Dhurandhar Ott Release Date: ವಿಶ್ವದ ಗಮನ ಸೆಳೆದ ರಣವೀರ್‌ ಸಿಂಗ್‌ 'ಧುರಂಧರ್‌' ಒಟಿಟಿಯಲ್ಲಿ ಯಾವಾಗ ರಿಲೀಸ್?

Published : Dec 13, 2025, 10:15 AM IST
Dhurandhar Hindi Movie Ott

ಸಾರಾಂಶ

Dhurandhar Hindi Movie Ott: ರಣವೀರ್‌ ಸಿಂಗ್‌, ಸಾರಾ ಅರ್ಜುನ್‌, ಆರ್‌ ಮಾಧವನ್‌ ನಟನೆಯ ‘ಧುರಂಧರ್’‌ ಸಿನಿಮಾ ರಿಲೀಸ್‌ ಆಗಿದ್ದು ಅನೇಕರಿಂದ ಪ್ರಶಂಸೆ ಪಡೆಯುತ್ತಿದೆ. ಹಾಗಾದರೆ ಈ ಸಿನಿಮಾವನ್ನು ಎಲ್ಲಿ? ಯಾವಾಗ ನೋಡಬಹುದು? ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

‘ಧುರಂಧರ್’‌ ಸಿನಿಮಾ ( Dhurandhar Movie ) ರಿಲೀಸ್‌ ಆಗಿದ್ದು, ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರ ಮನಸ್ಸು ಗೆದ್ದಿದೆ. ಈ ಸಿನಿಮಾ ನಿರ್ದೇಶಕ ಆದಿತ್ಯ ಧರ್ ಅವರ ಬಹುನಿರೀಕ್ಷಿತ ಸ್ಪೈ ಥ್ರಿಲ್ಲರ್ ಇದಾಗಿದೆ. ಹಾಗಾದರೆ ಈ ಸಿನಿಮಾವನ್ನು ಒಟಿಟಿಯಲ್ಲಿ ಯಾವಾಗ ನೋಡಬಹುದು?

ಭರ್ಜರಿ ಹೊಗಳಿಕೆ

ಜಬರ್ದಸ್ತ್ ಆಕ್ಷನ್ ಪ್ಯಾಕ್ಡ್ ಸಿನಿಮಾದಲ್ಲಿ ನಟ ರಣವೀರ್ ಸಿಂಗ್ ಅವರ ವಿಭಿನ್ನ ಲುಕ್, ಸ್ಟೈಲ್ ಎಲ್ಲರ ಗಮನ ಸೆಳೆದಿದೆ. 'ಧುರಂಧರ್' ಸಿನಿಮಾದಲ್ಲಿ ಅದ್ಭುತ ತಾರಾಗಣ, ಬಲವಾದ ಕಥೆಯಿಂದಾಗಿ ಥಿಯೇಟರ್‌ನಲ್ಲಿ ಸಿನಿಮಾ ಪ್ರಸಾರವಾದಷ್ಟು ಹೊತ್ತು ವೀಕ್ಷಕರನ್ನು ಸೆರೆಹಿಡಿಯುವುದು.

ಎಲ್ಲಿ? ಯಾವಾಗ ನೋಡಬಹುದು?

ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ದಾಖಲೆಗಳನ್ನು ಮಾಡುತ್ತಿರುವ ಈ ಸಿನಿಮಾವನ್ನು ಗಲ್ಫ್‌ ಕಂಟ್ರಿಗಳಲ್ಲಿ ನಿಷೇಧ ಹೇರಲಾಗಿದೆಯಂತೆ. ಎಂದು ಅಂದಾಜಿಸಲಾಗಿದೆ. ಈ ಸಿನಿಮಾದ ಸೀಕ್ವೆಲ್‌ ಕೂಡ ರೆಡಿ ಇದೆ. ಅಂದಹಾಗೆ ಈ ಚಿತ್ರದ ಡಿಜಿಟಲ್ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಖರೀದಿಸಿದೆ. ಈ ಡೀಲ್ ದೊಡ್ಡ ಮೊತ್ತಕ್ಕೆ ನಡೆದಿದೆಯಂತೆ. 130 ಕೋಟಿ ರೂಪಾಯಿ ಎನ್ನಲಾಗಿದ್ದು, ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಈ ಸಿನಿಮಾವು 30 ಜನವರಿ 2026 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಬಹುದು ಎಂದು ಹೇಳಲಾಗುತ್ತಿದೆ.

