ರಾಜಮೌಳಿಯ ವಾರಣಾಸಿ ಚಿತ್ರದಲ್ಲಿ ಪ್ರಕಾಶ್ ರಾಜ್ ಶಿವನೋ, ಶಿವಭಕ್ತನೋ? ಹಸಿಸುಳ್ಳು ಅಂತಿರೋದ್ಯಾಕೆ ನೆಟ್ಟಿಗರು?

Published : Feb 18, 2026, 10:00 PM IST
Prakash Raj

ಸಾರಾಂಶ

ಈ ಚಿತ್ರದ ಬಜೆಟ್ ಎಷ್ರಾಟು ಗೊತ್ಜತಾ? 'ಆರ್‌ಆರ್‌ಆರ್' ಚಿತ್ರವನ್ನು ಸುಮಾರು 600 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ರಾಜಮೌಳಿ 'ವಾರಣಾಸಿ' ಚಿತ್ರಕ್ಕೆ ಅದನ್ನು ಎರಡು ಪಟ್ಟು ಹೆಚ್ಚು ಮಾಡಿದ್ದಾರೆ. ಸುಮಾರು 1200 ಕೋಟಿಗೂ ಅಧಿಕ ವೆಚ್ಚದಲ್ಲಿ ಈ ದೃಶ್ಯಕಾವ್ಯ ಸಿದ್ಧವಾಗುತ್ತಿದೆ.

ರಾಜಮೌಳಿ-ಮಹೇಶ್ ಬಾಬು 'ವಾರಣಾಸಿ'ಗೆ ಶಿವಭಕ್ತನಾಗಿ ಅಬ್ಬರಿಸಲಿದ್ದಾರಾ ಪ್ರಕಾಶ್ ರಾಜ್?

ಹೈದರಾಬಾದ್: ದೃಶ್ಯ ವೈಭವದ ಮಾಂತ್ರಿಕ ಎಸ್.ಎಸ್. ರಾಜಮೌಳಿ ಸಿನಿಮಾ ಮಾಡುತ್ತಾರೆ ಎಂದರೆ ಅಲ್ಲಿ ಅದ್ಭುತಗಳೇ ಸೃಷ್ಟಿಯಾಗುತ್ತವೆ. 'ಬಾಹುಬಲಿ' ಮತ್ತು 'ಆರ್‌ಆರ್‌ಆರ್' ಮೂಲಕ ಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ರಾಜಮೌಳಿ (SS Rajamouli), ಇದೀಗ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು (Mahesh Babu) ಜೊತೆಗೂಡಿ 'ವಾರಣಾಸಿ' (SSMB29) ಎಂಬ ಮಹತ್ವಾಕಾಂಕ್ಷೆಯ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ದಿನಕ್ಕೊಂದು ಅಚ್ಚರಿಯ ಸುದ್ದಿಗಳು ಹೊರಬರುತ್ತಿದ್ದು, ಈಗ ಚಿತ್ರತಂಡಕ್ಕೆ ಬಹುಮುಖ ನಟ ಪ್ರಕಾಶ್ ರಾಜ್ (Prakash Raj) ಸೇರ್ಪಡೆಯಾಗಿರುವುದು ಸಿನಿವಲಯದಲ್ಲಿ ಸಂಚಲನ ಮೂಡಿಸಿದೆ.

ಶಿವನೋ? ಶಿವಭಕ್ತನೋ?

ಈಗಾಗಲೇ ಈ ಸಿನಿಮಾದಲ್ಲಿ ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಮತ್ತು ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ವಿಚಾರ ಎಲ್ಲರಿಗೂ ತಿಳಿದಿತ್ತು. ಈಗ 'ನಟ ರಾಕ್ಷಸ' ಪ್ರಕಾಶ್ ರಾಜ್ ಅವರು ಚಿತ್ರದ ಅತ್ಯಂತ ಪ್ರಮುಖ ಪಾತ್ರವೊಂದಕ್ಕೆ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಸ್ವತಃ ಪ್ರಕಾಶ್ ರಾಜ್ ಅವರೇ ಸುಳಿವು ನೀಡಿದ್ದು, ಸಿನಿಮಾದಲ್ಲಿ ತಾವು ಒಬ್ಬ ನಿಷ್ಠಾವಂತ 'ಶಿವಭಕ್ತ'ನಾಗಿ ಕಾಣಿಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಚಿತ್ರದಲ್ಲಿ ಅವರು ಮಹೇಶ್ ಬಾಬು ಅವರ ತಂದೆಯ ಪಾತ್ರವನ್ನು ನಿರ್ವಹಿಸಲಿದ್ದು, ಕಥೆಯಲ್ಲಿ ದೊಡ್ಡ ತಿರುವು ತರುವಂತಹ ಶಕ್ತಿಯುತ ಪಾತ್ರ ಇದಾಗಿರಲಿದೆ ಎನ್ನಲಾಗುತ್ತಿದೆ.

