವಿಸಿದ್ದಾದರೂ ಏನು? ಅವರಿಗೆ ಹೃದಯಾಘಾತವಾಯತೇ? ಅಥವಾ ಇನ್ನಿತರ ಕಾರಣಗಳಿಂದಾಗಿ ಸಾವು ಸಂಭವಿಸಿತಾ ಎಂಬ ಹಲವು ಸಂಶಯಗಳು ಅವರ ಸಾವಿನ ಬಗ್ಗೆ ಅನುಮಾನ ಹೆಚ್ಚಿಸಿತ್ತು. ನಟಿ ಜೂನ್ 27ರಂದು ಸಾವನ್ನಪ್ಪಿದರು, ಜುಲೈ 29ರಂದು ಅಂಬೋಲಿ ಪೋಲಿಸರು 'ವೈದ್ಯರು ಶಫಾಲಿ ಸಾವಿಗೆ ಇದ್ದಕ್ಕಿದ್ದಂತೆ ರಕ್ತದೊತ್ತಡ ಕಡಿಮೆಯಾಗಿದ್ದೇ ಪ್ರಮುಖ ಕಾರಣ ಎಂದು ವೈದ್ಯರು ಅನುಮಾನ ವ್ಯಕ್ತಪಡಿಸಿದ್ದಾರ.

ಲೋ ಬಿಪಿಯಿಂದ ಅಸ್ವಸ್ಥಗೊಂಡ ನಟಿ

ಈ ಘಟನೆಗೆ ಸಂಬಂಧಿಸಿದಂತೆ ನಟಿಯ ಮನೆಗೆ ವಿಧಿವಿಜ್ಞಾನ ತಂಡ (forensic team) ಹೋಗಿ ಅಗ್ಯತ ಮಾಹಿತಿಗಳನ್ನು, ದಾಖಲೆಗಳನ್ನು ಸಂಗ್ರಹಿಸಿದೆ. ನಟಿ ಸಾವಿಗೆ ನಿಖರ ಕಾರಣವೇನಿರಬಹುದು ಎಂಬ ತನಿಖೆ ನಡೆಯುತ್ತಿದ್ದು ಅದರ ಭಾಗವಾಗಿ ವೈದ್ಯರು ಆಕೆಗೆ ಬಿಪಿ ಕಡಿಮೆಯಾಗಿ ಸಾವನ್ನಪ್ಪಿರಬಹುದು ಎಂಬ ಸಂಶಯ ವ್ಯಕ್ತಿ ಪಡಿಸಿರುವುದಾಗಿ ಮಾಹಿತಿ ತಿಳಿದು ಬಂದಿದೆ. ವೈದ್ಯರ ಮಾತುಗಳನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಲೋ ಬಿಪಿಯಿಂದ ಆರೋಗ್ಯ ಕೆಲವೇ ಕ್ಷಣದಲ್ಲಿ ಕುಸಿದಿದೆ. ಇದು ಹೃದಯಾಘಾತಕ್ಕೆ ಕಾರಣವಾಗಿರುವ ಸಾಧ್ಯತೆ ಹೆಚ್ಚು ಎಂದು ವೈದ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ಉಪವಾಸ ಕುಳಿತಿದ್ದ ಶೆಫಾಲಿ

ಸಾವಿಗೆ ಕಾರಣವೇನಿರಬಹುದು ಎಂದು ತನಿಖೆ ನಡೆಯುತ್ತಿರುವಾಗ ಆಕೆಯ ಮನೆಯಿಂದ ಎರಡು ಟ್ಯಾಬ್ಲೆಟ್ ಬಾಕ್ಸ್ ಸಿಕ್ಕಿದ್ದು ಅವುಗಳು ಯೌವನ ಉಳಿಯಲು ತೆಗೆದು ಕೊಳ್ಳುವಂಥ ಮಾತ್ರೆಗಳು ಎಂಬುವುದಾಗಿ ತಿಳಿದು ಬಂದಿದೆ. ಈ ಮಾತ್ರಗಳ ಸೇವನೆ, ಡಯಟ್ ಆಹಾರ, ವ್ಯಾಯಾಮಗಳು ಶೆಫಾಲಿ ದೇಹವನ್ನು ಹೆಚ್ಚು ದಣಿಯುವಂತೆ ಮಾಡಿರುವ ಸಾಧ್ಯತೆ ಇದೆ ಎಂದು ವೈದ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ತನಿಖೆಗೆ ನಟಿಯ ಮನೆಗೆ ಹೋದಾಗ ಆಕೆಯ ಪತಿ ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡಿರುವುದಾಗಿ ಆಫೀಸರ್ ಹೇಳಿದ್ದಾರೆ.

ಶಫಾಲಿ ಸಾಯುವು ದಿನ ಏನೂ ತಿಂದಿರಲಿಲ್ಲ, ಅವರ ಮನೆಯಲ್ಲಿ ಸತ್ಯನಾರಾಯಣ ಪೂಜೆ ಇದ್ದ ಕಾರಣ ಉಪವಾಸ ವ್ರತ ಕೈಗೊಂಡಿದ್ದರು.ರಾತ್ರಿ ಇದ್ದಕ್ಕಿದ್ದಂತೆ ಅಸ್ವಸ್ಥತೆ ಕಾಣಿಸಿದಾಗ ಸಮೀಪದ ಆಸ್ಪತ್ರೆಗೆ ಕೊಂಡೊಯ್ಯಲಾಯ್ತು, ಆದರೆ ಆಸ್ಪತ್ರೆ ತಲುಪುವ ಮುನ್ನವೇ ನಟಿ ಕೊನೆಯುಸಿರು ಎಳೆದಿರುವುದಾಗಿ ವರದಿಯಾಗಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಐಶ್ವರ್ಯಾ ರೈ ಮಗಳು ಆರಾಧ್ಯ ಬಾಲಿವುಡ್‌ಗೆ ಎಂಟ್ರಿ ಕೊಡೋದು ಯಾವಾಗ?
ಎದ್ದೇಳಿ ಹಿಂದೂಗಳೇ ಮೌನ ನಿಮ್ಮನ್ನು ರಕ್ಷಿಸುವುದಿಲ್ಲ, ಬಾಂಗ್ಲಾದೇಶ ಘಟನೆ ಖಂಡಿಸಿ ನಟಿ ಕಾಜಲ್ ಎಚ್ಚರಿಕೆ