
ಟಾಲಿವುಡ್ ಚಾಕೋಲೆಟ್ ಬಾಯ್ ರಾಮ್ ಚರಣ್‌ಗೆ ಕೊರೋನಾ ಸೋಂಕು ಇರುವುದು ದೃಢವಾಗಿದೆ. ಯಾವುದೇ ರೋಗ ಲಕ್ಷಣಗಳು ಕಾಣಿಸಿಕೊಳ್ಳದ ಕಾರಣ ಮನೆಯಲ್ಲಿ ಕ್ವಾರಂಟೈನ್ ಆಗಿರುವುದಾಗಿ ಟ್ಟೀಟ್ ಮೂಲಕ ತಿಳಿಸಿದ್ದಾರೆ.
ಅಜ್ಜಿ ಜೊತೆ ಬೆಣ್ಣೆ ಕಡೆಯುತ್ತಿರುವ ರಾಮ್ ಚರಣ್; ನೋಡಲು ಕೃಷ್ಣನಂತೆ!
ರಾಮ್ ಟ್ಟೀಟ್:
'ನನಗೆ ಕೋವಿಡ್19 ಪಾಸಿಟಿವ್ ಎಂದು ತಿಳಿದು ಬಂದಿದೆ. ಯಾವುದೇ ರೋಗ ಲಕ್ಷಣಗಳಿಲ್ಲ ಹಾಗೂ ಮನೆಯಲ್ಲಿಯೇ ಕ್ವಾರಂಟೈನ್ ಆಗಿರುವೆ. ಆದಷ್ಟು ಬೇಗ ಗುಣ ಮುಖನಾಗಿ ಸ್ಟ್ರಾಂಗ್ ಆಗಿ ನಿಮ್ಮ ಮುಂದೆ ಬರುವೆ,' ಎಂ
ಇತ್ತೀಚೆಗೆ ರಾಮ್ ಚರಣ್ ಎರಡು ಸ್ಥಳಗಳಲ್ಲಿ ಜನರ ಸಂಪರ್ಕಕ್ಕೆ ಬಂದಿದ್ದಾರೆ. ಒಂದು ಆರ್‌ಆರ್‌ಆರ್ ಶೂಟಿಂಗ್ ಸೆಟ್‌ನಲ್ಲಿ ಮತ್ತೊಂದು ನಿಹಾರಿಕಾ ಮದುವೆ ಸಂಭ್ರಮದಲ್ಲಿ. ರಾಜ್‌ಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರಕ್ಕೆ ಬಾಲಿವುಡ್ ಬೆಡಗಿ ಆಲಿಯಾ ಭಟ್ ಎಂಟ್ರಿ ಕೊಟ್ಟಿದ್ದು, ಪ್ರಮುಖ ಭಾಗದ ಚಿತ್ರೀಕರಣ ಆರಂಭಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರಧಾರಿಯಾಗಿರುವ ರಾಮ್ ಚರಣ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದರು. ಜೊತೆಗೆ ಚಿಕ್ಕಪ್ಪನ ಮಗಳು ನಿಹಾರಿಕಾ ಮದುವೆಗೆಂದು ಉದಯ್‌ಪುರಕ್ಕೆ ತೆರಳಿದ್ದರು, ಆನಂತರ ನಿವಾಸದ ಬಳಿ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲೂ ರಾಮ್ ಭಾಗಿಯಾಗಿದ್ದರು.
ಮನೆ ಕೆಲಸ ಮಾಡಿ, ಹೆಂಡತಿಗೆ ಕಾಫಿ ಮಾಡಿಕೊಟ್ಟ ಸೂಪರ್ ಸ್ಟಾರ್ ಗುರುತಿಸಬಲ್ಲೀರಾ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.