ಪೌರಾಣಿಕ ಹಿನ್ನೆಲೆಯುಳ್ಳ ಫ್ಯಾಂಟಸಿ

ರಾಜಮೌಳಿ ಅವರ ಈ ಚಿತ್ರವು ಕೇವಲ ಆಕ್ಷನ್ ಮಾತ್ರವಲ್ಲದೆ, ಪೌರಾಣಿಕ ಹಿನ್ನೆಲೆಯುಳ್ಳ ಫ್ಯಾಂಟಸಿ ಸಾಹಸಮಯ ಕಥೆಯನ್ನು ಹೊಂದಿರಲಿದೆ. ಚಿತ್ರದಲ್ಲಿ ಮಹೇಶ್ ಬಾಬು ಅವರು 'ರುದ್ರ' ಎಂಬ ಹೆಸರಿನ ಪವರ್‌ಫುಲ್ ಪಾತ್ರದಲ್ಲಿ ಮಿಂಚಲಿದ್ದಾರೆ. ಇನ್ನು ಪೃಥ್ವಿರಾಜ್ ಸುಕುಮಾರನ್ 'ಕುಂಭ' ಎಂಬ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡರೆ, ಪ್ರಿಯಾಂಕಾ ಚೋಪ್ರಾ 'ಮಂದಾಕಿನಿ' ಎಂಬ ಹೆಸರಿನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಈ ಎಲ್ಲಾ ಪಾತ್ರಗಳ ವೈವಿಧ್ಯತೆಯೇ ಸಿನಿಮಾದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಮೂಡಲು ಕಾರಣವಾಗಿದೆ.

ಇನ್ನು ಈ ಚಿತ್ರದ ಬಜೆಟ್ ಬಗ್ಗೆ ಕೇಳಿದರೆ ಎದೆ ಬಡಿತ ಜೋರಾಗುವುದು ಗ್ಯಾರಂಟಿ. ರಾಜಮೌಳಿ ಅವರು 'ಆರ್‌ಆರ್‌ಆರ್' ಚಿತ್ರವನ್ನು ಸುಮಾರು 600 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದರು. ಆದರೆ, 'ವಾರಣಾಸಿ' ಚಿತ್ರಕ್ಕಾಗಿ ಅವರು ಆ ಬಜೆಟ್ ಅನ್ನು ಬಹುತೇಕ ದ್ವಿಗುಣಗೊಳಿಸಿದ್ದಾರೆ. ಸುಮಾರು 1200 ಕೋಟಿಗೂ ಅಧಿಕ ವೆಚ್ಚದಲ್ಲಿ ಈ ದೃಶ್ಯಕಾವ್ಯ ಸಿದ್ಧವಾಗುತ್ತಿದೆ.

2027 ರ ಗುರಿಯೊಂದಿಗೆ ಕೆಲಸ ಮಾಡುತ್ತಿರುವ ರಾಜಮೌಳಿ, ಈ ಚಿತ್ರವನ್ನು ಜಗತ್ತಿನಾದ್ಯಂತ ಸುಮಾರು 120 ದೇಶಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಲು ಪ್ಲಾನ್ ಮಾಡುತ್ತಿದ್ದಾರೆ. ಎಂ.ಎಂ. ಕೀರವಾಣಿ ಅವರ ಸಂಗೀತ ಈ ಚಿತ್ರಕ್ಕೆ ಮತ್ತೊಂದು ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ. ಒಟ್ಟಿನಲ್ಲಿ ಭಾರತೀಯ ಸಿನಿಮಾ ಇತಿಹಾಸದಲ್ಲೇ ಈ ಚಿತ್ರ ಮತ್ತೊಂದು ಮೈಲಿಗಲ್ಲಾಗುವುದರಲ್ಲಿ ಅನುಮಾನವಿಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸೇವ್ ಬಾಕ್ಸ್ ಹಗರಣ: ಇಡಿಯಿಂದ ನಟ ಜಯಸೂರ್ಯ 39 ಲಕ್ಷ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು
ಕಿರಿಕ್ ಮಾಡಿದ ರೇಲ್ವೆ ಇಲಾಖೆ.. ಬೇರೆ ದಾರಿಯಿಲ್ಲದೇ ಹಾಡನ್ನೇ ಚೇಂಜ್ ಮಾಡಿದ್ರು; ಆದ್ರೂ ಸಿನಿಮಾ ಬ್ಲಾಕ್‌ಬಸ್ಟರ್!