ನಿರ್ಮಾಪಕರು ಯಾರು?

ಜ್ಯೋತಿ ದೇಶಪಾಂಡೆ, ಆದಿತ್ಯ ಧರ್, ಲೋಕೇಶ್ ಧರ್ ಅವರು ಜಿಯೋ ಸ್ಟುಡಿಯೋಸ್, ಬಿ62 ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ.

ಪಾತ್ರಧಾರಿಗಳು ಯಾರು?

ರಣವೀರ್ ಸಿಂಗ್, ಸಂಜಯ್ ದತ್, ಅಕ್ಷಯ್ ಖನ್ನಾ, ಆರ್ ಮಾಧವನ್, ಅರ್ಜುನ್ ರಾಂಪಾಲ್, ಸಾರಾ ಅರ್ಜುನ್, ರಾಕೇಶ್ ಬೇಡಿ, ಸೌಮ್ಯಾ ಟಂಡನ್, ನವೀನ್ ಕೌಶಿಕ್, ಮಾನವ್ ಗೋಹಿಲ್ ಮುಂತಾದವರು ನಟಿಸಿದ್ದಾರೆ.

ಈ ಸಿನಿಮಾ ಕಥೆ ಏನು?

ಈ ಸಿನಿಮಾವು ನೈಜ ಘಟನೆಗಳು, ಭೌಗೋಳಿಕ-ರಾಜಕೀಯ ಸಂಘರ್ಷಗಳು, 'ರಾ'ದ ರಹಸ್ಯ ಕಾರ್ಯಾಚರಣೆ, ವಿಶೇಷವಾಗಿ ಆಪರೇಷನ್ ಲೈರಿಯಿಂದ ಪ್ರೇರಿತವಾಗಿದೆ. ಈ ಸಿನಿಮಾವು ಡಿಸೆಂಬರ್ 5 ರಂದು ರಿಲೀಸ್‌ ಆಗಿದ್ದು, 125 ಕೋಟಿ ರೂಪಾಯಿ ಇದರ ಬಜೆಟ್‌ ಎನ್ನಲಾಗಿದೆ.

ಪಾಕಿಸ್ತಾನಿ ಮೀಡಿಯಾದ ಆಕ್ರೋಶ

ಪಾಕಿಸ್ತಾನ ಹಾಗೂ ಪಾಕಿಸ್ತಾನಿ ಮೀಡಿಯಾ ಯಾವಾಗಲೂ ಭಾರತದ ವಿರುದ್ಧ ವಿಷ ಕಾರುತ್ತಲೇ ಇರುತ್ತದೆ. ಅದಕ್ಕೆ ಭಾರತವನ್ನು ದೂಷಿಸುವುದು ಮತ್ತು ತಪ್ಪುಗಳನ್ನು ಹುಡುಕುವುದನ್ನು ಬಿಟ್ಟು ಬೇರೆ ವಿಷಯವೇ ಇಲ್ಲ. ಈಗ ಇಲ್ಲಿನ ಪತ್ರಕರ್ತರಿಗೆ ಬಾಲಿವುಡ್ ಸಿನಿಮಾಗಳ ಮೇಲೆ ದೊಡ್ಡ ಆಕ್ಷೇಪ ಶುರುವಾಗಿದೆ. ಪಾಕಿಸ್ತಾನದ ಜನರು ಬಾಲಿವುಡ್ ಸಿನಿಮಾಗಳಿಂದಲೇ ಮನರಂಜನೆ ಪಡೆಯುತ್ತಾರೆ. ಪಾಕಿಸ್ತಾನದಲ್ಲಿ ಹಿಂದಿ ಸಿನಿಮಾಗಳನ್ನು ಕಾಪಿ ಮಾಡಿ ಆನ್‌ಲೈನ್‌ನಲ್ಲಿ ಲೀಕ್ ಮಾಡಲಾಗುತ್ತದೆ, ಇದರಿಂದಾಗಿ ಸಿನಿಮಾ ನಿರ್ಮಾಪಕರಿಗೆ ಭಾರಿ ನಷ್ಟ ಉಂಟಾಗುತ್ತದೆ.

