
ಬಾಲಿವುಡ್‌ನ ಹಿರಿಯ ನಟ ಕಬೀರ್ ಬೇಡಿ ಬಾಲಿವುಡ್‌ನಲ್ಲಿ ಸಾಕಷ್ಟು ಹಿಟ್ ಸಿನಿಮಾಗಳ ಭಾಗವಾಗಿದ್ದಾರೆ. ಇವರು ಗುರು ನಾನಕ್‌ರ ವಂಶಸ್ಥರು ಎನ್ನೋದು ವಿಶೇಷ. ಗುರು ನಾನಕ್‌ರ 550ನೇ ಜನ್ಮ ದಿನಾಚರಣೆಯ ಟೈಮ್‌ನಲ್ಲಿ ಕಬೀರ್ ಬೇಡಿ ಅವರು ಈ ವಿಷಯವನ್ನು ರಿವೀಲ್ ಮಾಡಿದ್ದರು.
ಸಿಖ್ ಧರ್ಮದ ಸಂಸ್ಥಾಪಕ ಗುರು ನಾನಕ್‌ರ 17ನೇ ತಲೆಮಾರಿನ ವಂಶಜ ಎನ್ನೋದನ್ನು ಕಬೀರ್ ಬೇಡಿ ಅವರು ಹೇಳಿದ್ದರು. ಇದು ಆಧ್ಯಾತ್ಮಿಕ ಸಂಪರ್ಕ, ಕುಟುಂಬದ ಇತಿಹಾಸವನ್ನು ಎತ್ತಿ ತೋರಿಸುವುದು. “ಗುರು ನಾನಕ್ ಅವರ 550ನೇ ವಾರ್ಷಿಕೋತ್ಸವದಂದು ನಾನು ಅವರ 17ನೇ ತಲೆಮಾರಿನ ವಂಶಜ ಎಂಬ ಪಟ್ಟ ಪಡೆದಿರೋದಿಕ್ಕೆ ಪುಣ್ಯ ಮಾಡಿದ್ದೇನೆ. ಡೇರಾ ಬಾಬಾ ನಾನಕವನ್ನು ನನ್ನ ಕುಟುಂಬದ ತವರೂರು ಅಂತ ಹೇಳಲು ಹೆಮ್ಮೆಪಡುವೆ” ಎಂದಿದ್ದಾರೆ ಕಬೀರ್ ಬೇಡಿ.
ಗುರು ನಾನಕ್ ದೇವ್ ಜಿ (1469-1539), ಸಿಖ್ ಧರ್ಮದ ಸಂಸ್ಥಾಪಕರು, ಬೇಡಿ ಕುಲಕ್ಕೆ ಸೇರಿದವರು. ಇವರಮಕ್ಕಳಾದ ಶ್ರೀ ಚಂದ್, ಲಖ್ಮಿ ಚಂದ್‌ರಿಂದ ಬೇಡಿ ವಂಶವು ಮುಂದುವರೆದಿದೆ. ಶ್ರೀ ಚಂದ್ ಸನ್ಯಾಸಿಯಾಗಿದ್ದರಿಂದ, ಲಖ್ಮಿ ಚಂದ್ ಮೂಲಕ ವಂಶವು ಮುಂದುವರೆಯಿತು. ಇಂದಿಗೂ, ಡೇರಾ ಬಾಬಾ ನಾನಕ, ಉನಾ (ಹಿಮಾಚಲ ಪ್ರದೇಶ)ದಂತಹ ಸ್ಥಳಗಳಲ್ಲಿ ಬೇಡಿ ಕುಟುಂಬದ ಸದಸ್ಯರು ವಾಸ ಮಾಡುತ್ತಿದ್ದಾರೆ. ಕಬೀರ್ ಬೇಡಿಯ ತಂದೆ, ಬಾಬಾ ಪ್ಯಾರೆ ಲಾಲ್ ಸಿಂಗ್ ಬೇಡಿ, ಓರ್ವ ಲೇಖಕ, ತತ್ವಜ್ಞಾನಿಯಾಗಿದ್ದು, ಗುರು ನಾನಕ್‌ರ ನೇರ ವಂಶಸ್ಥ ಎಂದು ಗುರುತಿಸಲ್ಪಟ್ಟಿದ್ದಾರೆ.
ಕಬೀರ್ ಬೇಡಿ ಅವರು ಭಾರತ ಮಾತ್ರವಲ್ಲದೆ ಅಮೇರಿಕಾ, ಇಟಲಿಯಂತಹ ದೇಶಗಳಲ್ಲಿ ಕೂಡ ನಟನೆಯ ಮೂಲಕ ಖ್ಯಾತಿ ಪಡೆದಿದ್ದಾರೆ. ಜೇಮ್ಸ್ ಬಾಂಡ್ ಅವರ ʼಆಕ್ಟೋಪಸ್ಸಿʼ ಸಿನಿಮಾದಲ್ಲಿ ಗೋಬಿಂದ ಪಾತ್ರ, ಇಟಲಿಯ ʼಸಾಂಡೋಕಾನ್ʼ ಧಾರಾವಾಹಿಯಲ್ಲಿ ಪೈರೇಟ್ ಪಾತ್ರ, ʼತಾಜ್ ಮಹಲ್: ಆನ್ ಎಟರ್ನಲ್ ಲವ್ ಸ್ಟೋರಿʼಯಲ್ಲಿ ಶಹಜಹಾನ್ ಪಾತ್ರದಲ್ಲಿ ನಟಿಸಿದ್ದಾರೆ. ಭಾರತದಲ್ಲಿ, ʼಖೂನ್ ಭಾರಿ ಮಾಂಗ್ʼ, ʼಮೈನ್ ಹೂಂ ನಾʼ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದೆ.
ಪಂಜಾಬ್‌ನ ಗುರದಾಸ್‌ಪುರ ಜಿಲ್ಲೆಯ ಡೇರಾ ಬಾಬಾ ನಾನಕದಲ್ಲಿ ಕಬೀರ್ ಬೇಡಿಯ ಕುಟುಂಬವಿದೆ. ಇದು ಗುರು ನಾನಕರ ವಂಶಸ್ಥರ ಪ್ರಮುಖ ಕೇಂದ್ರ. ಇದು ಭಾರತ-ಪಾಕಿಸ್ತಾನ ಗಡಿಯ ಸಮೀಪವಿದೆ, ಗುರು ನಾನಕರ ಉಡುಗೆಯನ್ನು ಶ್ರೀ ಚೋಲಾ ಸಾಹಿಬ್ ಗುರುದ್ವಾರದಲ್ಲಿ ಪ್ರದರ್ಶಿಸಲಾಗುತ್ತದೆ, ಇದನ್ನು ಸ್ಥಳೀಯ ಬೇಡಿ ಕುಟುಂಬವು ನೋಡಿಕೊಳ್ಳುತ್ತದೆ.
ಕಬೀರ್ ಬೇಡಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ರಾಜಕೀಯ, ಸಾಮಾಜಿಕ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ಶೇರ್ ಮಾಡಿಕೊಳ್ತಾರೆ. ಕಬೀರ್ ಬೇಡಿ ಅವರಿಗೆ ಒಟ್ಟೂ ನಾಲ್ಕು ಮದುವೆಯಾಗಿದೆ. ಇವರ ನಾಲ್ಕನೇ ಪತ್ನಿಯು, ಇವರ ಮಗಳಿಗಿಂತ ಚಿಕ್ಕವರು ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.