Edava Basheer ಹಾಡುತ್ತಲೇ ಕುಸಿದು ಬಿದ್ದು ನಿಧನರಾದ ಖ್ಯಾತ ಹಿನ್ನಲೆ ಗಾಯಕ!

By Suvarna NewsFirst Published May 29, 2022, 8:08 PM IST
Highlights
  • ಬಾಲಿವುಡ್ ಮಾನೋ ಹೋ ತುಮ್ ಹಾಡುತ್ತಾ ಕುಸಿದು ಬಿದ್ದ ಗಾಯಕ
  • ಬ್ಲೂ ಡೈಮೆಂಡ್ ಆಯೋಜಿಸಿದ್ದ ಸಂಗೀತ ರಸಮಂಜರಿ ಕಾರ್ಯಕ್ರಮ
  • ತಕ್ಷಣವೇ ಆಸ್ಪತ್ರೆ ದಾಖಲಿಸಿದರೂ ಹಿನ್ನಲೆ ಗಾಯಕ ಬದುಕುಳಿಯಲಿಲ್ಲ

ಕೊಚ್ಚಿ(ಮೇ.29): ಮಲೆಯಾಳಂ ಖ್ಯಾತ ಹಿನ್ನಲೆ ಗಾಯಕ ಎಡವ ಬಶೀರ್ ಹಾಡುತ್ತಲೆ ಕುಸಿದು ಬಿದ್ದು ನಿಧನರಾಗಿದ್ದಾರೆ. ಬಾಲಿವುಡ್‌ನ ಮಾನೋ ಹೋ ತುಮ್ ಹಾಡು ಹಾಡುತ್ತಲೇ ಬಶೀರ್ ವೇದಿಕೆಯಲ್ಲಿ ಕುಸಿದು ಬಿದ್ದು ಮೃತರಾಗಿದ್ದಾರೆ.

ಚೆರ್ತಲಾದಲ್ಲಿ ಬ್ಲೂ ಡೈಮೆಂಡ್ ಆರ್ಕೆಸ್ಟ್ರಾ ಆಯೋಜಿದ್ದ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಹಾಡುತ್ತಲೇ ಬಶೀರ್ ನಿಧನರಾಗಿದ್ದಾರೆ. ವೇದಿಕೆಯಲ್ಲಿ ಕುಸಿದು ಬಿದ್ದ ತಕ್ಷಣವೇ ಅವರಿಗೆ ಪ್ರಥಮ ಚಿಕಿತ್ಸೆ ನೀಡುವ ಪ್ರಯತ್ನ ಮಾಡಲಾಯಿತು. ಈ ವೇಳೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಹೀಗಾಗಿ ತಕ್ಷಣವೇ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

Latest Videos

Ray Liotta; ಹಾಲಿವುಡ್ ಖ್ಯಾತ ನಟ ರೇ ಲಿಯೊಟ್ಟಾ ನಿಧನ

ಶಾಲಾ ದಿನಗಳಲ್ಲೇ ಎಡವ ಬಶೀರ್ ಸಂಗೀತದಲ್ಲಿ ತೊಡಗಿಸಿಕೊಂಡಿದ್ದರು. ಹಲವು ಪ್ರಶಸ್ತಿಗಳನ್ನು ಪಡೆದಿದ್ದರು. ಮಲೆಯಾಳಂ ಸಿನಿ ಕ್ಷೇತ್ರದ ಹಿನ್ನಲೆ ಗಾಯಕನಾಗಿ, ಆರ್ಕೆಸ್ಟ್ರಾಗಳಲ್ಲಿ ಸಕ್ರೀಯವಾಗಿ ಹಾಡುತ್ತಿದ್ದ ಬಶೀರ್ ಸಂಗೀತವನ್ನೇ ಉಸಿರಾಗಿಸಿದ್ದರು. 

ಸಂಗೀತಾಲಯ ಅನ್ನೋ ಮ್ಯೂಸಿಕ್ ಟ್ರೋಪ್ ಆರಂಭಿಸಿದ್ದ ಬಶೀರ್ ಕೇರಳದಲ್ಲಿ ಅತೀ ಹೆಚ್ಚಿನ ಅಭಿಮಾನಿಗಳನ್ನು ಹೊಂದಿದ್ದಾರೆ. ಇವರ ಸಂಗೀತಾಲಯ ಮ್ಯೂಸಿ ಟ್ರೋಪ್ ಉದ್ಧಾಟನೆಯನ್ನು ಭಾರತದ ದಿಗ್ಗಜ ಗಾಯಕ ಕೆಜೆ ಯೇಸುದಾಸ್ ಮಾಡಿದ್ದರು.

ಕೇರಳ ದೇವಸ್ಥಾನದ ಬಹುತೇಕ ಕಾರ್ಯಕ್ರಮಗಳಲ್ಲಿ ಬಶೀರ್ ಹಾಡುತ್ತಿದ್ದರು. ಆಕಾಶರೂಪಿಣಿ, ಅನ್ನಪೂರ್ಣೇಶ್ವರಿ ಹಾಡು ಪ್ರತಿ ದೇಗುಲದ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದರು. ಈ ಹಾಡುಗಳನ್ನು ಇವರಿಗಿಂತ ಚೆನ್ನಾಗಿ ಹಾಡಬಲ್ಲ ಮತ್ತೊಬ್ಬ ಗಾಯಕ ಇರಲಿಲ್ಲ. ಅಮೆರಿಕ, ಲಂಡನ್, ಯೂರೋಪ್ ಸೇರಿದಂತೆ ಹಲವು ದೇಶಗಳಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

ಉಗ್ರರಿಂದ ಟಿಕ್‌ಟಾಕ್‌ ಸ್ಟಾರ್‌ ಹತ್ಯೆ: ಲಷ್ಕರ್‌ ಉಗ್ರರ ಗುಂಡಿಗೆ ಅಮ್ರೀನ್‌ ಭಟ್‌ ಬಲಿ

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ವಿರೋಧ ಪಕ್ಷದ ನಾಯಕ ವಿಡಿ ಸತೀಶನ್, ಖ್ಯಾತ ಪ್ಲೇಬ್ಯಾಕ್ ಸಿಂಗರ್ ಕೆಎಸ್ ಚಿತ್ರ ಸೇರಿದಂತೆ ಹಲವು ದಿಗ್ಗಜರು, ಗಣ್ಯರು ಕಂಬನಿ ಮಿಡಿದಿದ್ದಾರೆ.

click me!