ಪಾಕಿಸ್ತಾನದ ಒಂದು ಚಾನೆಲ್‌ನಲ್ಲಿ ಇಬ್ಬರು ಆಂಕರ್‌ಗಳು ಬಾಲಿವುಡ್ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. “ಬಾಲಿವುಡ್ ಬಳಿ ಕಂಟೆಂಟ್ ಇಲ್ಲ. ಮೊದಲು ಸೌತ್ ಸಿನಿಮಾಗಳ ರಿಮೇಕ್ ಮಾಡುತ್ತಿದ್ದರು. ನಂತರ ಪಾಕಿಸ್ತಾನಿ ಸಿನಿಮಾಗಳಿಂದ ಕದಿಯಲು ಶುರು ಮಾಡಿದರು. ಈಗಂತೂ ಎಲ್ಲೆ ಮೀರಿದೆ, ನಮ್ಮ ದೇಶದಲ್ಲಿ ನಡೆದ ಸಣ್ಣಪುಟ್ಟ ಗ್ಯಾಂಗ್‌ವಾರ್‌ಗಳ ಮೇಲೆ ಸಿನಿಮಾ ಮಾಡಿ ನಮ್ಮನ್ನು ಅವಮಾನ ಮಾಡುತ್ತಿದ್ದಾರೆ. ಕೊನೆಗೆ ಈ ಸಿನಿಮಾ ನಿರ್ಮಾಪಕರಿಗೆ ತಮ್ಮ ದೇಶದಲ್ಲಿ ನಡೆಯುವ ಹಿಂಸೆ ಕಾಣುವುದಿಲ್ಲವೇ, ಯಾಕೆ ಇವರು ಗುಜರಾತ್ ಗಲಭೆಗಳ ಮೇಲೆ ಸಿನಿಮಾ ಮಾಡುವುದಿಲ್ಲ. ಯಾಕೆ ಅಲ್ಲಿ ಮುಸ್ಲಿಮರ ಮೇಲಿನ ದೌರ್ಜನ್ಯದ ಬಗ್ಗೆ ಸಿನಿಮಾ ಮಾಡುವುದಿಲ್ಲ” ಎಂದು ಪ್ರಶ್ನೆ ಮಾಡಿದ್ದಾರೆ. ಪ್ರಧಾನಿ ಮೋದಿ ಬಗ್ಗೆ ಕೂಡ ಮಾತನಾಡಿರುವ ವಿಡಿಯೋ ವೈರಲ್‌ ಆಗ್ತಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಮಿತಾಭ್ 14 ಚಿತ್ರಗಳ ರೀಮೇಕ್ ಮಾಡಿ, 33 ವರ್ಷಗಳ ಬಳಿಕ ಅಮಿತಾಭ್ ಜೊತೆ ನಟಿಸಿದ ನಟ ರಜನಿಕಾಂತ್!
Sonali Bendre: 'ಅಡುಗೆಮನೆಗೆ ಹೋಗ್ಬೇಡ ನೀನು'.. ಅಂತ ಖಡಕ್ ಆಗಿ ಹೇಳಿದ್ರು ನನ್ ಅತ್ತೆ!