ರವಿಚಂದ್ರನ್ ಹುಟ್ಟುಹಬ್ಬ; 'ರವಿ ಬೋಪಣ್ಣ'ನ ಸೀಕ್ರೆಟ್ಸ್ ಟೀಸರ್ ಹಂಚಿಕೊಂಡ ಕ್ರೇಜಿ ಸ್ಟಾರ್

Published : May 30, 2022, 11:00 AM IST
ರವಿಚಂದ್ರನ್ ಹುಟ್ಟುಹಬ್ಬ; 'ರವಿ ಬೋಪಣ್ಣ'ನ ಸೀಕ್ರೆಟ್ಸ್ ಟೀಸರ್ ಹಂಚಿಕೊಂಡ ಕ್ರೇಜಿ ಸ್ಟಾರ್

ಸಾರಾಂಶ

ಸ್ಯಾಂಡಲ್‌ವುಡ್‌ನ ಕ್ರೇಜಿ ಸ್ಟಾರ್ ರವಿಚಂದ್ರನ್(Ravichandran) ಅವರಿಗೆ ಹುಟ್ಟುಹಬ್ಬ(Birthday) ಸಂಭ್ರಮ. ಇಂದು (ಮೇ, 30) ರವಿಮಾಮ 61ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನೆಚ್ಚಿನ ನಟನಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿಂ ಶುಭಾಶಯಗಳ ಸುರಿಮಳೆಯೇ ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ರವಿಚಂದ್ರನ್ ಅವರ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡಿ ಪ್ರೀತಿಯ ವಿಶ್ ಮಾಡುತ್ತಿದ್ದಾರೆ.

ಸ್ಯಾಂಡಲ್‌ವುಡ್‌ನ ಕ್ರೇಜಿ ಸ್ಟಾರ್ ರವಿಚಂದ್ರನ್(Ravichandran) ಅವರಿಗೆ ಹುಟ್ಟುಹಬ್ಬ(Birthday) ಸಂಭ್ರಮ. ಇಂದು (ಮೇ 30) ರವಿಮಾಮ 61ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನೆಚ್ಚಿನ ನಟನಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆಯೇ ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ರವಿಚಂದ್ರನ್ ಅವರ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡಿ ಪ್ರೀತಿಯ ವಿಶ್ ಮಾಡುತ್ತಿದ್ದಾರೆ. ಅಭಿಮಾನಿಗಳು ಅಲ್ಲದೇ ಅನೇಕ ಗಣ್ಯರು ಸಹ ರವಿಚಂದ್ರನ್ ಅವರಿಗೆ ಶುಭಾಶಯ ಕೋರುತ್ತಿದ್ದಾರೆ. ಚಿತ್ರರಂಗದಲ್ಲಿ ರವಿಚಂದ್ರನ್ ಕೊಡುಗೆ ಅಪಾರ. ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ ಬಣ್ಣದ ಲೋಕದಲ್ಲಿ ರವಿಚಂದ್ರನ್ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ರವಿಚಂದ್ರನ್ ಮಕ್ಕಳು ಸಹ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ. ತಂದೆಯ ಹಾಗೆ ದೊಡ್ಡ ಸಾಧನೆ ಮಾಡುವ ಕನಸು ಕಂಡು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಇಂದು ಹುಟ್ಟುಹಬ್ಬದ ಪ್ರಯುಕ್ತ ರವಿಚಂದ್ರನ್ ಅವರ ರವಿ ಬೋಪಣ್ಣ(Ravi Bopanna) ಸಿನಿಮಾದ ಟೀಸರ್ ರಿಲೀಸ್ ಮಾಡಲಾಗಿದೆ. ರವಿಚಂದ್ರನ್ ನಟನೆಯ ಬಹುನಿರೀಕ್ಷೆಯ ಸಿನಿಮಾ ಇದಾಗಿದ್ದು ಹುಟ್ಟುಹಬ್ಬದ ವಿಶೇಷವಾಗಿ ಟೀಸರ್ ಬಿಡುಗಡೆ ಮಾಡಲಾಗಿದೆ. ರವಿಚಂದ್ರನ್ ಪುಟ್ಟ ಟೀಸರ್‌ಅನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಟೀಸರ್ ಶೇರ್ ಮಾಡಿ ರವಿ ಬೋಪಣ್ಣ ಮತ್ತು ಅವರ ಸೀಕ್ರೆಟ್ಸ್ ಎಂದು ಕ್ಯಾಪ್ಷನ್ ನೀಡಿದ್ದಾರೆ. ರವಿ ಬೋಪಣ್ಣ ಸೀಕ್ರೆಟ್ ನೋಡಲು ಅಭಿಮಾನಿಗಳು ಸಹ ಕಾತರದಿಂದ ಕಾಯುತ್ತಿದ್ದಾರೆ.

ಗರ್ಲ್ ಫ್ರೆಂಡ್ ಬಗ್ಗೆ ಶಿವಣ್ಣನ ಜೊತೆ ವಿಕ್ರಮ್ ರವಿಚಂದ್ರನ್ ಹೇಳಿದ್ದೇನು.?

ಇನ್ನು ರವಿಚಂದ್ರನ್ 2ನೇ ಪುತ್ರ ವಿಕ್ರಮ್(Vikram) ತ್ರಿಮಿಕ್ರಮ(Trivikrama) ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇಂದು ರವಿಚಂದ್ರನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಪುತ್ರನ ತ್ರಿವಿಕ್ರಮ ಸಿನಿಮಾದಿಂದ ವಿಡಿಯೋ ಸಾಂಗ್ ರಿಲೀಸ್ ಮಾಡಲಾಗಿದೆ. ಈ ಹಾಡನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್(Shivarajkumar) ಬಿಡುಗಡೆ ಮಾಡಿದ್ದಾರೆ. ವಿಡಿಯೋ ಸಾಂಗ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ರವಿಚಂದ್ರನ್ ಜೊತೆಗಿನ ಬಾಂಧವ್ಯದ ಬಗ್ಗೆಯೂ ಮಾತನಾಡಿದ್ದಾರೆ. ಚಿತ್ರರಂಗಕ್ಕೆ ರವಿ ಮತ್ತು ನಾನು ಒಟ್ಟಿಗೆ ಎಂಟ್ರಿ ಕೊಟ್ಟವರು. ಆಗಿನಿಂದನೂ ಉತ್ತಮ ಸ್ನೇಹಿತರು ಎಂದು ಹೇಳಿದ್ದಾರೆ. ಇನ್ನು ಸದ್ಯ ರಿಲೀಸ್ ಆಗಿರುವ ತ್ರಿವಿಕ್ರಮ ಸಿನಿಮಾದ ವಿಡಿಯೋ ಸಾಂಗ್ ಪ್ಲೀಸ್ ಮಮ್ಮಿ ಸಿಕ್ಕಾಪಟ್ಟೆ ವೀಕ್ಷಣೆ ಪಡೆದು ಸದ್ದು ಮಾಡುತ್ತಿದೆ.


ರವಿಚಂದ್ರನ್ ಬರ್ತಡೇ ಸಂಭ್ರಮದಲ್ಲಿ 'ರಣಧೀರ' ಸುಂದರಿ; 'ನನ್ನ ತಾಯಿ ಜೀವಂತವಾಗಿರಲು ನೀವೆ ಕಾರಣ; ಎಂದ ಖುಷ್ಬೂ

 

ತ್ರಿವಿಕ್ರಮ ಸಿನಿಮಾದ ಬಗ್ಗೆ ಹೇಳುವುದಾದರೇ ಈ ಸಿನಿಮಾದಲ್ಲಿ ವಿಕ್ರಮ್‌ಗೆ ಜೋಡಿಯಾಗಿ ಆಕಾಂಕ್ಷಾ ಶರ್ಮಾ ನಟಿಸಿದ್ದಾರೆ. ಇನ್ನು ಉಳಿದಂತೆ ತುಳಿಸಿ, ಸುಚೇದ್ರ ಪ್ರಸಾದ್, ಸಾಧು ಕೋಕಿಲ, ರೋಹಿತ್ ರಾಯ್ ಸೇರಿದಂತೆ ಅನೇಕರು ನಟಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Alia Bhatt New Home Photos: ಆಲಿಯಾ ಭಟ್‌, ರಣಬೀರ್‌ ಕಪೂರ್‌ 350 ಕೋಟಿ ರೂ ಮನೆಯನ್ನು ಪದಗಳಲ್ಲಿ ವರ್ಣಿಸೋಕಾಗಲ್ಲ
ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!